‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ತ್ರಿವಿಕ್ರಂ ಹಾಗೂ ಭವ್ಯಾ ಮಧ್ಯೆ ಒಳ್ಳೆಯ ಗೆಳೆತನ ಇದೆ. ಈ ಗೆಳೆತನ ಇತ್ತೀಚೆಗೆ ದೂರಾದಂತೆ ಕಂಡರೂ ಮತ್ತೆ ಇಬ್ಬರೂ ಒಂದಾಗುತ್ತಿದ್ದಾರೆ. ಇಷ್ಟು ದಿನ ಭವ್ಯಾ ಗೌಡ ತಪ್ಪುಗಳನ್ನು ತ್ರಿವಿಕ್ರಂ ಅವರು ಎತ್ತಿ ಹೇಳುವ ಪ್ರಯತ್ನ ಮಾಡುತ್ತಾ ಇರಲಿಲ್ಲ. ಆದರೆ, ಈಗ ಅವರು ಓಪನ್ ಆಗಿ ತ್ರಿವಿಕ್ರಂ ತಪ್ಪುಗಳನ್ನು ಹೇಳುವ ಪ್ರಯತ್ನ ಮಾಡುತ್ತಿದ್ದಾರೆ. ಈಗ ಅವರಿಗೆ ಕಾಣಿಸಿದ ದೊಡ್ಡ ತಪ್ಪೊಂದು ಹೇಳಿದ್ದಾರೆ.
ಟಾಸ್ಕ್ ಆಡುವಾಗ ಭವ್ಯಾ ಗೌಡ ಅವರ ಮೇಲೆ ಅಟ್ಯಾಕ್ ಮಾಡಲು ಕೆಲವರು ಬಂದರು. ಆಗ ಅವರು ಹೊಟ್ಟೆನೋವಿದೆ ಎಂದು ರಾಗ ತೆಗೆದರು. ಇದಾದ ಮರುಕ್ಷಣವೇ ಗೌತಮಿ ಮೇಲೆ ಭವ್ಯಾ ಅವರೇ ಅಟ್ಯಾಕ್ ಮಾಡಲು ಹೋದರು. ಆಗ ಗೌತಮಿಗೆ ಸಿಟ್ಟು ಬಂತು. ‘ಈಗ ಹೊಟ್ಟೆ ನೋವು ಎಲ್ಲೋಯ್ತು’ ಎಂದು ಕೇಳಿದರು. ಭವ್ಯಾ ಅವರು ನಾಟಕ ಮಾಡುತ್ತಿದ್ದಾರೆ ಎಂದು ಅನೇಕರಿಗೆ ಅನಿಸಿದೆ. ಈ ವಿಚಾರವಾಗಿ ತ್ರಿವಿಕ್ರಂ ಹಾಗೂ ಭವ್ಯಾ ಮಾತುಕತೆ ನಡೆಸಿದ್ದಾರೆ.
‘ನನಗೆ ಆಟದಿಂದಾಗಿ ಫ್ರಸ್ಟ್ರೇಷನ್ ಆಯಿತು. ಏನು ಮಾಡುತ್ತಿದೆ ಎಂದೇ ಗೊತ್ತಾಗುತ್ತಾ ಇರಲಿಲ್ಲ. ಡಾಕ್ಟರ್ ಬಳಿ ಹೋದಾಗ ಅವರು ಎಲ್ಲವೂ ಚೆನ್ನಾಗಿಯೇ ಇದೆ ಎಂದರು. ನನಗೇನು ಆಗಿಲ್ಲ ಎಂದು ಹೇಳಿ ನಾನು ಮರಳಿದೆ’ ಎಂದು ತ್ರಿವಿಕ್ರಂ ಬಳಿ ಭವ್ಯಾ ಹೇಳಿಕೊಂಡರು. ‘ನೀನು ಮಾಡಿದ್ದು ನಾಟಕೀಯವಾಗಿ ಕಾಣಿಸಿತು. ಅದು ನಿನ್ನ ಭಾವನೆ. ಆದರೆ, ಎಲ್ಲರೂ ಆ ಬಗ್ಗೆ ಮಾತನಾಡಿದ್ದಾರೆ’ ಎಂದು ಭವ್ಯಾಗೆ ತ್ರಿವಿಕ್ರಂ ಹೇಳಿದರು. ಫ್ರಸ್ಟ್ರೇಷನ್ನಿಂದಲೇ ಈ ರೀತಿ ಆಯಿತು ಎಂದು ಭವ್ಯಾ ಅಭಿಪ್ರಾಯಪಟ್ಟರು.
ಇದನ್ನೂ ಓದಿ: ತ್ರಿವಿಕ್ರಮ್ ಡೇಂಜರ್ ಎಂದ ಭವ್ಯಾ ಗೌಡ; ಫಿನಾಲೆ ಹತ್ತಿರ ಬಂದಾಗ ರಾಧೆಗೆ ಬೇಡವಾದ ಕೃಷ್ಣ
ಸದ್ಯ ಭವ್ಯಾ ಗೌಡ ಅವರು ಈ ವಾರ ನಾಮಿನೇಟ್ ಆಗಿದ್ದಾರೆ. ಇವರ ಜೊತೆ ತ್ರಿವಿಕ್ರಂ, ಚೈತ್ರಾ, ಮೋಕ್ಷಿತಾ, ಧನರಾಜ್ ಕೂಡ ನಾಮಿನೇಷನ್ ಲಿಸ್ಟ್ನಲ್ಲಿ ಇದ್ದಾರೆ. ವೀಕೆಂಡ್ನಲ್ಲಿ ಒಬ್ಬರು ದೊಡ್ಮನೆಯಿಂದ ಹೊರ ಹೋಗುವುದು ಖಚಿತ. ಅದು ಯಾರು ಎಂಬುದು ವೀಕೆಂಡ್ನಲ್ಲಿ ತಿಳಿಯಲಿದೆ. ಸದ್ಯ ದೊಡ್ಮನೆಯಲ್ಲಿ ಫಿನಾಲೆ ಟಿಕೆಟ್ ಪಡೆಯಲು ಕಸರತ್ತು ನಡೆಯುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.