ಮಾಜಿ ಸ್ಪರ್ಧಿಗಳು ಬಂದಿದ್ದೇಕೆ? ಬಾಯ್ತಪ್ಪಿ ನಿಜ ಹೇಳಿದ ಚೈತ್ರಾ
ಬಿಗ್ ಬಾಸ್ ಕನ್ನಡ 11 ಮನೆಗೆ ಮಾಜಿ ಸ್ಪರ್ಧಿಗಳು ಅತಿಥಿಗಳಾಗಿ ಬಂದಿದ್ದು, ಅವರ ಉದ್ದೇಶದ ಬಗ್ಗೆ ಚರ್ಚೆ ಶುರುವಾಗಿತ್ತು. ಚೈತ್ರಾ ಕುಂದಾಪುರ, ತಾವು ಸ್ಪರ್ಧಿಗಳ ಒಗ್ಗಟ್ಟು ಪರೀಕ್ಷಿಸಲು ಬಂದಿರುವುದಾಗಿ ಬಹಿರಂಗಪಡಿಸಿದ್ದಾರೆ. ಅತಿಥಿಗಳ ವರ್ತನೆಗೆ ಗಿಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ವೀಕೆಂಡ್‌ನಲ್ಲಿ ಸುದೀಪ್ ಎದುರು ಚರ್ಚೆಗೆ ಬರಬಹುದು. ಕಳೆದ ಸೀಸನ್‌ನಲ್ಲೂ ಇಂತಹದ್ದೇ ಘಟನೆ ನಡೆದಿತ್ತು.

‘ಬಿಗ್ ಬಾಸ್ ಕನ್ನಡ ಸೀಸನ 11’ರ ಸ್ಪರ್ಧಿಗಳು ಈ ಸೀಸನ್ಗೆ ಅತಿಥಿಗಳಾಗಿ ಬಂದಿದ್ದಾರೆ. ಇಡೀ ಬಿಗ್ ಬಾಸ್ ಮನೆ ಪ್ಯಾಲೇಸ್ ಆಗಿ ಬದಲಾಗಿದ್ದು, ಅತಿಥಿಗಳ ಅಬ್ಬರ ಜೋರಾಗಿದೆ. ಅವರು ಮನಸ್ಸಿಗೆ ಬಂದ ಕೆಲಸಗಳನ್ನು ಸ್ಪರ್ಧಿಗಳಿಂದ ಮಾಡಿಸಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಚೈತ್ರಾ ಅವರು ಆಡಿದ ಒಂದು ಮಾತು ಚರ್ಚೆ ಹುಟ್ಟುಹಾಕಿದೆ. ಅವರು ದೊಡ್ಮನೆಗೆ ಬಂದಿದ್ದು ಏಕೆ ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
ಈ ಬಾರಿ ಬಿಗ್ ಬಾಸ್ಗೆ ಚೈತ್ರಾ, ಮಂಜು, ರಜತ್, ಮೋಕ್ಷಿತಾ, ತ್ರಿವಿಕ್ರಂ ಅತಿಥಿಗಳಾಗಿ ಬಂದಿದ್ದಾರೆ. ಅವರುಗಳು ಇಡೀ ಮನೆಯನ್ನು ಆಳುತ್ತಿದ್ದಾರೆ. ಕಿರಿಕಿರಿ ಮಾಡಿದ ಗಿಲ್ಲಿಗೆ ವಿರುದ್ಧ ತಿರುಗಿ ಬಿದ್ದಿದ್ದಾರೆ.ಅಶ್ವಿನಿ ಅವರು ತಪ್ಪು ಮಾಡಿದಾಗ ಚೈತ್ರಾ ಮಾತನಾಡುತ್ತಿದ್ದರು. ಈ ವೇಳೆ ಅವರು ಒಂದು ವಿಷಯ ರಿವೀಲ್ ಮಾಡಿಬಿಟ್ಟಿದ್ದಾರೆ.
Ayyo Chaitra 🤦🏻♂️
Chaitra accidentally spilled the beans 😂
Gottayta so called guests yake bandirodu anta? Yake ishtu rodhane kodta idaare anta#BBK12pic.twitter.com/jVEJLffr63
— ಅಲ್ಪಸಂಖ್ಯಾತ (@alpasankhyata) November 26, 2025
‘ನಿಮ್ಮಲ್ಲಿ ಒಗ್ಗಟ್ಟಿಲ್ಲ. ನಿಮ್ಮಲ್ಲಿ ಎಷ್ಟು ಒಗ್ಗಟು ಇದೆ ಎಂದು ನೋಡಬೇಕು. ಅದನ್ನು ಪರೀಕ್ಷೆ ಮಾಡೋಕೆ ನಾವು ಬಂದಿರೋದು’ ಎಂದು ಚೈತ್ರಾ ಕುಂದಾಪುರ ಅವರು ಹೇಳಿದ್ದಾರೆ. ಇದು ಸಾಕಷ್ಟು ಚರ್ಚೆಗೆ ಕಾರಣ ಆಗಿದೆ. ಸ್ಪರ್ಧಿಗಳು ಇಷ್ಟು ಕಠಿಣವಾಗಿ ನಡೆದುಕೊಳ್ಳಲು ಬಿಗ್ ಬಾಸ್ ಸೂಚನೆ ಕೂಡ ಇರಬಹುದು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಅತಿಥಿಗಳು ನಡೆದುಕೊಂಡ ರೀತಿಗೆ ಒಂದಾದ ಗಿಲ್ಲಿ-ಅಶ್ವಿನಿ; ಮೂಡಿತು ಗೆಳೆತನ
ಬಿಗ್ ಬಾಸ್ ಸೀಸನ್ 10ರಲ್ಲಿ ಪ್ರಥಮ್ ಅವರನ್ನು ಲಾರ್ಡ್ ಆಗಿ ದೊಡ್ಮನೆಗೆ ಕರೆಸಲಾಗಿತ್ತು. ಈ ವೇಳೆ ಅವರು ತಮಗೆ ಬೇಕಂತೆ ಸ್ಪರ್ಧಿಗಳನ್ನು ನಡೆಸಿಕೊಂಡಿದ್ದರು.ಇದನ್ನು ವಿರೋಧಿಸಬೇಕಿತ್ತು ಎಂಬರ್ಥದಲ್ಲಿ ಸುದೀಪ್ ಮಾತನಾಡಿದ್ದರು. ಈ ಬಾರಿ ಬಂದ ಅತಿಥಿಗಳು ಮನೆಯವರನ್ನು ತಮಗೆ ಬೇಕಾದ ರೀತಿ ನಡೆಸುಕೊಳ್ಳುತ್ತಿದ್ದಾರೆ. ಈ ಬಗ್ಗೆ ವೀಕಂಡ್ನಲ್ಲಿ ಚರ್ಚೆ ಆಗೋ ಸಾಧ್ಯತೆ ಇದೆ. ಅತಿಥಿಗಳ ಉದ್ದಟತನವನ್ನು ಗಿಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಈ ಬಗ್ಗೆ ಸುದೀಪ್ ಮೆಚ್ಚುಗೆ ಸೂಚಿಸಬಹುದು. ಅವರು ಎಲ್ಲೆ ಮೀರಿ ನಡೆದುಕೊಂಡಿದ್ದಕ್ಕೆ ಪ್ರಶ್ನೆ ಮಾಡಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




