Honganasu: ಸಾಕ್ಷಿಯ ಪ್ಲ್ಯಾನ್ ಉಲ್ಟಾ ಮಾಡಿದ ವಸುಧರಾ; ಸೇಫ್ ಆದ ರಿಷಿ

Honganasu Serial Update: ನಡೆದ ವಿಚಾರವನ್ನು ವಸುಧರಾ ಎಲ್ಲರ ಮುಂದೆ ಬಾಯ್ಬಿಡ್ತಾಳಾ ಎಂದು ಭಯದಲ್ಲೇ ನಿಂತಳು ಸಾಕ್ಷಿ. ಆದರೆ ವಸುಧರಾ ಏನೇನೋ ಹೇಳಿ ಪರಿಸ್ಥಿತಿ ಸುಧಾರಿಸಿದಳು.

Honganasu: ಸಾಕ್ಷಿಯ ಪ್ಲ್ಯಾನ್ ಉಲ್ಟಾ ಮಾಡಿದ ವಸುಧರಾ; ಸೇಫ್ ಆದ ರಿಷಿ
ಹೊಂಗನಸು ಸೀರಿಯಲ್
Follow us
TV9 Web
| Updated By: ಮದನ್​ ಕುಮಾರ್​

Updated on: Dec 22, 2022 | 10:02 PM

ಧಾರಾವಾಹಿ: ಹೊಂಗನಸು

ಪ್ರಸಾರ: ಸ್ಟಾರ್ ಸುವರ್ಣ

ಸಮಯ: ಮಧ್ಯಾಹ್ನ 1.30

ಇದನ್ನೂ ಓದಿ
Image
Honganasu: ಅಪ್ಪನ ಸಂತೋಷಕ್ಕಾಗಿ ಜಗತಿಯನ್ನು ಮನೆಗೆ ಕರೆಯಲು ನಿರ್ಧರಿಸಿದ ರಿಷಿ; ದೇವಯಾನಿ ಒಪ್ಪಿಕೊಳ್ತಾಳಾ?
Image
ಹೊಂಗನಸು: ಮಹೇಂದರ್‌‌ಗೆ ಹೃದಯಾಘಾತ; ಪತಿಯ ಸ್ಥಿತಿ ನೋಡಿ ಬಿಕ್ಕಿಬಿಕ್ಕಿ ಅಳುತ್ತಿರುವ ಜಗತಿ
Image
Honganasu: ಲವ್‌ಲೆಟರ್ ಬರೆದು ಪೇಚಿಗೆ ಸಿಲುಕಿದ ರಿಷಿ; ಯಾರೆಂದು ಗೊತ್ತಾಗೋವರೆಗೂ ಬಿಡಲ್ಲ ಅಂತ ಪಟ್ಟುಹಿಡಿದ ವಸು
Image
Honganasu; ಜಗತಿ ಕೈ ಸೇರಿದ ಮಗನ ಲವ್ ಲೆಟರ್; ರಿಷಿನೆ ಬರೆದಿದ್ದೆಂದು ವಸುಧರಗೆ ಗೊತ್ತಾಗೋಯ್ತಾ?

ನಿರ್ದೇಶನ: ಅನಿಲ್ ಆನಂದ್, ಕುಮಾರ್

ಪಾತ್ರವರ್ಗ: ರಕ್ಷಾ ಗೌಡ, ಮುಖೇಶ್ ಗೌಡ, ಜ್ಯೋತಿ ರೈ, ಸಾಯಿ ಕಿರಣ್ ಹಾಗೂ ಇತರರು

ಹಿಂದಿನ ಸಂಚಿಕೆಯಲ್ಲಿ ಏನಾಗಿತ್ತು?

ರಿಷಿಯನ್ನು ಹೇಗಾದರೂ ಮಾಡಿ ತನ್ನವನ್ನಾಗಿ ಮಾಡಿಕೊಳ್ಳಬೇಕೆಂದು ಸಾಕ್ಷಿ ಪಣತೊಟ್ಟಿದ್ದಾಳೆ. ಆದರೆ ಆಕೆಯ ದಾರಿಗೆ ವಸುಧರಾ ಅಡ್ಡ ನಿಂತಿದ್ದಾಳೆ. ರಿಷಿಗೆ ಏನೂ ಮಾಡಲು ಬಿಡಲ್ಲ ಎಂದು ಚಾಲೆಂಜ್ ಮಾಡಿದ್ದಾಳೆ ವಸುಧರಾ. ರಿಷಿ ಯಾವತ್ತು ನಿನಗೆ ಸಿಗಲ್ಲ ಎಂದು ಸಾಕ್ಷಿಗೆ ಖಡಕ್ ಆಗಿ ವಸು ಹೇಳಿದಳು. ರಿಷಿಯ ಇಮೇಜ್ ಡ್ಯಾಮೇಜ್ ಮಾಡುವ ಪ್ಲಾನ್ ಮಾಡಿದ್ದಾಳೆ ಸಾಕ್ಷಿ. ಲೈಬ್ರರಿ ಲಾಕ್ ಮಾಡಿ ರಿಷಿಗೆ ಬೆದರಿಕೆ ಹಾಕಿದ್ದಾಳೆ.

ಲೈಬ್ರರಿಯಲ್ಲಿ ಒಬ್ಬನೇ ಇದ್ದ ರಿಷಿಯನ್ನು ನೋಡಿ ಸಾಕ್ಷಿ ಕೂಡ ಎಂಟ್ರಿ ಕೊಟ್ಟಳು. ಲೈಬ್ರರಿ ಲಾಕ್ ಮಾಡಿ ರಿಷಿಗೆ ಬೆದರಿಕೆ ಹಾಕಿದಳು. ಮದುವೆಗೆ ಒಪ್ಪಿಕೊಂಡಿಲ್ಲ ಎಂದರೆ ತನ್ನನ್ನು ಕೆಡಿಸಿದ ಎಂದು ಎಲ್ಲರ ಬಳಿ ಹೇಳುವುದಾಗಿ ರಿಷಿಗೆ ಬ್ಲಾಕ್‌ಮೇಲ್ ಮಾಡಿದಳು ಸಾಕ್ಷಿ. ಇಷ್ಟು ಚೀಪ್ ಆಗಿ ವರ್ತಿಸುತ್ತೀಯಾ ಅಂತ ಗೊತ್ತಿರಲಿಲ್ಲ ಎಂದು ಸಾಕ್ಷಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡ ರಿಷಿ. ಆದರೆ ಯಾವುದನ್ನೂ ಕೇಳುವ ಸ್ಥಿತಿಯಲ್ಲಿ ಇರದ ಸಾಕ್ಷಿ ತನ್ನನ್ನು ಒಪ್ಪಿಕೊಂಡಿಲ್ಲ ಎಂದರೆ ಫೈರ್ ಅಲಾರ್ಮ್ ಒತ್ತುವುದಾಗಿ ಹೇಳಿ ಒತ್ತೇ ಬಿಟ್ಟಳು. ಅಲಾರ್ಮ್ ಸೌಂಡ್ ಕಾಲೇಜಿನ ತುಂಬಾ ಮುಳುಗಿತು. ಎಲ್ಲರೂ ಓಡಿ ಬಂದರು. ಗಾಬರಿಯಾದ ರಿಷಿ. ಲೈಬ್ರರಿಯೊಳಗೆ ವಸುಧರಾ ಮಾತು ಕೇಳಿ ಇಬ್ಬರೂ ಶಾಕ್ ಆದರು. ಲೈಬ್ರರಿಯಲ್ಲಿ ವಸುಧರಾ ಕೂಡ ಇದ್ದಳು.

ಇದನ್ನೂ ಓದಿ: Honganasu: ಜಗತಿಗೆ ಅನುಮಾನ ಮೂಡಿಸಿದ ವಸುಧರಾ ಮಾತು; ರಿಷಿ ಮುಂದಿನ ನಿಲುವೇನು?

ಓಡಿ ಬಂದು ಲೈಬ್ರರಿ ಬಾಗಿಲು ತೆಗೆದ ಮಹೇಂದ್ರ ಮತ್ತು ಜಗತಿಗೆ ಅಚ್ಚರಿಯಾಯಿತು. ಮೂವರು ಒಳಗೆ ಸೇರಿಕೊಂಡು ಏನ್ಮಾಡ್ತಿದ್ದೀರಾ ಎಂದು ಪ್ರಶ್ನಿಸಿದ ಮಹೇಂದ್ರ. ನಡೆದ ವಿಚಾರವನ್ನು ವಸುಧರಾ ಎಲ್ಲರ ಮುಂದೆ ಬಾಯ್ಬಿಡ್ತಾಳಾ ಎಂದು ಭಯದಲ್ಲೇ ನಿಂತಳು ಸಾಕ್ಷಿ. ಆದರೆ ಏನೇನೋ ಹೇಳಿ ಪರಿಸ್ಥಿತಿ ಸುಧಾರಿಸಿದಳು ವಸುಧರಾ. ಪರೋಕ್ಷವಾಗಿ ಸಾಕ್ಷಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಳು ವಸು. ಬಳಿಕ ‘ರಿಷಿಯ ತಂಟೆಗೆ ಬಂದರೆ ಸುಮ್ಮನಿರಲ್ಲ, ಏನ್ ಮಾಡೋಕೂ ಬಿಡಲ್ಲ’ ಎಂದು ಸಾಕ್ಷಿಗೆ ಎಚ್ಚರಿಕೆ ನೀಡಿ ಅಲ್ಲಿಂದ ಹೋಗುವಂತೆ ಹೇಳಿದಳು ವಸುಧರಾ.

ಇದನ್ನೂ ಓದಿ: Honganasu: ರಿಷಿ ನೋಡಲು ಬಿಡದೇ ವಸುಧರಾಳನ್ನು ಮನೆಯಿಂದ ಹೊರ ನೂಕಿದ ದೇವಯಾನಿ

ಮನೆಗೆ ಬಂದವನೇ ಸಾಕ್ಷಿಗೆ ಸರಿಯಾಗಿ ಬೈದ ರಿಷಿ. ‘ಎಂಗೇಜ್ಮೆಂಟ್ ಬ್ರೇಕ್ ಮಾಡಿಕೊಂಡು ಹೋದವಳು ಮತ್ಯಾಕೆ ಬಂದಿದ್ದಿಯಾ? ನಿನ್ನನ್ನು ಮತ್ತೆ ಒಪ್ಪಿಕೊಳ್ಳಲ್ಲ. ಇನ್ಮುಂದೆ ಇಷ್ಟು ಕೆಟ್ಟದಾಗಿ ಯೋಚಿಸಬೇಡ’ ಎಂದು ಸಾಕ್ಷಿ ಮೇಲೆ ಕೂಗಾಡಿದ ರಿಷಿ. ಆತನ ಜೊತೆ ಮಾತನಾಡಲು ವಸುಧರಾ ಒದ್ದಾಡುತ್ತಿದ್ದಾಳೆ. ಫೋನ್ ಮಾಡಿದರೂ ಕಾಲ್ ಕಟ್ ಮಾಡಿದ ರಿಷಿ. ಪದೇ ಪದೇ ಫೋನ್ ಮಾಡುತ್ತಿದ್ದಳು ವಸು. ಆಗ ಊರಿನ ಮಕ್ಕಳು ಎಂಟ್ರಿ ಕೊಟ್ಟು ಕಥೆ ಹೇಳುವಂತೆ ವಸುಧಾಗೆ ಹಠ ಮಾಡಿದರು. ಮಕ್ಕಳಿಗೆ ರಿಷಿ ಜೀವನದ ಕಥೆ ಹೇಳಿದಳು ವಸು. ಇತ್ತ ಫೋನ್ ರಿಸೀವ್ ಮಾಡಿದ್ದ ರಿಷಿ, ವಸುಧರಾ ಕಥೆ ಕೇಳಿಸಿಕೊಂಡು ಕೆಂಡವಾದ. ಬೆಳಗ್ಗೆ ಕಾಲೇಜಿಗೆ ಬಂದವನೇ ವಸುಧರಾಗೆ ಸರಿಯಾಗಿ ಬೈದ.

ಇದನ್ನೂ ಓದಿ: Honganasu: ವಸು ಕ್ಷಮೆ ಕೇಳಿದ್ರೂ ತಣಿದಿಲ್ಲ ರಿಷಿ ಕೋಪ; ಮತ್ತೆ ಒಂದು ಮಾಡ್ತಾರಾ ಮಹೇಂದ್ರ-ಜಗತಿ?

ತನ್ನ ಜೀವನ ನಿನಗೆ ಕಥೆ ಆಗಿದ್ಯಾ ಅಂತ ರೇಗಿದ. ಆದರೆ ಕೋಪ ಮಾಡಿಕೊಳ್ಳದೆ ಸೈಲೆಂಟ್ ಆಗಿದ್ದ ನಿಂತಿದ್ದ ವಸು ನೋಡಿ ರಿಷಿಗೆ ಅಚ್ಚರಿಯಾಯಿತು. ಇಷ್ಟು ಬೈದರೂ ಸೈಲೆಂಟ್ ಆಗಿದ್ದಾಳಲ್ಲಾ ಅಂದುಕೊಂಡ. ಧೈರ್ಯದಿಂದನೇ ಮಾತಾಡುತ್ತಿದ್ದ ವಸುಧರಾಳನ್ನು ಕ್ಲಾಸ್ ಹೋಗುವಂತೆ ಹೇಳಿದ ರಿಷಿ. ವಸುಧರಾಳಿಗೂ ತನ್ನ ಮೇಲೆ ಪ್ರೀತಿ ಇದೆ ಎನ್ನುವ ಸತ್ಯ ರಿಷಿಗೆ ಗೊತ್ತಾಗುತ್ತಾ? ಮುಂದಿನ ಸಂಚಿಕೆಯಲ್ಲಿ ತಿಳಿಯಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ