ಉಗ್ರಂ ಮಂಜು ಗ್ರೇ ಏರಿಯಾ ಅಲ್ಲ, ಮಲೇರಿಯಾ: ಮುಲಾಜಿಲ್ಲದೇ ರೋಸ್ಟ್ ಮಾಡಿದ ಗಿಲ್ಲಿ ನಟ

ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಅವರು ಯಾರನ್ನೂ ಕೇರ್ ಮಾಡದೇ ಸಿಕ್ಕಾಪಟ್ಟೆ ರೋಸ್ಟ್ ಮಾಡಿದ್ದಾರೆ. ಗಿಲ್ಲಿ ನಟ ಅವರ ಮಾತಿನಿಂದಾಗಿ ಉಗ್ರಂ ಮಂಜು ಮತ್ತು ರಜತ್ ಅವರಿಗೆ ವಿಪರೀತ ಕೋಪ ಬಂದಿದೆ. ಅತಿಥಿಗಳಾಗಿ ಬಂದಿರುವ ಹಳೇ ಸೀಸನ್ ಸ್ಪರ್ಧಿಗಳು ಗಿಲ್ಲಿ ಮೇಲೆ ಗರಂ ಆಗಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಉಗ್ರಂ ಮಂಜು ಗ್ರೇ ಏರಿಯಾ ಅಲ್ಲ, ಮಲೇರಿಯಾ: ಮುಲಾಜಿಲ್ಲದೇ ರೋಸ್ಟ್ ಮಾಡಿದ ಗಿಲ್ಲಿ ನಟ
Gilli Nata, Ugram Manju

Updated on: Nov 26, 2025 | 10:39 PM

‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಲ್ಲಿ ಗಿಲ್ಲಿ ನಟ (Gilli Nata) ಅವರು ಎಲ್ಲರನ್ನೂ ರೋಸ್ಟ್ ಮಾಡುತ್ತಾರೆ. ನವೆಂಬರ್ 26ರ ಸಂಚಿಕೆಯಲ್ಲಿ ಅವರಿಗೆ ರೋಸ್ಟ್ ಮಾಡಲು ಬಿಗ್ ಬಾಸ್ ಕಡೆಯಿಂದಲೇ ಅವಕಾಶ ಸಿಕ್ಕಿತ್ತು. ಆ ಅವಕಾಶವನ್ನು ಅವರು ಚೆನ್ನಾಗಿ ಉಪಯೋಗಿಸಿಕೊಂಡಿದ್ದಾರೆ. ಬಿಗ್ ಬಾಸ್ ಮನೆಗೆ ಹಳೇ ಸೀಸನ್ ಸ್ಪರ್ಧಿಗಳಾದ ಉಗ್ರಂ ಮಂಜು, ಮೋಕ್ಷಿತಾ ಪೈ, ರಜತ್, ಚೈತ್ರಾ ಕುಂದಾಪುರ, ತ್ರಿವಿಕ್ರಮ್ ಅತಿಥಿಗಳಾಗಿ ಬಂದಿದ್ದಾರೆ. ಅವರನ್ನು ರೋಸ್ಟ್ ಮಾಡಲು ಗಿಲ್ಲಿಗೆ ಬಿಗ್ ಬಾಸ್ ಅವಕಾಶ ಕೊಟ್ಟರು. ಆಗ ವೇದಿಕೆಯಲ್ಲಿ ಗಿಲ್ಲಿ ಆಡಿದ ಮಾತುಗಳು ಸಖತ್ ಖಾರವಾಗಿದ್ದವು. ಅದರಿಂದ ಉಗ್ರಂ ಮಂಜು (Ugram Manju) ಮತ್ತು ರಜತ್ ಅವರು ಗರಂ ಆದರು.

‘ಉಗ್ರಂ ಮಂಜು ಗ್ರೇ ಏರಿಯಾ ಅಲ್ಲ ಮಲೇರಿಯಾ. ಟಾಸ್ಕ್ ಮಾಸ್ಟರ್ ಅಂತ ತ್ರಿವಿಕ್ರಮ್ ಬಂದರು. ಆದರೆ ಇಲ್ಲಿ ರಿಟೈರ್ ಆಗಿರುವ ಹೆಡ್ ಮಾಸ್ಟರ್ ಥರ ಕೂತಿದ್ದಾರೆ. ಏಜು, ಸೈಜು ನೋಡದೇ ಸೈಡ್ ಹೊಡೆದು ಸೀಲ್ ಮಾಡಿಬಿಡುತ್ತೇವೆ. ನೆಂಟರು ಬಂದು ಚೆನ್ನಾಗಿ ತಿಂದ ಮೇಲೂ ದವಲತ್ತು ತೋರಿಸಿದ್ದಾರೆ. ತಿಂದು ಹಾಕುವ ಅವರಿಗೆ ಇಷ್ಟು ದವಲತ್ತು ಇರುವಾಗ ತಂದು ಹಾಕುವ ನಮಗೆ ಎಷ್ಟು ದವಲತ್ತು ಇರಲ್ಲ’ ಎಂದು ಗಿಲ್ಲಿ ನಟ ರೋಸ್ಟ್ ಮಾಡಿದರು.

‘ಜಡ್ಜಸ್ ತಮ್ಮ ಕೆಲಸ ಮಾಡುತ್ತಿಲ್ಲ. ಅವರು ಇಲ್ಲಿ ನಮಗೆ ಬೂಸ್ಟ್ ಆಗುತ್ತಾರೆ ಎಂದುಕೊಂಡಿದ್ದೆ. ಆದರೆ ಇಲ್ಲಿ ಬಂದು ನನ್ನ ಕೈಯಲ್ಲಿ ಸಿಕ್ಕಿಕೊಂಡು ಡಿಪ್ರೆಷನ್​​ನಲ್ಲಿ ಇದ್ದಾರೆ’ ಎಂದು ಗಿಲ್ಲಿ ನಟ ಹೇಳಿದರು. ಅವರು ಈ ಪರಿ ರೋಸ್ಟ್ ಮಾಡಿದ್ದು ನೋಡಿ ಬಿಗ್ ಬಾಸ್ ಮನೆಯ ಸ್ಪರ್ಧಿಗಳು ಎಂಜಾಯ್ ಮಾಡಿದರು. ಆದರೆ ಅತಿಥಿಗಳಿಗೆ ಸಿಕ್ಕಾಪಟ್ಟೆ ಕಿರಿಕಿರಿ ಆಯಿತು.

ಸಭ್ಯತೆ ಮೀರದಂತೆ ರೋಸ್ಟ್ ಮಾಡಬೇಕು ಎಂದು ನಿಯಮದಲ್ಲಿ ಇತ್ತು. ಆದರೆ ಗಿಲ್ಲಿ ಅದನ್ನು ಮೀರಿದ್ದರು. ಆಗ ಬಿಗ್ ಬಾಸ್ ಮಧ್ಯಸ್ಥಿಕೆ ವಹಿಸಿ ನಿಯಮವನ್ನು ನೆನಪಿಸಬೇಕಾಯಿತು. ಬಳಿಕ ಗಿಲ್ಲಿ ಮತ್ತು ಕ್ಯಾಪ್ಟನ್ ಅಭಿಷೇಕ್ ಅವರು ಕ್ಷಮೆ ಕೇಳಿದರು. ಅಲ್ಲದೇ, ನಂತರ ಕೂಡ ಗಿಲ್ಲಿ ಅವರು ಪದೇಪದೇ ಮಾತನಾಡಲು ಆರಂಭಿಸಿದ್ದರಿಂದ ರಜತ್ ಅವರಿಗೆ ಕಿರಿಕಿರಿ ಆಯಿತು.

‘ನಾವು ಇಲ್ಲಿ ಮೊದಲೇ ಬಂದು ಹೋಗಿದ್ದೇವೆ. ಇಲ್ಲಿಗೆ ಅತಿಥಿಗಳು ಬಂದಾಗ ನಾವು ಮಧ್ಯದಲ್ಲಿ ಮಾತನಾಡುತ್ತಿರಲಿಲ್ಲ. ಇವನು ಇಷ್ಟು ಕಿರಿಕಿರಿ ಎಂಬುದು ನನಗೆ ಹೊರಗೆ ಇದ್ದಾಗ ಗೊತ್ತಿರಲಿಲ್ಲ. ಇವನು ತುಂಬಾ ಕಿರಿಕಿರಿ ಮಾಡುತ್ತಿದ್ದಾನೆ. ಒಂದು ಸರಿ ಹೇಳಿದರೆ ಅರ್ಥ ಆಗಲ್ಲ ಇವನಿಗೆ. ನಮ್ಮ ತಾಯಾಣೆಗೂ ಕಿರಿಕಿರಿ ಆಗುತ್ತಿದೆ. ಮನುಷ್ಯರ ಜಾತಿಗೆ ಸೇರಿದವರು ಒಂದು ಸಲ ಹೇಳಿದರೆ ಅರ್ಥ ಮಾಡಿಕೊಳ್ಳಬೇಕು’ ಎಂದು ರಜತ್ ಅವರು ಕೂಗಾಡಿದರು.

ಇದನ್ನೂ ಓದಿ: ರಾಜಮಾತೆ.. ನೀನು ಇವತ್ತು ಸತ್ತೆ: ಗಿಲ್ಲಿ ನಟ ಎದುರು ಅಶ್ವಿನಿ ಗೌಡ ಗಪ್ ಚುಪ್

‘ಎಲ್ಲ ಸಮಯದಲ್ಲೂ ತಮಾಷೆ ಚಂದ ಅಲ್ಲ. ಟಾಸ್ಕ್ ಅರ್ಥ ಮಾಡಿಕೊಂಡು ಮಾಡಿದರೆ ಉತ್ತಮ’ ಎಂದು ಮೋಕ್ಷಿತಾ ಪೈ ಅವರು ಗಿಲ್ಲಿಗೆ ಕ್ಲಾಸ್ ತೆಗೆದುಕೊಂಡರು. ಈ ಎಲ್ಲವನ್ನು ಗಮನಿಸಿ ರಘು ಅವರು, ‘ಹೀಗೆ ಮಾಡಬಾರದಾಗಿತ್ತು’ ಎಂದು ಗಿಲ್ಲಿಗೆ ವೈಯಕ್ತಿಕವಾಗಿ ಬುದ್ಧಿ ಹೇಳಿದರು. ಆದರೆ ಅದನ್ನು ಗಿಲ್ಲಿ ಒಪ್ಪಲಿಲ್ಲ. ಅವರು ನಂತರ ಹೇಗೆ ನಡೆದುಕೊಳ್ಳುತ್ತಾರೆ ಎಂಬುದನ್ನು ನೋಡಲು ವೀಕ್ಷಕರು ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.