‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ನಾಲ್ಕು ವಾರಗಳು ಪೂರ್ಣಗೊಂಡಿವೆ. ಕಿಚ್ಚ ಸುದೀಪ್ ಅವರು ಎಂದಿನ ಜೋಶ್ನಲ್ಲಿ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಈ ವೀಕೆಂಡ್ ಸಖತ್ ಆಗಿ ಕ್ಲಾಸ್ ತೆಗೆದುಕೊಂಡಿದ್ದರು ಸುದೀಪ್ (Sudeep). ಈ ಮೂಲಕ ಮನೆಯಲ್ಲಿ ನಡೆಯುತ್ತಿದ್ದ ಗುಂಪುಗಾರಿಕೆಗೆ ಬ್ರೇಕ್ ಹಾಕುವ ಪ್ರಯತ್ನ ಮಾಡಿದ್ದಾರೆ. ಭಾನುವಾರ (ನವೆಂಬರ್ 5) ಬುಲೆಟ್ ರಕ್ಷಕ್ ಅವರು ಎಲಿಮಿನೇಟ್ ಆಗಿದ್ದಾರೆ. ಮೊದಲ ಮೂರು ವಾರ ಅವರು ನಾಮಿನೇಷನ್ನಿಂದ ತಪ್ಪಿಸಿಕೊಂಡಿದ್ದರು. ಕಳೆದ ವಾರ ಅವರು ಮೊದಲ ಬಾರಿ ನಾಮಿನೇಷನ್ ಆಗಿದ್ದರು. ಮೊದಲ ನಾಮಿನೇಷನ್ನಲ್ಲೇ ಅವರು ದೊಡ್ಮನೆಯಿಂದ ಹೊರಹೋಗಿದ್ದಾರೆ.
ರಕ್ಷಕ್ ತಮ್ಮನ್ನು ತಾವು ‘ಆರ್ ಬಾಸ್’ ಎಂದು ಕರೆದುಕೊಂಡಿದ್ದಾರೆ. ಹೊರಗೆ ತೋರಿಸಿದಷ್ಟು ಉತ್ಸಾಹವನ್ನು ಅವರು ಬಿಗ್ ಬಾಸ್ನಲ್ಲಿ ತೋರಿಸಿಲ್ಲ. ಬೇರೆಯವರ ನೆರಳಲ್ಲಿ ಅವರಿದ್ದರು ಎಂದರೂ ತಪ್ಪಾಗಲಾರದು. ಇದು ಅವರಿಗೆ ಮುಳುವಾಗಿದೆ. ಅವರ ಎಲಿಮಿನೇಷನ್ ಅನೇಕರಿಗೆ ಶಾಕ್ ತಂದಿದೆ. ಅವರು ಎಲಿಮಿನೇಟ್ ಆಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ.
ಶನಿವಾರದ (ನವೆಂಬರ್ 4) ಎಪಿಸೋಡ್ನಲ್ಲಿ ಮನೆ ಮಂದಿಗೆ ಸುದೀಪ್ ಪ್ರಶ್ನೆ ಒಂದನ್ನು ಕೇಳಿದ್ದರು. ಕಳೆದ ವಾರಕ್ಕೂ ಈ ವಾರಕ್ಕೂ ಇರುವ ವ್ಯತ್ಯಾಸ ಏನು ಎಂದು ಪ್ರಶ್ನಿಸಿದ್ದರು. ರಕ್ಷಕ್ ಅವರು, ‘ನಾನು ಕಳೆದ ವಾರ ಇರುವ ರೀತಿಯಲ್ಲೇ ಇದ್ದೇನೆ’ ಎಂದು ಉತ್ತರಿಸಿದ್ದರು. ‘ಬಹಳ ಸಂತೋಷ. ಹೀಗೆಯೇ ಇರಿ. ನಮಗೂ ಎಲಿಮಿನೇಷನ್ ತುಂಬಾ ಸುಲಭ ಆಗುತ್ತದೆ. ಬೇಗ ಬೇಗ ಎಲ್ಲರನ್ನೂ ಹೊರ ಕಳಿಸಬಹುದು’ ಎಂದಿದ್ದರು.
ಇದನ್ನೂ ಓದಿ: ನಾನು, ಪ್ರತಾಪ್, ರಕ್ಷಕ್ ಬೆಸ್ಟ್ ಕಾಂಬಿನೇಷನ್ ಎಂದ ಪ್ರಥಮ್
ಅಕ್ಟೋಬರ್ ಅಂತ್ಯದಲ್ಲಿ ನಡೆದ ಕಿಚ್ಚನ ಪಂಚಾಯ್ತಿಯಲ್ಲಿ ಸುದೀಪ್ ಅವರು ರಕ್ಷಕ್ಗೆ ಬದಲಾಗುವಂತೆ ಹೇಳಿದ್ದರು. ‘ಹೊರಗೆ ಬುಲೆಟ್ ಮಾಡಿದಷ್ಟು ಸದ್ದು ಮನೆಯಲ್ಲಿ ಮಾಡುತ್ತಿಲ್ಲ’ ಎಂದು ಹೇಳುವ ಮೂಲಕ ಅವರಿಗೆ ಎಚ್ಚರಿಕೆ ನೀಡಿದ್ದರು. ಆದರೆ, ರಕ್ಷಕ್ ಬದಲಾಗಲೇ ಇಲ್ಲ. ಇದು ಅವರಿಗೆ ಮುಳುವಾಗಿದೆ. ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಹಾಗೂ ಲೈವ್ ವೀಕ್ಷಿಸುವ ಅವಕಾಶ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:04 am, Mon, 6 November 23