ಹರ್ಷನಿಗೆ ಭುವಿ ಸಿಕ್ಕರೆ ಆತ ಕಳೆದುಕೊಳ್ಳೋದು ಯಾರನ್ನ? ಭವಿಷ್ಯವಾಣಿಯ ಹಿಂದಿನ ಮರ್ಮವೇನು?

ಹರ್ಷ ಮೊದಲೇ ದೇವರ ಬಗ್ಗೆ ನಂಬಿಕೆ ಇಲ್ಲದ ವ್ಯಕ್ತಿ. ಆದಾಗ್ಯೂ, ಭವಿಷ್ಯ ಹೇಳುವ ಮಹಿಳೆಯ ಮಾತು ಆತನನ್ನು ಆಕರ್ಷಿಸುತ್ತದೆ.

ಹರ್ಷನಿಗೆ ಭುವಿ ಸಿಕ್ಕರೆ ಆತ ಕಳೆದುಕೊಳ್ಳೋದು ಯಾರನ್ನ? ಭವಿಷ್ಯವಾಣಿಯ ಹಿಂದಿನ ಮರ್ಮವೇನು?
ಹರ್ಷ-ಭುವಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Oct 14, 2021 | 4:20 PM

‘ಕನ್ನಡತಿ’ ಧಾರಾವಾಹಿ ಹೊಸಹೊಸ ತಿರುವುಗಳನ್ನು ಪಡೆದುಕೊಂಡು ಸಾಗುತ್ತಿದೆ. ಒಂದು ಕಡೆ ಹರ್ಷ ಮತ್ತು ಭುವಿ ಪ್ರೀತಿ ವಿಚಾರ ಪ್ರಮುಖ ಘಟಕ್ಕೆ ಬಂದು ನಿಂತಿದೆ. ಮತ್ತೊಂದು ಕಡೆ ಸೌಪರ್ಣಿಕಾ ವಿಚಾರದಲ್ಲಿ ಸಾನಿಯಾ ಪೊಲೀಸ್​ ಠಾಣೆಯಲ್ಲಿ ವಿಚಾರಣೆ ಎದುರಿಸುತ್ತಿದ್ದಾಳೆ. ಈ ಮಧ್ಯೆ ಹರ್ಷ ಕೇಳಿದ ಭವಿಷ್ಯವಾಣಿಯನ್ನು ನಾನಾ ರೀತಿಯಲ್ಲಿ ಬಣ್ಣಿಸಲಾಗುತ್ತಿದೆ.

ಭುವಿ ಜನ್ಮದಿನದ ಹಿನ್ನೆಲೆಯಲ್ಲಿ ಹರ್ಷ ಮತ್ತು ರತ್ನಮಾಲಾ ದೇವಸ್ಥಾನಕ್ಕೆ ತೆರಳಿದ್ದರು. ಪೂಜೆಗೂ ಮೊದಲು ದೇವಸ್ಥಾನದಲ್ಲಿ ಹರ್ಷನಿಗೆ ಭವಿಷ್ಯ ಹೇಳುವ ಮಹಿಳೆ ಒಬ್ಬಳು ಸಿಕ್ಕಿದ್ದಳು. ಹರ್ಷ ಮೊದಲೇ ದೇವರ ಬಗ್ಗೆ ನಂಬಿಕೆ ಇಲ್ಲದ ವ್ಯಕ್ತಿ. ಆದಾಗ್ಯೂ, ಭವಿಷ್ಯ ಹೇಳುವ ಮಹಿಳೆಯ ಮಾತು ಆತನನ್ನು ಆಕರ್ಷಿಸುತ್ತದೆ.

ಭುವಿಗೆ ಪ್ರಪೋಸ್​ ಮಾಡಬೇಕು ಎಂದು ಹರ್ಷ ನಿರ್ಧರಿಸಿದ್ದಾನೆ. ಈ ವಿಚಾರದ ಬಗ್ಗೆ ಹರ್ಷ ಭವಿಷ್ಯ ಹೇಳುವ ಮಹಿಳೆಗೆ ಪ್ರಶ್ನೆ ಮಾಡಿದ್ದಾನೆ. ‘ಪ್ರೀತಿ ಸಿಕ್ಕರೆ ಎಲ್ಲವೂ ಸಿಕ್ಕಂತೆಯೇ? ಅಲ್ಲಿಗೆ ಮುಗಿಯುವುದಿಲ್ಲ. ಅಲ್ಲಿಂದ ಎಲ್ಲವೂ ಶುರುವಾಗುತ್ತದೆ. ಪ್ರೀತಿಸುವುದನ್ನು ಯಾವತ್ತೂ ಬಿಡಬಾರದು. ಪ್ರೀತಿಯೇನೋ ಸಿಗಬಹುದು, ಆದರೆ ಕಳೆದುಕೊಳ್ಳೋದು ಇದೆ’ ಎಂದು ಮಹಿಳೆ ಹೇಳುತ್ತಾಳೆ. ಇದು ಹರ್ಷನನ್ನು ಮತ್ತಷ್ಟು ಗೊಂದಲಕ್ಕೆ ಸಿಲುಕಿಸಿದೆ.

ಹರ್ಷನ ತಾಯಿ ರತ್ನಾಮಾಲಾಗೆ ಅನಾರೋಗ್ಯ ಕಾಡುತ್ತಿದೆ. ಅವಳು ಬದುಕೋದು ಇನ್ನು ಕೆಲವೇ ತಿಂಗಳು ಮಾತ್ರ. ಹೀಗಾಗಿ, ಹರ್ಷನಿಗೆ ಭುವಿ ಸಿಗುವ ಸಂದರ್ಭದಲ್ಲಿ ಆತನ ತಾಯಿ ದೂರವಾಗಬಹುದು. ಇನ್ನು, ಭುವಿ ಮತ್ತು ವರುಧಿನಿ ಕ್ಲೋಸ್​ ಫ್ರೆಂಡ್ಸ್​. ಆದರೆ, ಹರ್ಷನನ್ನು ವರುಧಿನಿ ಪ್ರೀತಿಸುತ್ತಿದ್ದಾಳೆ. ಈ ವಿಚಾರದಲ್ಲಿ ಭುವಿ ಮತ್ತು ವರುಧಿನಿ ನಡುವೆ ಮನಸ್ತಾಪ ಉಂಟಾಗಬಹುದು.

ಹರ್ಷ ಅವರು ಭುವಿಗೆ ಪ್ರಪೋಸ್​ ಮಾಡೋಕೆ ರೆಡಿ ಆಗಿದ್ದಾರೆ. ಇದನ್ನು, ಭುವಿ ಒಪ್ಪಿಕೊಳ್ಳುತ್ತಾರಾ ಅಥವಾ ಇಲ್ಲವಾ ಅನ್ನೋದು ಸದ್ಯದ ಕುತೂಹಲ. ಈ ಪ್ರಶ್ನೆಗೆ ಶೀಘ್ರವೇ ಉತ್ತರ ಸಿಗಲಿದೆ.

ಇದನ್ನೂ ಓದಿ: ಅದ್ದೂರಿಯಾಗಿ ಭುವಿಗೆ ಪ್ರಪೋಸ್​ ಮಾಡಲು ‘ಕನ್ನಡತಿ’ ಹರ್ಷ ರೆಡಿ; ವಿಲನ್​ ಯಾರು?

ಕನ್ನಡತಿಯಲ್ಲಿ ಹರ್ಷನ ಪ್ರಪೋಸ್​ ಭುವಿ ಒಪ್ಪಿಕೊಳ್ಳೋದು ಡೌಟು? ಇಲ್ಲಿದೆ ಕಾರಣ

ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು