ಧಾರಾವಾಹಿ: ಹೊಂಗನಸು
ಪ್ರಸಾರ: ಸ್ಟಾರ್ ಸುವರ್ಣ
ಸಮಯ: ಮಧ್ಯಾಹ್ನ 1.30
ನಿರ್ದೇಶನ: ಅನಿಲ್ ಆನಂದ್, ಕುಮಾರ್
ಪಾತ್ರವರ್ಗ: ರಕ್ಷಾ ಗೌಡ, ಮುಖೇಶ್ ಗೌಡ, ಜ್ಯೋತಿ ರೈ, ಸಾಯಿ ಕಿರಣ್ ಹಾಗೂ ಇತರರು.
ಹಿಂದಿನ ಸಂಚಿಕೆಯಲ್ಲಿ ಏನಾಗಿತ್ತು?
ಜಗತಿಯನ್ನು ಕಾಲೇಜಿನಿಂದ ಕಿತ್ತಾಕಿದ ಕೋಪಕ್ಕೆ ಮಹೇಂದ್ರ ಕೂಡ ತನ್ನ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾನೆ. ಇಬ್ಬರ ರಾಜಿನಾಮೆ ನಿರ್ಧಾರ ರಿಷಿಯ ತಲೆಕೆಡಿಸಿ. ಅಷ್ಟೇ ಅಲ್ಲ, ಮಹೇಂದ್ರ ಮತ್ತು ಜಗತಿ ಇಬ್ಬರೂ ವಸು ಜೊತೆ ಸೇರಿ ರಹಸ್ಯವಾಗಿ ಮೀಟಿಂಗ್ ಮಾಡುತ್ತಿದ್ದಾರೆ. ಅವರ ಜೊತೆ ಗೌತಮ್ ಕೂಡ ಸೇರಿಕೊಂಡಿದ್ದಾರೆ. ಎಲ್ಲರೂ ಸೇರಿ ಏನ್ ಮಾಡ್ತಿದ್ದಾರೆ ಎಂದು ರಿಷಿ ಯೋಚಿಸುತ್ತಿದ್ದಾನೆ.
ವಸುಧರಾಳನ್ನು ಮನೆಗೆ ಕರೆದುಕೊಂಡು ಬಂದಿರುವ ಮಹೇಂದ್ರ ಸೀಕ್ರೆಟ್ ಪ್ರಾಜೆಕ್ಟ್ ತಯಾರಿಸುತ್ತಿದ್ದಾನೆ. ಎಲ್ಲರೂ ಸೇರಿ ತನಗೆ ಏನು ಹೇಳದೇ ಪ್ಲಾನ್ ಮಾಡಿದ್ದಾರೆ ಎನ್ನುವ ಸಂಕಟದಲ್ಲಿದ್ದಾನೆ ರಿಷಿ. ಎಲ್ಲರೂ ರೂಮ್‌ನಲ್ಲಿ ಕುಳಿತು ಪ್ರಾಜೆಕ್ಟ್ ತಯಾರಿಸುತ್ತಿದ್ದರು. ಸೀಕ್ರೆಟ್ ಮೀಟಿಂಗ್ ಏನು ಎನ್ನುವ ಕತೂಹಲ ತಡೆಯಲಾಗದೆ ನೇರವಾಗಿ ರೂಮಿಗೆ ಎಂಟ್ರಿ ಕೊಟ್ಟ ರಿಷಿ.
ಅಪ್ಪನ ಬಳಿ ಏನ್ ನಡೀತಿದೆ ಎಂದು ರಿಷಿ ಕೇಳಿದ. ‘ಇದು ಕಾಲೇಜಿಗೆ ಸೇರಿದ ವಿಚಾರ ಅಲ್ಲ, ವೈಯಕ್ತಿಕ ವಿಚಾರ ಹಾಗಾಗಿ ಕರೆದಿಲ್ಲ’ ಎಂದು ಮಹೇಂದ್ರ ಉತ್ತರಿಸಿದ. ಅಷ್ಟರಲ್ಲೇ ಗೌತಮ್ ಮೀಟಿಂಗ್ ವಿಚಾರ ರಿವೀಲ್ ಮಾಡಿದ. ಮಿಷನ್ ಎಜುಕೇಷನ್ ಪ್ರಾಜೆಕ್ಟ್ ವಿಚಾರವಾಗಿ ಮೀಟಿಂಗ್ ಎಂದು ಗೌತಮ್ ಹೇಳಿದ. ಬಳಿಕ ರಿಷಿ ಮನೆಯಿಂದ ಹೊರಟಳು ವಸು. ಎಲ್ಲರನ್ನೂ ರೂಮಿನಿಂದ ಹೊರಹೋಗುವಂತೆ ಹೇಳಿ ರಿಷಿ ಅಪ್ಪನ ಬಳಿ ಈ ವಿಚಾರ ಯಾಕೆ ಹೇಳಿಲ್ಲ ಎಂದು ವಿಚಾರಿಸಿದ. ಆದರೆ ಮಹೇಂದ್ರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡ. ನಂತರ ಮಗನಿಗೆ ಒಂದಿಷ್ಟು ಬುದ್ಧಿವಾದ ಕೂಡ ಹೇಳಿದ.
ಇತ್ತ ದೇವಯಾನಿಗೆ ಜಗತಿ ಮನೆ ಬಳಿ ಯಾಕೆ ಬಂದಿದ್ದಳು ಎನ್ನುವುದೇ ಚಿಂತೆ. ಕುತೂಹಲ ತಡೆಯಲಾಗದೆ ಜಗತಿಗೆ ದೇವಯಾನಿ ಫೋನ್ ಮಾಡಿದಳು. ಫೋನ್ ರಿಸೀವ್ ಮಾಡಿ ಅಕ್ಕ ಅಂತನೆ ಜಗತಿ ಮಾತನಾಡಿಸಿದಳು. ಮನೆ ಬಳಿ ಯಾಕೆ ಬಂದಿದ್ದು ಎಂದು ಜಗತಿಗೆ ದೇವಯಾನಿ ಪ್ರಶ್ನಿಸಿದಳು. ಆದರೆ ಜಗತಿ ಅಕ್ಕ ದೇವಯಾನಿಗೆ ಸರಿಯಾಗಿ ಟಾಂಗ್ ಕೊಟ್ಟು ಮಾತನಾಡಿದಳು. ತನ್ನ ಪ್ರಶ್ನೆಗಳಿಗೆ ಉತ್ತರ ಸಿಗದೆ ದೇವಯಾನಿ ಕೋಪದಲ್ಲೇ ಫೋನ್ ಇಟ್ಟಳು. ಬೆಳಗ್ಗೆ ಎದ್ದು ನೋಡಿದ್ರೆ ಮಹೇಂದ್ರ ಲಗೇಜ್ ಸಮೇತ ಮನೆ ಬಿಟ್ಟು ಹೊರಟು ಹೋಗಿದ್ದ. ಹೊಸ ಪಯಣ ಪ್ರಾರಂಭವಾಗಿದೆ ಎಂದು ರೂಮಿನಲ್ಲಿ ಪತ್ರ ಬರೆದಿಟ್ಟಿದ್ದ. ಅಪ್ಪ ಮನೆ ಬಿಟ್ಟು ಹೋದ ವಿಚಾರ ಗೊತ್ತಾಗಿ ರಿಷಿ ಕುಸಿದು ಹೋದ.
ಮಹೇಂದ್ರ ನೇರವಾಗಿ ಪತ್ನಿ ಜಗತಿ ಮನೆಗೆ ಬಂದ. ಆತ ಮನೆ ಬಿಟ್ಟು ಬಂದಿದ್ದು ಜಗತಿಗೆ ಇಷ್ಟವಾಗಿಲ್ಲ. ರಿಷಿಗೆ ನೋವು ಕೊಡಬೇಡ ಅಂತ ಎಷ್ಟೇ ಹೇಳಿದರೂ ಕೇಳಲ್ಲಾ ನೀನು ಎಂದು ಜಗತಿ ಮಹೇಂದ್ರನಿಗೆ ಕ್ಲಾಸ್ ತೆಗೆದುಕೊಂಡಳು. ಆದರೆ ಮಹೇಂದ್ರ ಯಾರ ಮಾತನ್ನು ಕೇಳುವ ಸ್ಥಿತಿಯಲ್ಲಿಲ್ಲ. ಮಗನಿಗೆ ಸರಿಯಾಗಿ ಬುದ್ಧಿ ಕಲಿಸಬೇಕು, ಆತನಿಗೆ ತಪ್ಪಿನ ಅರಿವಾಗೋವರೆಗೂ ಬಿಡಲ್ಲ ಎಂದು ಮಹೇಂದ್ರ ಪಣ ತೊಟ್ಟಿದ್ದಾನೆ.
ಮನೆಯಿಂದ ಹೊರಟ ರಿಷಿ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ವಸು ಬಳಿಗೆ ಬಂದ. ವಸು ಕೆಲಸ ಮುಗಿಯೋವರೆಗೂ ಕಾಯುತ್ತಾ ಕುಳಿತಿದ್ದ ರಿಷಿ ಕೆಲಸ ಮುಗಿಯುತ್ತಿದ್ದಂತೆ ವಸುಧರಾಳನ್ನು ಕರೆದುಕೊಂಡು ಹೊರಟ. ಎಲ್ಲಿಗೆ ಅಂತನೂ ವಸುಗೆ ಹೇಳದೆ ಕರೆದುಕೊಂಡ ಹೊರಟ ರಿಷಿ. ಇತ್ತ ದೇವಯಾನಿಗೆ ರಿಷಿ, ಮಹೇಂದ್ರ ಎಲ್ಲಿದ್ದಾರೆ ಎಂದು ತಿಳಿದುಕೊಳ್ಳುವ ಕುತೂಹಲ. ಗೌತಮ್ ಬಳಿ ರಿಷಿ ಮತ್ತು ವಸುಗೆ ಕಾಲ್ ಮಾಡಿಸಿದಳು. ಆದರೆ ಇಬ್ಬರೂ ರಿಸೀವ್ ಮಾಡದೆ ಫೋನ್ ಕಟ್ ಮಾಡಿದರು. ರಿಷಿ ಮತ್ತು ವಸು ಇಬ್ಬರೂ ಒಟ್ಟಿಗೆ ಇರುವ ಸತ್ಯ ಗೊತ್ತಾಗಿ ಮತ್ತಷ್ಟು ಉರಿದುಕೊಂಡಳು ದೇವಯಾನಿ. ವಸುಧರಾಳನ್ನು ಕರೆದುಕೊಂಡು ರಿಷಿ ಎಲ್ಲಿಗೆ ಹೋಗುತ್ತಿದ್ದಾನೆ? ತಂದೆಯನ್ನು ಮನೆಗೆ ಕರೆದುಕೊಂಡು ಬರ್ತಾನಾ? ವಸು ಯಾರ ಪರ ನಿಲ್ತಾಳೆ ಎನ್ನುವುದು ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.