AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಜು ಪಾವಗಡಗೆ ಮಂಡಿಯೂರಿ ಪ್ರಪೋಸ್ ಮಾಡಿದ ಅಮೂಲ್ಯ ಗೌಡ; ರಿಯಾಕ್ಷನ್ ಹೇಗಿತ್ತು?

ದೊಡ್ಮನೆಗೆ ರೀ-ಎಂಟ್ರಿ ಕೊಟ್ಟ ಸಂದರ್ಭದಲ್ಲಿ ಅವರು ತಮ್ಮ ಕಲೆಯನ್ನು ತೋರಿಸಿದ್ದಾರೆ. ದೀಪಿಕಾ ಹಾಗೂ ಅಮೂಲ್ಯ ಜತೆ ಮಂಜು ಫ್ಲರ್ಟ್​ ಮಾಡಿದ್ದಾರೆ.

ಮಂಜು ಪಾವಗಡಗೆ ಮಂಡಿಯೂರಿ ಪ್ರಪೋಸ್ ಮಾಡಿದ ಅಮೂಲ್ಯ ಗೌಡ; ರಿಯಾಕ್ಷನ್ ಹೇಗಿತ್ತು?
ಮಂಜು ಪಾವಗಡ-ಅಮೂಲ್ಯ
TV9 Web
| Edited By: |

Updated on:Dec 22, 2022 | 9:16 AM

Share

ಮಂಜು ಪಾವಗಡ (Manju Pavagada) ಅವರು ಬಿಗ್ ಬಾಸ್​ನ ಕಳೆದ ಸೀಸನ್​ಗೆ ಎಂಟ್ರಿ ಕೊಟ್ಟು ಎಲ್ಲರನ್ನು ರಂಜಿಸಿದ್ದರು. ಅವರು ಕಪ್​ ಗೆದ್ದು ಬೀಗಿದ್ದರು. ಈ ಬಾರಿ ಬಿಗ್ ಬಾಸ್ ಮನೆಗೆ ಅವರು ರೀ ಎಂಟ್ರಿ ಕೊಟ್ಟಿದ್ದಾರೆ. ಹಾವು ಏಣಿ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್​ನ ಉಸ್ತುವಾರಿ ಮಂಜು ಅವರಿಗೇ ನೀಡಲಾಗಿತ್ತು. ಅರ್ಥಾತ್ ದಾಳ ಹಾಕುವ ಕೆಲಸ ಮಂಜು ವಹಿಸಿಕೊಂಡಿದ್ದರು. ಅವರು ಬಿಗ್ ಬಾಸ್ (Bigg Boss) ಮನೆ ಒಳಗೆ ಬರುತ್ತಿದ್ದಂತೆ ಸ್ಪರ್ಧಿಗಳೆಲ್ಲ ಸಖತ್ ಖುಷಿಪಟ್ಟರು. ವಿಶೇಷ ಎಂದರೆ ಬಿಗ್ ಬಾಸ್ ಮನೆಯಲ್ಲಿ ಮಂಜು ಪಾವಗಡ ಅವರಿಗೆ ಅಮೂಲ್ಯ ಗೌಡ ಪ್ರಪೋಸ್ ಮಾಡಿದ್ದಾರೆ.

ದಿವ್ಯಾ ಸುರೇಶ್ ಜತೆಗಿನ ಆಪ್ತತೆಯಿಂದ ಮಂಜು ಪಾವಗಡ ಕಳೆದ ಸೀಸನ್​ನಲ್ಲಿ ಹೆಚ್ಚು ಸುದ್ದಿಯಲ್ಲಿದ್ದರು. ಅವರು ತುಂಬಾನೇ ಫ್ಲರ್ಟ್​ ಮಾಡುತ್ತಾರೆ ಎಂಬ ಮಾತುಗಳು ಕೇಳಿ ಬಂದವು. ದೊಡ್ಮನೆಗೆ ರೀ-ಎಂಟ್ರಿ ಕೊಟ್ಟ ಸಂದರ್ಭದಲ್ಲಿ ಅವರು ತಮ್ಮ ಕಲೆಯನ್ನು ತೋರಿಸಿದ್ದಾರೆ. ದೀಪಿಕಾ ಹಾಗೂ ಅಮೂಲ್ಯ ಜತೆ ಮಂಜು ಫ್ಲರ್ಟ್​ ಮಾಡಿದ್ದಾರೆ.

ಗಾರ್ಡನ್ ಏರಿಯಾದಲ್ಲಿ ಹಾವು ಏಣಿ ಪಟ ಹಾಕಲಾಗಿತ್ತು. ಮಂಜು ಪಾವಗಡ ದಾಳ ಹಾಕುತ್ತಿದ್ದಂತೆ ಸ್ಪರ್ಧಿಗಳು ಕಾಯಿಗಳ ಜಾಗದಲ್ಲಿ ನಿಂತು ಚಲಿಸಬೇಕಿತ್ತು. ರೂಪೇಶ್ ಶೆಟ್ಟಿ ಗುರಿ ತಲುಪುವ ಹಂತದಲ್ಲಿದ್ದರು. ಸಂಖ್ಯೆ 10 ಬಿದ್ದರೆ ಅವರು ಹಾವಿನಿಂದ ಕಚ್ಚಿಸಿಕೊಳ್ಳುತ್ತಿದ್ದರು. ಈ ವೇಳೆ ಅಮೂಲ್ಯ ಅವರು ಒಂದು ಡೀಲ್ ನೀಡಿದರು. ‘10 ಬಿದ್ದರೆ ನಾನು ನಿಮಗೆ ಪ್ರಪೋಸ್ ಮಾಡ್ತೀನಿ’ ಎಂದರು ಅಮೂಲ್ಯ. ಇದೇ ವೇಳೆ ದೀಪಿಕಾ ದಾಸ್ ಕೂಡ ಒಂದು ಡೀಲ್ ಮುಂದಿಟ್ಟರು. ‘10 ಬಿದ್ದರೆ ನೀವು ನನಗೆ ಪ್ರಪೋಸ್ ಮಾಡಿ. ನಾನು ಅದನ್ನು ಒಪ್ಪಿಕೊಳ್ಳುತ್ತೇನೆ’ ಎಂದರು.

ಇದನ್ನೂ ಓದಿ
Image
ಬಿಗ್ ಬಾಸ್ ಮನೆಯಲ್ಲಿ ಮತ್ತೆ ಓಪನ್ ಆಯ್ತು ಆರ್ಯವರ್ಧನ್ ಗುರೂಜಿ ಹೋಟೆಲ್
Image
ಸುದೀಪ್​ಗಾಗಿ ಸಿನಿಮಾ ಕಥೆ ಮಾಡಿದ ಆರ್ಯವರ್ಧನ್​ ಗುರೂಜಿ; ಸ್ಟೋರಿ ಕೇಳಿ ತಲೆಕೆಡಿಸಿಕೊಂಡ ಕಿಚ್ಚ
Image
ಬಿಗ್ ಬಾಸ್ ಮನೆಯಿಂದ ಅನುಪಮಾ ಗೌಡ ಎಲಿಮಿನೇಟ್ ಆಗಲು ಕಾರಣವಾದ ಅಂಶಗಳಿವು
Image
Anupama Gowda: ಬಿಗ್​ ಬಾಸ್​ನಿಂದ ಎಲಿಮಿನೇಟ್​ ಆದ ಅನುಪಮಾ ಗೌಡ; ನಟಿ-ನಿರೂಪಕಿಯ ದೊಡ್ಮನೆ ಆಟ ಅಂತ್ಯ

ಇದನ್ನೂ ಓದಿ: ದಿವ್ಯಾ ಸುರೇಶ್​ಗೆ ಹೆಚ್ಚಿತು ಬೇಡಿಕೆ; ಮತ್ತೊಂದು ಕನ್ನಡ ಸಿನಿಮಾ ಒಪ್ಪಿಕೊಂಡ ‘ಬಿಗ್ ಬಾಸ್’ ಬೆಡಗಿ

ಅದೃಷ್ಟ ಎಂಬಂತೆ ದಾಳ ಹಾಕಿದಾಗ 10 ಬಿದ್ದಿದೆ. ಇದರಿಂದ ರೂಪೇಶ್ ಶೆಟ್ಟಿ ಅವರು ಹಾವಿನಿಂದ ಕಚ್ಚಿಸಿಕೊಂಡರು. ಅಮೂಲ್ಯ ಗೌಡ ಅವರು ‘ಐ ಲವ್ ಯೂ’ ಎಂದು ಮಂಜುಗೆ ಪ್ರಪೋಸ್ ಮಾಡಿದರು. ಮಂಜು ‘ಐ ಲವ್​ ಯೂ ಟೂ’ ಎಂದು ಉತ್ತರಿಸಿದರು. ಇದನ್ನು ನೋಡಿ ಮನೆ ಮಂದಿ ಕಿರುಚಾಡಿದರು. ಈ ಸಂದರ್ಭದಲ್ಲಿ ರಾಕೇಶ್ ಅಡಿಗ ಮುಖ ಬಾಡಿತ್ತು. ಬಳಿಕ ದೀಪಿಕಾ ದಾಸ್​ಗೆ ಮಂಜು ‘ಐ ಲವ್​​ ಯೂ’ ಎಂದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:13 am, Thu, 22 December 22