39ನೇ ವಾರದ ಟಿಆರ್ಪಿ ಲಿಸ್ಟ್ ಹೊರಬಿದ್ದಿದೆ. ಕಳೆದ ವಾರಗಳಿಗೆ ಹೋಲಿಕೆ ಮಾಡಿಕೊಂಡರೆ ‘ಭಾಗ್ಯಲಕ್ಷ್ಮಿ’ ಧಾರಾವಾಹಿ ಕಂಬ್ಯಾಕ್ ಮಾಡಿದೆ. ಆರಂಭದಲ್ಲಿ ಭರ್ಜರಿ ಟಿಆರ್ಪಿ (TRP) ಪಡೆದುಕೊಳ್ಳುತ್ತಿದ್ದ ಈ ಧಾರಾವಾಹಿ ಬಳಿಕ ಡಲ್ ಆಯಿತು. ಈಗ ಈ ಸೀರಿಯಲ್ನಲ್ಲಿ ಒಳ್ಳೆಯ ರೀತಿಯಲ್ಲಿ ಕಂಬ್ಯಾಕ್ ಮಾಡಿದೆ. ಕಲರ್ಸ್ ಕನ್ನಡದಲ್ಲಿ ಅತಿ ಹೆಚ್ಚು ಟಿಆರ್ಪಿ ಪಡೆದ ಧಾರಾವಾಹಿ ಎನ್ನುವ ಜನಪ್ರಿಯತೆ ಈ ಧಾರಾವಾಹಿಗೆ ಸಿಕ್ಕಿದೆ. ಈ ವಾರ ಯಾವ ಧಾರಾವಾಹಿಗೆ ಎಷ್ಟನೇ ಸ್ಥಾನ ಎನ್ನುವ ಬಗ್ಗೆ ಇಲ್ಲಿದೆ ವಿವರ.
ಉಮಾಶ್ರೀ ಮೊದಲಾದವರು ನಟಿಸುತ್ತಿರುವ ‘ಪುಟ್ಟಕ್ಕನ ಮಕ್ಕಳು’ ಇಷ್ಟು ದಿನ ಎರಡಂಕಿಯ ಟಿಆರ್ಪಿ ಪಡೆದುಕೊಳ್ಳುತ್ತಿತ್ತು. ಆದರೆ, ಈಗ ಧಾರಾವಾಹಿಯ ಟಿಆರ್ಪಿಯಲ್ಲಿ ಕೊಂಚ ಇಳಿಕೆ ಕಂಡಿದೆ. ಇದರ ಟಿಆರ್ಪಿ ಎರಡಂಕಿಯಿಂದ ಒಂದಂಕಿಗೆ ಇಳಿದೆ. ಆದಾಗ್ಯೂ ಮೊದಲ ಸ್ಥಾನ ಮುಂದುವರಿಸಿಕೊಂಡು ಹೋಗುತ್ತಿದೆ.
‘ಸೀತಾ ರಾಮ’ ಧಾರಾವಾಹಿ ಉಳಿದ ಧಾರಾವಾಹಿಗಳಿಗೆ ಕಠಿಣ ಪೈಪೋಟಿ ನೀಡುತ್ತಿದೆ. ‘ಸೀತಾ ರಾಮ’ ಧಾರಾವಾಹಿಯಲ್ಲಿ ವೈಷ್ಣವಿ ಗೌಡ, ಗಗನ್ ಚಿನ್ನಪ್ಪ, ರೀತು ಸಿಂಗ್, ಮುಖ್ಯಮಂತ್ರಿ ಚಂದ್ರು ಸೇರಿ ಅನೇಕ ಕಲಾವಿದರಿದ್ದಾರೆ. ಈ ಧಾರಾವಾಹಿ ಎರಡನೇ ಸ್ಥಾನ ಕಾಯ್ದುಕೊಂಡಿದೆ.
‘ಗಟ್ಟಿಮೇಳ’ ಧಾರಾವಾಹಿಯನ್ನು ಇಷ್ಟಪಡುವ ಅನೇಕರಿದ್ದಾರೆ. ಈ ಧಾರಾವಾಹಿ ಮೂರನೇ ಸ್ಥಾನದಲ್ಲಿದೆ. ಈ ಧಾರಾವಾಹಿ ಸಾವಿರಾರು ಎಪಿಸೋಡ್ ಪೂರ್ಣಗೊಳಿಸಿದರೂ ಬೇಡಿಕೆ ಕುಗ್ಗಿಸಿಕೊಳ್ಳದೇ ಮುನ್ನುಗ್ಗುತ್ತಿದೆ. ಈ ಧಾರಾವಾಹಿಯಲ್ಲಿ ರಕ್ಷ್ ಹಾಗೂ ನಿಶಾ ರವಿಕೃಷ್ಣನ್ ಮೊದಲಾದವರು ನಟಿಸಿದ್ದಾರೆ. ಈ ಧಾರಾವಾಹಿ ಶೀಘ್ರವೇ ಪೂರ್ಣಗೊಳ್ಳಲಿದೆ ಎನ್ನಲಾಗಿತ್ತು. ಆದರೆ, ಅದು ಸುಳ್ಳು ಸುದ್ದಿ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ನಾಲ್ಕನೇ ಸ್ಥಾನದಲ್ಲಿ ‘ಸತ್ಯ’ ಧಾರಾವಾಹಿ ಇದೆ. ಈ ಧಾರಾವಾಹಿ ಕೂಡ ಒಳ್ಳೆಯ ಟಿಆರ್ಪಿ ಪಡೆದುಕೊಳ್ಳುತ್ತಿದೆ.
ಇದನ್ನೂ ಓದಿ: ಟಿಆರ್ಪಿ ರೇಸ್ನಲ್ಲಿ ಮತ್ತೆ ಟ್ರ್ಯಾಕ್ಗೆ ಮರಳಿದ ‘ಭಾಗ್ಯಲಕ್ಷ್ಮೀ’; ಮೊದಲ ಸ್ಥಾನದಲ್ಲಿ ಯಾವ ಧಾರಾವಾಹಿ?
ಭಾಗ್ಯಲಕ್ಷ್ಮಿ ಹಾಗೂ ಅಮೃತಧಾರೆ ಧಾರಾವಾಹಿಯ ಪ್ರಸಾರ ಸಮಯ ಒಂದೇ ಆಗಿದೆ. ಎರಡೂ ಧಾರಾವಾಹಿಗಳು ಟಿಆರ್ಪಿ ರೇಸ್ನಲ್ಲಿ ಒಟ್ಟಿಗೇ ಇವೆ. ಎರಡೂ ಧಾರಾವಾಹಿಗಳಿಗೆ ಐದನೇ ಸ್ಥಾನ ಸಿಕ್ಕಿದೆ. ‘ಭಾಗ್ಯಲಕ್ಷ್ಮಿ’ ಧಾರಾವಾಹಿಯಲ್ಲಿ ಸುದರ್ಶನ್, ಸುಷ್ಮಾ ರಾವ್ ಮೊದಲಾದವರು ನಟಿಸಿದ್ದಾರೆ. ‘ಅಮೃತಧಾರೆ’ ಧಾರಾವಾಹಿಯಲ್ಲಿ ರಾಜೇಶ್ ನಟರಂಗ, ಛಾಯಾ ಸಿಂಗ್ ಮೊದಲಾದವರಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:48 am, Sat, 7 October 23