ಹಿಂದಿನ ಎಪಿಸೋಡ್ನಲ್ಲಿ ಏನಾಗಿತ್ತು?
ಸಂಜು ಹಾಗೂ ಅನು ಫ್ಯಾಕ್ಟರಿ ವಿಸಿಟ್ಗೆ ತೆರಳಿದ್ದರು. ಈ ವೇಳೆ ‘ಅನು, ನೀವೆಂದರೆ ಇಷ್ಟ’ ಎಂಬ ಮಾತನ್ನು ಸಂಜು ಹೇಳಿದ್ದ. ಇದಕ್ಕೆ ಅನು ಸಿಟ್ಟಾಗಿದ್ದಳು.
ಅನು ಸಿರಿಮನೆ ಪತಿ ಆರ್ಯವರ್ಧನ್ ಅನೇಕರ ಪಾಲಿಗೆ ಸತ್ತು ಹೋಗಿದ್ದಾನೆ. ಆದರೆ, ಇಲ್ಲಿ ಅಸಲಿ ವಿಚಾರ ಬೇರೆಯೇ ಇದೆ. ಆತ ಬದುಕಿದ್ದಾನೆ. ಸಂಜು ಹೆಸರಲ್ಲಿ ಎಂಟ್ರಿ ಕೊಟ್ಟಿದ್ದಾನೆ. ಮುಖಚರ್ಯೆ ಬದಲಾಗಿದೆ. ಅಪಘಾತದಲ್ಲಿ ತಲೆಗೆ ಏಟು ಬಿದ್ದಿರುವುದರಿಂದ ಆತನಿಗೆ ಯಾವುದೂ ನೆನಪಾಗುತ್ತಿಲ್ಲ. ಈಗ ಸಂಜುಗೆ (ಹೊಸ ಆರ್ಯವರ್ಧನ್) ಒಂದರಮೇಲೆ ಒಂದರಂತೆ ತೊಂದರೆ ಎದುರಾಗುತ್ತಿದೆ. ಈಗ ಸಂಜುಗೆ ಆರಾಧಾನ ವಿಲನ್ ಆಗುವ ಸೂಚನೆ ಸಿಕ್ಕಿದೆ.
ಆರ್ಯವರ್ಧನ್ ಸಹೋದರ ವಿಶ್ವ ಆತ್ಮಹತ್ಯೆ ಮಾಡಿಕೊಂಡಿದ್ದ. ಆತನ ಮುಖದ ಚರ್ಮವನ್ನು ಸಂಜುಗೆ ಹಾಕಲಾಗಿದೆ. ಸದ್ಯ ಎಲ್ಲರ ಪಾಲಿಗೆ ಮೃತಪಟ್ಟಿದ್ದು ಆರ್ಯವರ್ಧನ್. ಬದುಕಿದ್ದು ವಿಶ್ವ. ವಿಶ್ವನ ಪತ್ನಿಯೇ ಆರಾಧಾನ. ವಿಶ್ವನನ್ನು ಸಂಜು ಎಂದು ತಾಯಿ ಪ್ರಿಯಾ ಪರಿಚಯಿಸಿ ರಾಜ ನಂದಿನಿ ವಿಲಾಸದಲ್ಲಿ ಬಿಟ್ಟು ಹೋಗಿದ್ದಾಳೆ. ಆತನೇ ಆರ್ಯವರ್ಧನ್ ಅನ್ನೋದು ಯಾರಿಗೂ ಗೊತ್ತಿಲ್ಲ. ಈಗ ಅನುಗೆ ಕ್ಲೋಸ್ ಆಗಬೇಕು ಎಂದು ಪ್ರಯತ್ನಿಸಿದಾಗೆಲ್ಲ ಆರಾಧಾನ ಮಧ್ಯೆ ಬರುತ್ತಿದ್ದಾಳೆ. ಆಕೆ ಸಂಜುಗೆ ವಿಲನ್ ಆದರೂ ಆಗಬಹುದು.
ಸಂಜು ಹಾಗೂ ಅನು ಒಟ್ಟಿಗೆ ಸಮಯ ಕಳೆಯುತ್ತಿದ್ದಾರೆ. ಇಬ್ಬರೂ ಫ್ಯಾಕ್ಟರಿ ವಿಸಿಟ್ಗೆಂದು ತೆರಳಿದ್ದಳು. ಈ ವೇಳೆ ಅನು ಜತೆ ಸಂಜು ಮತ್ತಷ್ಟು ಕ್ಲೋಸ್ ಆಗಿದ್ದ. ಇದು ಆಕೆಗೂ ಗೊತ್ತಾಗಿದೆ. ಸಂಜು ಇದನ್ನು ಎಕ್ಸ್ಪ್ರೆಸ್ ಮಾಡಿದ್ದಾನೆ. ಇದರಿಂದ ಅನುಗೆ ಸಿಟ್ಟು ಬಂದಿದೆ. ‘ನಿಮ್ಮ ಹೆಂಡತಿ ಬಗ್ಗೆ ಹೇಳಿ ಕೇಳ್ತೀನಿ. ಅದನ್ನು ಬಿಟ್ಟು ನನಗೆ ಕ್ಲೋಸ್ ಆದರೆ ಕೋಪ ಬರುತ್ತೆ’ ಎಂದು ಖಾರವಾಗಿಯೇ ಹೇಳಿದ್ದಾಳೆ ಅನು. ಇದು ಸಂಜುಗೆ ಶಾಕ್ ನೀಡಿದೆ. ಹೀಗಾಗಿ ಆತ ಮತ್ತೊಂದು ಮಾರ್ಗ ಅನುಸರಿಸಿದ್ದಾನೆ.
ಅನು ಜತೆ ಕ್ಲೋಸ್ ಆಗಬೇಕು ಎಂಬ ಕಾರಣಕ್ಕೆ ಪತ್ನಿಯ ಹೆಸರನ್ನು ಎಳೆದು ತಂದಿದ್ದಾನೆ. ನಿಮ್ಮ ಸಹಾಯ ಇದ್ರೆ ನಾನು ಪತ್ನಿನ ನೆನಪು ಮಾಡಿಕೊಳ್ಳಬಹುದು ಎಂದು ಸುಳ್ಳು ಕೂಡ ಹೇಳಿದ್ದಾನೆ. ಇದನ್ನು ಕೇಳಿ ಅನುಗೂ ನಿಜ ಎನಿಸಿದೆ. ಹೀಗಾಗಿ, ಆಕೆ ಈ ವಿಚಾರದಲ್ಲಿ ಸಹಾಯ ಮಾಡೋಕೆ ಒಪ್ಪಿಕೊಂಡಿದ್ದಾಳೆ. ಪತ್ನಿ ಆರಾಧಾನ ವಿಚಾರದಲ್ಲಿ ಸಂಜು ಸಾಲು ಸಾಲು ಸುಳ್ಳು ಹೇಳೋಕೆ ಶುರು ಮಾಡಿದ್ದಾನೆ. ಇದು ಆತನಲ್ಲಿ ಭಯ ಹುಟ್ಟಿಸುತ್ತಿದೆ.
ಅನು ಬಗ್ಗೆ ಗಾಸಿಪ್
ಅನು ಸದ್ಯ ವಠಾರದಲ್ಲೇ ಉಳಿದುಕೊಂಡಿದ್ದಾಳೆ. ಆಕೆಯನ್ನು ಭೇಟಿ ಮಾಡೋಕೆ ಸಂಜು ಆಗಾಗ ಬಂದಿದ್ದ. ಆತ ಬಂದಿದ್ದು ಕಚೇರಿಯ ವಿಚಾರ ಮಾತನಾಡೋಕೆ. ಇದೇ ವಿಚಾರ ಇಟ್ಟುಕೊಂಡು ಆಚೀಚೆ ಮನೆಯವರು ಗಾಸಿಪ್ ಮಾಡುತ್ತಿದ್ದಾರೆ. ‘ಅನು ಪತ್ನಿಯನ್ನು ಮರೆತು ಬೇರೊಬ್ಬನ ಜತೆ ಸುತ್ತಾಡುತ್ತಿದ್ದಾಳೆ’ ಎಂದು ಗಾಸಿಪ್ ಹಬ್ಬಿಸಿದ್ದಾರೆ. ಇದನ್ನು ಕೇಳಿ ಅನು ಗೆಳೆಯನಿಗೆ ಬೇಸರ ಆಗಿದೆ. ಅನು ಆ ರೀತಿ ಅಲ್ಲ ಎಂದು ವಾದಿಸಿದ್ದಾನೆ.
ಅನು ಆಲೋಚನೆಯೇ ಬೇರೆ
ಸಂಜುಗೆ ನೆನಪಿಲ್ಲ. ಆದರೆ ಪ್ರೀತಿಸಿದವಳು ಇದ್ದಾಳೆ. ಅನುಗೆ ನೆನಪಿದೆ ಆದರೆ ಪ್ರೀತಿಸಿದವನು ಜತೆಗಿಲ್ಲ. ಅನುಗೆ ನೆನಪೇ ಶಾಪ. ಆದರೆ, ಸಂಜುಗೆ ಮರೆವೇ ಶಾಪ. ಈ ಎಲ್ಲಾ ಕಾರಣದಿಂದ ಸಂಜುನ ಸಹಾಯಕ್ಕೆ ಅನು ಮುಂದೆ ಬಂದಿದ್ದಾಳೆ. ಸಂಜು ಹಾಗೂ ಆರಾಧಾನ ಒಂದು ಮಾಡೇ ತೀರುತ್ತೇನೆ ಎಂದು ಶಪಥ ಮಾಡಿದ್ದಾಳೆ. ಸಂಜುಗೆ ಆರಾಧಾನ ಶಾಪ ಆದರೂ ಅಚ್ಚರಿ ಏನಿಲ್ಲ. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಶ್ರೀಲಕ್ಷ್ಮಿ ಎಚ್
Published On - 8:49 am, Fri, 28 October 22