AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

125 ಕೆಜಿ ಇದ್ದ ರಿತ್ವಿಕ್ ಕೃಪಾಕರ್ ಈಗ ಸಖತ್ ಫಿಟ್; ಅವಮಾನದಿಂದ ಘಟಿಸಿತು ಬದಲಾವಣೆ

Rithvik Krupakar: ವೇದಿಕೆಗೆ ಆಗಮಿಸುವಾಗ ರಿತ್ವಿಕ್ ಅವರು ದಡೂತಿ ದೇಹ ಮಾಡಿಕೊಂಡು ಬಂದಿದ್ದಾರೆ. ಅವರ ವೇಷ ನೋಡಿ ಎಲ್ಲರೂ ಬಿದ್ದುಬಿದ್ದು ನಕ್ಕಿದ್ದಾರೆ. ಈ ವೇಳೆ ಹಳೆಯ ಘಟನೆಯನ್ನು ನೆನಪಿಸಿಕೊಂಡಿದ್ದಾರೆ ರಿತ್ವಿಕ್.

125 ಕೆಜಿ ಇದ್ದ ರಿತ್ವಿಕ್ ಕೃಪಾಕರ್ ಈಗ ಸಖತ್ ಫಿಟ್; ಅವಮಾನದಿಂದ ಘಟಿಸಿತು ಬದಲಾವಣೆ
ರಿತ್ವಿಕ್
TV9 Web
| Updated By: Digi Tech Desk|

Updated on:Dec 22, 2022 | 12:15 PM

Share

ರಿತ್ವಿಕ್ ಕೃಪಾಕರ್ (Rithvik Krupakar) ಅವರು ರಾಮಾಚಾರಿ ಎಂದೇ ಫೇಮಸ್. ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುವ ‘ರಾಮಾಚಾರಿ’ (Ramachari) ಧಾರಾವಾಹಿಯಲ್ಲಿ ರಾಮಾಚಾರಿ ಪಾತ್ರವನ್ನು ಮಾಡುತ್ತಿದ್ದಾರೆ. ಅವರ ಪಾತ್ರ ಪ್ರೇಕ್ಷಕರಿಗೆ ಇಷ್ಟವಾಗಿದೆ. ಕಥಾ ನಾಯಕನಿಗೆ (ರಾಮಾಚಾರಿ) ತೊಂದರೆ ಕೊಡುವ ನಾಯಕಿ ಚಾರುಲತಾಗೆ ನಂತರ ಆತನ ಮೇಲೆ ಲವ್ ಆಗುತ್ತದೆ. ಈ ರೀತಿಯಲ್ಲಿ ಧಾರಾವಾಹಿಯ ಕಥೆ ಸಾಗುತ್ತಿದೆ. ರಿತ್ವಿಕ್ ಅವರು ನಿರ್ವಹಿಸುತ್ತಿರುವ ಪಾತ್ರ ಎಲ್ಲರಿಗೂ ಇಷ್ಟವಾಗಿದೆ. ಈಗ ರಿತ್ವಿಕ್ ಅವರು ‘ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2’ಗೆ ಅತಿಥಿಯಾಗಿ ಬಂದಿದ್ದಾರೆ. ಈ ವೇಳೆ ಅವರು ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

‘ನನ್ನಮ್ಮ ಸೂಪರ್ ಸ್ಟಾರ್​’ನ ಮೊದಲ ಸೀಸನ್ ಹಿಟ್ ಆಯಿತು. ಆ ಬಳಿಕ ಎರಡನೇ ಸೀಸನ್ ಆರಂಭ ಆಗಿದೆ. ಇದಕ್ಕೆ ‘ರಾಮಾಚಾರಿ’ ತಂಡದ ರಿತ್ವಿಕ್ ಹಾಗೂ ಚಾರುಲತಾ ಪಾತ್ರ ಮಾಡುತ್ತಿರುವ ಮೌನ ಅತಿಥಿಗಳಾಗಿ ಆಗಮಿಸಿದ್ದರು. ವೇದಿಕೆಗೆ ಆಗಮಿಸುವಾಗ ರಿತ್ವಿಕ್ ಅವರು ದಡೂತಿ ದೇಹ ಮಾಡಿಕೊಂಡು ಬಂದಿದ್ದಾರೆ. ‘ಕೆಂಡಸಂಪಿಗೆ’ ಧಾರಾವಾಹಿಯಲ್ಲಿ ತೀರ್ಥಂಕರ್ ಪ್ರಸಾದ್ ಆಗಿ ಕಾಣಿಸಿಕೊಂಡಿರುವ ಆಕಾಶ್ ಕೂಡ ಇದ್ದರು. ಇವರ ವೇಷ ನೋಡಿ ಎಲ್ಲರೂ ಬಿದ್ದುಬಿದ್ದು ನಕ್ಕಿದ್ದಾರೆ. ಈ ವೇಳೆ ಹಳೆಯ ಘಟನೆಯನ್ನು ನೆನಪಿಸಿಕೊಂಡಿದ್ದಾರೆ ರಿತ್ವಿಕ್.

ರಿತ್ವಿಕ್ ಅವರು ನಾಲ್ಕು ವರ್ಷಗಳ ಹಿಂದೆ 125 ಕೆಜಿ ಇದ್ದರು. ಈ ಕುರಿತು ಅವರು ಮಾತನಾಡಿದ್ದಾರೆ. ‘ನಾಲ್ಕು ವರ್ಷಗಳ ಹಿಂದಿನ ಮಾತು. ನನ್ನ ದೇಹದ ತೂಕ 125 ಕೆಜಿ ಇತ್ತು. ಫ್ರೆಂಡ್ಸ್ ಜತೆ ಆಚೆ ಹೋಗಿದ್ದೆ. ಎಲ್ಲರೂ ನನ್ನ ದೇಹದ ಸೈಜ್ ನೋಡಿ ಹೀಯಾಳಿಸಿದರು. ತುಂಬಾನೇ ಬೇಸರ ಆಯ್ತು. ಅವತ್ತು ನಾನು ಸಣ್ಣ ಆಗಬೇಕು ಎಂದು ನಿರ್ಧರಿಸಿದೆ. ಈಗ 85 ಕೆಜಿ ಇದ್ದೀನಿ’ ಎಂದಿದ್ದಾರೆ ರಿತ್ವಿಕ್. ಅವರು ನಿತ್ಯ ಜಿಮ್ ಮಾಡುತ್ತಾರೆ. ಸೇವನೆ ಮಾಡುವ ಆಹಾರದ ಬಗ್ಗೆಯೂ ಅವರು ಹೆಚ್ಚು ಗಮನ ಹರಿಸುತ್ತಾರೆ.

ಇದನ್ನೂ ಓದಿ
Image
ವಂಚನೆ ಪ್ರಕರಣದ ಬಗ್ಗೆ ಜಾಕ್ವೆಲಿನ್​ಗೆ ಇಲ್ಲ ಟೆನ್ಷನ್; ಮಸ್ತ್ ಫೋಟೋ ಹಂಚಿಕೊಂಡ ನಟಿ
Image
ಮಂಜು ಪಾವಗಡಗೆ ಮಂಡಿಯೂರಿ ಪ್ರಪೋಸ್ ಮಾಡಿದ ಅಮೂಲ್ಯ ಗೌಡ; ರಿಯಾಕ್ಷನ್ ಹೇಗಿತ್ತು?
Image
Kannadathi Serial: ಭುವಿಗೆ ಸಿಕ್ತು ಕೊಲೆಗಾರನ ಮೊಬೈಲ್; ಶೀಘ್ರವೇ ಬಯಲಾಗಲಿದೆ ಸಂಚು
Image
‘ಬಿಗ್ ಬಾಸ್​’ ಫಿನಾಲೆಯಲ್ಲಿ ಅಕ್ಕಿನೇನಿ ನಾಗಾರ್ಜುನ ಆಡಿದ ಮಾತಿನಿಂದ ಫ್ಯಾನ್ಸ್​ಗೆ ಬೇಸರ

ಇದನ್ನೂ ಓದಿ: ‘ಬಿಗ್ ಬಾಸ್​’ ಫಿನಾಲೆಯಲ್ಲಿ ಅಕ್ಕಿನೇನಿ ನಾಗಾರ್ಜುನ ಆಡಿದ ಮಾತಿನಿಂದ ಫ್ಯಾನ್ಸ್​ಗೆ ಬೇಸರ

ಕಲರ್ಸ್ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಪ್ರೋಮೋ ಹಂಚಿಕೊಂಡಿದೆ. ರಿತ್ವಿಕ್ ಅವರ ಮಾತಿಗೆ ಎಲ್ಲರೂ ಚಪ್ಪಾಳೆ ತಟ್ಟಿದ್ದಾರೆ. ರಿತ್ವಿಕ್ ಅವರ ಮೇಕೋವರ್ ಅನೇಕರಿಗೆ ಇಷ್ಟವಾಗಿದೆ. ರಿತ್ವಿಕ್ ಅನೇಕರಿಗೆ ಸ್ಫೂರ್ತಿ ಎಂಬ ಕಮೆಂಟ್​ಗಳು ಬಂದಿವೆ. ‘ನನ್ನಮ್ಮ ಸೂಪರ್​​ಸ್ಟಾರ್’ ಸಂಚಿಕೆ ಶನಿವಾರ ಹಾಗೂ ಭಾನುವಾರ ರಾತ್ರಿ 7.30ಕ್ಕೆ ಪ್ರಸಾರ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:42 am, Thu, 22 December 22

ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್