
‘ಬಿಗ್ ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಗಿಲ್ಲಿ ಅಂತೂ ಆಗಲ್ಲ’ ಹೀಗೆಂದು ಜ್ಯೋತಿಷಿ ಪ್ರಶಾಂತ್ ಕಿಣಿ ಭವಿಷ್ಯ ನುಡಿದಿದ್ದರು. ಡಿಸೆಂಬರ್ನಲ್ಲಿ ಮಾಡಿದ್ದ ಈ ಟ್ವೀಟ್ ವೈರಲ್ ಆಗಿತ್ತು. ಆದರೆ, ಭವಿಷ್ಯ ಸುಳ್ಳಾಗಿದೆ. ಗಿಲ್ಲಿ ಅವರೇ ಬಿಗ್ ಬಾಸ್ ಗೆದ್ದು ಬೀಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಜ್ಯೋತಿಷಿಗೆ ಕಿವಿಮಾತು ಹೇಳುವ ಕೆಲಸ ಆಗುತ್ತಿದೆ. ಗಿಲ್ಲಿ (Gilli Nata) ದೊಡ್ಡ ವೋಟಿಂಗ್ ಅಂತರದಲ್ಲೇ ಗೆದ್ದಿದ್ದಾರೆ ಎಂಬುದು ಇಲ್ಲಿ ಗಮನಿಸಬೇಕಾದ ವಿಷಯ.
ಪ್ರಶಾಂತ್ ಕಿಣಿ ಎಂಬುವವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದರು. ಅವರು ತಮ್ಮನ್ನು ಜ್ಯೋತಿಷಿ ಎಂದು ಕರೆದುಕೊಂಡಿದ್ದಾರೆ. ‘ಗಿಲ್ಲಿ ಫಿನಾಲೆ ತಲುಪುತ್ತಾರೆ’ ಎಂದು ಅವರು ಅಕ್ಟೋಬರ್ನಲ್ಲಿ ಭವಿಷ್ಯ ನುಡಿದಿದ್ದರು. ಅದು ನಿಜವಾಗಿದೆ. ಗಿಲ್ಲಿಯ ಮೊದಲಿನ ಶೋಗಳನ್ನು ನೋಡಿದವರಿಗೆ ಅವರು ಫಿನಾಲೆ ಸ್ಪರ್ಧಿಗಳಲ್ಲಿ ಒಬ್ಬರಾಗಿರುತ್ತಾರೆ ಎಂಬುದು ಸ್ಪಷ್ಟವಾಗಿತ್ತು. ಈ ವಿಷಯದಲ್ಲಿ ಭವಿಷ್ಯ ನುಡಿದಿದ್ದು ಏನೂ ವಿಶೇಷವಿರಲಿಲ್ಲ.
ಇದನ್ನೂ ಓದಿ: ಗಿಲ್ಲಿ ಬಿಗ್ ಬಾಸ್ ಗೆಲ್ಲಲ್ಲ, ಮಹಿಳಾ ಸ್ಪರ್ಧಿ ವಿನ್ನರ್; ಭವಿಷ್ಯ ನುಡಿದ ಜ್ಯೋತಿಷಿ
ಆದರೆ, ಡಿಸೆಂಬರ್ನಲ್ಲಿ ‘ಗಿಲ್ಲಿ ಅವರು ಬಿಗ್ ಬಾಸ್ ವಿನ್ ಆಗಲ್ಲ, ಈ ಬಾರಿ ಗೆಲ್ಲೋದು ಮಹಿಳಾ ಸ್ಪರ್ಧಿ’ ಎಂದು ಪ್ರಶಾಂತ್ ಕಿಣಿ ಮಾಡಿದ್ದ ಟ್ವೀಟ್ ಗಮನ ಸೆಳೆದಿತ್ತು. ಈ ಟ್ವೀಟ್ಗೆ ಸಾಕಷ್ಟು ವಿರೋಧ ಕೂಡ ವ್ಯಕ್ತವಾಗಿತ್ತು. ಈಗ ಗಿಲ್ಲಿ ನಟ ಅವರು ವಿನ್ ಆಗಿದ್ದಾರೆ. ಈ ಮೂಲಕ ಪ್ರಶಾಂತ್ ಕಿಣಿ ಅವರ ಭವಿಷ್ಯ ಸುಳ್ಳಾಗಿದೆ. ‘ನಿಮ್ಮ ಭವಿಷ್ಯವನ್ನು ಸುಳ್ಳು ಮಾಡಿ ತೋರಿಸುತ್ತೇವೆ’ ಎಂದು ಗಿಲ್ಲಿ ಅಭಿಮಾನಿಗಳು ಆಗಲೇ ಚಾಲೆಂಜ್ ಮಾಡಿದ್ದರು. ಈ ಚಾಲೆಂಜ್ ಅಲ್ಲಿ ಗಿಲ್ಲಿ ಫ್ಯಾನ್ಸ್ ಗೆದ್ದಿದ್ದಾರೆ.
ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ ಅನ್ನೋದಕ್ಕೆ ಇದೊಂದು ಉದಾಹರಣೆ
ಹೊಟ್ಟೆಪಾಡಿಗೆ ಭವಿಷ್ಯ ಹೇಳ್ತಾರೆ
ಸಿಕ್ಕಾಪಟ್ಟೆ ತಲೆ ಕೆಡಿಸ್ಕೊ ಬೇಡಿWork hard and believe in yourself 😊 #BBK12#Gilli https://t.co/3JORopOLWA
— ಅಲ್ಪಸಂಖ್ಯಾತ (@alpasankhyata) January 18, 2026
ಗಿಲ್ಲಿ ನಟ ಅವರು ಮೊದಲಿನಿಂದಲೂ ಎಲ್ಲರ ಫೇವರಿಟ್ ಸ್ಪರ್ಧಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಹಲವು ಫ್ಯಾನ್ ಪೇಜ್ಗಳು ಸೃಷ್ಟಿ ಆಗಿವೆ. ಅವರು ಪ್ರಶಾಂತ್ ಕಿಣಿಯನ್ನು ಟೀಕಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:37 am, Mon, 19 January 26