Rakesh Adiga: ಅಮೂಲ್ಯ ಜತೆ ಕ್ಲೋಸ್ ಆಗಿದ್ದಕ್ಕೆ ಸೋನು ಗೌಡ ಪ್ರತಿಕ್ರಿಯೆ ಹೇಗಿತ್ತು? ರಾಕೇಶ್ ಕೊಟ್ರು ಉತ್ತರ

ರಾಕೇಶ್ ಅಡಿಗ ಹಾಗೂ ಸೋನು ಮಧ್ಯೆ ಒಟಿಟಿ ಸೀಸನ್​ನಲ್ಲಿ ಉತ್ತಮ ಫ್ರೆಂಡ್​ಶಿಪ್ ಬೆಳೆದಿತ್ತು. ಆದರೆ, ಟಿವಿ ಸೀಸನ್​​ಗೆ ರಾಕೇಶ್ ಮಾತ್ರ ಹೋದರು. ಸೋನು ಒಟಿಟಿ ಫಿನಾಲೆಯಲ್ಲಿ ಔಟ್​ ಆದರು. ಹೀಗಾಗಿ ಇಬ್ಬರ ಮಧ್ಯೆ ಲಿಂಕ್ ತಪ್ಪಿತು.

Rakesh Adiga: ಅಮೂಲ್ಯ ಜತೆ ಕ್ಲೋಸ್ ಆಗಿದ್ದಕ್ಕೆ ಸೋನು ಗೌಡ ಪ್ರತಿಕ್ರಿಯೆ ಹೇಗಿತ್ತು? ರಾಕೇಶ್ ಕೊಟ್ರು ಉತ್ತರ
ಅಮುಲ್ಯ-ರಾಕೇಶ್​-ಸೋನು
Updated By: ರಾಜೇಶ್ ದುಗ್ಗುಮನೆ

Updated on: Jan 02, 2023 | 10:37 AM

ರಾಕೇಶ್ ಅಡಿಗ (Rakesh Adiga) ಅವರು ‘ಬಿಗ್ ಬಾಸ್ ಕನ್ನಡ ಸೀಸನ್​ 9’ರ ರನ್ನರ್​ಅಪ್​ ಆಗಿದ್ದಾರೆ. ಅವರಿಗೆ ಬಿಗ್ ಬಾಸ್ ಕಡೆಯಿಂದ 12 ಲಕ್ಷ ರೂಪಾಯಿ ಬಹುಮಾನ ಹಣ ಸಿಕ್ಕಿದೆ. ರಾಕೇಶ್ ಅವರು ಒಟಿಟಿಯಿಂದ ಟಿವಿ ಸೀಸನ್​ಗೆ ಬಂದವರು. ಒಟಿಟಿಯಲ್ಲಿ ಸೋನು ಗೌಡ (Sonu Gowda) ಜತೆ ಕ್ಲೋಸ್ ಇದ್ದ ಅವರು, ಟಿವಿ ಸೀಸನ್​ನಲ್ಲಿ ಅಮೂಲ್ಯ ಗೌಡ ಜತೆ ಫ್ರೆಂಡ್​ಶಿಪ್ ಬೆಳೆಸಿದರು. ಅಮೂಲ್ಯ ಜತೆ ಆಪ್ತತೆ ಬೆಳೆದಿದ್ದು ನೋಡಿ ಸೋನು ಗೌಡ ಬೇಸರ ಮಾಡಿಕೊಂಡಿರುತ್ತಾರೆ ಎಂದು ಅನೇಕರು ಭಾವಿಸಿದ್ದರು. ಇದಕ್ಕೆ ರಾಕೇಶ್ ಉತ್ತರ ನೀಡಿದ್ದಾರೆ.

ರಾಕೇಶ್ ಅಡಿಗ ಹಾಗೂ ಸೋನು ಮಧ್ಯೆ ಒಟಿಟಿ ಸೀಸನ್​ನಲ್ಲಿ ಉತ್ತಮ ಫ್ರೆಂಡ್​ಶಿಪ್ ಬೆಳೆದಿತ್ತು. ಆದರೆ, ಟಿವಿ ಸೀಸನ್​​ಗೆ ರಾಕೇಶ್ ಮಾತ್ರ ಹೋದರು. ಸೋನು ಒಟಿಟಿ ಫಿನಾಲೆಯಲ್ಲಿ ಔಟ್​ ಆದರು. ಹೀಗಾಗಿ ಇಬ್ಬರ ಮಧ್ಯೆ ಲಿಂಕ್ ತಪ್ಪಿತು. ಟಿವಿ ಸೀಸನ್​ನಲ್ಲಿ ರಾಕೇಶ್ ಅಡಿಗ ಹಾಗೂ ಅಮೂಲ್ಯ ಗೌಡ ಕ್ಲೋಸ್ ಆದರು. ಇಬ್ಬರ ಮಧ್ಯೆ ಒಳ್ಳೆಯ ಫ್ರೆಂಡ್​ಶಿಪ್ ಬೆಳೆದಿದೆ. ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವ ರಾಕೇಶ್ ಅವರು ಈಗ ಮಾತನಾಡಿದ್ದಾರೆ.

‘ಸೋನು ಜತೆ ಮಾತನಾಡಿದೆ. ಎಂದಿನಂತೆ ರೇಗಿಸಿದಳು. ನಾನು ಹೀಗೆ ಇರೋದು ಅಂತ ಸೋನುಗೆ ಗೊತ್ತು. ‘ಟಿವಿ ಸೀಸನ್​​ನಲ್ಲಿ ಯಾರನ್ನೂ ನೋಡಬಾರದು’ ಅಂತ ಒಟಿಟಿ ಸೀಸನ್​ನಲ್ಲಿ ಅವಳು ಕಂಡೀಷನ್​ ಹಾಕಿ ತಮಾಷೆ ಮಾಡ್ತಾ ಇದ್ಲು. ಅವಳು ತಮಾಷೆಗೆ ಬೈತಾಳೆ ಅಷ್ಟೇ. ಗಂಭೀರವಾಗಿ ಆಕೆ ನನ್ನನ್ನು ಬೈದಿಲ್ಲ. ನನ್ನ ವಿಚಾರದಲ್ಲಿ ಆಕೆ ಜಲಸ್ ಮಾಡಿಕೊಳ್ಳುವುದಿಲ್ಲ. ಏಕೆಂದರೆ ನಾನು ಬದಲಾಗುವವನಲ್ಲ ಅನ್ನೋದು ಆಕೆಗೆ ಗೊತ್ತಿದೆ’ ಎಂದಿದ್ದಾರೆ ರಾಕೇಶ್ ಅಡಿಗ.

ಇದನ್ನೂ ಓದಿ
Bigg Boss Kannada Finale: ಬಿಗ್ ಬಾಸ್ ವಿನ್ನರ್ ಹೆಸರು ಲೀಕ್ ಆಗದಿರಲು ಕಲರ್ಸ್ ಕನ್ನಡದಿಂದ ಹೊಸ ಪ್ಲ್ಯಾನ್
Divya Uruduga: ‘ಉತ್ತಮ, ಕಿಚ್ಚನ ಚಪ್ಪಾಳೆ, ಕ್ಯಾಪ್ಟನ್​ ಪಟ್ಟ ದಿವ್ಯಾಗೆ ಸಿಕ್ಕಿಲ್ಲ; ಆದ್ರೂ ಫಿನಾಲೆಗೆ ಹೇಗೆ ಬಂದ್ರು?’: ಗುರೂಜಿ ಪ್ರಶ್ನೆ
Divya Uruduga: ಬಿಗ್ ಬಾಸ್​ ಫಿನಾಲೆಯಿಂದ ಹೊರಬಿದ್ದ ದಿವ್ಯಾ ಉರುಡುಗಗೆ ಸಿಕ್ಕ ಹಣವೆಷ್ಟು?
Divya Uruduga: ‘ಮನೆಯೊಳಗೆ ಇದ್ದಾಗ ನನ್ನ ಮಗಳು ಅಂತಾರೆ, ಆದರೆ ಹೊರಗೆ..’: ಗುರೂಜಿ ಮೇಲೆ ದಿವ್ಯಾ ಗರಂ

ಅಮೂಲ್ಯ ಗೌಡ ಜತೆಗಿನ ಫ್ರೆಂಡ್​ಶಿಪ್ ಬಗ್ಗೆ ರಾಕೇಶ್ ಮಾತನಾಡಿದ್ದಾರೆ. ‘ನಾನು ಅಮೂಲ್ಯ ಜತೆ ಗೆಳೆತನ ಮುಂದುವರಿಸುತ್ತೀನಿ. ಅವಳು ಔಟ್​ ಆದಾಗ ನಾನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದೆ. ಅವಳು ಒಳ್ಳೆಯ ಫ್ರೆಂಡ್’ ಎಂದಿದ್ದಾರೆ ರಾಕೇಶ್.

ಇದನ್ನೂ ಓದಿ: BBK 9 Winner Prize: ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿಗೆ ಸಿಕ್ಕ ಹಣ ಎಷ್ಟು ಗೊತ್ತಾ?

ಬಿಗ್ ಬಾಸ್ ಫಿನಾಲೆಯಲ್ಲಿ ರಾಕೇಶ್ ಹಾಗೂ ರೂಪೇಶ್ ಶೆಟ್ಟಿ ಅವರು ಸುದೀಪ್ ಅಕ್ಕಪಕ್ಕ ನಿಂತಿದ್ದರು. ರೂಪೇಶ್ ಶೆಟ್ಟಿ ಬಿಗ್ ಬಾಸ್ ವಿನ್ ಆಗಿ ಕಪ್ ಹಾಗೂ ಹಣ ತೆಗೆದುಕೊಂಡು ಹೋಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ