‘ಬಿಗ್ ಬಾಸ್​ನಲ್ಲಿ ದೆವ್ವದ ಕಾಟ? ಆ ಒಂದು ಘಟನೆಗೆ ಬೆಚ್ಚಿಬಿದ್ದ ಮನೆ ಮಂದಿ

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಒಂದಷ್ಟು ವಿಚಿತ್ರ ಘಟನೆಗಳು ನಡೆದಿವೆ. ಇದು ಮನೆ ಮಂದಿಯ ಆತಂಕಕ್ಕೆ ಕಾರಣ ಆಗಿದೆ. ದೊಡ್ಮನೆಯಲ್ಲಿ ಇದ್ದಕ್ಕಿದ್ದಂತೆ ಕೆಲವು ಟೀ ಕಪ್​ಗಳು ಒಡೆದು ಹೋಗುತ್ತಿವೆ. ಮೇಲೆ ಇಟ್ಟಂಥ ಕಪ್​ಗಳು ಏಕಾಏಕಿ ನೆಲಕ್ಕೆ ಬೀಳುತ್ತಿವೆ.

‘ಬಿಗ್ ಬಾಸ್​ನಲ್ಲಿ ದೆವ್ವದ ಕಾಟ? ಆ ಒಂದು ಘಟನೆಗೆ ಬೆಚ್ಚಿಬಿದ್ದ ಮನೆ ಮಂದಿ
ಬಿಗ್ ಬಾಸ್

Updated on: Oct 10, 2024 | 7:27 AM

ದೆವ್ವ ಇದೆ ಅಥವಾ ಇಲ್ಲ ಎನ್ನುವ ಬಗ್ಗೆ ಚರ್ಚೆಗಳು ಆಗುತ್ತಲೇ ಇರುತ್ತವೆ. ಕೆಲವರು ದೆವ್ವಗಳು ಇವೆ ಎಂದು ನಂಬಿದರೆ ಇನ್ನೂ ಕೆಲವರು ದೆವ್ವ ಇಲ್ಲ ಎಂದು ವಾದಿಸುತ್ತಾರೆ. ಈಗ ಬಿಗ್ ಬಾಸ್ ಮನೆಯಲ್ಲಿ ದೆವ್ವ ಇದೆಯೇ ಎನ್ನುವ ಪ್ರಶ್ನೆ ಮೂಡಿದೆ. ಇದಕ್ಕೆ ಕಾರಣ ಆಗುವಂಥ ಘಟನೆಗಳು ಕೂಡ ನಡೆಯುತ್ತಿವೆ. ಅಷ್ಟಕ್ಕೂ ಅಲ್ಲಿ ಆಗಿದ್ದು ಏನು? ಮನೆ ಮಂದಿಗೆ ಭಯ ಮೂಡಲು ಕಾರಣ ಏನು ಎಂಬ ಪ್ರಶ್ನೆ ಎದುರಾಗಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಒಂದಷ್ಟು ವಿಚಿತ್ರ ಘಟನೆಗಳು ನಡೆದಿವೆ. ಇದು ಮನೆ ಮಂದಿಯ ಆತಂಕಕ್ಕೆ ಕಾರಣ ಆಗಿದೆ. ದೊಡ್ಮನೆಯಲ್ಲಿ ಇದ್ದಕ್ಕಿದ್ದಂತೆ ಕೆಲವು ಟೀ ಕಪ್​ಗಳು ಒಡೆದು ಹೋಗುತ್ತಿವೆ. ಮೇಲೆ ಇಟ್ಟಂಥ ಕಪ್​ಗಳು ಏಕಾಏಕಿ ನೆಲಕ್ಕೆ ಬೀಳುತ್ತಿವೆ.

ಅಕ್ಟೋಬರ್ 9ರ ಎಪಿಸೋಡ್​ನಲ್ಲೂ ಇದೇ ರೀತಿ ಆಗಿದೆ. ಮೇಲೆ ಇಟ್ಟಂಥ ಕಪ್ ನೆಲಕ್ಕೆ ಬಿದ್ದು ಒಡೆದು ಹೋಗಿದೆ. ಇದರಿಂದ ಮನೆ ಮಂದಿ ಆತಂಕಗೊಂಡಿದ್ದಾರೆ. ‘ಮನೆಯಲ್ಲಿ ದೆವ್ವ ಇದೆಯೇನೋ ಅನಿಸುತ್ತಿದೆ’ ಎಂದು ಕೆಲವರು ಹೇಳಿದ್ದಾರೆ. ಇದನ್ನು ಕೇಳುತ್ತಿದ್ದಂತೆ ಹಂಸ ಅವರು ಆತಂಗೊಂಡರು. ‘ಹಾಗೆಲ್ಲ ಹೇಳಬೇಡಿ ಭಯ ಆಗುತ್ತದೆ’ ಎಂದರು.

ಇದನ್ನೂ ಓದಿ: ಜಗದೀಶ್ ಅಲ್ಲ, ಬಿಗ್ ಬಾಸ್​​ನಲ್ಲಿರೋ ಈ ಸ್ಪರ್ಧಿಯ ವಿರುದ್ಧ ವೀಕ್ಷಕರಿಗೆ ಎದ್ದಿದೆ ಅಸಮಾಧಾನ 

ಇದಾದ ಬಳಿಕ ಅಲ್ಲಿದ್ದವರು, ‘ವಾತಾವರಣದಲ್ಲಿ ಪ್ಲಸ್ ಹಾಗೂ ಮೈನಸ್ ಎರಡೂ ಇರುತ್ತದೆ’ ಎಂದರು. ಇದರಿಂದ ಹಂಸಾಗೆ ಮತ್ತಷ್ಟು ಭಯ ಆಯಿತು. ಇದನ್ನು ಕೇಳಿ ಮನೆಯಲ್ಲಿ ಆತಂಕದ ವಾತಾವರಣ ಮೂಡಿತು. ಅಲ್ಲಿಯೇ ಇದ್ದ ಮಂಜು ಅವರು ಆ ರೀತಿ ಏನೂ ಇಲ್ಲ ಎಂದು ಸಮಾಧಾನ ಮಾಡಿದರು. ಕಪ್ ಒಡೆಯಲು ಕಾರಣ ಏನು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಕಟ್ಟೆಯ ಅಂಚಲ್ಲಿ ಇಟ್ಟ ಕಾರಣಕ್ಕೂ ಕಪ್ ಒಡೆದಿರಬಹುದು ಎಂದು ಕೆಲವರು ಊಹಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us