
ಅಕುಲ್ ಬಾಲಾಜಿ ನಡೆಸಿಕೊಡುತ್ತಿರುವ ‘ಹಳ್ಳಿ ಪವರ್’ನ (Halli Power) ಎರಡನೇ ದಿನದ ಎಪಿಸೋಡ್ ಗಮನ ಸೆಳೆದಿದೆ. ಹಳ್ಳಿ ಸೇರಿದ ಪ್ಯಾಟೆ ಮಂದಿಗೆ ಭರ್ಜರಿ ಟಾಸ್ಕ್ ನೀಡಲಾಗಿದೆ. ಅದುವೇ ಹಾಲು ಕರೆಯೋ ಟಾಸ್ಕ್. ಹಳ್ಳಿಗಳಲ್ಲಿ ಎಮ್ಮೆ ಸಾಕುತ್ತಾರೆ. ದಿನ ನಿತ್ಯದ ಬಳಕೆಗೆ, ಮಾರಾಟಕ್ಕೆ ಹಾಲನ್ನು ಕರೆಯಲಾಗುತ್ತದೆ. ಇದರ ಬಗ್ಗೆ ಜ್ಞಾನವೇ ಇಲ್ಲದ ಪ್ಯಾಟೆ ಮಂದಿಗೆ ಈ ರೀತಿಯ ಟಾಸ್ಕ್ ಕೊಟ್ಟರೆ ಹೇಗೆ? ಅಂತಹ ಟಾಸ್ಕ್ನ ಎದುರಿಸಿರೋ ಪ್ಯಾಟೆ ಮಂದಿ ಸುಸ್ತಾಗಿದ್ದಾರೆ. ಗೆದ್ದವರಿಗೆ ಸಿಹಿ ಹಾಗೂ ಸೋತವರಿಗೆ ಶಿಕ್ಷೆ ಸಿಕ್ಕಿದೆ.
12 ಸ್ಪರ್ಧಿಗಳನ್ನು ಕರೆದು ಬೆಳಿಗ್ಗೆಯೇ ಟಾಸ್ಕ್ ಬಗ್ಗೆ ಹೇಳಲಾಯಿತು. ಅಲ್ಲದೆ, ಸ್ಥಳೀಯರ ಮನೆಗೆ ತೆರಳಿ ಹಾಲು ಕರೆಯೋದರ ತರಬೇತಿ ಪಡೆಯಬೇಕಿತ್ತು. ಈ ಪ್ರ್ಯಾಕ್ಟಿಸ್ನ ಪ್ಯಾಟೆ ಹುಡುಗಿಯರು ಮಾಡಿಕೊಂಡರು. ನಂತರ ರಾತ್ರಿ ನಿಜವಾದ ಟಾಸ್ಕ್ ಶುರುವಾಯಿತು. ಈ ವೇಳೆ ಅನೇಕರು ನಡುಗಿ ಹೋದರೆ, ಇನ್ನೂ ಕೆಲವರು ಯಶಸ್ಸು ಕಂಡರು.
12 ಎಮ್ಮೆಗಳನ್ನು ಇಡಲಾಗಿತ್ತು. 20 ನಿಮಿಷ ಸಮಯಾವಕಾಶ ಕೂಡ ನೀಡಲಾಯಿತು. ಈ ವೇಳೆ ಎಲ್ಲರೂ ತಮ್ಮ ಕೈಲಾದಷ್ಟು ಹಾಲು ಕರೆದರು. ಕೆಲವರ ಬಳಿ ಒಂದು ಹನಿ ಕೂಡ ಹಾಲು ಕರೆಯೋಕೆ ಸಾಧ್ಯ ಆಗಲೇ ಇಲ್ಲ. 12 ಮಂದಿಗಳಲ್ಲಿ ಈಗಾಗಲೇ ಇಬ್ಬರಂತೆ ಒಂದು ತಂಡ ಮಾಡಲಾಗಿದೆ. ಹೀಗಾಗಿ, ತಂಡವಾಗಿ ಪರಿಗಣಿಸಿ ಯಾರು ಗೆದ್ದರು ಎಂಬುದನ್ನು ಘೋಷಣೆ ಮಾಡಲಾಯಿತು.
ಕಾವ್ಯಾ ಹಾಗೂ ಗಗನ 135 ಎಂಎಲ್, ಲಲಿತಾ ಹಾಗೂ ಸೋನಿಯಾ 70 ಎಂಎಲ್, ರಶ್ಮಿ ಹಾಗೂ ಟೆಲಿನ್ 55 ಎಂಎಲ್, ತೇಜಸ್ವಿನಿ ಹಾಗೂ ಆಶ್ ಮೆಲೋ ಸ್ಕೈಲೆರ್ 150 ಎಂಎಲ್, ಯುಕ್ತಾ-ಚಿನ್ಮಯಿ 315 ಎಂಎಲ್, ಮೋನಿಷಾ ಹಾಗೂ ಸ್ನೇಹಾ ಶೆಟ್ಟಿ 400 ಎಂಎಲ್ ಹಾಲನ್ನು ಕರೆದಿದ್ದರು. ಈ ಮೂಲಕ ಮೋನಿಷಾ ಹಾಗೂ ಸ್ನೇಹಾ ವಿನ್ನರ್ಗಳಾದರು.
ಇದನ್ನೂ ಓದಿ: ‘ಹಳ್ಳಿ ಪವರ್’: ಒಂದೇ ದಿನಕ್ಕೆ ಸುಸ್ತಾದ ಸಿಟಿ ಸುಂದರಿಯರು; ಕೆಲವರು ಅರ್ಧಕ್ಕೆ ವಾಪಸ್?
ವಿನ್ನರ್ಗಳಿಗೆ ಬೆಳಗಾವಿಯ ಕುಂದ ಗಿಫ್ಟ್ ಆಗಿ ಸಿಕ್ಕಿತು. ಇದನ್ನು ತಿಂದು ಇವರು ಖುಷಿ ಪಟ್ಟರು. ಇನ್ನು, ಸೋತ ರಶ್ಮಿ-ಟೆಲಿನ್ ಹಾಗೂ ಲಲಿತಾ-ಸೋನಿಯಾಗೆ ಸಗಣಿ ನೀರ ಸ್ನಾನ ಮಾಡಬೇಕಾದ ಪರಿಸ್ಥಿತಿ ಬಂತು. ಈ ವೇಳೆ ಅವರಿಗೆ ವಾಕರಿಕೆ ಬಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:03 am, Wed, 3 September 25