ಟಿಆರ್ಪಿ ವಿಚಾರದಲ್ಲಿ ಯಾವ ಧಾರಾವಾಹಿ ಮೊದಲಿರುತ್ತದೆ, ಯಾವ ಧಾರಾವಾಹಿ ಕೊನೆಯಲ್ಲಿ ಇರುತ್ತವೆ ಎಂದು ಮೊದಲೇ ಊಹಿಸೋದು ಕಷ್ಟ. ಇತರ ವಾಹಿನಿಗಳ ಕಾರ್ಯಕ್ರಮ, ಐಪಿಎಲ್ ಮ್ಯಾಚ್ (IPL Match) ಹೀಗೆ ಹಲವು ವಿಚಾರಗಳು ಟಿಆರ್ಪಿ ಮೇಲೆ ಪ್ರಭಾವ ಬಿರುತ್ತವೆ. ಈಗ 20ನೇ ವಾರದ ಟಿಆರ್ಪಿ ಹೊರಬಿದ್ದಿದೆ. ಇದರಲ್ಲಿ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ನಂಬರ್ ಒನ್ ಪಡೆದುಕೊಂಡಿದೆ. ಹೊಸ ಧಾರಾವಾಹಿಗಳನ್ನು ಹಿಂದಿಕ್ಕಿ ಈ ಧಾರಾವಾಹಿ ಮೊದಲ ಸ್ಥಾನ ಪಡೆದಿದೆ.
‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಸಂಜನಾ ಬುರ್ಲಿ, ಉಮಾಶ್ರೀ ಮೊದಲಾದವರು ನಟಿಸಿದ್ದಾರೆ. ಪಕ್ಕಾ ಹಳ್ಳಿಯ ಸೊಗಡಿನ ಕಥೆಯನ್ನು ಈ ಧಾರಾವಾಹಿ ಹೊಂದಿದೆ. ಈ ಧಾರಾವಾಹಿ ಹಲವು ಟ್ವಿಸ್ಟ್ಗಳನ್ನು ಪಡೆದು ಸಾಗುತ್ತಿದೆ. ಈ ಕಾರಣಕ್ಕೆ ಈ ಧಾರಾವಾಹಿ ಕಳೆದ ಕೆಲವು ವಾರಗಳಿಂದ ನಂಬರ್ 1 ಸ್ಥಾನ ಕಾಪಾಡಿಕೊಳ್ಳುತ್ತಾ ಬರುತ್ತಿದೆ.
ಎರಡನೇ ಸ್ಥಾನದಲ್ಲಿ ಹೊಸ ಧಾರಾವಾಹಿ ‘ಲಕ್ಷ್ಮೀ ನಿವಾಸ’ ಇದೆ. ‘ಪು ಟ್ಟಕ್ಕನ ಮಕ್ಕಳು’ ಧಾರಾವಾಹಿಯ ಟಿಆರ್ಪಿಯನ್ನು ಹಿಂದಿಕ್ಕೋಕೆ ಈ ಧಾರಾವಾಹಿಗೆ ಸಾಧ್ಯವಾಗುತ್ತಿಲ್ಲ. ಮೂರನೇ ಸ್ಥಾನದಲ್ಲಿ ಹೊಸ ಧಾರಾವಾಹಿ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿ ಇದೆ. ಜೀ ಕನ್ನಡದಲ್ಲಿ ಈ ಧಾರಾವಾಹಿ ಪ್ರಸಾರ ಕಾಣುತ್ತಿದೆ.
ನಾಲ್ಕನೇ ಸ್ಥಾನದಲ್ಲಿ ‘ಸೀತಾ ರಾಮ’ ಧಾರಾವಾಹಿ ಇದೆ. ಈ ಧಾರಾವಾಹಿಯಲ್ಲಿ ಸೀತಾ ಪಾತ್ರದಲ್ಲಿ ವೈಷ್ಣವಿ ಗೌಡ, ರಾಮನ ಪಾತ್ರದಲ್ಲಿ ಗಗನ್ ಚಿನ್ನಪ್ಪ ನಟಿಸುತ್ತಿದ್ದಾರೆ. ಇಬ್ಬರ ಮಧ್ಯೆ ಪ್ರೀತಿ ಮೂಡಿದೆ. ನಿಶ್ಚಿತಾರ್ಥದ ಸಿದ್ಧತೆ ಕೂಡ ಆಗುತ್ತಿದೆ. ಈ ಕಾರಣಕ್ಕೆ ಈ ಧಾರಾವಾಹಿಗೆ ಹೆಚ್ಚಿನ ಟಿಆರ್ಪಿ ಸಿಗುತ್ತಿದೆ.
ಇದನ್ನೂ ಓದಿ: ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಗೆ ಭರ್ಜರಿ ಬೇಡಿಕೆ; ಟಿಆರ್ಪಿಯಲ್ಲಿ ಸಖತ್ ಏರಿಕೆ
ಐದನೇ ಸ್ಥಾನದಲ್ಲಿ ‘ಅಮೃತಧಾರೆ’ ಧಾರಾವಾಹಿ ಇದೆ. ಈ ಧಾರಾವಾಹಿಗೆ ಒಳ್ಳೆಯ ಟಿಆರ್ಪಿ ಸಿಕ್ಕಿದೆ. ಈ ಧಾರಾವಾಹಿ ಐದನೇ ಸ್ಥಾನದಲ್ಲಿ ಇದೆ. ರಾಜೇಶ್ ನಟರಂಗ, ಛಾಯಾ ಸಿಂಗ್ ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಈ ಧಾರಾವಾಹಿ ಎಲ್ಲರ ಮೆಚ್ಚುಗೆ ಪಡೆಯುತ್ತಿದೆ. 20ನೇ ವಾರದ ಟಿಆರ್ಪಿಯಲ್ಲಿ ಟಾಪ್ ಐದರಲ್ಲಿ ಇರುವ ಎಲ್ಲಾ ಧಾರಾವಾಹಿಗಳು ಜೀ ಕನ್ನಡದ ಧಾರಾವಾಹಿಗಳು ಅನ್ನೋದು ಇಲ್ಲಿ ಗಮನಿಸಬೇಕಾದ ವಿಚಾರ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.