ಎಂ.ಡಿ. ಪಟ್ಟ ಹೋಗೋ ಟೈಮ್​​ ಅಲ್ಲಿ ಕೈಮೇಲೆ MD ಎಂದು ಹಚ್ಚೆ ಹಾಕಿಸಿಕೊಂಡ ಸಾನಿಯಾ

| Updated By: ರಾಜೇಶ್ ದುಗ್ಗುಮನೆ

Updated on: Oct 20, 2022 | 9:07 AM

ರತ್ನಮಾಲಾ ಹೇಳಿದ ಮಾತಿನಿಂದ ಸಾನಿಯಾಗೆ ಖುಷಿಯಾಗಿದೆ. ಆಕೆ ಹಿರಿಹಿರಿ ಹಿಗ್ಗಿದ್ದಾಳೆ. ತನಗೆ ಎಂ.ಡಿ. ಪಟ್ಟ ಸಿಕ್ಕಿತು ಎಂದು ಖುಷಿಪಟ್ಟಿದ್ದಾಳೆ. ಆದರೆ, ಈ ಕಥೆಯಲ್ಲಿ ಅಸಲಿಯತ್ತು ಬೇರೆಯೇ ಇದೆ.

ಎಂ.ಡಿ. ಪಟ್ಟ ಹೋಗೋ ಟೈಮ್​​ ಅಲ್ಲಿ ಕೈಮೇಲೆ MD ಎಂದು ಹಚ್ಚೆ ಹಾಕಿಸಿಕೊಂಡ ಸಾನಿಯಾ
ಸಾನಿಯಾ
Follow us on

‘ಕನ್ನಡತಿ’ (Kannadathi) ಧಾರಾವಾಹಿಯಲ್ಲಿ ಸಾನಿಯಾ ಪಾತ್ರ ಸಾಕಷ್ಟು ಹೈಲೈಟ್ ಆಗುತ್ತಿದೆ. ಆಕೆ ಮಾಲಾ ಶಿಕ್ಷಣ ಸಂಸ್ಥೆಗೆ ಎಂ.ಡಿ. ಆಗಿದ್ದಾಳೆ. ಆದರೆ, ಆಕೆಯ ಸ್ಥಾನ ಹೆಚ್ಚು ದಿನ ಉಳಿಯೋದು ಅನುಮಾನವೇ. ಇದು ಬಹುತೇಕರಿಗೆ ಗೊತ್ತಾಗಿದೆ. ಆದರೆ, ಮಾಲಾ ಸಂಸ್ಥೆಯ ಮುಖ್ಯಸ್ಥೆ ರತ್ನಮಾಲಾ ಹೇಳಿದ ಒಂದು ಮಾತಿನಿಂದ ಸಾನಿಯಾಗೆ ಕೊಂಬು ಬಂದಿದೆ. ಆಕೆ ಆತುರದ ನಿರ್ಧಾರ ತೆಗೆದುಕೊಂಡಿದ್ದಾಳೆ. ಎಂ.ಡಿ. ಎಂದು ಹಚ್ಚೆ ಹಾಕಿಸಿಕೊಂಡಿದ್ದಾಳೆ. ಮ್ಯಾನೇಜಿಂಗ್ ಡೈರೆಕ್ಟರ್ ಪೋಸ್ಟ್ ಹೋಗೋ ಸಂದರ್ಭದಲ್ಲಿ ಸಾನಿಯಾ ಎಂ.ಡಿ ಎಂದು ಬರೆಸಿಕೊಂಡಿದ್ದಾಳೆ ಎಂಬುದಾಗಿ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಅಕ್ಟೋಬರ್ 19ರ ಎಪಿಸೋಡ್​ನಲ್ಲಿ ಏನೆಲ್ಲ ಆಯ್ತು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಆತುರಕ್ಕೆ ಬಿದ್ದ ಸಾನಿಯಾ

ರತ್ನಮಾಲಾಗೆ ಮರೆವಿನ ಕಾಯಿಲೆ ಶುರುವಾಗಿದೆ. ಯಾವುದೋ ಸಂದರ್ಭದಲ್ಲಿ ಇನ್ನಾವುದೋ ಮಾತನ್ನು ಅವಳು ಆಡುತ್ತಾಳೆ. ಆಕೆಗೆ ತಾನು ಏನು ಹೇಳುತ್ತಿದ್ದೇನೆ ಎಂಬ ಪರಿಜ್ಞಾನವೇ ಇಲ್ಲದಂತಾಗಿದೆ. ಇತ್ತೀಚೆಗೆ ಸಾನಿಯಾಳನ್ನು ನೋಡಿ ಭುವಿ ಎಂದುಕೊಂಡಳು ರತ್ನಮಾಲಾ. ಈ ಕಾರಣಕ್ಕೆ ‘ನಿನ್ನಂತಹ ಬುದ್ಧಿವಂತರ ಅಗತ್ಯತೆ ಸಂಸ್ಥೆಗೆ ಇದೆ. ಹೀಗಾಗಿ, ನೀನು ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗ್ತೀಯಾ’ ಎಂದು ಪ್ರಶ್ನೆ ಮಾಡಿದ್ದಾಳೆ ರತ್ನಮಾಲಾ. ಆಕೆ ಇದನ್ನು ಹೇಳಬೇಕು ಎಂದುಕೊಂಡಿದ್ದು ಭುವಿಗೆ. ಆದರೆ, ಹೇಳಿದ್ದು ಸಾನಿಯಾಗೆ.

ಇದನ್ನೂ ಓದಿ
‘ಕನ್ನಡತಿ’ ಧಾರಾವಾಹಿಯಲ್ಲಿ ಕೊನೆಯಾಗಲಿದೆ ರತ್ನಮಾಲಾ ಪಾತ್ರ? ಅನುಮಾನ ಹುಟ್ಟಿಸಿತು ಆ ಒಂದು ಘಟನೆ
ರತ್ನಮಾಲಾ ಚಿಂತೆಗೆ ಕಾರಣವಾಗಿದ್ದು ಸಾನಿಯಾ ಅಲ್ಲ ಹರ್ಷ; ಬೇಸರ ತೋಡಿಕೊಂಡ ಅಮ್ಮಮ್ಮ
ಏಕವಚನದಲ್ಲಿ ಬೈಸಿಕೊಂಡು, ಆಸ್ಪತ್ರೆಯಲ್ಲಿ ನಿದ್ರಿಸಿದ ಸಾನಿಯಾ; ಆದ ಅವಮಾನಕ್ಕೆ ಸೇಡು ತೀರಿಸಿಕೊಳ್ತಾಳಾ ರತ್ನಮಾಲಾ ಸೊಸೆ?
ಹಿಂದಿಗೆ ಡಬ್, ಮರಾಠಿಗೆ ರಿಮೇಕ್​ ಆದ ‘ಕನ್ನಡತಿ’: ಈ ಧಾರಾವಾಹಿಗೆ ಹೇಗಿದೆ ರೆಸ್ಪಾನ್ಸ್? ಇಲ್ಲಿದೆ ಉತ್ತರ

ರತ್ನಮಾಲಾ ಹೇಳಿದ ಮಾತಿನಿಂದ ಸಾನಿಯಾಗೆ ಖುಷಿಯಾಗಿದೆ. ಆಕೆ ಹಿರಿಹಿರಿ ಹಿಗ್ಗಿದ್ದಾಳೆ. ತನಗೆ ಎಂ.ಡಿ. ಪಟ್ಟ ಸಿಕ್ಕಿತು ಎಂದು ಖುಷಿಪಟ್ಟಿದ್ದಾಳೆ. ಆದರೆ, ಈ ಕಥೆಯಲ್ಲಿ ಅಸಲಿಯತ್ತು ಬೇರೆಯೇ ಇದೆ. ಇದು ಅವಳಿಗೆ ತಿಳಿದಿಲ್ಲ. ಒಂದು ಕಡೆ ಸಾನಿಯಾಳನ್ನು ಎಂ.ಡಿ ಪಟ್ಟದಿಂದ ತೆಗೆಯಬೇಕು ಎಂಬ ನಿರ್ಧಾರಕ್ಕೆ ಬರಲಾಗಿದೆ. ಈಗಾಗಲೇ ರತ್ನಮಾಲಾ ಅದನ್ನು ನಿರ್ಧರಿಸಿ ಆಗಿದೆ. ಸೂಕ್ತ ಸಮಯಕ್ಕಾಗಿ ಆಕೆ ಕಾಯುತ್ತಿದ್ದಾಳೆ. ಇತ್ತ ಸಾನಿಯಾ ತಪ್ಪಾಗಿ ತಿಳಿದುಕೊಂಡು ಎಂ.ಡಿ ಎಂದು ಹಚ್ಚೆ ಹಾಕಿಸಿಕೊಂಡಿದ್ದಾಳೆ.

ಜೈಲಿನಿಂದ ಹೊರ ಬಂದ ಹರ್ಷ

ಹರ್ಷನನ್ನು ಸಾನಿಯಾ ಅರೆಸ್ಟ್ ಮಾಡಿಸಿದ್ದಳು. ತನ್ನನ್ನು ಕೊಲ್ಲಲು ಆತ ಪ್ರಯತ್ನಪಟ್ಟಿದ್ದ ಎಂದು ದೂರು ನೀಡಿದ್ದಳು. ದೂರು ನೀಡುವಾಗ ಸಖತ್ ಜಬರ್ದಸ್ತಿ ಮಾಡಿದ್ದಳು ಸಾನಿಯಾ. ಆ ಬಳಿಕ ಆಕೆ ಉಲ್ಟಾ ಹೊಡೆದಿದ್ದಾಳೆ. ಹರ್ಷ ಜೈಲಿಗೆ ಹೋದ ಮರುಕ್ಷಣವೇ ತಾನು ಕೊಟ್ಟ ಕಂಪ್ಲೇಂಟ್ ಕಾಪಿಯನ್ನು ಲೈಟರ್​​ನಿಂದ ಸುಟ್ಟು ಹಾಕಿದ್ದಾಳೆ.

ಎಂ.ಡಿ ಪಟ್ಟ ಪರ್ಮನೆಂಟ್ ಎಂಬ ಭಾವನೆಯಲ್ಲಿ ಸಾನಿಯಾ ಈ ರೀತಿ ಮಾಡಿದ್ದಾಳೆ. ಬೇಕಾದಾಗ ಜೈಲಿಗೆ ಕಳುಹಿಸ್ತೀನಿ, ಬೇಡ ಎಂದಾಗ ಮರಳಿ ಕರೆದುಕೊಳ್ತೀನಿ ಎಂಬುದನ್ನು ತೋರಿಸುವ ಉದ್ದೇಶದಿಂದ ಹರ್ಷನನ್ನು ಸಾನಿಯಾ ಅರೆಸ್ಟ್ ಮಾಡಿಸಿದ್ದಳು. ಆದರೆ, ಬಂಧನಕ್ಕೆ ಒಳಗಾದ ಕೆಲವೇ ಕ್ಷಣಗಳಲ್ಲಿ ಆತ ಹೊರ ಬಂದಿದ್ದಾನೆ.

ಮರಳಿದ ವರುಧಿನಿ

ವರುಧಿನಿ ಪಾತ್ರ ಮಾಡುತ್ತಿದ್ದ ಸಾರಾ ಅಣ್ಣಯ್ಯ ಅವರು ಉತ್ತರ ಭಾರತದ ಪ್ರವಾಸಕ್ಕೆ ತೆರಳಿದ್ದರು. ಈ ಕಾರಣಕ್ಕೆ ವರುಧಿನಿ ಪಾತ್ರ ಕಾಣಿಸಿಕೊಂಡಿರಲಿಲ್ಲ. ಈಗ ಸಾರಾ ಮತ್ತೆ ಮರಳಿದ್ದಾರೆ. ಹರ್ಷ ಹಾಗೂ ಭುವಿಗೆ ವಿಚ್ಛೇದನ ಕೊಡಿಸಬೇಕು ಎಂದು ಆಕೆ ಪ್ರಯತ್ನಪಡುತ್ತಿದ್ದಾಳೆ. ಈಗ ಹರ್ಷ ಹಾಗೂ ಭುವಿಯ ಮದುವೆ ನೋಂದಣಿ ಕಾರ್ಯ ನಡೆಯಬೇಕಿದೆ. ಇದಕ್ಕೆ ವರುಧಿನಿಯೇ ಮುಂದಾಳತ್ವ ವಹಿಸುತ್ತಿದ್ದಾಳೆ. ನೋಂದಣಿ ಸಂದರ್ಭದಲ್ಲಿ ಇಬ್ಬರ ಬಳಿಯಿಂದ ವಿಚ್ಛೇದನ ಪತ್ರಕ್ಕೆ ಸಹಿ ಹಾಕಿಸಿಕೊಳ್ಳುವ ಪ್ಲ್ಯಾನ್​ನಲ್ಲಿ ವರುಧಿನಿ ಇದ್ದಾಳೆ.

ರತ್ನಮಾಲಾಗೆ ಮೂಡಿದೆ ಅನುಮಾನ

ರತ್ನಮಾಲಾಗೆ ತನ್ನ ನಡೆಯಮೇಲೆ ಅನುಮಾನ ಮೂಡಿ ಬಂದಿದೆ. ಎಂ.ಡಿ ಪಟ್ಟದ ವಿಚಾರವನ್ನು ಆಕೆ ಭುವಿಗೆ ಹೇಳಿದ್ದಾಳೋ ಅಥವಾ ಬೇರೆ ಯಾರಿಗೋ ಹೇಳಿದ್ದಾಳೋ ಎಂಬ ಅನುಮಾನ ಕಾಡಿದೆ. ಈ ವಿಚಾರವನ್ನು ಆಕೆ ಭುವಿ ಬಳಿಯೂ ಪ್ರಸ್ತಾಪ ಮಾಡಿದ್ದಾಳೆ.

ಶ್ರೀಲಕ್ಷ್ಮಿ ಎಚ್.

Published On - 6:30 am, Thu, 20 October 22