ಜಗದೀಶ್ ಅಲ್ಲ, ಬಿಗ್ ಬಾಸ್ನಲ್ಲಿರೋ ಈ ಸ್ಪರ್ಧಿಯ ವಿರುದ್ಧ ವೀಕ್ಷಕರಿಗೆ ಎದ್ದಿದೆ ಅಸಮಾಧಾನ
ತುಕಾಲಿ ಸಂತೋಷ್ ಪತ್ನಿ ಎಂಬ ಕಾರಣಕ್ಕೆ ಮಾನಸಾ ಅವರಿಗೆ ‘ಬಿಗ್ ಬಾಸ್’ನಲ್ಲಿ ಅವಕಾಶ ಸಿಕ್ಕಿದೆ. ಅವರು ಎಲ್ಲಾ ಸ್ಪರ್ಧಿಗಳ ಜೊತೆ ಬೆರೆಯುವ ಪ್ರಯತ್ನವನ್ನು ಅಷ್ಟಾಗಿ ಮಾಡುತ್ತಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ದೊಡ್ಮನೆಗೆ ಅವರ ಕೊಡುಗೆ ಹೆಚ್ಚೇನು ಇಲ್ಲ ಎಂಬ ಅಭಿಪ್ರಾಯ ವೀಕ್ಷಕರಿಂದ ವ್ಯಕ್ತವಾಗಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಜಗದೀಶ್ ಅವರು ಸಾಕಷ್ಟು ಸಂಚಲನ ಸೃಷ್ಟಿಸಿದ್ದಾರೆ. ಅವರು ಎಲ್ಲರಿಂದ ಟೀಕೆಗೆ ಗುರಿಯಾಗಿದ್ದಾರೆ. ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಈ ವಾರ ಅವರು ಸ್ವಲ್ಪ ಬದಲಾಗಿದ್ದಾರೆ ಎನ್ನಬಹುದು. ಕೆಲವು ಗಂಭೀರ ವಿಚಾರಗಳ ಜೊತೆಗೆ ಅವರು ಹಾಸ್ಯವನ್ನು ಮಾಡುತ್ತಿದ್ದಾರೆ. ಈ ವಾರ ಅವರಿಗಿಂತ ಮತ್ತೋರ್ವ ಸ್ಪರ್ಧಿಯ ಬಗ್ಗೆ ಅಸಮಾಧಾನ ಮೂಡಿದೆ. ಅಷ್ಟಕ್ಕೂ ಅವರು ಯಾವ ಸ್ಪರ್ಧಿ? ಅವರ ವಿರುದ್ಧ ಆಕ್ರೋಶ ವ್ಯಕ್ತವಾಗಲು ಕಾರಣ ಏನು? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ತುಕಾಲಿ ಸಂತೋಷ್ ಪತ್ನಿ ಎಂಬ ಕಾರಣಕ್ಕೆ ಮಾನಸಾ ಅವರಿಗೆ ‘ಬಿಗ್ ಬಾಸ್’ನಲ್ಲಿ ಅವಕಾಶ ಸಿಕ್ಕಿದೆ. ಅವರು ಎಲ್ಲಾ ಸ್ಪರ್ಧಿಗಳ ಜೊತೆ ಬೆರೆಯುವ ಪ್ರಯತ್ನವನ್ನು ಅಷ್ಟಾಗಿ ಮಾಡುತ್ತಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ದೊಡ್ಮನೆಗೆ ಅವರ ಕೊಡುಗೆ ಹೆಚ್ಚೇನು ಇಲ್ಲ ಎಂಬ ಅಭಿಪ್ರಾಯ ವೀಕ್ಷಕರಿಂದ ವ್ಯಕ್ತವಾಗಿದೆ. ಈ ಕಾರಣದಿಂದಲೇ ಇವರ ಬಗ್ಗೆ ಎಲ್ಲರೂ ಧ್ವನಿ ಎತ್ತಿದ್ದಾರೆ.
ಮಾನಸಾ ರೂಲ್ಸ್ ಬ್ರೇಕ್ ಮಾಡಿದ್ದಾರೆ. ಅವರು ಬ್ಲೈಂಡ್ಸ್ ಡೌನ್ ಆದಾಗ ಅದರ ಒಳಗೆ ಇಣುಕಿ ನೋಡಿದ್ದರು. ಹೀಗೆ ಮಾಡಬಾರದು ಅನ್ನೋದು ಬಿಗ್ ಬಾಸ್ನ ಮೂಲ ನಿಯಮಗಳಲ್ಲಿ ಒಂದು. ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ಆದರೆ, ಇದನ್ನು ಮಾನಸಾ ಪಾಲಿಸಿಲ್ಲ. ಈ ಕಾರಣಕ್ಕೆ ಇಡೀ ಮನೆಗೆ ಶಿಕ್ಷೆ ಆಗಿದೆ. ಎಲ್ಲರೂ ನಾಮಿನೇಟ್ ಆಗಿದ್ದಾರೆ. ಇದರಿಂದ ಮಾನಸಾ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ‘ಇಲ್ಲೇ ಪ್ಯಾಂಟ್ ಬಿಚ್ಚಲಾ, ಚೆಡ್ಡಿ ಬಿಚ್ಚಲಾ ಎಂದು ಕೇಳ್ತಾರೆ’; ಜಗದೀಶ್ ಬಗ್ಗೆ ಹಂಸಾ ಅಸಮಾಧಾನ
ಕಲರ್ಸ್ ಕನ್ನಡ ಹಂಚಿಕೊಂಡಿರೋ ಪ್ರೋಮೋದಲ್ಲಿ ಫ್ಯಾನ್ಸ್ ನಾನಾ ರೀತಿಯ ಕಮೆಂಟ್ಗಳನ್ನು ಮಾಡುತ್ತಿದ್ದಾರೆ. ‘ಈ ವಾರ ಮಾನಸಾ ಹೋಗ್ಬೇಕು ಅನ್ನೋರು ಲೈಕ್ ಮಾಡಿ’ ಎಂದು ಕೆಲವರು ಬರೆದಕೊಂಡಿದ್ದಾರೆ. ‘ಮಾನಸಾ ಕೇವಲ ತಿನ್ನೋದಕ್ಕೆ ಬಿಗ್ ಬಾಸ್ ಮನೇಲಿ ಇದ್ದಾಳೆ ಅನ್ನೋರು ಲೈಕ್ ಮಾಡಿ’ ಎಂದು ಕೆಲವರು ಬರೆದುಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.