ಕೊನೆಗೂ ಹುಡುಗಿ ಯಾರೆಂದು ಪರಿಚಯಿಸಿದ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಪ್ರಶಾಂತ್ ಗೌಡ

ಗಿಚ್ಚಿ ಗಿಲಿಗಿಲಿ ಖ್ಯಾತಿಯ ಪ್ರಶಾಂತ್ ಗೌಡ ವಿವಾಹವಾಗುತ್ತಿದ್ದಾರೆ. ಇತ್ತೀಚೆಗೆ ತಮ್ಮ ವಧು ಕೃತಿ ಗೌಡ ಅವರನ್ನು ಪರಿಚಯಿಸಿದ್ದಾರೆ. ಕೃತಿ ಗೌಡ ಕೂಡ ಕಲಾವಿದೆಯಾಗಿದ್ದು, ಇವರಿಬ್ಬರ ಮದುವೆ ಸುದ್ದಿ ಅಭಿಮಾನಿಗಳಲ್ಲಿ ಸಂತಸ ತಂದಿದೆ. ಪ್ರಶಾಂತ್ ಗೌಡ ತಮ್ಮ ಮದುವೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸದ್ಯದಲ್ಲೇ ಕಂಕಣ ಭಾಗ್ಯ ಕೂಡಿಬರಲಿದೆ.

ಕೊನೆಗೂ ಹುಡುಗಿ ಯಾರೆಂದು ಪರಿಚಯಿಸಿದ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಪ್ರಶಾಂತ್ ಗೌಡ
ಪ್ರಶಾಂತ್ ಗೌಡ

Updated on: Apr 20, 2026 | 2:59 PM

‘ಗಿಚ್ಚಿ ಗಿಲಿ ಗಿಲಿ’, ‘ಕ್ವಾಟ್ಲೆ ಕಿಚನ್’ ರೀತಿಯ ಶೋಗಳ ಮೂಲಕ ಗಮನ ಸೆಳೆದ ಪ್ರಶಾಂತ್ ಗೌಡ ಅವರಿಗೆ ಈಗ ಕಂಕಣ ಭಾಗ್ಯ ಕೂಡಿ ಬಂದಿದೆ. ಅವರು ಕಳೆದ ಕೆಲ ದಿನಗಳಿಂದ ಹೆಣ್ಣು ನೋಡವ ಶಾಸ್ತ್ರದ ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಬರುತ್ತಿದ್ದರು. ಆದರೆ, ಎಲ್ಲಿಯೂ ಅವರು ಹುಡುಗಿ ಯಾರು ಎಂಬುದನ್ನು ರಿವೀಲ್ ಮಾಡಿರಲಿಲ್ಲ. ಈಗ ಹೊಸ ವಿಡಿಯೋ ಹಂಚಿಕೊಂಡು ಆ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರ ಹುಡುಗಿ ನೋಡಿ ಅಭಿಮಾನಿಗಳಿಗೆ ಖುಷಿ ಆಗಿದ್ದು, ಶುಭಾಶಯ ತಿಳಿಸಿದ್ದಾರೆ.

ಪ್ರಶಾಂತ್ ಗೌಡ ಅವರು ‘ಗಿಚ್ಚಿ ಗಿಲಿ ಗಿಲಿ’ ಸೀಸನ್ 1ರಿಂದ ಸೀಸನ್ 3ರವರೆಗೆ ಇದ್ದರು. ಅವರು ವಿವಿಧ ರೀತಿಯ ರೀಲ್ಸ್ ಮಾಡಿಕೊಂಡು ಗಮನ ಸೆಳೆದಿದ್ದಾರೆ. ಅವರು ‘ಕ್ವಾಟ್ಲೆ ಕಿಚನ್’ ಶೋ ಅಲ್ಲಿ ‘ಕ್ವಾಟ್ಲೆ ಆಫ್ ದಿ ಸೀಸನ್’ ಅವಾರ್ಡ್ ಪಡೆದರು. ‘ಬಾಯ್ಸ್ vs ಗರ್ಲ್ಸ್’ ಶೋನಲ್ಲೂ ಪ್ರಶಾಂತ್ ಮಿಂಚಿದ್ದರು. ಈಗ ಪ್ರಶಾಂತ್ ಗೌಡ ವಿವಾಹ ಆಗುತ್ತಿದ್ದಾರೆ.

ಪ್ರಶಾಂತ್ ಮದುವೆ ಆಗುತ್ತಿರುವ ಹುಡುಗಿಯ ಹೆಸರು ಕೃತಿ ಗೌಡ. ಅವರು ಕೂಡ ಕಲಾವಿದೆ. ಈ ಮೊದಲು ‘ಬ್ರೇಕ್ ಫೆಲ್ಯೂವರ್’ ಹೆಸರಿನ ಸಿನಿಮಾ ಮಾಡಿದ್ದರು. ಅವರು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ. ವಿವಿಧ ರೀತಿಯ ಫೋಟೋ ಹಾಗೂ ರೀಲ್ಸ್​​​ಗಳನ್ನು ಅವರು ಹಂಚಿಕೊಳ್ಳುತ್ತಾ ಇರುತ್ತಾರೆ. ಅವರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಈಗ ಪ್ರಶಾಂತ್ ಅವರನ್ನು ವರಿಸಲು ಕೃತಿ ಸಿದ್ಧರಾಗಿದ್ದಾರೆ.

ಇದನ್ನೂ ಓದಿ: ಜನವರಿ 31ರಿಂದ ಗಿಚ್ಚಿ ಗಿಲಿ ಗಿಲಿ ಜೂನಿಯರ್ಸ್: ಈ ಬಾರಿ ಮಕ್ಕಳದ್ದೇ ಹವಾ

ಪ್ರಶಾಂತ್ ಅವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮನ್ನು ‘ಟ್ಯಾಲೆಂಟೆಂಡ್ ಕಲಾವಿದ’ ಎಂದು ಕರೆದುಕೊಂಡಿದ್ದಾರೆ. ಅವರು ಇತ್ತೀಚೆಗೆ ಟಾಟಾ ಕರ್ವ್ ಕಾರನ್ನು ಖರೀದಿ ಮಾಡಿದ್ದರು. ವಿವಾಹ ಸಮೀಪಿಸಿದ್ದರಿಂದಲೇ ಈ ಕಾರನ್ನು ಅವರು ಖರೀದಿ ಮಾಡಿದರೇ ಎನ್ನುವ ಪ್ರಶ್ನೆಕೂಡ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us