‘ತುಂಬಾ ಗೊಂದಲದಲ್ಲಿದ್ದೇನೆ’; ಮುಂದಿನ ಪ್ಲ್ಯಾನ್ ಬಗ್ಗೆ ಕನ್ಫ್ಯೂಸ್ ಆದ ಗಿಲ್ಲಿ ನಟ
ಗಿಲ್ಲಿ ನಟ ಬಿಗ್ ಬಾಸ್ ವಿಜೇತರಾಗಿ ಹೊರಹೊಮ್ಮಿದ್ದಾರೆ, 45 ಕೋಟಿಗೂ ಹೆಚ್ಚು ಮತಗಳೊಂದಿಗೆ ಭರ್ಜರಿ ಗೆಲುವು ಸಾಧಿಸಿದ್ದಾರೆ. ಅವರ ಇನ್‌ಸ್ಟಾಗ್ರಾಮ್ ಹಿಂಬಾಲಕರು 1 ಲಕ್ಷದಿಂದ 2 ಮಿಲಿಯನ್‌ಗೆ ಏರಿದೆ. ಈ ಅಭೂತಪೂರ್ವ ಖ್ಯಾತಿಯಿಂದ ಗೊಂದಲಕ್ಕೊಳಗಾಗಿರುವ ಗಿಲ್ಲಿ, ಮುಂದಿನ ಹೆಜ್ಜೆ ಬಗ್ಗೆ ಆತಂಕದಲ್ಲಿದ್ದಾರೆ. ಕಿಚ್ಚ ಸುದೀಪ್ ಅವರ ಸಲಹೆಯನ್ನು ಪಾಲಿಸಲು ನಿರ್ಧರಿಸಿದ್ದಾರೆ.

ಗಿಲ್ಲಿ ನಟ ಅವರಿಗೆ ಬಿಗ್ ಬಾಸ್ (Bigg Boss) ಅಲ್ಲಿ ಅಭೂತಪೂರ್ವ ಗೆಲುವು ಸಿಕ್ಕಿದೆ. 45 ಕೋಟಿಗೂ ಅಧಿಕ ಮತಗಳನ್ನು ಪಡೆದು ಗೆಲುವು ಕಂಡಿದ್ದಾರೆ. ಎರಡನೇ ಸ್ಥಾನಕ್ಕೂ ಇವರಿಗೂ ಅಜಗಜಾಂತರ ವ್ಯತ್ಯಾಸವಿದೆ ಎನ್ನಲಾಗುತ್ತಿದೆ. ಈಗ ಅವರು ಮುಂದಿನ ಪ್ಲ್ಯಾನ್ ಬಗ್ಗೆ ಮಾತನಾಡಿದ್ದಾರೆ. ಅವರು ಸಖತ್ ಗೊಂದಲ್ಲಿದ್ದಾರಂತೆ. ಆ ಬಗ್ಗೆ ವಿವರಿಸಿದ್ದಾರೆ.
ಗಿಲ್ಲಿ ನಟ ಅವರು ಗೊಂದಲದಲ್ಲೇ ಬಿಗ್ ಬಾಸ್ಗೆ ಬಂದರು. ಇರೋ ಅಭಿಮಾನಿಗಳನ್ನು ಕಾಪಾಡಿಕೊಂಡು ಹೋದರೆ ಸಾಕು ಎಂಬುದು ಅವರ ಆಲೋಚನೆ ಆಗಿತ್ತು. ಅವರು ಬಿಗ್ ಬಾಸ್ಗೆ ಹೋಗುವಾಗ ಇನ್‌ಸ್ಟಾಗ್ರಾಮ್ ಅಲ್ಲಿ ಅವರಿಗೆ ಇದ್ದಿದ್ದು ಕೇವಲ ಒಂದು ಲಕ್ಷದಷ್ಟು ಹಿಂಬಾಲಕರು. ಆದರೆ, ಈ ಸಂಖ್ಯೆ ಈಗ 2 ಮಿಲಿಯನ್ ಅಂದರೆ 20 ಲಕ್ಷಕ್ಕೆ ಏರಿದೆ. ಇದೆಲ್ಲವೂ ಗಿಲ್ಲಿಗೆ ಶಾಕ್ ತಂದಿದೆ.
ಗಿಲ್ಲಿ ನಟ ಅವರಿಗೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದೇ ತಿಳಿಯುತ್ತಿಲ್ಲ. ಕೆಲವರು ಗಿಲ್ಲಿಯ ಹಚ್ಚೆ ಹಾಕಿಸಿಕೊಂಡಿದ್ದಾರೆ. ರೋಡ್ಶೋನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದಾರೆ. ಇದೆಲ್ಲ ಗಿಲ್ಲಿಗೆ ಅಚ್ಚರಿ ತಂದಿದೆ. ಮುಂದೆ ಯಾವ ರೀತಿಯ ಹೆಜ್ಜೆ ಇಡಬೇಕು ಎಂಬ ಗೊಂದಲ ಅವರನ್ನು ಬಹುವಾಗಿ ಕಾಡುತ್ತಿದೆ.
‘ತುಂಬಾ ಗೊಂದಲ್ಲಿ ಇದ್ದೇನೆ. ಏನು ಮಾಡಬೇಕು ಎಂಬುದೇ ಗೊತ್ತಾಗುತ್ತಿಲ್ಲ. ಸಾಮಾನ್ಯ ಊಟವನ್ನಾದರೆ ಮಾಡಬಹುದು. ಆದರೆ, ಮೃಷ್ಟಾನ್ನನ ಇಟ್ಟಿದ್ದಾರೆ. ಅದನ್ನು ತಿಂದು ಹೇಗೆ ಅರಗಿಸಿಕೊಳ್ಳಬೇಕು ಎಂಬುದೇ ಕನ್ಫ್ಯೂಷನ್. ನನಗೆ ಅಷ್ಟು ಅನುಭವ ಇಲ್ಲ. ವಯಸ್ಸು ಕೂಡ ಸಣ್ಣದು. ಇದನ್ನು ಹೇಗೆ ಹ್ಯಾಂಡಲ್ ಮಾಡಬೇಕು ಗೊತ್ತಾಗುತ್ತಾ ಇಲ್ಲ’ ಎಂದಿದ್ದಾರೆ ಗಿಲ್ಲಿ ನಟ.
ಇದನ್ನೂ ಓದಿ: ‘ಹೊಸ ದಾರಿ ಕಡೆ ಮುಖ ಮಾಡೋ ಹೊತ್ತು’; ದೊಡ್ಡ ಘೋಷಣೆ ಮಾಡಿದ ಗಿಲ್ಲಿ ನಟ
ಗಿಲ್ಲಿ ನಟ ಅವರಿಗೆ ನೋಡಿ ಹೆಜ್ಜೆ ಇಡುವಂತೆ ಸುದೀಪ್ ಅವರು ಸೂಚಿಸಿದ್ದಾರೆ. ಇದನ್ನು ಪಾಲಿಸೋದಾಗಿ ಅವರು ಹೇಳಿದ್ದಾರೆ. ‘ನಾನು ಇನ್ನೂ ಶಾಕ್ನಿಂದ ಹೊರ ಬಂದಿಲ್ಲ’ ಎನ್ನುತ್ತಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:40 am, Fri, 23 January 26




