ಟಿಆರ್ಪಿ ರೇಸ್ನಲ್ಲಿ ಬದಲಾಯಿತು ಹವಾಮಾನ; ಕಲರ್ಸ್ ಧಾರಾವಾಹಿಗಳ ಪಾರುಪತ್ಯ
ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ವೀಕ್ಷಕರಿಂದ ಮೆಚ್ಚುಗೆ ಪಡೆದಿದೆ. ಈ ಧಾರಾವಾಹಿಗೆ ಮೂರನೇ ಸ್ಥಾನ ಸಿಕ್ಕಿದೆ. ಸುಷ್ಮಾ ರಾವ್, ಸುದರ್ಶನ್, ಸುಷ್ಮಾ ನಾಣಯ್ಯ ಮೊದಲಾದವರು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ವೀಕ್ಷಕರಿಗೆ ಈ ಧಾರಾವಾಹಿಯ ಕಥೆ ಇಷ್ಟ ಆಗಿದೆ.
ಟಿಆರ್ಪಿ ರೇಸ್ ವಿಚಾರ ಬಂದಾಗ ಟಾಪ್ ಐದರಲ್ಲಿ ಇರುವ ಧಾರಾವಾಹಿಗಳೆಲ್ಲವೂ ಬಹುತೇಕವು ಜೀ ಕನ್ನಡ ಧಾರಾವಾಹಿಗಳೇ ಆಗಿರುತ್ತಿದ್ದವು. ಆದರೆ, ಈಗ ಹವಾಮಾನ ಬದಲಾಗುತ್ತಿದೆ. ಜೀ ಕನ್ನಡದ ಧಾರಾವಾಹಿಗಳ ಜೊತೆ ಕಲರ್ಸ್ ಕನ್ನಡದ ಧಾರಾವಾಹಿಗಳು ರೇಸ್ಗೆ ಇಳಿದಿವೆ. ಟಾಪ್ ಐದರಲ್ಲಿ ಸ್ಥಾನ ಪಡೆದುಕೊಳ್ಳುತ್ತಿವೆ. ಈ ವಾರದಿಂದ ಬಿಗ್ ಬಾಸ್ ಕೂಡ ಆರಂಭ ಆಗುತ್ತಿದ್ದು, ಕಲರ್ಸ್ ಕನ್ನಡಕ್ಕೆ ಒಳ್ಳೆಯ ಟಿಆರ್ಪಿ ನಿರೀಕ್ಷೆ ಮಾಡಲಾಗುತ್ತಿದೆ.
‘ಲಕ್ಷ್ಮೀ ನಿವಾಸ’ ಧಾರಾವಾಹಿ ಮೊದಲ ಸ್ಥಾನದಲ್ಲಿ ಇದೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಈ ಸೀರಿಯಲ್ ಜನ ಮೆಚ್ಚುಗೆ ಪಡೆದಿದೆ. ಕಳೆದ ಕೆಲ ವಾರಗಳಿಂದ ಈ ಧಾರಾವಾಹಿ ಮೊದಲ ಸ್ಥಾನದಲ್ಲಿ ಇದೆ. ಎರಡನೇ ಸ್ಥಾನದಲ್ಲಿ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿ ಇದೆ. ಈ ಧಾರಾವಾಹಿ ಕೂಡ ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ.
ಮೂರನೇ ಸ್ಥಾನದಲ್ಲಿ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಇದೆ. ಈ ಧಾರಾವಾಹಿ ದೊಡ್ಡ ಮಟ್ಟದಲ್ಲಿ ಕಂಬ್ಯಾಕ್ ಮಾಡಿದೆ. ಈ ಧಾರಾವಾಹಿಯನ್ನು ಜನರು ಮೆಚ್ಚಿಕೊಂಡಿದ್ದಾರೆ. ಟಿಆರ್ಪಿ ವಿಚಾರದಲ್ಲಿ ‘ಭಾಗ್ಯಲಕ್ಷ್ಮೀ’ ಹಾಗೂ ‘ಶ್ರಾವಣಿ ಸುಬ್ರಹ್ಮಣ್ಯ’ ಧಾರಾವಾಹಿಯ ಮಧ್ಯೆ ಕೂದಲೆಳೆಯ ಅಂತರ ಇದೆ.
ನಾಲ್ಕನೇ ಸ್ಥಾನದಲ್ಲಿ ‘ಅಮೃತಧಾರೆ’ ಹಾಗೂ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಇದೆ. ‘ಅಮೃತಧಾರೆ’ ಧಾರಾವಾಹಿ ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿದ್ದರೆ, ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಕಲರ್ಸ್ನಲ್ಲಿ ಪ್ರಸಾರ ಕಾಣುತ್ತಿದೆ. ನಾಲ್ಕನೇ ಸ್ಥಾನದಲ್ಲಿ ‘ರಾಮಾಚಾರಿ’ ಧಾರಾವಾಹಿ ಇದೆ. ಈ ಮೂಲಕ ಈ ವಾರ ಟಾಪ್ ಐದರಲ್ಲಿ ಕಲರ್ಸ್ನ ಮೂರು ಧಾರಾವಾಹಿಗಳು ಇವೆ.
ಇದನ್ನೂ ಓದಿ: ಭರ್ಜರಿ ಟಿಆರ್ಪಿ ಪಡೆದ ‘ಭಾಗ್ಯಲಕ್ಷ್ಮೀ’; ಬಿಗ್ ಬಾಸ್ ಟಿಆರ್ಪಿ ಎಷ್ಟು?
ಐದನೇ ಸ್ಥಾನದಲ್ಲಿ ‘ಪುಟ್ಟಕ್ಕನ ಮಕ್ಕಳು’ ಹಾಗೂ ‘ಅಣ್ಣಯ್ಯ’ ಧಾರಾವಾಹಿ ಇದೆ. ಸಮಯ ಬದಲಾದ ಹೊರತಾಗಿಯೂ ಧಾರಾವಾಹಿ ದೊಡ್ಡ ಮಟ್ಟದಲ್ಲಿ ಕಂಬ್ಯಾಕ್ ಮಾಡುವ ಪ್ರಯತ್ನ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಟಿಆರ್ಪಿ ವಿಚಾರದಲ್ಲಿ ಸಾಕಷ್ಟು ಬದಲಾವಣೆ ನಿರೀಕ್ಷಿಸಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.