ಜೋಗ್ತವ್ವ ಹೇಳಿದ ಭವಿಷ್ಯದಿಂದ ಅನುಗೆ ಗೊತ್ತಾಗುತ್ತಾ ಸಂಜು ವಿಚಾರ?

| Updated By: ಮದನ್​ ಕುಮಾರ್​

Updated on: Nov 11, 2022 | 9:55 AM

ಸಂಜು ಪದೇಪದೇ ಹತ್ತಿರವಾಗಲು ಪ್ರಯತ್ನಿಸಿದಾಗ ಅನು ದೂರ ಸರಿಯುತ್ತಿದ್ದಾಳೆ. ಸಂಜು ನಡೆದುಕೊಳ್ಳುವ ರೀತಿ ಆಕೆಗೆ ಇಷ್ಟ ಆಗುತ್ತಿಲ್ಲ.

ಜೋಗ್ತವ್ವ ಹೇಳಿದ ಭವಿಷ್ಯದಿಂದ ಅನುಗೆ ಗೊತ್ತಾಗುತ್ತಾ ಸಂಜು ವಿಚಾರ?
ಸಂಜು-ಅನು
Follow us on

ಧಾರಾವಾಹಿ: ಜೊತೆ ಜೊತೆಯಲಿ

ವಾಹಿನಿ: ಜೀ ಕನ್ನಡ

ನಿರ್ದೇಶನ: ಆರೂರು ಜಗದೀಶ

ಇದನ್ನೂ ಓದಿ
Kantara: ‘ಕಾಂತಾರ’ ಚಿತ್ರದಿಂದ ಅಲ್ಲು ಅರ್ಜುನ್​ ತಂದೆಗೆ ಭಾರಿ ಲಾಭ; ಎಷ್ಟಕ್ಕೆ ನಡೆಯಿತು ತೆಲುಗು ವ್ಯವಹಾರ?
Rishab Shetty: ಒಂದೇ ದಿನಕ್ಕೆ 15 ಕೋಟಿ ರೂಪಾಯಿ ಬಾಚಿದ ‘ಕಾಂತಾರ’; ಪರಭಾಷೆಯಲ್ಲಿ ಭರ್ಜರಿ ಕಮಾಯಿ
Anushka Shetty: ‘ಕಾಂತಾರ’ ನೋಡಿ ಅನುಷ್ಕಾ ಶೆಟ್ಟಿ ಫಿದಾ; ರಿಷಬ್​ ಬಗ್ಗೆ ಸ್ಪೆಷಲ್​ ಮಾತುಗಳನ್ನು ಹೇಳಿದ ಸ್ಟಾರ್​ ನಟಿ
Rishab Shetty: ರಿಷಬ್​ ಶೆಟ್ಟಿ ಕಾಲಿಗೆ ಬಿದ್ದ ಖ್ಯಾತ ಯೂಟ್ಯೂಬರ್​; ಹಿಂದಿ ಪ್ರೇಕ್ಷಕರಲ್ಲಿ ಹೆಚ್ಚಿತು ‘ಕಾಂತಾರ’ ಸೆನ್ಸೇಷನ್​

ಕಲಾವಿದರು: ಹರೀಶ್ ರಾಜ್, ಮೇಘಾ ಶೆಟ್ಟಿ, ಮಾನಸ ಮನೋಹರ್ ಮೊದಲಾದವರು

ಸಮಯ: ರಾತ್ರಿ: 9.30


ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು?

ಸಂಜು ಹಾಗೂ ಆತನ ಪತ್ನಿ ಆರಾಧನಾಳನ್ನು ಒಂದು ಮಾಡಬೇಕು ಎಂಬುದು ಅನು ಸಿರಿಮನೆ ಆಸೆ. ಈ ಕಾರಣಕ್ಕೆ ಆಕೆ ಆರಾಧನಾಳನ್ನು ರಾಜ ನಂದಿನಿ ವಿಲಾಸಕ್ಕೆ ಕರೆ ತಂದಿದ್ದಾಳೆ. ಇದರಿಂದ ಸಂಜುಗೆ ಬೇಸರ ಆಗಿದೆ. ಅನು ಈರೀತಿ ಮಾಡಬಾರದಿತ್ತು ಎಂದು ಆತ ಅಂದುಕೊಂಡಿದ್ದಾನೆ. ಆರಾಧನಾಳಿಂದ ಆತ ದೂರ ಇರಲು ಪ್ರಯತ್ನ ಮಾಡುತ್ತಿದ್ದಾನೆ.

ತಪ್ಪಿಸಿಕೊಂಡ ಸಂಜು

ಆರಾಧನಾ ಮನೆಗೆ ಬಂದಿದ್ದಾಳೆ. ಹೀಗಾಗಿ, ಸಂಜು ಸಂಕಷ್ಟಕ್ಕೆ ಸಿಲುಕಿದ್ದಾನೆ. ಆಕೆಯಿಂದ ಹೇಗಾದರೂ ಮಾಡಿ ದೂರ ಇರಬೇಕು ಎಂದು ಆತ ಪ್ರಯತ್ನಿಸುತ್ತಿದ್ದಾನೆ. ರಾತ್ರಿ ಮಲಗುವ ಸಂದರ್ಭದಲ್ಲಿ ಆರಾಧನಾ ಪಕ್ಕದಲ್ಲಿ ಹೋಗಿ ಮಲಗದೇ ಸಂಜು ಸ್ಟಡಿ ರೂಂನಲ್ಲಿ ನಿದ್ರಿಸಿದ್ದಾನೆ. ಇದರಿಂದ ಆರಾಧನಾಗೆ ಬೇಸರ ಆಗಿದೆ. ಆತ ಪದೇ ಪದೇ ತನ್ನಿಂದ ದೂರ ಹೋಗಲು ಪ್ರಯತ್ನಿಸುತ್ತಿದ್ದಾನೆ ಅನ್ನೋದು ಆಕೆಗೆ ಖಚಿತವಾಗಿದೆ.

ಸಂಜು ಪರ ನಿಂತ ಅನು

ಸಂಜುನ ಎದುರು ಬಂದ ಆರಾಧನ ಮರಳಿ ಅಮೆರಿಕಕ್ಕೆ ಹೋಗುವ ಆಲೋಚನೆಯನ್ನು ಪ್ರಸ್ತಾಪ ಮಾಡಿದ್ದಾಳೆ. ಆದರೆ, ಆತ ಇದಕ್ಕೆ ಸಿದ್ಧನಿಲ್ಲ. ಸಂಜುಗೆ ಅನು ಮೇಲೆ ಪ್ರೇಮಾಂಕುರವಾಗಿದೆ. ದಿನ ಕಳೆದಂತೆ ಆಕೆಗೆ ಹತ್ತಿರ ಆಗುತ್ತಿದ್ದಾನೆ. ಇದು ಅನು ಗಮನಕ್ಕೆ ಬಂದಿದೆ. ಇದೇ ಕಾರಣಕ್ಕೆ ಆಕೆ ಆರಾಧನಾಳನ್ನು ಕರೆದು ತಂದಿದ್ದಾಳೆ. ‘ಸಂಜು ನಮ್ಮ ಕನಸು ಅಲ್ಲಿ ಅರ್ಧಕ್ಕೆ ನಿಂತಿದೆ. ಈಗಲೇ ಹೊರಡೋಣ’ ಎಂದು ಆರಾಧನಾ ಹೇಳಿದ್ದಾಳೆ. ಆದರೆ, ಇದನ್ನು ಕೇಳುವ ಸ್ಥಿತಿಯಲ್ಲಿ ಸಂಜು ಇರಲಿಲ್ಲ. ಹೀಗಾಗಿ, ಆತ ಇದಕ್ಕೆ ನೋ ಎಂದು ಹೇಳಿದ್ದಾನೆ. ಇದರಿಂದ ಆರಾಧನಾಗೆ ಕೋಪ ಬಂದಿದೆ.

ಈ ಸಂದರ್ಭಕ್ಕೆ ಸರಿಯಾಗೆ ಅನುಳ ಎಂಟ್ರಿ ಆಗಿದೆ. ‘ಸಂಜು ಎಲ್ಲಿಗೂ ಬರುವುದಿಲ್ಲ. ಸ್ವಲ್ಪ ದಿನ ಅವರು ಇಲ್ಲಿಯೇ ಇರುತ್ತಾರೆ. ಸಂಜು ತಾಯಿ ಪ್ರಿಯಾಗೆ ಮಗನನ್ನು ಕಳುಹಿಸಲು ಮನಸ್ಸಿಲ್ಲ. ಹೀಗಾಗಿ, ಸ್ವಲ್ಪ ದಿನ ಇದ್ದು ನಂತರ ಹೋಗಿ’ ಎಂದು ಅನು ಹೇಳಿದ್ದಾಳೆ. ಈ ಮೂಲಕ ಸಂಜು ಪರ ಬ್ಯಾಟ್ ಬೀಸಿದ್ದಾಳೆ. ಈ ಮಾತನ್ನು ಹೇಳುತ್ತಿದ್ದಂತೆ ಸಂಜು ಮನೆಯಿಂದ ಹೊರಟು ಕಚೇರಿಗೆ ಬಂದು ಕೆಲಸ ಕೊಡಿ ಎಂದು ಕೇಳಿದ್ದಾನೆ. ಆತ ಕೇಳಿದ ಪರಿಗೆ ಮೀರಾ ಹೆಗ್ಡೆ ಅಚ್ಚರಿಗೊಂಡಿದ್ದಾಳೆ.

ಜೋಗ್ತವ್ವ ನುಡಿದ ಭವಿಷ್ಯ

ಜೋಗ್ತವ್ವ ವಠಾರಕ್ಕೆ ಬಂದಿದ್ದಾಳೆ. ಅನು ತಾಯಿ ಪುಷ್ಪಾ ಬಳಿ ಆಕೆ ಕೆಲ ವಿಚಾರಗಳನ್ನು ಹೇಳಿದ್ದಾಳೆ. ‘ವಠಾರಕ್ಕೆ ಮಾತ್ರ ಒಳ್ಳೆಯದಾಗುವ ಸುದ್ದಿ ಹೇಳುತ್ತಿಲ್ಲ. ನಿಮ್ಮ ಮಗಳು ಅನುಗೆ ಒಳ್ಳೆಯದಾಗುವ ಸುದ್ದಿಯನ್ನು ತಂದಿದ್ದೇನೆ. ಆಕೆಗೆ ಸೌಭಾಗ್ಯ ಒಲಿಯುತ್ತಿದೆ. ಆದರೆ, ಆಕೆ ಅದನ್ನು ತನ್ನ ಕೈಯಾರೆ ಹಾಳು ಮಾಡಿಕೊಳ್ಳುತ್ತಿದ್ದಾಳೆ. ಸೌಭಾಗ್ಯವನ್ನು ದೂರ ಮಾಡಿಕೊಳ್ಳಬೇಡ ಎಂದು ಹೇಳು. ಆಕೆಗೆ ರಾಜಯೋಗ ಮರಳುತ್ತಿದೆ’ ಎಂದು ಜೋಗ್ತವ್ವ ಹೇಳಿದ್ದಾಳೆ. ಈ ವಿಚಾರವನ್ನು ಅನುಗೆ ತಲುಪಿಸಲು ಪುಷ್ಪಾಗೆ ಜೋಗ್ತವ್ವ ಸೂಚನೆ ನೀಡಿದ್ದಾಳೆ.

ಸಂಜುನೇ ಆರ್ಯವರ್ಧನ್ ಎನ್ನುವ ವಿಚಾರ ಅನುಗೆ ಗೊತ್ತಿಲ್ಲ. ಈ ವಿಚಾರ ಜೋಗ್ತವ್ವನಿಗೆ ತಿಳಿದು ಹೋಗಿದೆ. ಸಂಜು ಪದೇಪದೇ ಹತ್ತಿರವಾಗಲು ಪ್ರಯತ್ನಿಸಿದಾಗ ಅನು ದೂರ ಸರಿಯುತ್ತಿದ್ದಾಳೆ. ಸಂಜು ನಡೆದುಕೊಳ್ಳುವ ರೀತಿ ಆಕೆಗೆ ಇಷ್ಟ ಆಗುತ್ತಿಲ್ಲ. ಈ ಕಾರಣದಿಂದಲೇ ಜೋಗ್ತವ್ವ ಈ ಮಾತನ್ನು ಹೇಳಿದ್ದಾಳೆ. ಒಂದೊಮ್ಮೆ ಜೋಗ್ತವ್ವ ಹೇಳಿದ ಮಾತನ್ನು ಅನುಗೆ ಪುಷ್ಪಾ ಹೇಳಿದರೆ ಇದು ಆಕೆಗೆ ಅರ್ಥವಾಗುತ್ತದೆಯೇ ಅನ್ನೋದು ಸದ್ಯದ ಪ್ರಶ್ನೆ.

ಶ್ರೀಲಕ್ಷ್ಮಿ ಎಚ್.