
ವಿನಯ್ ಗೌಡ ಅವರು ಇತ್ತೀಚೆಗೆ ಟಿವಿ9 ಕನ್ನಡಕ್ಕೆ ಸಂದರ್ಶನ ನೀಡಿದ್ದರು. ಈ ವೇಳೆ ಒಂದು ಶಾಕಿಂಗ್ ವಿಷಯ ಹೇಳಿದ್ದರು. ‘ಕೆಲವು ಪಿಆರ್ಗಳು ಗಿಲ್ಲಿ ನಟ (Gilli Nata) ವಿರುದ್ಧ ನೆಗೆಟಿವ್ ಪ್ರಚಾರ ಮಾಡುತ್ತದ್ದಾರೆ’ ಎಂದಿದ್ದರು. ಇದು ನಿಜವಾಗಿದೆ. ಇದನ್ನು ಫ್ಯಾನ್ಸ್ ಸಾಕ್ಷಿ ಸಮೇತ ಹಿಡಿದಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಳ್ಳಲಾಗಿದೆ.
ಗಿಲ್ಲಿ ನಟ ಅವರದ್ದು ಎಲ್ಲರಿಗೂ ಇಷ್ಟ ಆಗೋ ವ್ಯಕ್ತಿತ್ವ. ಡೈಲಾಗ್ ಮೂಲಕ ತಮ್ಮ ಮಾತಿನ ಮೂಲಕ ಅವರು ಎಲ್ಲರ ಮನಸ್ಸು ಗೆದ್ದಿದ್ದಾರೆ. ಅವರು ಮಾಡೋ ಕಾಮಿಡಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಅದರಲ್ಲೂ ಸಿನಿಮಾ ದೃಶ್ಯಗಳನ್ನು ಮನೆಯಲ್ಲಿ ನಡೆಯುವ ಘಟನೆಗಳಿಗೆ ಹೋಲಿಸಿ ಮಾಡುವ ಕಾಮಿಡಿಗಳು ಅದ್ಭುತವಾಗಿ ಇರುತ್ತವೆ. ಇಷ್ಟೆಲ್ಲ ಜನಪ್ರಿಯತೆ ಪಡೆದರೂ ಅವರ ವಿರುದ್ಧ ಕೆಲವರು ದ್ಷೇಷ ಹುಟ್ಟುವಂತೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ಕ್ಯಾಪ್ಟನ್ಸಿ ನಂಗೇ ಕೊಡಿ ಎಂದು ಬಿಗ್ ಬಾಸ್ ಬಳಿ ಹಠ ಹಿಡಿದ ಅಶ್ವಿನಿ; ಇದೆಂಥಾ ಲಾಜಿಕ್?
ರಿಯಾಲಿಟಿ ಶೋ ಎಂದಾಗ ಎಲ್ಲಾ ವೀಕ್ಷಕರು ಓರ್ವ ಸ್ಪರ್ಧಿಗೆ ಅಭಿಮಾನಿಯಾಗಬೇಕು ಎಂಬ ನಿಯಮ ಏನು ಇಲ್ಲ. ಕೆಲವರಿಗೆ ಗಿಲ್ಲಿ ಹಾಗೂ ಅವನ ಮಾತು ಇಷ್ಟ ಆದರೆ, ಇನ್ನೂ ಕೆಲವರಿಗೆ ಅದು ಸರಿಯಾದ ಮಾತಲ್ಲ ಎನಿಸಬಹುದು. ಹೀಗಾಗಿ, ಫ್ಯಾನ್ಸ್ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಕಿತ್ತಾಟ ನಡೆಯೋದು ಸಾಮಾನ್ಯ. ಉಳಿದ ಸ್ಪರ್ಧಿಗಳ ಫ್ಯಾನ್ಸ್ ಗಿಲ್ಲಿ ವಿರುದ್ಧ ಪೋಸ್ಟ್ ಕೂಡ ಹಾಕಬಹುದು. ಆದರೆ, ಕೆಲವರು ಉದ್ದೇಶಪೂರ್ವಕವಾಗಿ ಗಿಲ್ಲಿ ವಿರುದ್ಧ ನೆಗೆಟಿವ್ ಪೋಸ್ಟ್ ಹಾಕುತ್ತಿರುವುದನ್ನು ಅವರ ಅಭಿಮಾನಿಗಳು ಕಂಡು ಹಿಡಿದಿದ್ದಾರೆ.
ಓಹೋ… ಇದಾ ವಿಷಯಾ 🤔 #BBK12 pic.twitter.com/PmvbkAfASx
— ಅಲ್ಪಸಂಖ್ಯಾತ (@alpasankhyata) January 3, 2026
‘ಕಾವ್ಯಾ, ಅಶ್ವಿನಿ, ಧ್ರುವಂತ್ ಇಲ್ಲದೆ ಗಿಲ್ಲಿ ಏನೂ ಅಲ್ಲ. ಅವರಿಗೆ ರಿಯಾಕ್ಟ್ ಮಾಡಿದರೆ ಇವನಿಗೆ ಕಂಟೆಂಟ್. ಟಾಸ್ಕ್ನಲ್ಲಿ ಸೊನ್ನೆ, ಮನೆ ಕೆಲಸದಲ್ಲಿ ಸೊನ್ನೆ, ಬರೀ ಟ್ರಿಗರ್ ಮಾಡಿ ಕಂಟೆಂಟ್ ತೆಗೆದುಕೊಳ್ಳೋದು. ಈ ರೀತಿ ವಿನ್ ಆಗೋದ್ರಲ್ಲಿ ಏನರ್ಥವಿದೆ’ ಎಂಬ ಪೋಸ್ಟ್ ಹಂಚಿಕೊಳ್ಳಲಾಗಿದೆ. ಈ ಒಂದು ಪೋಸ್ಟರ್ನ ಮೂರು ಖಾತೆಗಳ ಮೂಲಕ ಒಂದಕ್ಷರವೂ ಬದಲಾಗದಂತೆ ಹಂಚಿಕೊಳ್ಳಲಾಗಿದೆ. ಇದು ಯಾರೋ ಉದ್ದೇಶಪೂರ್ವಕವಾಗಿ ಮಾಡುತ್ತಿರುವ ಕಿತಾಪತಿ ಎಂದು ಫ್ಯಾನ್ಸ್ ಕಂಡು ಹಿಡಿದಿದ್ದಾರೆ. ಈ ಕೆಲಸ ಮಾಡುತ್ತಿರುವವರು ಯಾರು ಎಂಬ ಪ್ರಶ್ನೆ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.