ಈ ವಾರ ಯಾರಿಗೆ ತೆರೆಯಲಿದೆ ಬಿಗ್ ಬಾಸ್ ಬಾಗಿಲು? ಔಟ್ ಆಗೋ ಸ್ಪರ್ಧಿ ಇವರೇನಾ?
ಬಿಗ್ ಬಾಸ್ ಕನ್ನಡ ಸೀಸನ್ನಲ್ಲಿ ಇನ್ನು 20ಕ್ಕೂ ಕಡಿಮೆ ದಿನಗಳು ಉಳಿದಿವೆ. ಸ್ಪರ್ಧಿಗಳ ಮಧ್ಯೆ ಕಾಂಪಿಟೇಷನ್ ಜೋರಾಗಿದೆ. ಯಾವ ಸ್ಪರ್ಧಿ ಗೆಲ್ಲುತ್ತಾರೆ, ಯಾವ ಸ್ಪರ್ಧಿ ಮನೆಗೆ ಹೋಗುತ್ತಾರೆ ಎನ್ನುವ ಚರ್ಚೆ ಜೋರಾಗಿದೆ. ಈ ವಾರ ತ್ರಿವಿಕ್ರಮ್, ಭವ್ಯಾ ಗೌಡ, ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ ಹಾಗೂ ಧನರಾಜ್ ನಾಮಿನೇಟ್ ಆಗಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಇನ್ನು ಮೂರು ವಾರ ಮಾತ್ರ ಬಾಕಿ ಉಳಿದಿದೆ. ಈಗಾಗಲೇ ಬಿಗ್ ಬಾಸ್ ಸ್ಪರ್ಧಿಗಳು 100 ದಿನವನ್ನು ಬಿಗ್ ಬಾಸ್ ಮನೆಯಲ್ಲಿ ಕಳೆದಿದ್ದಾರೆ. ಈ ವಾರ ಪ್ರಮುಖರೇ ನಾಮಿನೇಟ್ ಆಗಿದ್ದು, ದೊಡ್ಮನೆಯಿಂದ ಹೊರ ಹೋಗುವವರು ಯಾರು ಎನ್ನುವ ಪ್ರಶ್ನೆ ಮೂಡಿದೆ. ಹಾಗಾದರೆ ಈ ವಾರ ನಾಮಿನೇಟ್ ಆದವರು ಯಾರು? ವೀಕ್ ಎನಿಸಿಕೊಂಡ ಸ್ಪರ್ಧಿ ಯಾರು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಈ ವಾರ ತ್ರಿವಿಕ್ರಮ್, ಭವ್ಯಾ ಗೌಡ, ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ ಹಾಗೂ ಧನರಾಜ್ ನಾಮಿನೇಟ್ ಆಗಿದ್ದಾರೆ. ಇವರಿಗೆ ಫಿನಾಲೆ ಟಿಕೆಟ್ ಕೂಡ ಕೈ ತಪ್ಪಿದೆ. ಈ ವಾರ ಟಾಸ್ಕ್ಗಳನ್ನು ನೀಡಲಾಗಿದ್ದು, ಇದರಲ್ಲಿ ಉತ್ತಮವಾಗಿ ಆಟ ಆಡಿ ಸ್ಪರ್ಧಿಗಳು ತಮ್ಮನ್ನು ತಾವು ಸಾಬೀತು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ.
ಈ ವಾರ ನಾಮಿನೇಟ್ ಆದ ಸ್ಪರ್ಧಿಗಳಲ್ಲಿ ತ್ರಿವಿಕ್ರಮ್ ಅವರು ಉತ್ತಮವಾಗಿ ಆಟ ಆಡುತ್ತಿದ್ದಾರೆ. ಭವ್ಯಾ ಗೌಡ ಅವರು ಕೂಡ ಒಳ್ಳೆಯ ಆಟ ಆಡಿ ಭೇಷ್ ಎನಿಸಿಕೊಂಡಿದ್ದಾರೆ. ಅವರು ಮೂರು ಬಾರಿ ಕ್ಯಾಪ್ಟನ್ ಕೂಡ ಆಗಿದ್ದಾರೆ. ಇನ್ನು, ಧನರಾಜ್ ಅವರು ಇತ್ತೀಚೆಗೆ ಆ್ಯಕ್ಟೀವ್ ಆಗಿದ್ದು, ಅವರು ತಮ್ಮನ್ನು ತಾವು ಬದಲಾಯಿಸಿಕೊಂಡಿದ್ದಾರೆ. ಅವರ ಕಡೆಯಿಂದ ಮನೋರಂಜನೆ ನೀಡುವ ಕೆಲಸ ಆಗುತ್ತಿದೆ.
ಕೊನೆಯಲ್ಲಿ ಉಳಿದುಕೊಂಡಿದ್ದು ಚೈತ್ರಾ ಕುಂದಾಪುರ ಹಾಗೂ ಮೋಕ್ಷಿತಾ. ಇಬ್ಬರಿಗೂ ಈ ವಾರ ಪ್ರಮುಖ ಎನಿಸಿಕೊಳ್ಳಲಿದೆ. ಇಬ್ಬರೂ ಅನೇಕ ಬಾರಿ ನಾಮಿನೇಷನ್ನಲ್ಲಿ ಕೊನೆಯವರೆಗೆ ಇದ್ದು ಸೇವ್ ಆಗಿದ್ದಾರೆ. ಇವರ ಪೈಕಿ ಒಬ್ಬರು ಮನೆಯಿಂದ ಹೊರ ಹೋಗಬಹುದು ಎಂದು ಹೇಳಲಾಗುತ್ತಿದೆ. ಈ ವಾರ ಯಾರು ಉತ್ತಮವಾಗಿ ಆಡುತ್ತಾರೆ ಅವರಿಗೆ ಹೆಚ್ಚಿನ ವೋಟ್ ಬಿದ್ದು ಸೇವ್ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ: ‘ಆಗಿದ್ದು ಆಗಿ ಹೋಯ್ತು, ಅದನ್ನು ಬಿಟ್ಟುಬಿಡು’; ಹಳೆಯ ಘಟನೆಯ ಬಗ್ಗೆ ಮೋಕ್ಷಿತಾಗೆ ಧೈರ್ಯ ತುಂಬಿದ ತಾಯಿ
ಮೋಕ್ಷಿತಾ ಅವರು ನೇರವಾಗಿ ಆಟ ಆಡಲು ಪ್ರಾಮುಖ್ಯತೆ ನೀಡುತ್ತಾರೆ. ಅವರು ಆಟದಲ್ಲಿ ತಪ್ಪು ದಾರಿ ಹಿಡಿಯುವುದಿಲ್ಲ ಎಂದಿದ್ದಾರೆ. ‘ಈ ರೀತಿ ಆಡಿದರೆ ಕಷ್ಟ ಇದೆ. ನೀವು ಆಟದ ವೈಖರಿ ಬದಲಾಯಿಸಿಕೊಳ್ಳಬೇಕು’ ಎಂದು ಹನುಮಂತು ಅವರು ಬುದ್ಧಿವಾದ ಹೇಳಿದ್ದಾರೆ. ಇನ್ನು, ಚೈತ್ರಾ ಕುಂದಾಪುರ ಅವರು ಆಟದಲ್ಲಿ ಅಷ್ಟಾಗಿ ಆ್ಯಕ್ಟೀವ್ ಆಗಿಲ್ಲ. ಅವರು ಉತ್ತಮವಾಗಿ ಆಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.