Honganasu: ರಿಷಿ-ವಸುಧರಾ ನಡುವೆ ಸಾಕ್ಷಿ ಎಂಟ್ರಿ; ದೇವಯಾನಿ ಪ್ಲಾನ್ ವರ್ಕೌಟ್ ಆಗುತ್ತಾ?

| Updated By: ಮದನ್​ ಕುಮಾರ್​

Updated on: Nov 24, 2022 | 1:06 PM

Honganasu Serial Update: ಗೌತಮ್‌ ಕೂಡ ವಸು ಬಗ್ಗೆ ಯೋಚಿಸುತ್ತಾ ಕುಳಿತಿದ್ದ. ಎಲ್ಲಿದ್ದಾಳೋ, ಹೇಗಿದ್ದಾಳೋ ಗೊತ್ತಿಲ್ಲ ಎಂದು ವಸುಧರಾ ಫೋಟೋ ನೋಡುತ್ತಾ ಕುಳಿತಿದ್ದ. ಅಲ್ಲಿಗೆ ಎಂಟ್ರಿ ಕೊಟ್ಟ ರಿಷಿ ‘ಏನೋ ಇದು’ ಅಂತ ಕೇಳಿದ.

Honganasu: ರಿಷಿ-ವಸುಧರಾ ನಡುವೆ ಸಾಕ್ಷಿ ಎಂಟ್ರಿ; ದೇವಯಾನಿ ಪ್ಲಾನ್ ವರ್ಕೌಟ್ ಆಗುತ್ತಾ?
ಹೊಂಗನಸು ಸೀರಿಯಲ್
Follow us on

ಧಾರಾವಾಹಿ: ಹೊಂಗನಸು
ಪ್ರಸಾರ: ಸ್ಟಾರ್ ಸುವರ್ಣ
ಸಮಯ: ಮಧ್ಯಾಹ್ನ 1.30
ನಿರ್ದೇಶನ: ಅನಿಲ್ ಆನಂದ್, ಕುಮಾರ್
ಪಾತ್ರವರ್ಗ: ರಕ್ಷಾ ಗೌಡ, ಮುಖೇಶ್ ಗೌಡ, ಜ್ಯೂತಿ ರೈ, ಸಾಯಿ ಕಿರಣ್ ಹಾಗೂ ಇತರರು

ಹಿಂದಿನ ಸಂಚಿಕೆಯಲ್ಲಿ ಏನಾಗಿತ್ತು?

ದೇವಯಾನಿ ತನ್ನ ಪ್ಲಾನ್ ಪ್ರಕಾರ ವಸುಧರಾಳನ್ನು ಮನೆಯಿಂದ ಓಡಿಸಿದಳು. ದೇವಯಾನಿಯ ಚುಚ್ಚು ಮಾತುಗಳನ್ನು ಕೇಳಲಾಗದೆ ವಸುಧರಾ ಮನೆಯಿಂದ ಹೊರಡುವ ನಿರ್ಧಾರ ಮಾಡಿದಳು. ರಿಷಿ ಬೇಡ ಎಂದರೂ ವಸು ಮನೆಯಿಂದ ಹೊರಟಳು. ವಸುಧರಾಳನ್ನು ಹೊರ ಹಾಕಿದ ಸಂತಸದಲ್ಲಿ ತೇಲುತ್ತಿದ್ದಾಳೆ ದೇವಯಾನಿ.

ಇದನ್ನೂ ಓದಿ
Honganasu: ಅಪ್ಪನ ಸಂತೋಷಕ್ಕಾಗಿ ಜಗತಿಯನ್ನು ಮನೆಗೆ ಕರೆಯಲು ನಿರ್ಧರಿಸಿದ ರಿಷಿ; ದೇವಯಾನಿ ಒಪ್ಪಿಕೊಳ್ತಾಳಾ?
ಹೊಂಗನಸು: ಮಹೇಂದರ್‌‌ಗೆ ಹೃದಯಾಘಾತ; ಪತಿಯ ಸ್ಥಿತಿ ನೋಡಿ ಬಿಕ್ಕಿಬಿಕ್ಕಿ ಅಳುತ್ತಿರುವ ಜಗತಿ
Honganasu: ಲವ್‌ಲೆಟರ್ ಬರೆದು ಪೇಚಿಗೆ ಸಿಲುಕಿದ ರಿಷಿ; ಯಾರೆಂದು ಗೊತ್ತಾಗೋವರೆಗೂ ಬಿಡಲ್ಲ ಅಂತ ಪಟ್ಟುಹಿಡಿದ ವಸು
Honganasu; ಜಗತಿ ಕೈ ಸೇರಿದ ಮಗನ ಲವ್ ಲೆಟರ್; ರಿಷಿನೆ ಬರೆದಿದ್ದೆಂದು ವಸುಧರಗೆ ಗೊತ್ತಾಗೋಯ್ತಾ?

ರಿಷಿ ಮನೆಯಿಂದ ವಸುಧರಾ ಹೊರಹೊಗುತ್ತಿದ್ದಂತೆ ಸಾಕ್ಷಿ ಎಂಟ್ರಿ ಕೊಟ್ಟಳು. ವಸುಧರಾ ಪರಿಚಯ ಆಗುವ ಮೊದಲೇ ಸಾಕ್ಷಿ ಜೊತೆ ರಿಷಿಗೆ ಎಂಗೇಜ್ಮೆಂಟ್ ಆಗಿ ಬ್ರೇಕಪ್ ಆಗಿತ್ತು. ಸಾಕ್ಷಿ ತನಗೆ ಓದೇ ಮುಖ್ಯ ಎಂದು ರಿಷಿ ಮತ್ತು ನಿಶ್ಚಿತಾರ್ಥವನ್ನೂ ಧಿಕ್ಕರಿಸಿ ಲಂಡನ್‌ಗೆ ಹಾರಿದ್ದಳು. ಆದರೀಗ ರಿಷಿನೇ ಬೇಕು ಎಂದು ವಾಪಾಸ್ ಆಗಿದ್ದಾಳೆ. ಸಾಕ್ಷಿ ಎಂಟ್ರಿ ನೋಡಿ ರಿಷಿ ಶಾಕ್ ಆದ. ಹಳೆಯದನ್ನೆಲ್ಲಾ ಮತ್ತೆ ನೆನಪಿಸಿಕೊಂಡ. ವಸುಧರಾ ಮನೆಯಿಂದ ಹೋದ ಟೆನ್ಶನ್‌ನಲ್ಲಿದ್ದ ರಿಷಿಗೆ ಸಾಕ್ಷಿ ಬಂದಿದ್ದು ಮತ್ತಷ್ಟು ತಲೆನೋವಾಯಿತು. ಸಾಕ್ಷಿ ಮನೆಯೊಳಗೆ ಬರುತ್ತಿದ್ದಂತೆ ದೇವಯಾನಿ ಫುಲ್ ಖುಷ್ ಆದಳು. ಆರತಿ ಮಾಡಿ ಮನೆಯೊಳಗೆ ಬರಮಾಡಿಕೊಂಡಳು. ಸಾಕ್ಷಿ ನೋಡಿ ಮಹೇಂದ್ರ ಮತ್ತು ಜಗತಿಗೆ ಅಶ್ಚರ್ಯವಾಯಿತು. ರಿಷಿ ಅಮ್ಮ ಎಂದು ಸಾಕ್ಷಿಗೆ ಪರಿಚಯ ಮಾಡಿಕೊಟ್ಟಳು ದೇವಯಾನಿ. ಅತ್ತೆ ಅಂತ ಜಗತಿಯನ್ನು ಮಾತನಾಡಿಸಿ ಸಂಭ್ರಮಿಸಿದಳು ಸಾಕ್ಷಿ. ವಸುಧರಾಳನ್ನು ರಿಷಿಯಿಂದ ದೂರ ಮಾಡಬೇಕೆಂದು ದೇವಯಾನಿಯೇ ಸಾಕ್ಷಿಯನ್ನು ಮತ್ತೆ ಕರೆಸಿದ್ದಾಳೆ ಎಂದು ಜಗತಿಗೆ ಅನುಮಾನವಾಯಿತು.

ರಿಷಿ ಎಲ್ಲಿ ಎಂದು ಸೀದಾ ರೂಮಿಗೆ ಎಂಟ್ರಿ ಕೊಟ್ಟ ಸಾಕ್ಷಿ ರಿಷಿಯನ್ನು ಮಾತನಾಡಿಸಿದಳು. ಕೋಪದಲ್ಲಿದ್ದ ರಿಷಿಗೆ ಸಾಕ್ಷಿ ಮಾತು ಮತ್ತಷ್ಟು ಸಿಟ್ಟು ತರಿಸಿತು. ಮತ್ಯಾಕೆ ಬಂದೆ ಎಂದು ಆಕೆಯ ಮೇಲೆ ರೇಗಿದ ರಿಷಿ. ಬದಲಾಗಿದ್ದೀನಿ ಅಂತ ಸಾಕ್ಷಿ ಹೇಳುತ್ತಿದ್ದರೂ ಕೇಳದೆ ರಿಷಿ ಅಲ್ಲಿಂದ ಹೊರಟು ಹೋದ. ಇತ್ತ ವಸುಧರಾ ಎಲ್ಲಿಗೆ ಹೋಗಬೇಕೆಂದು ತೋಚದೆ ಕಂಗಾಲಾಗಿದ್ದಾಳೆ. ಕೊನೆಗೂ ಒಂದು ಬಾಡಿಗೆ ಮನೆ ಹಿಡಿದು ಹೊಸ ಮನೆಗೆ ಎಂಟ್ರಿ ಕೊಟ್ಟಳು ವಸು. ಕಾಲೇಜಿಗೂ ಹೋಗದೆ ರಜೆ ಹಾಕಿದಳು. ರಿಷಿಗೆ ವಸು ಎಲ್ಲಿದ್ದಾಳೆ ಎನ್ನುವುದೇ ಚಿಂತೆ. ಫೋನ್ ಮಾಡಿದರೂ ವಸು ಫೋನ್ ಸ್ವಿಚ್ ಆಫ್.

ಅನುಮತಿ ಇಲ್ಲದೇ ಕಾಲೇಜಿಗೂ ಕಾಲಿಟ್ಟ ಸಾಕ್ಷಿಗೆ ರಿಷಿ ಬೈದು ಕಳಿಸಿದ. ಅವಮಾನ ತಾಳಲಾರದೇ ದೇವಯಾನಿಗೆ ಫೋನ್ ಮಾಡಿ ಅಳಲು ತೋಡಿಕೊಂಡಳು ಸಾಕ್ಷಿ. ರಿಷಿಗೆ ಹೇಗೆ ಹತ್ತಿರವಾಗಬೇಕೆಂದು ದೇವಯಾನಿ ಹೇಳಿಕೊಟ್ಟಳು. ರಿಷಿ ರಸ್ತೆ ಪಕ್ಕದಲ್ಲೇ ಕಾರು ನಿಲ್ಲಿಸಿ ವಸುಧರಾಳ ಬಗ್ಗೆಯೇ ಚಿಂತಿಸುತ್ತಿದ್ದ. ಅಷ್ಟೊತ್ತಿಗೆ ವಸು ಆಟೋದಲ್ಲಿ ಹೋಗುವುದನ್ನು ನೋಡಿದ. ಆಟೋ ಫಾಲೋ ಮಾಡಿಕೊಂಡು ವಸು ಹಿಂದಯೇ ಹೊರಟ ರಿಷಿ. ಕೊನೆಗೂ ರಿಷಿಗೆ ವಸುಧರಾ ಸಿಕ್ಕಿದಳು. ವಸು ನೋಡಿ  ರಿಷಿಗೆ ಸಂತಸವಾಯಿತು. ವಸು ಅಚ್ಚರಿ ಪಟ್ಟಳು. ನಿಮಗೆ ಹೇಗೆ ನನ್ನ ಮನೆ ಗೊತ್ತಾಯಿತು ಎಂದು ರಿಷಿಗೆ ಪ್ರಶ್ನೆ ಮಾಡಿದಳು. ಆಟೋದಲ್ಲಿ ನೋಡಿದ ವಿಚಾರ ವಿವರಿಸಿದ ರಿಷಿ.

ಕೋಪದಿಂದ ಮನೆಬಿಟ್ಟಿದ್ದ ರಿಷಿ ಖುಷಿಯಾಗಿ ನಗುತ್ತಾ ವಾಪಸ್​ ಬರುತ್ತಿರುವುದು ನೋಡಿ ಮಹೇಂದ್ರ ಮತ್ತು ಜಗತಿಗೆ ಅಚ್ಚರಿಯಾಯಿತು. ಕಾಫಿ ತಂದು ಕೊಡ್ಲಾ ಎಂದು ಧರಣಿ ರಿಷಿಗೆ ಕೇಳಿದಳು. ಆದರೆ ರಿಷಿ ಶುಂಠಿ ಟೀ ಕುಡಿದ ಸಂಭ್ರಮದಲ್ಲಿದ್ದ. ‘ಶುಂಠಿ ಟೀ ಕುಡಿದೆ. ಇಂಥ ಟೀ ಎಲ್ಲೂ ಕುಡಿದಿರಲಿಲ್ಲ, ನನಗೆ ಇನ್ಮುಂದೆ ಕಾಫಿ ಬೇಡ’ ಎಂದು ಹೇಳಿದ. ರಿಷಿಯ ವರ್ತನೆ ಎಲ್ಲರಿಗೂ ಅಚ್ಚರಿ ಮೂಡಿಸಿತು.

ಗೌತಮ್‌ ಕೂಡ ವಸು ಬಗ್ಗೆ ಯೋಚಿಸುತ್ತಾ ಕುಳಿತಿದ್ದ. ಎಲ್ಲಿದ್ದಾಳೋ, ಹೇಗಿದ್ದಾಳೋ ಗೊತ್ತಿಲ್ಲ ಎಂದು ವಸುಧರಾ ಫೋಟೋ ನೋಡುತ್ತಾ ಕುಳಿತಿದ್ದ. ಅಲ್ಲಿಗೆ ಎಂಟ್ರಿ ಕೊಟ್ಟ ರಿಷಿ ಏನೋ ಇದು ಅಂತ ಕೇಳಿದ. ನನ್ನ ಏಂಜಲ್ ನೋಡಿದ್ರೆ ಗೊತ್ತಾಗಲ್ವಾ ಎಂದು ರಿಷಿಗೆ ಉತ್ತರಿಸಿದ. ವಸುಗೆ ಏಂಜಲ್ ಅಂತ ಕರೆದಿದ್ದು ರಿಷಿಗೆ ಇಷ್ಟವಾಗಿಲ್ಲ. ಗೌತಮ್‌ನನ್ನು ಗುರಾಯಿಸಿದ ರಿಷಿ. ‘ನನ್ನ ಪ್ರೀತಿಗೆ ನೀನೇ ವಿಲನ್ ಅಂತ ನನಗೆ ಗೊತ್ತು’ ಎಂದು ಗೌತಮ್ ನೋವು ತೋಡಿಕೊಂಡ. ಬಳಿಕ ಸಾಕ್ಷಿ ಯಾರು ಎಂದು ರಿಷಿಗೆ ಕೇಳಿದ. ಗೌತಮ್ ಪ್ರಶ್ನೆ ರಿಷಿಯನ್ನು ಇಕ್ಕಟ್ಟಿಗೆ ಸಿಲುಕಿಸಿತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.