AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Honganasu: ತನ್ನನ್ನು ರಿಜೆಕ್ಟ್ ಮಾಡಿದ್ರೂ ವಸುಧರಾ ಮೇಲೆ ರಿಷಿಗೆ ಬೆಟ್ಟದಷ್ಟು ಪ್ರೀತಿ

Honganasu Serial Update: ಪ್ರಾಜೆಕ್ಟ್ ವಿಚಾರವಾಗಿ ವಸುಧರಾ ಮತ್ತು ಗೌತಮ್ ಇಬ್ಬರೂ ಹಳ್ಳಿಗೆ ಹೋದರು. ವಸುಧರಾ ಹೋದ ಜಾಗಕ್ಕೆ ರಿಷಿ ಕೂಡ ಎಂಟ್ರಿ ಕೊಟ್ಟ. ದೂರದಲ್ಲೇ ನಿಂತು ವಸುಧರಾಳನ್ನು ನೋಡಿ ಸಮಾಧಾನ ಪಟ್ಟುಕೊಂಡ.

Honganasu: ತನ್ನನ್ನು ರಿಜೆಕ್ಟ್ ಮಾಡಿದ್ರೂ ವಸುಧರಾ ಮೇಲೆ ರಿಷಿಗೆ ಬೆಟ್ಟದಷ್ಟು ಪ್ರೀತಿ
ಹೊಂಗನಸು ಸೀರಿಯಲ್
TV9 Web
| Edited By: |

Updated on: Dec 23, 2022 | 1:44 PM

Share

ಧಾರಾವಾಹಿ: ಹೊಂಗನಸು

ಪ್ರಸಾರ: ಸ್ಟಾರ್ ಸುವರ್ಣ

ಸಮಯ: ಮಧ್ಯಾಹ್ನ 1.30

ಇದನ್ನೂ ಓದಿ
Image
Honganasu: ಅಪ್ಪನ ಸಂತೋಷಕ್ಕಾಗಿ ಜಗತಿಯನ್ನು ಮನೆಗೆ ಕರೆಯಲು ನಿರ್ಧರಿಸಿದ ರಿಷಿ; ದೇವಯಾನಿ ಒಪ್ಪಿಕೊಳ್ತಾಳಾ?
Image
ಹೊಂಗನಸು: ಮಹೇಂದರ್‌‌ಗೆ ಹೃದಯಾಘಾತ; ಪತಿಯ ಸ್ಥಿತಿ ನೋಡಿ ಬಿಕ್ಕಿಬಿಕ್ಕಿ ಅಳುತ್ತಿರುವ ಜಗತಿ
Image
Honganasu: ಲವ್‌ಲೆಟರ್ ಬರೆದು ಪೇಚಿಗೆ ಸಿಲುಕಿದ ರಿಷಿ; ಯಾರೆಂದು ಗೊತ್ತಾಗೋವರೆಗೂ ಬಿಡಲ್ಲ ಅಂತ ಪಟ್ಟುಹಿಡಿದ ವಸು
Image
Honganasu; ಜಗತಿ ಕೈ ಸೇರಿದ ಮಗನ ಲವ್ ಲೆಟರ್; ರಿಷಿನೆ ಬರೆದಿದ್ದೆಂದು ವಸುಧರಗೆ ಗೊತ್ತಾಗೋಯ್ತಾ?

ನಿರ್ದೇಶನ: ಅನಿಲ್ ಆನಂದ್, ಕುಮಾರ್

ಪಾತ್ರವರ್ಗ: ರಕ್ಷಾ ಗೌಡ, ಮುಖೇಶ್ ಗೌಡ, ಜ್ಯೋತಿ ರೈ, ಸಾಯಿ ಕಿರಣ್ ಹಾಗೂ ಇತರರು

ಹಿಂದಿನ ಸಂಚಿಕೆಯಲ್ಲಿ ಏನಾಗಿತ್ತು?

ಲೈಬ್ರರಿಯಲ್ಲಿ ರಿಷಿಯನ್ನು ಲಾಕ್ ಮಾಡಿ ಬ್ಲಾಕ್‌ಮೇಲ್ ಮಾಡಿದಳು ಸಾಕ್ಷಿ. ರಿಷಿ ಇಮೇಜ್ ಡ್ಯಾಮೇಜ್ ಮಾಡುವ ಆಕೆಯ ಪ್ಲಾನ್ ಅನ್ನು ಉಲ್ಟಾ ಮಾಡಿದಳು ವಸುಧರಾ. ಸಾಕ್ಷಿಯ ಕುತಂತ್ರದ ಬಲೆಯಲ್ಲಿ ಸಿಲುಕಿದ್ದ ರಿಷಿಯನ್ನು ವಸು ಕಾಪಾಡಿದಳು. ಸಾಕ್ಷಿ ಮಾಡಿದ ಕೆಲಸಕ್ಕೆ ರಿಷಿ ಸರಿಯಾಗಿ ಕ್ಲಾಸ್ ತೆಗೆದುಕೊಂಡ.

ಬೆಳಗ್ಗೆ ಕಾಲೇಜಿಗೆ ಬಂದ ರಿಷಿಗೆ ದೊಡ್ಡ ಶಾಕ್ ಎದುರಾಗಿತ್ತು. ಚೇಂಬರ್‌ನಲ್ಲಿ ಪೆನ್‌ಡ್ರೈವ್ ನೋಡಿ ಅಚ್ಚರಿಯಾದ ರಿಷಿ ಏನಿರಬಹುದು ಎಂದು ಪ್ಲೇ ಮಾಡಿದ. ವಿಡಿಯೋ ಮಾಡಿ ಕಳುಹಿಸಿದ್ದಳು ಸಾಕ್ಷಿ. ‘ವಸುಧರಾ ಪ್ರೀತಿ ಬೇಡ ಅಂದ್ಮೇಲೆ ಅವಳ ಹಿಂದೆ ಯಾಕೆ ಹೋಗುತ್ತೀಯಾ, ತನ್ನನ್ನು ಮದುವೆಯಾಗು’ ಎಂದು ವಿಡಿಯೋದಲ್ಲಿ ಸಾಕ್ಷಿ ಹೇಳಿದ್ದನ್ನು ಕೇಳಿ ಕೆಂಡವಾದ ರಿಷಿ. ಇದಕ್ಕೆಲ್ಲ ಕಾರಣ ವಸುಧರಾನೇ ಎಂದು ಆಕೆಯ ಮೇಲೆ ಸಿಟ್ಟಾದ.

ವಸುಧರಾಳನ್ನು ಚೇಂಬರ್‌ಗೆ ಕರೆಸಿ ಸರಿಯಾಗಿ ಕ್ಲಾಸ್ ತೆಗೆದುಕೊಂಡ ರಿಷಿ. ‘ನಮ್ಮಿಬ್ಬರ ವಿಚಾರ ಎಲ್ಲರಿಗೂ ಗೊತ್ತಾಗುವ ಹಾಗೆ ಮಾಡಿದ್ದೀಯಾ, ಸಾಕ್ಷಿ ಬಳಿ ಯಾಕೆ ಹೇಳ್ದೆ’ ಎಂದು ವಸು ಮೇಲೆ ಕೂಗಾಡಿದ ರಿಷಿ. ತಾನು ಹೇಳಿಲ್ಲ ಅಂತ ಹೇಳಿದರೂ ಕೇಳಿಸಿಕೊಳ್ಳದ ರಿಷಿ ಜೋರಾಗಿ ರೇಗಿದ. ಇನ್ಮುಂದೆ ನನ್ನ ಕಣ್ಮುಂದೆ ಬರ್ಬೇಡ ಎಂದು ವಸುಗೆ ಸರಿಯಾಗಿ ಬೈದು ಹೊರ ಕಳುಹಿಸಿದ ರಿಷಿ. ಅಳುತ್ತಾ ಕಾಲೇಜು ಆವರಣದಲ್ಲಿ ವಸು ಕುಳಿತುಕೊಂಡಳು. ರಿಷಿಗೆ ಹೇಗೆ ಅರ್ಥ ಮಾಡಿಸುವುದು ಎಂದು ಯೋಚಿಸುತ್ತಾ ಕುಳಿತ್ತಿದ್ದ ವಸು ನೋಡಿ ಜಗತಿ ಬಂದಳು.

‘ರಿಷಿ ಮತ್ತೆ ಏನಾದರೂ ಹೇಳಿದನಾ? ಕ್ಲಾಸ್ ಇಲ್ವಾ ನಿನಗೆ’ ಎಂದು ವಸುಗೆ ಜಗತಿ ಕೇಳಿದಳು. ಕ್ಲಾಸ್‌ಗೆ ಹೋಗೋಕೆ ಮೂಡ್ ಇಲ್ಲ ಎಂದು ಕಾಲೇಜಿನಿಂದ ವಸುಧರಾ ಹೊರಟಳು. ಏನ್ ನಡಿತಿದೆ ಎಂದು ಜಗತಿ ಸೈಲೆಂಟ್ ಆಗಿ ನಿಂತಳು. ಪ್ರೀತಿ ರಿಜೆಕ್ಟ್ ಮಾಡಿದರೂ ರಿಷಿಗೆ ವಸುಧರಾಳದ್ದೇ ಚಿಂತೆ. ರಿಷಿ ರೂಮಿಗೆ ಬಂದ ಜಗತಿ ಸಮಾಧಾನ ಮಾಡುವ ಪ್ರಯತ್ನ ಮಾಡಿದಳು. ಜಗತಿ ಕಂಡರೆ ಕೋಪ ಮಾಡಿಕೊಳ್ಳುವ ರಿಷಿ ಆಕೆಯ ಧೈರ್ಯದ ಮಾತುಗಳನ್ನು ಕೇಳಿ ಮತ್ತಷ್ಟು ಸಿಟ್ಟಾದ.  ಬಳಿಕ ತಾನು ಬಂದಿದ್ದು ಎಜುಕೇಷ್ ಪ್ರಾಜೆಕ್ಟ್ ವಿಚಾರವಾಗಿ, ಎಲ್ಲವನ್ನು ಸಿದ್ಧಮಾಡಿ ಕಳುಹಿಸಿದ್ದೀನಿ, ಚೆಕ್ ಮಾಡಿಕೊಳ್ಳಿ ಎಂದು ರಿಷಿಗೆ ಹೇಳಿ ಹೊರಟು ಹೋದಳು ಜಗತಿ.

ಇದನ್ನೂ ಓದಿ: ಹೊಂಗನಸು: ಗೌತಮ್‌ಗೆ ಲೈಬ್ರರಿಯಲ್ಲಿ ರಿಷಿ-ವಸುಧರಾ ಮಧ್ಯೆ ಏನ್ ನಡೀತು ಎನ್ನುವುದೇ ಯೋಚನೆ

ಪ್ರಾಜೆಕ್ಟ್ ವಿಚಾರವಾಗಿ ವಸುಧರಾ ಮತ್ತು ಗೌತಮ್ ಇಬ್ಬರೂ ಹಳ್ಳಿಗೆ ಹೋದರು. ವಸುಧರಾ ಹೋದ ಜಾಗಕ್ಕೆ ರಿಷಿ ಕೂಡ ಎಂಟ್ರಿ ಕೊಟ್ಟ. ದೂರದಲ್ಲೇ ನಿಂತು ವಸುಧರಾಳನ್ನು ನೋಡಿ ಸಮಾಧಾನ ಪಟ್ಟುಕೊಂಡ. ಆದರೆ ವಸುಧರಾ ನೋಡುವುದರೊಳಗೆ ಅಲ್ಲಿಂದ ಹೊರಟ ರಿಷಿ. ಪ್ರಾಜೆಕ್ಟ್ ಮುಗಿದ ಬಳಿಕ ಗೌತಮ್‌ಗೆ ಕಾಲ್ ಮಾಡಿ ಎಲ್ಲರನ್ನೂ ಸೇಫ್ ಆಗಿ ಮನೆಗೆ ತಲುಪಿಸಿದ್ಯಾ ಎಂದು ಪರೋಕ್ಷವಾಗಿ ವಸು ಬಗ್ಗೆ ಕೇಳಿದ ರಿಷಿ. ವಸುಧರಾ ಬಗ್ಗೆ ತಿಳಿದುಕೊಳ್ಳಲು ಕಾಲ್ ಮಾಡಿದ್ದಾನೆ ಎನ್ನುವ ಸತ್ಯ ಗೊತ್ತಾಗಿ ರಿಷಿಯನ್ನು ಮತ್ತಷ್ಟು ಆಟ ಆಡಿಸಿದ ಗೌತಮ್. ಬಳಿಕ ವಸುಧರಾ ಸೈಕಲ್‌ನಲ್ಲಿ ಹೋದಳು, ನಿನಗೆ ಬೇಕಾದವರ ಬಗ್ಗೆ ಮಾಹಿತಿ ಸಿಕ್ತಲ್ವಾ ಎಂದು ಫೋನ್ ಕಟ್ ಮಾಡಿದ.

ಇದನ್ನೂ ಓದಿ: ಹೊಂಗನಸು: ವಸುಧರಾಳನ್ನು ಎತ್ತಿಕೊಂಡ ರಿಷಿ; ಏನ್ ನಡೀತಿದೆ ಎಂದು ಶಾಕ್ ಆದ ಗೌತಮ್

ಇತ್ತ ತಡವಾಗಿ ಮನೆಗೆ ಬಂದ ಮಹೇಂದ್ರ ಮತ್ತು ಜಗತಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಳು ದೇವಯಾನಿ. ‘ಸ್ಲಮ್ ಏರಿಯಾಗೆ ಹೋಗಿ ಬರ್ತೀರಾ, ಅಲ್ಲೇ ಊಟ ಮಾಡ್ತೀರಾ ನಿಮ್ಮಿಂದ ರಿಷಿ ಏನ್ ಕಲಿತಾನೆ, ಮನೆ ಮರ್ಯಾದೆ ಏನಾಗುತ್ತೆ’ ಎಂದು ಕೂಗಾಡಿದಳು ದೇವಯಾನಿ. ಕೋಪಕ್ಕೆ ಊಟವನ್ನು ಅರ್ಧಕ್ಕೆ ಬಿಟ್ಟು ಎದ್ದು ಹೋದಳು. ದೇವಯಾನಿ ವರ್ತನೆ ನೋಡಿ ಪತಿ ಪಣೀಂದ್ರ ಕೂಡ ಊಟ ಬಿಟ್ಟು ಹೊರಟ. ಆಕೆಯ ಮಾತಿಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಮಹೇಂದ್ರ ಮತ್ತು ಜಗತಿಗೆ ಸಮಾಧಾನ ಮಾಡಿದ ಪಣೀಂದ್ರ. ಕೋಪ ಇದ್ದರೂ ಹೆಚ್ಚು ಕಾಳಜಿ ತೋರಿಸುವ ರಿಷಿ, ವಸುಧರಾಳನ್ನು ಮಾತನಾಡಿಸುತ್ತಾನಾ? ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Web contact
Web contact

TV9 Kannada

Read More
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು