‘ಕನ್ನಡತಿ’ ರಮೋಲಾ ಕೊಟ್ಟ ಖಡಕ್​ ಕೌಂಟರ್​ಗೆ ಸೈಲೆಂಟ್​ ಆದ ನಿರಂಜನ್​

| Updated By: ರಾಜೇಶ್ ದುಗ್ಗುಮನೆ

Updated on: Aug 30, 2021 | 8:51 PM

ನಿರಂಜನ್​ ಮನೆಯಲ್ಲಿ ಎಲ್ಲರ ಗಮನ ಸೆಳೆಯೋಕೆ ಯಶಸ್ವಿಯಾಗಿದ್ದಾರೆ. ಅವರು ಮಾಡುವ ಕಾಮಿಡಿಗಳು ವೀಕ್ಷಕರಿಗೆ ಇಷ್ಟವಾಗುತ್ತಿದೆ. ಮನೆಯಲ್ಲಿ ಅವರು ಸಂದರ್ಶಕರಾಗಿದ್ದಾರೆ.

‘ಕನ್ನಡತಿ’ ರಮೋಲಾ ಕೊಟ್ಟ ಖಡಕ್​ ಕೌಂಟರ್​ಗೆ ಸೈಲೆಂಟ್​ ಆದ ನಿರಂಜನ್​
‘ಕನ್ನಡತಿ’ ರಮೋಲಾ ಕೊಟ್ಟ ಖಡಕ್​ ಕೌಂಟರ್​ಗೆ ಸೈಲೆಂಟ್​ ಆದ ನಿರಂಜನ್​
Follow us on

ಕನ್ನಡತಿ ಧಾರಾವಾಹಿಯಲ್ಲಿ ಸಾನಿಯಾ ಪಾತ್ರದ ಮೂಲಕ ಹೆಚ್ಚು ಗುರುತಿಸಿಕೊಂಡ ರಮೋಲಾ ಈಗ ಬಿಗ್​ ಬಾಸ್​ ಮಿನಿ ಸೀಸನ್​ನಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅಡುಗೆ ಮಾಡೋಕೆ ಬರದಿದ್ದರೂ ಅವರು ಉತ್ತಮವಾಗಿ ಅಡುಗೆ ತಯಾರಿಸಿ ಎಲ್ಲರಿಂದ ಮೆಚ್ಚುಗೆ ಗಳಿಸಿಕೊಂಡಿದ್ದರು. ಈಗ ಅವರು ನಿರಂಜನ್​ಗೆ ಕೌಂಟರ್​ ಕೊಟ್ಟು ಸುದ್ದಿಯಾಗಿದ್ದಾರೆ. ಕಲರ್ಸ್​ ಕನ್ನಡ ವಾಹಿನಿ ಈ ಬಗ್ಗೆ ಪ್ರೋಮೋ  ಹಂಚಿಕೊಂಡಿದೆ. ಇದನ್ನು ನೋಡಿದ ಅನೇಕರು ಸಾಕಷ್ಟು ನಕ್ಕಿದ್ದಾರೆ.

ನಿರಂಜನ್​ ಮನೆಯಲ್ಲಿ ಎಲ್ಲರ ಗಮನ ಸೆಳೆಯೋಕೆ ಯಶಸ್ವಿಯಾಗಿದ್ದಾರೆ. ಅವರು ಮಾಡುವ ಕಾಮಿಡಿಗಳು ವೀಕ್ಷಕರಿಗೆ ಇಷ್ಟವಾಗುತ್ತಿದೆ. ಮನೆಯಲ್ಲಿ ಅವರು ಸಂದರ್ಶಕರಾಗಿದ್ದಾರೆ. ‘ಕಷಾಯ ವಿತ್​ ನಿರಂಜನ್​’  ಹೆಸರಿನ ಶೋ ನಡೆಸಿಕೊಟ್ಟಿದ್ದಾರೆ. ಇದಕ್ಕೆ ವಿಶೇಷ ಅತಿಥಿಯಾಗಿ ಬಂದಿದ್ದು ರಮೋಲಾ.

‘ಕನ್ನಡತಿ ಧಾರಾವಾಹಿ ಖ್ಯಾತಿಯ ರಮೋಲಾ ಅವರು ಇಂದು ನಮ್ಮ ಶೋಗೆ ಆಗಮಿಸಿದ್ದಾರೆ. ಅವರನ್ನು ನಾವು ಸ್ವಾಗತಿಸುತ್ತಿದ್ದೇವೆ. ನಮ್ಮ ಶೋ 25 ಸಂಚಿಕೆ ಪೂರೈಸಿದೆ’ ಎಂದು ಮಾತು ಆರಂಭಿಸಿದರು ನಿರಂಜನ್​. ಮುಂದುವರಿದು, ‘ಈ ವಿಶೇಷ ದಿನದಂದು ಅತಿಥಿಯಾಗಿ ನೀವು ಬಂದಿದ್ದೀರಿ. ಈ ದಿನ ತುಂಬಾನೇ ದೊಡ್ಡದೊಡ್ಡ ವ್ಯಕ್ತಿಗಳು ಇಲ್ಲಿಗೆ ಆಗಮಿಸುತ್ತಾರೆ ಎಂದುಕೊಂಡಿದ್ದೆ. ಆದರೆ, ಯಾರೂ ಖಾಲಿ ಇರಲಿಲ್ಲ. ನೀವು ಬಂದಿದ್ದೀರಿ. ಅದೃಷ್ಟವಂತರಿಗೆ ಮಾತ್ರ ಇಲ್ಲಿಗೆ ಬರೋಕೆ ಸಾಧ್ಯ. ಅದೃಷ್ಟವಂತರು ಬಂದು, ಅದೃಷ್ಟವನ್ನು ತೆಗೆದುಕೊಂಡು ಹೋಗುವ ವೇದಿಕೆ ಇದೆ. ಈಗ ನೀವು ಇಲ್ಲಿಗೆ ಬಂದಿದ್ದೀರಿ. ಹೇಗನಿಸುತ್ತಿದೆ’ ಎಂದು ತುಂಬಾನೇ ಗತ್ತಿನಲ್ಲಿ ಕೇಳಿದರು ನಿರಂಜನ್​. ಇದಕ್ಕೆ ರಮೋಲಾ ಒಳ್ಳೆಯ ಕೌಂಟರ್​ ನೀಡಿದ್ದಾರೆ.

‘ನಿರಂಜನ್​ ಹೇಳಿದಂತೆ ಯಾರೂ ಈ ಶೋಗೆ ಬರೋಕೆ ರೆಡಿ ಇರಲಿಲ್ಲ. ಹೀಗಾಗಿ ನಾನು ಬಂದೆ. ಅವರು ಪಾಪ ಇಲ್ಲಿ ನೊಣ ಹೊಡೆಯುತ್ತಾ ಕೂರುತ್ತಿದ್ದರು. ನನಗೆ ನೋಡೋಕೆ ಆಗಿಲ್ಲ. ಅದಕ್ಕೆ ಬಂದೆ’ ಎಂದಿದ್ದಾರೆ ರಮೋಲಾ. ಇದನ್ನು ಕೇಳಿ ನಿರಂಜನ್​ಗೆ ಏನು ಉತ್ತರಿಸಬೇಕು ಎಂಬುದೆ ಗೊತ್ತಾಗಲಿಲ್ಲ.

ಇದನ್ನೂ ಓದಿ: ಬಿಗ್​ ಬಾಸ್​ ಮಿನಿ ಸೀಸನ್​ ಫಿನಾಲೆಗೆ ಸಿಂಹಾಸನವೇರಿ ಬಂದ ಕಿಚ್ಚ; ಇಲ್ಲಿದೆ ಅದ್ದೂರಿ ವೇದಿಕೆಯ ಝಲಕ್​

ಕನ್ನಡತಿಯಲ್ಲಿ ಖಡಕ್​ ವಿಲನ್​ ರಮೋಲಾ ನಿಜ ಜೀವನದಲ್ಲಿ ಹೀಗಿದ್ದಾರಾ?; ಸಣ್ಣ ಘಟನೆಯಿಂದ ಎಲ್ಲವೂ ಗೊತ್ತಾಯ್ತು

Published On - 8:49 pm, Mon, 30 August 21