ಕನ್ನಡದ ಕೆಲವು ಸಿನಿಮಾ ಮತ್ತು ಸೀರಿಯಲ್ಗಳಲ್ಲಿ ನಟಿಸಿದ್ದ ಸಂಪತ್ ಜಯರಾಮ್ (Sampath Jayaram) ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರ ನಿಧನದ ಸುದ್ದಿ ತಿಳಿದು ಅನೇಕ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ. ಕಿರುತೆರೆ ಮತ್ತು ಹಿರಿತೆರೆಯಲ್ಲಿ ಸಂಪತ್ ಜಯರಾಮ್ ತೊಡಗಿಕೊಂಡಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಸೂಕ್ತ ಅವಕಾಶ ಇಲ್ಲದೇ ಕಂಗಾಲಾಗಿದ್ದರು ಎನ್ನಲಾಗಿದೆ. ಶನಿವಾರ (ಏಪ್ರಿಲ್ 22) ನೆಲಮಂಗಲದಲ್ಲಿ ಅವರು ಆತ್ಮಹತ್ಯೆ (Sampath Jayaram Suicide) ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸಂಪತ್ ಅವರಿಗೆ 35 ವರ್ಷ ವಯಸ್ಸಾಗಿತ್ತು. ಇತ್ತೀಚೆಗಷ್ಟೇ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಒಂದು ವರ್ಷದ ಹಿಂದೆ ಮದುವೆ ಆಗಿದ್ದ ಅವರು ಈಗ ಇಹಲೋಕ ತ್ಯಜಿಸಿರುವುದು ಅವರ ಆಪ್ತರಿಗೆ ತೀವ್ರ ನೋವು ಉಂಟುಮಾಡಿದೆ. ನೆಲಮಂಗಲದ ಆಸ್ಪತ್ರೆಯಿಂದ ಎನ್ಆರ್ ಪುರಕ್ಕೆ ಅವರ ಮೃತದೇಹ ರವಾನೆ ಆಗಲಿದೆ.
ಸಂಪತ್ ಜಯರಾಮ್ ನಿಧನಕ್ಕೆ ನಟ ರಾಜೇಶ್ ಧ್ರುವ ಅವರು ಸಂತಾಪ ಸೂಚಿಸಿದ್ದಾರೆ. ಅಗಲಿದ ಗೆಳೆಯನನ್ನು ನೆನದು ಅವರು ಕಂಬನಿ ಮಿಡಿದಿದ್ದಾರೆ. ‘ನಿನ್ನ ಅಗಲಿಕೆ ತಡ್ಕೊಳೋ ಶಕ್ತಿ ನಮಗಿಲ್ಲ ಮಗ. ಅದೆಷ್ಟೋ ಸಿನಿಮಾ ಮಾಡೋದಿದೆ. ಅದೆಷ್ಟೋ ಜಗಳ ಬಾಕಿ ಇದೆ. ಕಂಡ ಕನಸು ನನಸು ಮಾಡ್ಕೋಳೋಕೆ ಇನ್ನೂ ಸಾಕಷ್ಟು ಸಮಯ ಇದೆ. ಇನ್ನೂ ನಿನ್ನ ದೊಡ್ಡ ದೊಡ್ಡ ಸ್ಟೇಜ್ನಲ್ಲಿ ನೋಡೋದು ಇದೆ ಕಣೋ. ವಾಪಾಸ್ ಬಾರೋ ಪ್ಲೀಸ್’ ಎಂದು ಅವರು ಪೋಸ್ಟ್ ಮಾಡಿದ್ದಾರೆ.
ಹೆಚ್ಚಿನ ಮಾಹಿತಿ ಪಡೆಯಲಾಗುತ್ತಿದೆ. ಅಪ್ಡೇಟ್ ತಿಳಿಯಲು ಪುಟ ರೀಫ್ರೆಶ್ ಮಾಡಿ…
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:13 am, Sun, 23 April 23