ಮಗನ ಮುಂದೆ ಮಹೇಂದ್ರನ ಮಾತ್ರೆಗಳನ್ನು ತಂದು ಎಸೆದ ಜಗತಿ; ಗಾಬರಿಯಾದ ರಿಷಿ

Honganasu Serial Update: ಕಾಲೇಜಿಗೆ ಬಂದ ಜಗತಿ ನೇರವಾಗಿ ರಿಷಿ ಚೇಂಬರ್‌ಗೆ ಎಂಟ್ರಿ ಕೊಟ್ಟಳು. ಮಗನ ಮುಂದೆ ನಿಂತು ಮಾತ್ರೆಗಳನ್ನು ಟೇಬಲ್ ಮೇಲೆ ಎಸೆದಳು.

ಮಗನ ಮುಂದೆ ಮಹೇಂದ್ರನ ಮಾತ್ರೆಗಳನ್ನು ತಂದು ಎಸೆದ ಜಗತಿ; ಗಾಬರಿಯಾದ ರಿಷಿ
ಹೊಂಗನಸು ಸೀರಿಯಲ್
Edited By:

Updated on: Nov 11, 2022 | 11:54 AM

ಧಾರಾವಾಹಿ: ಹೊಂಗನಸು

ಪ್ರಸಾರ: ಸ್ಟಾರ್ ಸುವರ್ಣ

ಸಮಯ: ಮಧ್ಯಾಹ್ನ 1.30

ಇದನ್ನೂ ಓದಿ
Honganasu: ಅಪ್ಪನ ಸಂತೋಷಕ್ಕಾಗಿ ಜಗತಿಯನ್ನು ಮನೆಗೆ ಕರೆಯಲು ನಿರ್ಧರಿಸಿದ ರಿಷಿ; ದೇವಯಾನಿ ಒಪ್ಪಿಕೊಳ್ತಾಳಾ?
ಹೊಂಗನಸು: ಮಹೇಂದರ್‌‌ಗೆ ಹೃದಯಾಘಾತ; ಪತಿಯ ಸ್ಥಿತಿ ನೋಡಿ ಬಿಕ್ಕಿಬಿಕ್ಕಿ ಅಳುತ್ತಿರುವ ಜಗತಿ
Honganasu: ಲವ್‌ಲೆಟರ್ ಬರೆದು ಪೇಚಿಗೆ ಸಿಲುಕಿದ ರಿಷಿ; ಯಾರೆಂದು ಗೊತ್ತಾಗೋವರೆಗೂ ಬಿಡಲ್ಲ ಅಂತ ಪಟ್ಟುಹಿಡಿದ ವಸು
Honganasu; ಜಗತಿ ಕೈ ಸೇರಿದ ಮಗನ ಲವ್ ಲೆಟರ್; ರಿಷಿನೆ ಬರೆದಿದ್ದೆಂದು ವಸುಧರಗೆ ಗೊತ್ತಾಗೋಯ್ತಾ?

ನಿರ್ದೇಶನ: ಅನಿಲ್ ಆನಂದ್, ಕುಮಾರ್

ಪಾತ್ರವರ್ಗ: ರಕ್ಷಾ ಗೌಡ, ಮುಖೇಶ್​ ಗೌಡ, ಜ್ಯೋತಿ ರೈ, ಸಾಯಿ ಕಿರಣ್ ಹಾಗೂ ಇತರರು.

ಹಿಂದಿನ ಸಂಚಿಕೆಯಲ್ಲಿ ಏನಾಗಿತ್ತು?

ರಿಷಿ ಮತ್ತು ವಸುಧರಾ ಇಬ್ಬರೂ ರೊಮ್ಯಾಂಟಿಕ್ ರಾತ್ರಿ ಎಂಜಾಯ್ ಮಾಡಿದ್ದರು. ಮಿಷನ್ ಎಜುಕೇಶನ್ ಪ್ರಾಜಕ್ಟ್​ನಿಂದ ಹಿಂದೆ ಸರಿಯಬೇಡಿ, ನೀವು ಇರಲೇ ಬೇಕು ಎಂದು ವಸು ರಿಷಿಗೆ ಕೈ ಹಿಡಿದು ಬೇಡಿಕೊಂಡಳು. ಆದರೆ ರಿಷಿ ಇದು ಸಾಧ್ಯವಿಲ್ಲ ಎಂದು ಹೇಳಿದ.

ಮಿಷನ್ ಎಜುಕೇಶನ್ ಪ್ರಾಜೆಕ್ಟ್​ನಿಂದ ರಿಷಿ ಹಿಂದೆ ಸರಿದಿರುವುದು ವಸುಧರಾಗೆ ದೊಡ್ಡ ತಲೆನೋವಾಗಿದೆ. ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದ ವಸು, ರಿಷಿಯ ನಿರ್ಧಾರದಿಂದ ಮುಂದೇನು ಎಂದು ಗೊಂದಲಕ್ಕೆ ಸಿಲುಕಿದ್ದಾಳೆ. ಹಾಗಾಗಿ ರಿಷಿ ಬಳಿ ಮಾತನಾಡಲು ಬರುತ್ತಾಳೆ ವಸು. ಪ್ರಾಜೆಕ್ಟ್ ನಲ್ಲಿ ನೀವಿಲ್ಲ ಎಂದರೆ ನಾನು ಅಸಿಸ್ಟೆಂಟ್ ಆಗಿ ಇರಬೇಕಾ ಎಂದು ರಿಷಿ ಬಳಿ ವಸು ಕೇಳಿದಳು. ‘ನಿನ್ನ ಇಷ್ಟ, ಇರ್ತೀಯಾ ಇಲ್ವೋ ಅಂತ ನೀನೇ ನಿರ್ಧಾರ ಮಾಡು’ ಎಂದು ರಿಷಿ ಹೇಳಿದ. ಮತ್ತಷ್ಟು ಗೊಂದಲಕ್ಕೆ ಸಿಲುಕಿದ ವಸು ಈ ಪ್ರಾಜೆಕ್ಟ್​ನಲ್ಲಿ ನೀವೇ ಇಲ್ಲ ಎಂದರೆ ನಾನ್ಯಾಕೆ’ ಎಂದು ಪ್ರಶ್ನೆ ಮಾಡಿದಳು. ‘ಪ್ರಾಜೆಕ್ಟ್ ವಿಚಾರದಲ್ಲಿ ಜಗತಿಗೆ ಹಾಗೂ ನನ್ನ ಕೆಲಸಕ್ಕೂ ಸಹಾಯ ಮಾಡು’ ಎಂದು ರಿಷಿ ಹೇಳಿದ.

ಬೆಳಗ್ಗೆ ಕಾಲೇಜಿಗೆ ಬಂದ ಜಗತಿ ನೇರವಾಗಿ ರಿಷಿ ಚೇಂಬರ್‌ಗೆ ಎಂಟ್ರಿ ಕೊಟ್ಟಳು. ಮಗನ ಮುಂದೆ ನಿಂತು ಮಾತ್ರೆಗಳನ್ನು ಟೇಬಲ್ ಮೇಲೆ ಎಸೆದಳು. ರಿಷಿ ಗಾಬರಿಯಲ್ಲಿ ಏನಿದು ಎಂದು ಕೇಳಿದ. ‘ನಿಮ್ಮ ತಂದೆ ಮಾತ್ರೆ ತೆಗೆದುಕೊಳ್ಳುತ್ತಿಲ್ಲ, ಅವರಿಗೆ ಮಗನ ಮೇಲೆಯೇ ಚಿಂತೆ’ ಎಂದು ಜಗತಿ ಹೇಳಿದಳು. ಜಗತಿ ಮಾತಿನಿಂದ ರಿಷಿಗೆ ತಂದೆಯ ಆರೋಗ್ಯದ ಬಗ್ಗೆ ಚಿಂತೆ ಹೆಚ್ಚಾಯಿತು. ‘ನೀವಿದ್ದೀರಲ್ಲಾ ಮೇಡಮ್, ಮಾತ್ರೆಗಳನ್ನು ನೀವೇ ಕೊಡಬಹುದಲ್ಲ’ ಎಂದು ರಿಷಿ ಹೇಳಿದ. ಆದರೆ ತನ್ನ ಮಾತು ಕೇಳುತ್ತಿಲ್ಲ, ಮನೆಬಿಟ್ಟು ಬಂದಮೇಲೆ ಮಗನ ಮೇಲೆಯೇ ಹೆಚ್ಚು ಯೋಚನೆಯಾಗಿದೆ ಎಂದು ಜಗತಿ ವಿವರಿಸಿದಳು. ‘ಮಹೇಂದ್ರನ ಆರೋಗ್ಯವನ್ನು ನೀವೇ ಸರಿ ಮಾಡಬೇಕು, ಅವರು ಸಂತೋಷವಾಗಿ ಇರುವಂತೆ ನೋಡಿಕೊಳ್ಳಬೇಕು’ ಎಂದು ರಿಷಿ ಮುಂದೆ ಕೈ ಮುಗಿದು ಕೇಳಿಕೊಂಡಳು ಜಗತಿ.

ಜಗತಿ ಮಾತಿನಿಂದ ಗಾಬರಿಯಾದ ರಿಷಿ ತಂದೆಯನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋದ. ಜನರಲ್ ಚೆಕಪ್ ಮಾಡಿಸಿದ. ಅಲ್ಲದೇ ಅಪ್ಪನಿಗೆ ಆರೋಗ್ಯ ಚೆನ್ನಾಗಿ ನೋಡಿಕೊಳ್ಳುವಂತೆ ಕೇಳಿಕೊಂಡ. ಆಸ್ಪತ್ರೆಯಿಂದ ಮತ್ತೆ ಜಗತಿ ಮನೆಗೆ ತಂದೆಯನ್ನು ಕರೆದುಕೊಂಡು ಬಂದು ಬಿಟ್ಟ. ಮಹೇಂದ್ರ ಮನೆಯೊಳಗೆ ಬಾ ಎಂದು ರಿಷಿನ ಕರೆದ. ಆದರೆ ರಿಷಿ, ‘ನಾನಲ್ಲ ಬರೋದು ನೀವು ಬರಬೇಕು’ ಎಂದು ಹೇಳಿದ. ಮಹೇಂದ್ರ ಏನೂ ಮಾತನಾಡದೆ ಜಗತಿ ಜೊತೆ ಮನೆಯೊಳಗೆ ಹೋದ. ಆದರೆ ಗೌತಮ್, ‘ಅಂಕಲ್‌ನ ನಾನು ಮನೆಯೊಳಗೆ ಬಿಟ್ಟು ಬರುತ್ತೀನಿ’ ಎಂದು ಹೊರಟ. ರಿಷಿ ತಡೆದರೂ ಕೇಳದೆ ಮನೆಯೊಳಗೆ ಹೋದ.

ರಿಷಿ ವಾಪಸ್​​ ಮನೆಗೆ ಬರುತ್ತಿದ್ದಂತೆಯೇ ಯಾಕೆ ಲೇಟ್ ಆಯಿತು ಎಂದು ದೇಯವಾನಿ ಕೇಳಿದಳು. ರಿಷಿ ಏನ್ ಹೇಳೋದು ಅಂತ ಯೋಚಿಸುತ್ತಿರುವಾಗಲೇ ಗೌತಮ್, ‘ಮಹೇಂದ್ರ ಅಂಕಲ್‌ನ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ವಿ’ ಎಂದು ಹೇಳಿದ. ಕೋಪಗೊಂಡ ದೇಯವಾನಿ ‘ಮನೆ ಬಿಟ್ಟು ಹೋದವನ ಮೇಲೆ ಯಾಕಿಷ್ಟು ಕಾಳಜಿ, ಅವನನ್ನು ಕರೆದುಕೊಂಡು ಹೋಗಲು ಜಗತಿ ಇದ್ದಾಳೆ’ ಎಂದು ರೇಗಿದಳು. ದೊಡ್ಡಮ್ಮನ ಕೋಪ ನೋಡಿ ಈ ಟಾಪಿಕ್ ಇಲ್ಲಿಗೆ ಬಿಡಿ ಎಂದು ಹೇಳಿ ದೇವಯಾನಿಯ ಬಾಯಿ ಮುಚ್ಚಿಸಿದ ರಿಷಿ. ಮಗನಿಂದ ದೂರ ಇರುವ ಮಹೇಂದ್ರನಿಗೆ ರಿಷಿದೇ ಚಿಂತೆ. ಇತ್ತ ರಿಷಿಗೂ ಅಪ್ಪನದ್ದೇ ಯೋಚನೆ. ಮಗನಿಗಾಗಿ ಮಹೇಂದ್ರ ಮನೆಗೆ ವಾಪಸ್ ಹೋಗುತ್ತಾನಾ, ಮಹೇಂದ್ರನನ್ನು ಮಗನ ಬಳಿ ಕಳುಹಿಸಲು ಪ್ಲಾನ್ ಮಾಡುತ್ತಿರುವ ಜಗತಿಗೆ ವಸು ಸಹಾಯ ಮಾಡುತ್ತಾಳಾ? ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:54 am, Fri, 11 November 22