ಧಾರಾವಾಹಿ: ಜೊತೆ ಜೊತೆಯಲಿ
ವಾಹಿನಿ: ಜೀ ಕನ್ನಡ
ನಿರ್ದೇಶನ: ಆರೂರು ಜಗದೀಶ
ಕಲಾವಿದರು: ಹರೀಶ್ ರಾಜ್, ಮೇಘಾ ಶೆಟ್ಟಿ, ಮಾನಸ ಮನೋಹರ್ ಮೊದಲಾದವರು
ಸಮಯ: ರಾತ್ರಿ: 9.30
ಹಿಂದಿನ ಎಪಿಸೋಡ್ನಲ್ಲಿ ಏನಾಗಿತ್ತು?
ಸಂಜು ಯಾರು, ಆತನ ಹಿನ್ನೆಲೆ ಏನು ಎಂಬ ವಿಚಾರವನ್ನು ರಿವೀಲ್ ಮಾಡಲು ಝೇಂಡೆ ಕಿಡ್ನ್ಯಾಪ್ ಮಾಡಿಸಿದ್ದ. ಸಂಜುನ ಕಿಡ್ನ್ಯಾಪ್ ಮಾಡಿ ಆತನಿಗೆ ನಾಲ್ಕು ಏಟು ಹಾಕಿದ್ದ. ಆದರೂ ಸಂಜುಗೆ ತಾನು ಯಾರು ಎಂಬ ವಿಚಾರ ಗೊತ್ತಾಗಲೇ ಇಲ್ಲ. ಸಂಜು ಸದ್ಯ ಅನು ಮನೆಗೆ ಬಂದು ಕೂತಿದ್ದಾನೆ. ಆತನಿಗೆ ತಾನು ಯಾರು ಎಂಬ ಪ್ರಶ್ನೆ ಮೂಡಿದೆ.
ಸಂಜುಗೆ ಶುರುವಾಗಿದೆ ಆತಂಕ:
ತಾನು ಯಾರು ಎಂಬ ಪ್ರಶ್ನೆ ಸಂಜುಗೆ ಬಲವಾಗಿ ಕಾಡಲು ಶುರುವಾಗಿದೆ. ಇದಕ್ಕೆ ಕಾರಣ ಝೇಂಡೆ. ಆತನನ್ನು ಕಿಡ್ನ್ಯಾಪ್ ಮಾಡಿಕೊಂಡು ಹೋಗಿದ್ದು, ನಾಲ್ಕು ಏಟು ಹೊಡೆದಿದ್ದು ತೀವ್ರವಾಗಿ ಭಯ ಹುಟ್ಟಿಸಿದೆ. ಈ ಬಗ್ಗೆ ಆತಂಕಕ್ಕೆ ಒಳಗಾಗಿದ್ದಾನೆ. ಝೇಂಡೆಗೆ ಸಂಜು ಬಗ್ಗೆ ಹುಟ್ಟಿದ ಅನುಮಾನ ದೊಡ್ಡದು. ಅಲ್ಲದೆ, ಆರ್ಯವರ್ಧನ್ನ ಮೊಬೈಲ್ ಸಂಖ್ಯೆಯನ್ನು ಆತ ನೀಡಿದ್ದ. ಈ ಎಲ್ಲಾ ಕಾರಣಕ್ಕೆ ಸಂಜು ಟಾರ್ಗೆಟ್ ಆಗಿದ್ದಾನೆ.
ತನ್ನ ಹಿನ್ನೆಲೆ ಏನು ಎಂಬುದು ಗೊತ್ತಿಲ್ಲದೆ ಸಂಜು ಒದ್ದಾಡುತ್ತಿದ್ದಾನೆ. ತಾನು ಯಾರು? ತನ್ನ ಹಿನ್ನೆಲೆ ಏನು ಎಂಬುದನ್ನು ತಿಳಿದುಕೊಳ್ಳಲೇ ಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾನೆ. ಜತೆಗೆ ಇವರು ಹೇಳುತ್ತಿರುವ ವ್ಯಕ್ತಿ ನಾನಲ್ಲ ಎಂದೂ ಆತನಿಗೆ ಅನಿಸುತ್ತಿದೆ. ಅಸಲಿ ವಿಚಾರ ಆತನಿಗೆ ಗೊತ್ತಾದರೆ ಯಾವ ರೀತಿಯಲ್ಲಿ ರಿಯಾಕ್ಟ್ ಮಾಡುತ್ತಾನೆ ಎಂಬುದನ್ನು ಕಾದು ನೋಡಬೇಕಿದೆ.
ಝೇಂಡೆ-ಮೀರಾ ಮಾತುಕತೆ:
ಝೇಂಡೆಯ ಪಾರ್ಟಿಗೆ ಮೀರಾ ಸೇರುವ ಸೂಚನೆ ನೀಡಿದ್ದಾಳೆ. ಆರ್ಯವರ್ಧನ್ ಸಾಯೋಕೆ ಝೇಂಡೆಯೇ ಕಾರಣ ಎಂಬುದು ಅನು ಮನೆಯವರ ವಾದ. ಆರ್ಯವರ್ಧನ್ ಜತೆ ಝೇಂಡೆ ಇದ್ದಿದ್ದರೆ ಹೀಗಾಗುತ್ತಿರಲಿಲ್ಲ ಎಂದು ಅನು, ಶಾರದಾ ದೇವಿ ಅಭಿಪ್ರಾಯಪಟ್ಟಿದ್ದಾರೆ. ಈ ಕಾರಣಕ್ಕೆ ಆತನನ್ನು ಕಂಪೆನಿಯಿಂದ, ಮನೆಯಿಂದ ಹೊರಗೆ ಇಡಲಾಗಿದೆ. ಇದು ಝೇಂಡೆಗೆ ಬೇಸರ ಮೂಡಿಸಿದೆ. ಈ ಕಾರಣಕ್ಕೆ ಆತ ತನಿಖೆಗೆ ಇಳಿದಿದ್ದಾನೆ.
ಝೇಂಡೆ ಮೊದಲು ಆಸ್ಪತ್ರೆಗೆ ಹೋಗಿ ವಿಚಾರಿಸಿದಾಗ ಸಂಜು (ವಿಶ್ವ) ಮೃತಪಟ್ಟಿರುವ ವಿಚಾರವನ್ನು ಖಚಿತ ಪಡಿಸಿದ್ದರು. ಮನೆಗೆ ಬಂದು ನೋಡಿದಾಗ ಆತನ ಫೋಟೋಗೆ ಹೂವನ್ನು ಹಾಕಲಾಗಿತ್ತು. ಇದರಿಂದ ಝೇಂಡೆ ಅನುಮಾನ ಹೆಚ್ಚಿತ್ತು. ಇಲ್ಲೇನೋ ಸಂಚಿದೆ ಎಂಬ ವಿಚಾರದಲ್ಲಿ ಆತನಿಗೆ ಸಾಕಷ್ಟು ಅನುಮಾನ ಕಾಡುತ್ತಲೇ ಇತ್ತು. ಹೀಗಾಗಿ ಸಂಜುನ ಕಿಡ್ನ್ಯಾಪ್ ಮಾಡಿಸಿದ್ದಾನೆ.
ಇತ್ತ ಮೀರಾ ಹೆಗ್ಡೆಗೆ ಕಂಪೆನಿಯಲ್ಲಿ ಸರಿಯಾಗಿ ಗೌರವ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಆಕೆ ಝೇಂಡೆ ಪಾರ್ಟಿ ಸೇರಲು ರೆಡಿ ಆಗಿದ್ದಾಳೆ. ಝೇಂಡೆಯನ್ನು ಭೇಟಿ ಮಾಡಿ ಆಕೆ ಸಂಜು ಬಗ್ಗೆ ವಿಚಾರಿಸಿದ್ದಾಳೆ. ಸಂಜು ಬಗ್ಗೆ ಗೊತ್ತಿರುವ ರಹಸ್ಯಗಳನ್ನು ಝೇಂಡೆ ರಿವೀಲ್ ಮಾಡಿದ್ದಾನೆ. ಇದನ್ನು ಕೇಳಿ ಮೀರಾ ಶಾಕ್ ಆಗಿದ್ದಾಳೆ.
ಸುಳ್ಳು ಹೇಳಿದ ಸಂಜು-ಅನು:
ಸಂಜುನ ಕಿಡ್ಯ್ನಾಪ್ ಮಾಡಿ ಹೊಡೆಯಲಾಗಿದೆ. ಆದರೆ, ಈ ವಿಚಾರದಲ್ಲಿ ಅನು ಹಾಗೂ ಸಂಜು ಇಬ್ಬರೂ ಸುಳ್ಳು ಹೇಳಿದ್ದಾರೆ. ಸಂಜುಗೆ ಅಪಘಾತ ಆಗಿದೆ ಎಂಬ ಸುಳ್ಳಿನ ಲೇಪನವನ್ನು ಹಚ್ಚಿದ್ದಾರೆ. ಶಾರದಾ ದೇವಿ ಕುಟುಂಬಕ್ಕೆ ಈಗಾಗಲೇ ತಾವು ಹೊರೆಯಾಗಿದ್ದೇನೆ ಎಂದು ಸಂಜುಗೆ ಅನಿಸುತ್ತಿದೆ. ಈಗ ಕಿಡ್ನ್ಯಾಪ್ ವಿಚಾರ ರಿವೀಲ್ ಆದರೆ, ಕುಟುಂಬಕ್ಕೆ ಮತ್ತಷ್ಟು ತೊಂದರೆ ಆಗಬಹುದು. ಅವರು ಮತ್ತಷ್ಟು ಆತಂಕಕ್ಕೆ ತುತ್ತಾಗಬಹುದು ಎಂಬ ಆಲೋಚನೆ ಸಂಜುನದ್ದು. ಈ ಕಾರಣಕ್ಕೆ ಆತ ಅಪಘಾತವಾಗಿದೆ ಎಂದು ಸುಳ್ಳು ಹೇಳಿದ್ದಾನೆ. ಅಪಘಾತದ ವೇಳೆ ಆತನಿಗೆ ಏನೂ ಆಗಿಲ್ಲ ಎಂದು ಮನೆಯವರು ನಿಟ್ಟುಸಿರು ಬಿಟ್ಟಿದ್ದಾರೆ.
ಶ್ರೀಲಕ್ಷ್ಮಿ ಎಚ್.
Published On - 2:16 pm, Fri, 4 November 22