ಇತ್ತೀಚೆಗಷ್ಟೆ ಹಿಂದಿ ಬಿಗ್ಬಾಸ್ (Bigg Boss) ಒಟಿಟಿ ಆವೃತ್ತಿಯ ಎರಡನೇ ಸೀಸನ್ ಮುಗಿದಿದೆ. ಅದರ ಬೆನ್ನಲ್ಲೆ ಈಗ ಹಿಂದಿ ಬಿಗ್ಬಾಸ್ ಟಿವಿ ಆವೃತ್ತಿಯ ಹೊಸ ಸೀಸನ್ ಘೋಷಣೆ ಮಾಡಲಾಗಿದೆ. ಒಟಿಟಿ ಆವೃತ್ತಿಯನ್ನು ಸಲ್ಮಾನ್ ಖಾನ್ ನಿರೂಪಣೆ ಮಾಡಿದ್ದರು. ಇದೀಗ ಟಿವಿ ಆವೃತ್ತಿಯನ್ನೂ ಅವರೇ ನಿರೂಪಣೆ ಮಾಡಲಾಗಿದ್ದಾರೆ. ಹಿಂದಿ ಬಿಗ್ಬಾಸ್, ಕನ್ನಡ ಬಿಗ್ಬಾಸ್ ಜೊತೆ-ಜೊತೆಗೇ ಪ್ರಸಾರವಾಗಲಿವೆ.
ಹಿಂದಿ ಬಿಗ್ಬಾಸ್ 17ನೇ ಸೀಸನ್ ಪ್ರಾರಂಭಕ್ಕೆ ಮುಹೂರ್ತ ಇಡಲಾಗಿದೆ. ಬಿಗ್ಬಾಸ್ನ 17ನೇ ಸೀಸನ್ ಅಕ್ಟೋಬರ್ 15ರಿಂದ ಪ್ರಸಾರವಾಗಲಿದೆ. ಪ್ರತಿದಿನವೂ 10 ಗಂಟೆಗೆ ಬಿಗ್ಬಾಸ್ 17 ಎಪಿಸೋಡ್ಗಳು ಪ್ರಸಾರವಾಗಲಿವೆ. ಶನಿವಾರ ಮತ್ತು ಭಾನುವಾರ ಮಾತ್ರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ. ವಾರಾಂತ್ಯದ ಎಪಿಸೋಡ್ಗಳಲ್ಲಿ ಯಥಾವತ್ತು ನಟ ಸಲ್ಮಾನ್ ಖಾನ್ ಕಾಣಿಸಿಕೊಳ್ಳಲಿದ್ದಾರೆ.
ಹೊಸ ಸೀಸನ್ನ ಪ್ರೋಮೊ ಈಗಾಗಲೇ ಬಿಡುಗಡೆ ಆಗಿದ್ದು, ಈ ಬಾರಿ ಬಿಗ್ಬಾಸ್ನಲ್ಲಿ ಪಕ್ಷಪಾತ ಇರಲಿದೆ ಎಂಬುದನ್ನು ಪ್ರೋಮೋನಲ್ಲಿಯೇ ಹೇಳಲಾಗಿದೆ. ಸ್ಪರ್ಧಿಗಳಲ್ಲಿ ಕೆಲವರಿಗೆ ಸ್ವತಃ ಬಿಗ್ಬಾಸ್ ಮಾರ್ಗದರ್ಶನ ಮಾಡಲಿದ್ದಾರಂತೆ. ಆಟಗಳಲ್ಲಿ, ಟಾಸ್ಕ್ಗಳಲ್ಲಿ ಅವರಿಗೆ ಮಾರ್ಗದರ್ಶನ ಮಾಡಿ, ತರಬೇತಿ ನೀಡಿ ಆಟಕ್ಕೆ ತಯಾರು ಮಾಡಲಿದ್ದಾರಂತೆ.
ಇದನ್ನೂ ಓದಿ:ಎರಡೇ ವಾರಕ್ಕೆ ಬಿಗ್ಬಾಸ್ನಿಂದ ಹೊರಬಂದ ಶಕೀಲ, ಪಡೆದ ಸಂಭಾವನೆ ಎಷ್ಟು?
ಕೆಲವು ದಿನಗಳ ಹಿಂದೆಯಷ್ಟೆ ಬಿಗ್ಬಾಸ್ ಒಟಿಟಿ ಎರಡನೇ ಸೀಸನ್ ಮುಗಿದಿದೆ. ಜೂನ್ 17ಕ್ಕೆ ಆರಂಭವಾಗಿದ್ದ ಬಿಗ್ಬಾಸ್ ಒಟಿಟಿ ಸೀಸನ್ ಎರಡು ಆಗಸ್ಟ್ 14 ರಂದು ಮುಗಿದಿದೆ. ಒಟಿಟಿ ಸೀಸನ್ ಮುಗಿದು ಒಂದು ತಿಂಗಳ ಮೇಲೆ ಕೆಲವು ದಿನಗಳಾಗಿದೆ ಅಷ್ಟೆ. ಅಷ್ಟರಲ್ಲೇ ಹೊಸ ಬಿಗ್ಬಾಸ್ ಸೀಸನ್ ಘೋಷಣೆ ಮಾಡಲಾಗಿದೆ. ಒಟ್ಟಾರೆ, ಸಲ್ಮಾನ್ ಖಾನ್ ಬಿಡುವಿಲ್ಲದೆ ಸಣ್ಣ ಪರದೆಯಲ್ಲಿ ಕಾಣಿಸಿಕೊಳ್ಳಬೇಕಿದೆ.
Saam-daam-dand-bhed ka karenge tyaag, kuch sadasyon ke liye Bigg Boss karenge khuleaam pakshpaat. 😲
Dekhiye #BiggBoss17, 15th Oct se, Mon-Fri 10PM & Sat-Sun 9PM sirf #Colors par. #BB17 #BiggBoss@BeingSalmanKhan@HyundaiIndia@Chingssecret@JioCinema pic.twitter.com/xsVetO72Wn
— ColorsTV (@ColorsTV) September 23, 2023
ಕನ್ನಡ ಬಿಗ್ಬಾಸ್ ಹೊಸ ಸೀಸನ್ ಸಹ ಘೋಷಣೆ ಆಗಿದೆ. ಕನ್ನಡ ಬಿಗ್ಬಾಸ್ ಸೀಸನ್ 10 ಅಕ್ಟೋಬರ್ 8ರಿಂದ ಪ್ರಾರಂಭವಾಗಲಿದೆ. ನಟ ಸುದೀಪ್ ನಟಿಸಿರುವ ಬಿಗ್ಬಾಸ್ 10ರ ಹೊಸ ಪ್ರೋಮೋ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ಈ ಬಾರಿಯ ಕನ್ನಡ ಬಿಗ್ಬಾಸ್ ಈ ಹಿಂದಿನ ಬಿಗ್ಬಾಸ್ಗಳಿಗಿಂತಲೂ ತುಸು ಭಿನ್ನವಾಗಿರಲಿದೆ ಎನ್ನಲಾಗುತ್ತಿದೆ. ಈ ಬಾರಿ ಸಾಮಾನ್ಯರೂ ಬಿಗ್ಬಾಸ್ ನಲ್ಲಿ ಸ್ಪರ್ಧಿಗಳಾಗಿ ಭಾಗವಹಿಸುವ ಸಾಧ್ಯತೆ ಇದೆ.
ಇನ್ನು ಈಗಾಗಲೇ ತೆಲುಗು ಬಿಗ್ಬಾಸ್ ಚಾಲ್ತಿಯಲ್ಲಿದೆ. ನಟ ನಾಗಾರ್ಜುನ ನಿರೂಪಣೆ ಮಾಡುತ್ತಿರುವ ಶೋ ಪ್ರಸಾರವಾಗುತ್ತಿದೆ. ನಟ ಕಮಲ್ ಹಾಸನ್, ತಮಿಳು ಬಿಗ್ಬಾಸ್ ಅನ್ನು ಇನ್ನಷ್ಟೆ ಶುರು ಮಾಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ