
ಬಿಗ್ ಬಾಸ್ (Bigg Boss) ಮನೆಯಲ್ಲಿ ಗಿಲ್ಲಿ ನಟ ಅವರು ಒಳ್ಳೆಯ ರೀತಿಯಲ್ಲಿ ಆಡುತ್ತಿದ್ದಾರೆ. ಅವರ ಆಟದಲ್ಲಿ ಸಾಕಷ್ಟು ಏರಿಳತಗಳು ಇವೆ. ಅವರು ಕಳೆದ ವಾರ ಸಾಕಷ್ಟು ತೊಂದರೆ ಅನುಭವಿಸಿದರು. ಇದಕ್ಕೆ ಕಾರಣ ಮನೆಗೆ ಬಂದ ಸ್ಪರ್ಧಿಗಳು. ಮನೆಗೆ ಬಂದವರನ್ನು ಗಿಲ್ಲಿ ಎದುರು ಹಾಕಿಕೊಂಡರು. ಇದರಿಂದ ಅವರು ಸಾಕಷ್ಟು ತೊಂದರೆ ಅನುಭವಿಸಿದರು. ಕಿಚ್ಚ ಸುದೀಪ್ ಅವರಿಂದ ಕ್ಲಾಸ್ ತೆಗೆದುಕೊಂಡರು. ಈಗ ಸುದೀಪ್ ಹೇಳಿದ ಒಂದು ಮಾತು ಸಾಕಷ್ಟು ಚರ್ಚೆ ಆಗುತ್ತಿದೆ. ಅದು ಏನು? ಸುದೀಪ್ ಹಾಗೆ ಹೇಳಿದರು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಗಿಲ್ಲಿ ಅವರು ಹಾಸ್ಯ ಮಾಡಲು ಹೋಗಿ ಲಯ ತಪ್ಪಿದ್ದರು. ಈ ವಿಷಯ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿತ್ತು. ಊಟದ ವಿಷಯ, ಉಗ್ರಂ ಮಂಜು ಅವರ ಮದುವೆ ವಿಷಯದಲ್ಲಿ ಗಿಲ್ಲಿ ನಾಲಿಗೆ ಹರಿಬಿಟ್ಟರು ಮತ್ತು ಸಾಕಷ್ಟು ಟೀಕೆಗಳನ್ನು ಎದುರಿಸಿದರು. ಈ ವಿಷಯದಲ್ಲಿ ಸುದೀಪ್ ಅವರು ಪಾಠ ಹೇಳುವಾಗ ಒಂದು ಮಾತನ್ನು ಹೇಳಿದರು. ಆ ಮಾತಿನ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದವು.
ಬಿಗ್ ಬಾಸ್ನವರು ಮೊದಲು ನಿಮ್ಮ ಜೊತೆಯೇ ಅಲ್ಲವೇ ಒಪ್ಪಂದ ಮಾಡಿಕೊಂಡಿದ್ದು ಎಂದು ಸುದೀಪ್ ಹೇಳಿದರು. ಅದು ಯಾವಾಗ ಎಂಬ ಮಾಹಿತಿ ಕೇಳಿ ಎಲ್ಲರಿಗೂ ಅಚ್ಚರಿ ಆಯಿತು. ಫೆಬ್ರವರಿಯಲ್ಲೇ ಬಿಗ್ ಬಾಸ್ ನಿಮ್ಮ ಜೊತೆ ಒಪ್ಪಂದ ಮಾಡಿಕೊಂಡಿದ್ದರಲ್ಲವೇ. ನೀವು ಉತ್ತಮವಾಗಿ ಆಡುತ್ತೀರಿ ಎಂದರೆ ಬಿಗ್ ಬಾಸ್ಗೆ ಸಮಸ್ಯೆ ಏನು ಎಂದು ಸುದೀಪ್ ಅವರು ಗಿಲ್ಲಿಗೆ ಪ್ರಶ್ನೆ ಮಾಡಿದರು.
ಇದನ್ನೂ ಓದಿ: ‘ಈ ವಾರ ನನ್ನ ಹೊರಗೆ ಕಳುಹಿಸಿ’; ಸುಸ್ತಾದ ಧ್ರುವಂತ್, ಬಿಗ್ ಬಾಸ್ ಎದುರು ಕೋರಿಕೆ
ಈ ಪ್ರಶ್ನೆ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಏಳು ತಿಂಗಳ ಹಿಂದೆಯೇ ಗಿಲ್ಲಿ ಜೊತೆ ಒಪ್ಪಂದ ಆಗಿತ್ತು. ಈ ಕಾರಣದಿಂದಲೇ ಗಿಲ್ಲಿ ಅವರು ಇದಕ್ಕೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಂಡಿದ್ದರು ಎಂದು ಅನೇಕರು ಹೇಳಿದ್ದಾರೆ. ಗಿಲ್ಲಿ ಅವರು ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಸಿನಿಮಾ ಡೈಲಾಗ್ಗಳನ್ನು ಹೇಳುತ್ತಿದ್ದಾರೆ. ಕೆಜಿಎಫ್ ಹಾಗೂ ಸೂರ್ಯವಂಶ ಸಿನಿಮಾ ಡೈಲಾಗ್ಗಳನ್ನು ಅವರು ಹೇಳುತ್ತಿದ್ದಾರೆ. ಇದಕ್ಕೆ ಅವರು ಕಳೆದ ಏಳು ತಿಂಗಳಲ್ಲಿ ಪ್ರಿಪರೇಷನ್ ಮಾಡಿಕೊಂಡಿದ್ದರು ಎಂದು ಅನೇಕರು ಹೇಳಿದ್ದಾರೆ. ಹಾಗೆ ಮಾಡಿದರೂ ತಪ್ಪೇನಿದೆ ಎಂಬುದು ಗಿಲ್ಲಿ ಅಭಿಮಾನಿಗಳ ಪ್ರಶ್ನೆ. ಅಂತಿಮವಾಗಿ ಬಿಗ್ ಬಾಸ್ ವಿನ್ ಆಗೋದು ಮುಖ್ಯವಾಗುತ್ತದೆ. ಅದಕ್ಕೆ ಗಿಲ್ಲಿ ಬೇಕಾದ ಸಿದ್ಧತೆ ಮಾಡಿಕೊಂಡಿದ್ದಾರೆ ಅಷ್ಟೇ ಎಂದು ಕೆಲವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.