‘ಆಕೆ ಸುಮಂಗಲಿಯಾಗಿದ್ದಾಳೆ’; ಅನು ಸಿರಿಮನೆ ಕುಟುಂಬಕ್ಕೆ ಸತ್ಯ ಹೇಳಿದ ಜೋಗ್ತವ್ವ

| Updated By: ರಾಜೇಶ್ ದುಗ್ಗುಮನೆ

Updated on: Nov 02, 2022 | 2:09 PM

ಸಂಜು ಗೊಂದಲದಲ್ಲಿ ಇದ್ದಾನೆ. ನಿಜವಾಗಿ ನೋಡೋದಾದರೆ ಆತ ಆರ್ಯವರ್ಧನ್. ಹೀಗಾಗಿ, ಆತನಿಗೆ ಆರ್ಯವರ್ಧನ್​ನ ನೆನಪುಗಳು ಮಾತ್ರ ಬರುತ್ತಿವೆ. ಆದರೆ, ಎಲ್ಲರೂ ಆತನನ್ನು ವಿಶ್ವ ಎಂದು ಭಾವಿಸಿದ್ದಾರೆ. ಹೀಗಾಗಿ, ವಿಶ್ವನ ನೆನಪನ್ನು ಮರಳಿಸಲು ಎಲ್ಲರೂ ಪ್ರಯತ್ನಿಸುತ್ತಿದ್ದಾರೆ.

‘ಆಕೆ ಸುಮಂಗಲಿಯಾಗಿದ್ದಾಳೆ’; ಅನು ಸಿರಿಮನೆ ಕುಟುಂಬಕ್ಕೆ ಸತ್ಯ ಹೇಳಿದ ಜೋಗ್ತವ್ವ
ಅನು-ಪುಷ್ಪ
Follow us on

ಧಾರಾವಾಹಿ: ಜೊತೆ ಜೊತೆಯಲಿ

ವಾಹಿನಿ: ಜೀ ಕನ್ನಡ

ಸಮಯ: ರಾತ್ರಿ 930

ಇದನ್ನೂ ಓದಿ
‘ಅವರನ್ನು ಸುಮ್ಮನೆ ಬಿಡಲ್ಲ’; ಶಪಥ ಮಾಡಿ ಮನೆ ಒಳಗೆ ಬಂದ ಅನು ಸಿರಿಮನೆ
Megha Shetty: ಮಹೇಶ್ ಬಾಬು ಭೇಟಿ ಹಿಂದಿನ ಉದ್ದೇಶ ತಿಳಿಸಿದ ನಟಿ ಮೇಘಾ ಶೆಟ್ಟಿ
Megha Shetty: ಕಲರ್ಸ್​ ಕನ್ನಡದಲ್ಲಿ ಹೊಸ ಪ್ರಯತ್ನಕ್ಕೆ ಮುಂದಾದ ನಟಿ ಮೇಘಾ ಶೆಟ್ಟಿ
ಮೇಘಾ ಶೆಟ್ಟಿ ಮನೆಗೆ ಬಂತು ಎರಡು ಐಷಾರಾಮಿ ಕಾರು; ಖುಷಿ ಹಂಚಿಕೊಂಡ ನಟಿ


ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು?

ಸಂಜುಗೆ ಅನು ಬಾಯಿಗೆ ಬಂದಂತೆ ಬೈದಿದ್ದಳು. ದುಃಖದಲ್ಲಿದ್ದ ಅನುಗೆ ಸಂಜು ಕರುಣೆ ತೋರಿಸಿದ್ದ. ಇದು ಅನುಗೆ ಇಷ್ಟ ಆಗಿರಲಿಲ್ಲ. ಈ ಕಾರಣಕ್ಕೆ ಆಕೆ ಸಿಟ್ಟಾಗಿದ್ದಳು.

ಅನು ತಾಯಿಗೆ ಗೊತ್ತಾಯ್ತು ಅಸಲಿ ವಿಚಾರ

ಎಲ್ಲರ ಪಾಲಿಗೆ ಆರ್ಯವರ್ಧನ್ ಸತ್ತು ಹೋಗಿದ್ದಾನೆ. ಆದರೆ, ಆತ ಬದುಕಿದ್ದಾನೆ ಎಂಬ ವಿಚಾರ ಕೆಲವರಿಗೆ ಮಾತ್ರ ಗೊತ್ತಿದೆ. ಪೊಲೀಸರು ಹಾಕಿರುವ ಕಂಡೀಷನ್​ನಿಂದ ಈ ಸತ್ಯವನ್ನು ಬಿಟ್ಟುಕೊಡಲು ಆಗುತ್ತಿಲ್ಲ. ಹೀಗಿರುವಾಗಲೇ ಅನು ತಾಯಿಗೆ ಅಸಲಿ ವಿಚಾರ ಗೊತ್ತಾಗಿದೆ. ಆರ್ಯವರ್ಧನ್ ಬದುಕಿದ್ದಾನೆ ಎಂಬ ವಿಚಾರವನ್ನು ಜೋಗ್ತವ್ವ ರಿವೀಲ್ ಮಾಡಿದ್ದಾಳೆ.

ವಠಾರಕ್ಕೆ ಬಂದ ಜೋಗ್ತವ್ವ ಅನು ತಾಯಿ ಪುಷ್ಪಾನ ಭೇಟಿ ಮಾಡಿದ್ದಾಳೆ. ಭೇಟಿ ಮಾಡಿದ ನಂತರದಲ್ಲಿ ಆಕೆಗೆ ಅಸಲಿ ವಿಚಾರ ಏನು ಎಂಬುದನ್ನು ಹೇಳಿದ್ದಾಳೆ. ‘ಅನು ಸುಮಂಗಲಿಯಾಗಿದ್ದಾಳೆ. ಆಕೆಯ ಹಣೆ ಮೇಲೆ ಬರೆದಿದ್ದನ್ನು ಯಾರಿಂದಲೂ ತಪ್ಪಿಸಿ ಸಾಧ್ಯವಿಲ್ಲ. ಆಕೆಗೆ ರಾಜಯೋಗ ಕಾದಿದೆ. ಸಮಯ ಬರಬೇಕಷ್ಟೇ’ ಎಂದು ಹೇಳಿದ್ದಾನೆ. ಆದರೆ, ಇದನ್ನು ಪುಷ್ಪಾ ನಂಬೋಕೆ ರೆಡಿ ಇರಲಿಲ್ಲ. ಆಗ ಜೋಗ್ತವ್ವ ಮತ್ತೊಮ್ಮೆ ಇದೇ ವಿಚಾರವನ್ನು ಪುನರುಚ್ಛರಿಸಿದ್ದಾಳೆ. ಇದನ್ನು ಕೇಳಿ ಪುಷ್ಪಾಳಿಗೆ ಅನುಮಾನ ಹಾಗೂ ಕುತೂಹಲ ಹುಟ್ಟಿದೆ.

ಸಂಜುಗೆ ಸಂಕಷ್ಟ

ಅನು ಸಿರಿಮನೆಗೆ ಹತ್ತಿರ ಆಗಬೇಕು ಎಂಬುದು ಸಂಜು ಪ್ಲ್ಯಾನ್. ಆದರೆ, ಈ ಪ್ಲ್ಯಾನ್​ಗೆ ಮಾನ್ಸಿ ಅಡ್ಡ ಬರುತ್ತಿದ್ದಾಳೆ. ಆಕೆಗೆ ಸಂಜು ಬಗ್ಗೆ ಸಾಕಷ್ಟು ಅನುಮಾನ ಇದೆ. ಈ ಕಾರಣಕ್ಕೆ ಸಂಜು ವಿರುದ್ಧ ಮಸಲತ್ತು ನಡೆಸುತ್ತಿದ್ದಾಳೆ. ಈಗ ಆಕೆ ಮಾಡಿರುವ ಪ್ಲ್ಯಾನ್​ನಿಂದ ಸಂಜುಗೆ ಮತ್ತಷ್ಟು ಸಂಕಷ್ಟ ಹೆಚ್ಚಿದೆ.

ಸಂಜು ಗೊಂದಲದಲ್ಲಿ ಇದ್ದಾನೆ. ನಿಜವಾಗಿ ನೋಡೋದಾದರೆ ಆತ ಆರ್ಯವರ್ಧನ್. ಹೀಗಾಗಿ, ಆತನಿಗೆ ಆರ್ಯವರ್ಧನ್​ನ ನೆನಪುಗಳು ಮಾತ್ರ ಬರುತ್ತಿವೆ. ಆದರೆ, ಎಲ್ಲರೂ ಆತನನ್ನು ವಿಶ್ವ ಎಂದು ಭಾವಿಸಿದ್ದಾರೆ. ಹೀಗಾಗಿ, ವಿಶ್ವನ ನೆನಪನ್ನು ಮರಳಿಸಲು ಎಲ್ಲರೂ ಪ್ರಯತ್ನಿಸುತ್ತಿದ್ದಾರೆ.

ಸಂಜುನ (ವಿಶ್ವ ಅಥವಾ ಹೊಸ ಆರ್ಯವರ್ಧನ್​) ಪತ್ನಿ ಹೆಸರು ಆರಾಧಾನ. ಎಲ್ಲರೂ ಆತನಿಗೆ ಆರಾಧನಾಳ ನೆನಪು ಮಾಡಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಸಂಜು ಮಾತ್ರ ಅನು ಸಿರಿಮನೆ ಬಗ್ಗೆ ಒಲವು ಬೆಳೆಸಿಕೊಳ್ಳುತ್ತಿದ್ದಾನೆ. ಇತ್ತೀಚೆಗೆ ಅನು ಸಿಕ್ಕಾಗ ‘ಆರಾಧನಾಗೆ ಕಾಲ್ ಮಾಡಿದ್ದೀರಾ’ ಎಂದು ಪ್ರಶ್ನೆ ಮಾಡಿದ್ದಳು. ಇದಕ್ಕೆ ‘ಹೌದು’ ಎಂದು ಸುಳ್ಳು ಹೇಳಿದ್ದಾನೆ ಸಂಜು. ಅಲ್ಲದೆ, ಆತನಿಗೆ ತನ್ನ ಪತ್ನಿ ಅನುರಾಧಾಳನ್ನು ಇವರು ಮನೆಗೆ ಕರೆಸಿಕೊಳ್ಳುತ್ತಾರೆ ಎಂಬ ಅನುಮಾನ ಮೂಡಿತ್ತು. ಈಗ ಹಾಗೆಯೇ ಆಗಿದೆ.

ಮಾನ್ಸಿಗೆ ಹೊಸ ಪ್ಲ್ಯಾನ್

ಮಾನ್ಸಿಗೆ ಮೊದಲಿನಿಂದಲೂ ಸಂಜು ಬಗ್ಗೆ ಅನುಮಾನ ಇದೆ. ‘ಆತ ಒಬ್ಬಂಟಿಯಾಗಿರುವುದನ್ನು ನೋಡೋಕೆ ಆಗುತ್ತಿಲ್ಲ. ಹೀಗಾಗಿ, ಅನುರಾಧಾಳನ್ನು ಇಲ್ಲಿಗೆ ಕರೆಸಬೇಕು’ ಎಂಬ ಐಡಿಯಾ ನೀಡಿದ್ದಾಳೆ. ಇದಕ್ಕೆ ಆಕೆಯ ಪತಿ ಹರ್ಷ ಖುಷಿಯಿಂದ ಒಪ್ಪಿಕೊಂಡಿದ್ದಾನೆ. ಹೀಗಾಗಿ, ಶೀಘ್ರವೇ ಆಕೆಯ ಆಗಮನ ಆಗಲಿದೆ.

ಹರ್ಷನಿಗೆ ಸಂಜು ಬಗ್ಗೆ ಕಾಳಜಿ

ಹರ್ಷ ಹಾಗೂ ಸಂಜು ಕ್ಲೋಸ್ ಆಗಿದ್ದಾರೆ. ಸಂಜು ಬಗ್ಗೆ ಹರ್ಷನಿಗೆ ಕಾಳಜಿ ಇದೆ. ಸಂಜು ರಾತ್ರಿ ಇಡೀ ಕುಳಿತು ಕೆಲಸ ಮಾಡುತ್ತಿದ್ದ. ಇದನ್ನು ನೋಡಿ ಹರ್ಷನಿಗೆ ಬೇಸರ ಆಗಿದೆ. ಹೀಗಾಗಿ, ಬೇಗ ಮಲಗುವಂತೆ ಸೂಚಿಸಿದ್ದಾನೆ. ದಿನ ಕಳೆದಂತೆ ಹರ್ಷನ ಬಗ್ಗೆ ಸಂಜುಗೆ ಕಾಳಜಿ ಹೆಚ್ಚುತ್ತಿದೆ. ಅದೇ ರೀತಿ ಸಂಜು ಹಾಗೂ ಆರಾಧಾನನ ಒಂದು ಮಾಡಬೇಕು ಎಂದು ಅನು ಕೂಡ ಪ್ರಯತ್ನಿಸುತ್ತಿದ್ದಾಳೆ.

ಶ್ರೀಲಕ್ಷ್ಮಿ ಎಚ್​.