Bigg Boss Kannada 12: ಸೋಲುವ ವೇಳೆಯಲ್ಲೂ ಕಾವ್ಯಾನ ಬಿಟ್ಟುಕೊಡಲಿಲ್ಲ ಗಿಲ್ಲಿ ನಟ

ಸದ್ಯಕ್ಕಂತೂ ಗಿಲ್ಲಿ ನಟ ಮತ್ತು ಕಾವ್ಯ ಶೈವ ಅವರ ನಡುವೆ ಸ್ನೇಹ ಚೆನ್ನಾಗಿಯೇ ಇದೆ. ಆದರೆ ಬಿಗ್ ಬಾಸ್ ಮನೆಯಲ್ಲಿ ಯಾವಾಗ ಬೇಕಾದರೂ ಈ ಪರಿಸ್ಥಿತಿ ಬದಲಾಗಬಹುದು. ಸ್ನೇಹದ ಬಲೆಗೆ ಸಿಲುಕಿದರೆ ಅವರ ಮುಂದಿನ ಆಟಕ್ಕೆ ತೊಂದರೆ ಕೂಡ ಆಗುವ ಸಾಧ್ಯತೆ ಇರುತ್ತದೆ.

Bigg Boss Kannada 12: ಸೋಲುವ ವೇಳೆಯಲ್ಲೂ ಕಾವ್ಯಾನ ಬಿಟ್ಟುಕೊಡಲಿಲ್ಲ ಗಿಲ್ಲಿ ನಟ
Gilli Nata, Kavya Shaiva

Updated on: Oct 15, 2025 | 10:27 PM

ಕಾಮಿಡಿ ಕಲಾವಿದ ಗಿಲ್ಲಿ ನಟ (Gilli Nata) ಅವರು ಬಿಗ್ ಬಾಸ್ ಮನೆಯಲ್ಲಿ ಬಹಳ ಆ್ಯಕ್ಟೀವ್ ಆಗಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಶೋಗೆ ಕಾಲಿಟ್ಟಾಗ ಅವರು ಕಾವ್ಯಾ ಶೈವ ಜೊತೆ ಜಂಟಿ ಆಗಿದ್ದರು. ಆದ್ದರಿಂದ ಅವರಿಬ್ಬರ ನಡುವೆ ಹೆಚ್ಚು ಆಪ್ತತೆ ಬೆಳೆಯಿತು. ಈಗ ಜಂಟಿ-ಒಂಟಿ ಥೀಮ್ ಇಲ್ಲ. ಆದರೂ ಕೂಡ ಕಾವ್ಯಾ ಶೈವ (Kavya Shaiva) ಮತ್ತು ಗಿಲ್ಲಿ ನಟ ನಡುವಿನ ಸ್ನೇಹ ಹಾಗೆಯೇ ಮುಂದುವರಿದಿದೆ. ಎಂಥ ಸಂದರ್ಭದಲ್ಲಿ ಕೂಡ ಕಾವ್ಯ ಅವರನ್ನು ಗಿಲ್ಲಿ ಬಿಟ್ಟುಕೊಡುತ್ತಿಲ್ಲ.

ಬಿಗ್ ಬಾಸ್ ಎಂಬುದು ಸಂಬಂಧಗಳ ಆಟ ಕೂಡ ಹೌದು. ಭಾವನೆಗಳ ಆಟವೂ ಹೌದು. ಮೊದಲು ಸ್ನೇಹಿತರಾಗಿ ಇದ್ದವರು ದಿನ ಕಳೆದಂತೆ ಶತ್ರುಗಳಾಗುತ್ತಾರೆ. ಆಟದ ಸಲುವಾಗಿ ಸ್ನೇಹದ ನಡುವೆ ಬಿರುಕು ಮೂಡುವ ಸಾಧ್ಯತೆ ಕೂಡ ಹೆಚ್ಚಾಗಿರುತ್ತದೆ. ಸದ್ಯಕ್ಕಂತೂ ಕಾವ್ಯ ಶೈವ ಮತ್ತು ಗಿಲ್ಲಿ ನಟ ಅವರು ಕ್ಲೋಸ್ ಆಗಿದ್ದಾರೆ. ಒಬ್ಬರಿಗೊಬ್ಬರು ಬೆಂಬಲ ನೀಡುತ್ತಿದ್ದಾರೆ.

ಮಿಡ್ ಸೀಸನ್ ಫಿನಾಲೆ ತಲುಪಲು ಬಿಗ್ ಬಾಸ್ ಸರಣಿ ಟಾಸ್ಕ್ ನೀಡುತ್ತಿದ್ದಾರೆ. ಅದರಲ್ಲಿ ಗೆಲ್ಲಲು ಎಲ್ಲರೂ ಕಷ್ಟಪಡುತ್ತಿದ್ದಾರೆ. ಅಕ್ಟೋಬರ್ 15ರ ಸಂಚಿಕೆಯಲ್ಲಿ ಕಾವ್ಯ ಶೈವ ಮತ್ತು ರಾಶಿಕಾ ಶೆಟ್ಟಿ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಬಹುತೇಕರು ರಾಶಿಕಾ ಶೆಟ್ಟಿಗೆ ಬೆಂಬಲ ನೀಡಿದರು. ಕಾವ್ಯ ಶೈವ ಅವರಿಗೆ ಕೆಲವರ ಬೆಂಬಲ ಮಾತ್ರ ಸಿಕ್ಕಿತು. ನಿರೀಕ್ಷೆಯಂತೆ ಗಿಲ್ಲಿ ನಟ ಅವರು ಕಾವ್ಯ ಪರವಾಗಿ ನಿಂತರು.

ಕಾವ್ಯ ಶೈವ ಮತ್ತು ರಾಶಿಕಾ ಶೆಟ್ಟಿ ಅವರು ಹಣಾಹಣಿ ನಡೆಸುವಾಗ ಬಹುತೇಕರು ರಾಶಿಕಾಗೆ ಪ್ರೋತ್ಸಾಹ ನೀಡುತ್ತಿದ್ದರು. ಆಟ ಮುಂದುವರಿದಂತೆ ರಾಶಿಕಾ ಅವರೇ ಗೆಲ್ಲುವುದು ಎನಿಸತೊಡಗಿತು. ಅಂಥ ಸಂದರ್ಭದಲ್ಲಿ ಕೂಡ ಗಿಲ್ಲಿ ಉತ್ಸಾಹ ಕಳೆದುಕೊಳ್ಳಲಿಲ್ಲ. ಇನ್ನೇನು ಕಾವ್ಯ ಶೈವ ಸೋಲುತ್ತಾರೆ ಎಂಬ ಸಂದರ್ಭ ಎದುರಾಯಿತು. ಆ ವೇಳೆ ಕೂಡ ಕಾವ್ಯಾ ಅವರನ್ನು ಗಿಲ್ಲಿ ಬಿಟ್ಟು ಕೊಡಲಿಲ್ಲ. ಕೊನೇ ಕ್ಷಣದ ತನಕ ಕೂಡ ಪ್ರೋತ್ಸಾಹ ನೀಡುತ್ತಲೇ ಇದ್ದರು.

ಇದನ್ನೂ ಓದಿ: ಗಿಲ್ಲಿ ನಟನ ಅಸಲಿ ಕಾಮಿಡಿ ಈಗ ಶುರು: ನಕ್ಕು ಸುಸ್ತಾದ ಕಿಚ್ಚ ಸುದೀಪ್

ಈ ಟಾಸ್ಕ್​​ನಲ್ಲಿ ಕಾವ್ಯ ಶೈವ ಅವರು ಸೋತರು. ರಾಶಿಕಾ ಶೆಟ್ಟಿ ಅವರು ಗೆದ್ದು ನಗು ಬೀರಿದರು. ತಮಗೆ ಹೆಚ್ಚಿನವರು ಬೆಂಬಲ ನೀಡಲಿಲ್ಲ ಎಂಬುದು ಕಾವ್ಯ ಶೈವ ಅವರ ಬೇಸರಕ್ಕೆ ಕಾರಣ ಆಯಿತು. ಆ ಬಗ್ಗೆ ಕಾವ್ಯ ಮತ್ತು ಗಿಲ್ಲಿ ಮಾತನಾಡಿದರು. ‘ಇಷ್ಟು ದಿನ ಎಲ್ಲರೂ ನಿನ್ನ ಜೊತೆ ಚೆನ್ನಾಗಿದ್ದರು. ಈಗ ಬಂದು ರಾಶಿಕಾಗೆ ಸಪೋರ್ಟ್ ಮಾಡಿದರು. ಅದು ನನಗೆ ಉರಿಯಿತು’ ಎಂದು ಗಿಲ್ಲಿ ನಟ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.