25 ಲಕ್ಷ ಹೊಂದಿಸಿದರೂ ಸಾನಿಯಾ ಎಂಡಿ ಪಟ್ಟಕ್ಕೆ ಕುತ್ತು; ಮುಂದಿದೆ ಮಾರಿಹಬ್ಬ?
ರತ್ನಮಾಲಾಗೆ 25 ಲಕ್ಷ ರೂಪಾಯಿ ನೀಡಿದ ಸಾನಿಯಾ, ‘ನನ್ನ ಎಂಡಿ ಪಟ್ಟ ಹೋಗುವುದಿಲ್ಲ ಅಲ್ಲವೇ’ ಎಂದು ನಗೆ ಬೀರುತ್ತಾ ಪ್ರಶ್ನೆ ಕೇಳಿದಳು. ಇದಕ್ಕೆ ರತ್ನಮಾಲಾ ಸರಿಯಾಗಿ ತಿರುಗೇಟು ನೀಡಿದ್ದಾಳೆ.

‘ಕನ್ನಡತಿ’ ಧಾರಾವಾಹಿಯ ವಿಲನ್ ಸಾನಿಯಾ ಏನೋ ಮಾಡಲು ಹೋಗಿ ಇನ್ನೇನೋ ಮಾಡುತ್ತಿದ್ದಾಳೆ. ಅವಳಿಗೆ ಒಂದಾದಮೇಲೆ ಮತ್ತೊಂದು ಸಂಕಷ್ಟ ಬರುತ್ತಲೇ ಇದೆ. ಅವಳ ಬಳಿ ಇರುವ ಎಂಡಿ ಪಟ್ಟಕ್ಕೆ ಕುತ್ತು ಎದುರಾಗೋ ಸಾಧ್ಯತೆ ದಟ್ಟವಾಗಿದೆ. ಈ ಸಮಸ್ಯೆಯಿಂದ ಸಾನಿಯಾ ಹೊರಬರೋಕೆ ಪ್ರಯತ್ನಿಸುತ್ತಲೇ ಇದ್ದಾಳೆ. ಆದಾಗ್ಯೂ, ದಿನ ಕಳೆದಂತೆ ಅವಳಿಗೆ ಸಂಕಷ್ಟ ಮಾತ್ರ ಹೆಚ್ಚುತ್ತಲೇ ಇದೆ. ಈ ಮಧ್ಯೆ ಮಾಲಾ ಸಂಸ್ಥೆಯಿಂದ ಖರ್ಚು ಮಾಡಿದ್ದ 25 ಲಕ್ಷ ರೂಪಾಯಿಯನ್ನು ಸಾನಿಯಾ ತಂದು ಕೊಟ್ಟರೂ ಎಂಡಿ ಪಟ್ಟಕ್ಕೆ ಬಂದಿರುವ ಕುತ್ತು ಶಮನವಾಗಿಲ್ಲ. ಅವಳಿಗೆ ಮುಂದೆ ಮತ್ತೂ ಸಂಕಷ್ಟವಿದೆ ಎನ್ನುವ ಮಾತು ಅಭಿಮಾನಿ ವಲಯದಲ್ಲಿ ವ್ಯಕ್ತವಾಗಿದೆ.
ಸೌಪರ್ಣಿಕಾಳನ್ನು ಹತ್ಯೆ ಮಾಡಿಸಲು ಸುಪಾರಿ ಕಿಲ್ಲರ್ಗೆ ಸಾನಿಯಾ 25 ಲಕ್ಷ ರೂಪಾಯಿ ನೀಡಿದ್ದಳು. ಆದರೆ ಇದನ್ನು ಸ್ವಂತ ಖಾತೆಯಿಂದ ನೀಡಿರಲಿಲ್ಲ. ಬದಲಿಗೆ, ರತ್ನಮಾಲಾ ನಡೆಸುತ್ತಿರುವ ಶಿಕ್ಷಣ ಸಂಸ್ಥೆಯಿಂದ ತೆಗೆದು ಕೊಟ್ಟಿದ್ದಳು. ಈ ಮೂಲಕ ಎಂಡಿ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡಿದ್ದಳು. ಈ ವಿಚಾರ ರತ್ನಮಾಲಾಗೆ ಗೊತ್ತಾಗಿದೆ. ಎರಡು ದಿನದಲ್ಲಿ ಹಣ ಹಿಂದಿರುಗಿಸಬೇಕು ಅಥವಾ ಆ ಹಣ ಎಲ್ಲಿ ಖರ್ಚಾಗಿದೆ ಎಂಬ ಬಗ್ಗೆ ಮಾಹಿತಿ ನೀಡಬೇಕು ಎನ್ನುವ ಆದೇಶ ರತ್ನಮಾಲಾ ಕಡೆಯಿಂದ ಬಂದಿತ್ತು. ಅಂತೆಯೇ ಸಾನಿಯಾ ದುಡ್ಡನ್ನು ಹೊಂದಿಸಿದ್ದಾಳೆ. ಅದನ್ನು ರತ್ನಮಾಲಾಗೂ ನೀಡಿದ್ದಾಳೆ. ಆಗ ಸಾನಿಯಾಗೆ ಶಾಕ್ ಆಗುವಂತಹ ಘಟನೆ ನಡೆಯಿತು.
ರತ್ನಮಾಲಾಗೆ 25 ಲಕ್ಷ ರೂಪಾಯಿ ನೀಡಿದ ಸಾನಿಯಾ, ‘ನನ್ನ ಎಂಡಿ ಪಟ್ಟ ಹೋಗುವುದಿಲ್ಲ ಅಲ್ಲವೇ’ ಎಂದು ನಗೆ ಬೀರುತ್ತಾ ಪ್ರಶ್ನೆ ಕೇಳಿದಳು. ಇದಕ್ಕೆ ರತ್ನಮಾಲಾ ಸರಿಯಾಗಿ ತಿರುಗೇಟು ನೀಡಿದ್ದಾಳೆ. ‘ಹಣ ದುರ್ಬಳಕೆ ಆಗಿದೆ ಎಂಬುದು ನನ್ನ ಗಮನಕ್ಕೆ ಬಂದ ನಂತರವಷ್ಟೇ ನೀನು ಹಣ ಹಿಂದಿರುಗಿಸೋಕೆ ಬಂದಿದ್ದೀಯಾ. ಒಂದೊಮ್ಮೆ ಆ ವಿಚಾರ ನನ್ನ ಗಮನಕ್ಕೆ ಬರದೆ ಇದ್ದಿದ್ದರೆ ಏನು ಗತಿ ಆಗಿತ್ತು?’ ಎಂದು ಕೇಳಿದಳು ರತ್ನಮಾಲ. ಈ ವೇಳೆ ಸಾನಿಯಾಗೆ ಏನು ಉತ್ತರ ಹೇಳಬೇಕು ಎನ್ನುವುದೇ ಗೊತ್ತಾಗಿಲ್ಲ.
ಮುಂದುವರಿದು, ‘ನೀನು ಎಂಡಿ ಆಗಿ ಏನೆಲ್ಲ ಸಾಧನೆ ಮಾಡಿದ್ದೀಯಾ ಎಂಬುದು ಗೊತ್ತಾಗಬೇಕಿದೆ. ನಾನೊಂದು ರಿವ್ಯೂ ಮೀಟಿಂಗ್ ಕರೆಯುತ್ತಿದ್ದೇನೆ. ಅದರಲ್ಲಿ ಯಾವ ರೀತಿಯ ಪ್ರತಿಕ್ರಿಯೆ ಬರುತ್ತದೆ ಎಂಬುದನ್ನು ಆಧರಿಸಿ, ನಿನ್ನ ಸ್ಥಾನ ಉಳಿಯುತ್ತದೆಯೋ ಅಥವಾ ಇಲ್ಲವೋ ಎಂಬುದು ಗೊತ್ತಾಗುತ್ತದೆ’ ಎಂದಳು ರತ್ನಮಾಲಾ.
ಇದನ್ನೂ ಓದಿ: ‘ಕನ್ನಡತಿ’ ನಟಿ ರಂಜನಿ ರಾಘವನ್ ಬಳಿ ಎಷ್ಟು ದುಡ್ಡಿದೆ? ಅಚ್ಚರಿಯ ವಿಚಾರ ಬಾಯ್ಬಿಟ್ಟ ಭುವಿ
‘ಅವಕಾಶ ಇದ್ದಿದ್ರೆ ನಾನು ಒಂದು ಝೂ ಮಾಡ್ತಿದ್ದೆ’; ‘ಕನ್ನಡತಿ’ ನಟ ಕಿರಣ್ ರಾಜ್