ನಟ ಕಿರಣ್ ರಾಜ್ (Kiran Raj) ಅವರು ತಮ್ಮ ‘ಕಿರಣ್ ರಾಜ್ ಫೌಂಡೇಷನ್’ (Kiran Raj Foundation) ಮೂಲಕ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿದ್ದಾರೆ. ಕೊವಿಡ್ ಸಂದರ್ಭದಲ್ಲಿ ಅವರು ಸಾಕಷ್ಟು ಮಂದಿಗೆ ನೆರವಿನ ಹಸ್ತ ಚಾಚಿದ್ದರು. ಊಟ ಇಲ್ಲದವರಿಗೆ ಊಟ ನೀಡಿದ್ದರು. ಧಾರಾವಾಹಿ ಹಾಗೂ ಸಿನಿಮಾಗಳ ಜತೆಗೆ ಈ ರೀತಿಯ ಕೆಲಸ ಮಾಡುವ ಮೂಲಕ ಅವರು ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ. ಈ ಬಾರಿ ಕಿರಣ್ ರಾಜ್ ಅವರು ಮತ್ತೆ ಸಹಾಯ ಹಸ್ತ ಚಾಚಿದ್ದಾರೆ. ಅಗತ್ಯ ಇರುವವರಿಗೆ ಅವರು ರೇನ್ಕೋಟ್ ನೀಡಿದ್ದಾರೆ.
ಸದ್ಯ, ರಾಜ್ಯಾದ್ಯಂತ ಮಳೆ ಆಗುತ್ತಿದೆ. ಮಳೆಯಿಂದ ರಕ್ಷಣೆ ಪಡೆಯಲು ಹಣ ಇರುವವರು ಮಾರ್ಗ ಕಂಡುಕೊಳ್ಳುತ್ತಾರೆ. ಆದರೆ, ಕೆಲವರಿಗೆ ಛತ್ರಿ, ರೇನ್ಕೋಟ್ ಖರೀದಿಸಲೂ ಹಣ ಇರುವುದಿಲ್ಲ. ಬೀದಿ ಬದಿ ವ್ಯಾಪಾರ ಮಾಡುವ ಅನೇಕರು ಮಳೆಯಲ್ಲಿ ನೆನೆಯುವ ಪರಿಸ್ಥಿತಿ ಇದೆ. ಅಂಥವರನ್ನು ಗುರುತಿಸಿ ಕಿರಣ್ ರಾಜ್ ಸಹಾಯ ಮಾಡಿದ್ದಾರೆ.
ಬೀದಿಬದಿ ವ್ಯಾಪಾರಿಗಳು, ಸಿಗ್ನಲ್ನಲ್ಲಿ ವಸ್ತುಗಳನ್ನು ಮಾರಾಟ ಮಾಡುವವರು ಸಾಕಷ್ಟು ಜನರಿದ್ದಾರೆ. ಅವರ ದುಡಿಮೆ ಕಡಿಮೆ ಇರುತ್ತದೆ. ಇಂತಹವರನ್ನು ಗುರುತಿಸಿರುವ ಕಿರಣ್ ರಾಜ್ ಮಳೆಯಿಂದ ರಕ್ಷಣೆ ನೀಡುವ ರೇನ್ಕೋಟ್ಗಳನ್ನು ನೀಡಿದ್ದಾರೆ. ಅವರಿಂದ ಸಹಾಯ ಪಡೆದವರು ಧನ್ಯವಾದ ಅರ್ಪಿಸುತ್ತಿದ್ದಾರೆ.
ಈ ಕೆಲಸವನ್ನು ಕಿರಣ್ ರಾಜ್ ಮಾತ್ರ ಮಾಡಿಲ್ಲ. ಸಾಮಾಜಿಕ ಕೆಲಸ ಮಾಡಲು ಆಸಕ್ತಿ ಇರುವ ಕಾಲೇಜು ವಿದ್ಯಾರ್ಥಿಗಳ ಮೂಲಕ ಈ ಒಳ್ಳೆಯ ಕೆಲಸ ಮಾಡಿಸಲಾಗಿದೆ. ‘ಇಂತಹ ಕಾರ್ಯಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುತ್ತಿರುವುದು ಖುಷಿ ತಂದಿದೆ. ಜೀವನದಲ್ಲಿ ಮುಂದೆ ಇಂತಹ ಸಹಾಯ ಮಾಡುವ ಗುಣಗಳನ್ನು ಮೈಗೂಡಿಸಿಕೊಳ್ಳಲು ಇಂತಹ ಕಾರ್ಯಗಳು ಅವರಿಗೆ ಅನುಕೂಲವಾಗಲಿದೆ. ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಲು ಮನಸ್ಸಿರುವ ವಿದ್ಯಾರ್ಥಿಗಳು ಕಿರಣ್ ರಾಜ್ ಫೌಂಡೇಶ್ಅನ್ನು ಸಂಪರ್ಕಿಸಬಹುದು’ ಎನ್ನುತ್ತಾರೆ ನಟ ಕಿರಣ್ ರಾಜ್.
ಇದನ್ನೂ ಓದಿ: Kiran Raj Birthday: ಕಿರಣ್ ರಾಜ್ ಬರ್ತ್ಡೇ: ಫ್ಯಾನ್ಸ್ಗೆ ‘ಬಡ್ಡೀಸ್’ ಸಿನಿಮಾ ನಟನ ಕಡೆಯಿಂದ ಗಿಫ್ಟ್
ಇತ್ತೀಚೆಗೆ ಕಿರಣ್ ರಾಜ್ ಅವರು ಬರ್ತ್ಡೇ ಆಚರಿಸಿಕೊಂಡರು. ಈ ವೇಳೆ ತಮ್ಮ ಅಭಿಮಾನಿಗಳಿಗೆ ಉಡುಗೊರೆ ಹಾಗೂ ಬಡವರಿಗೆ ಬ್ಲಾಂಕೆಟ್ ಸಹಾಯ ಮಾಡಿದ್ದರು. ಈ ಮೂಲಕ ಬರ್ತ್ಡೇಯನ್ನು ಭಿನ್ನವಾಗಿ ಆಚರಿಸಿಕೊಂಡಿದ್ದರು. ಈ ಕೆಲಸಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ತಮ್ಮ ದುಡಿಮೆಯ ಒಂದು ಪಾಲನ್ನು ಅವರು ಸಾಮಾಜಿಕ ಕೆಲಸಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಅನ್ನೋದು ವಿಶೇಷ.