ಕಲೆಕ್ಷನ್​​ನಲ್ಲಿ ‘ಕೆಜಿಎಫ್’ ದಾಖಲೆ ಮುರಿಯಲು ರೆಡಿ ಆದ ‘ಕಾಂತಾರ’; ಸೃಷ್ಟಿ ಆಗಲಿದೆ ಹೊಸ ರೆಕಾರ್ಡ್​

| Updated By: ರಾಜೇಶ್ ದುಗ್ಗುಮನೆ

Updated on: Oct 19, 2022 | 4:20 PM

ತೆಲುಗು ವರ್ಷನ್​ನಿಂದ ಚಿತ್ರಕ್ಕೆ 16 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಈ ವಾರಾಂತ್ಯದ ವೇಳೆಗೆ ‘ಕೆಜಿಎಫ್’ ಕಲೆಕ್ಷನ್​ ಅನ್ನು ‘ಕಾಂತಾರ’ ಮೀರಿಸಲಿದೆ.

ಕಲೆಕ್ಷನ್​​ನಲ್ಲಿ ‘ಕೆಜಿಎಫ್’ ದಾಖಲೆ ಮುರಿಯಲು ರೆಡಿ ಆದ ‘ಕಾಂತಾರ’; ಸೃಷ್ಟಿ ಆಗಲಿದೆ ಹೊಸ ರೆಕಾರ್ಡ್​
ರಿಷಬ್-ಯಶ್
Follow us on

ಪ್ರಶಾಂತ್ ನೀಲ್ (Prashanth Neel)​ ನಿರ್ದೇಶನದ ‘ಕೆಜಿಎಫ್’ ಸಿನಿಮಾ ಹಲವು ದಾಖಲೆಗಳನ್ನು ಸೃಷ್ಟಿ ಮಾಡಿತ್ತು. ಈ ಚಿತ್ರ ನೂರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಬೀಗಿತ್ತು. ಈ ಚಿತ್ರ ನಿರ್ಮಾಣ ಮಾಡಿದ್ದ ವಿಜಯ್ ಕಿರಗಂದೂರು ಅವರ ಒಡೆತನದ ‘ಹೊಂಬಾಳೆ ಫಿಲ್ಮ್ಸ್​’ ಅಡಿಯಲ್ಲಿ ‘ಕಾಂತಾರ’ (Kantara Movie) ಮೂಡಿ ಬಂದಿದೆ. ಅಚ್ಚರಿ ಎಂದರೆ ತೆಲುಗು ನಾಡಿನಲ್ಲಿ ‘ಕೆಜಿಎಫ್’ ದಾಖಲೆಯನ್ನು ಮುರಿಯಲು ‘ಕಾಂತಾರ’ ರೆಡಿ ಆಗಿದೆ. ಆಂಧ್ರ ಹಾಗೂ ತೆಲಂಗಾಣ ಭಾಗದಲ್ಲಿ ಈ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ‘ಕಾಂತಾರ’ ಸಿನಿಮಾ ಸೆಪ್ಟೆಂಬರ್ 30ರಂದು ಕನ್ನಡದಲ್ಲಿ ತೆರೆಗೆ ಬಂತು. ಈ ಚಿತ್ರವನ್ನು ಪರಭಾಷಿಗರು ಕನ್ನಡದಲ್ಲಿ ನೋಡಿಯೇ ಎಂಜಾಯ್ ಮಾಡಿದರು. ಬಳಿಕ ಬೇಡಿಕೆ ಹೆಚ್ಚಿದ್ದರಿಂದ ಈ ಸಿನಿಮಾ ಹಿಂದಿ, ತೆಲುಗು, ತಮಿಳಿನಲ್ಲಿ ರಿಲೀಸ್ ಆಯಿತು. ಎಲ್ಲಾ ಭಾಷೆಗಳಲ್ಲಿ ಚಿತ್ರ ಭರ್ಜರಿ ಕಲೆಕ್ಷನ್ ಮಾಡಿ ಬೀಗುತ್ತಿದೆ. ಈಗ ಆಂಧ್ರ-ತೆಲಂಗಾಣದಲ್ಲಿ ‘ಕೆಜಿಎಫ್’ ಮಾಡಿದ ಕಲೆಕ್ಷನ್ ಮುರಿಯಲು ಈ ಸಿನಿಮಾ ರೆಡಿ ಆಗಿದೆ.

ತೆಲುಗು ವರ್ಷನ್​ನಿಂದ ಚಿತ್ರಕ್ಕೆ 16 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಈ ವಾರಾಂತ್ಯದ ವೇಳೆಗೆ ‘ಕೆಜಿಎಫ್’ ಕಲೆಕ್ಷನ್​ ಅನ್ನು ‘ಕಾಂತಾರ’ ಮೀರಿಸಲಿದೆ. ‘ಕೆಜಿಎಫ್​’ ತೆಲುಗು ವರ್ಷನ್​ನಿಂದ 24 ಕೋಟಿ ರೂಪಾಯಿ ಕಲೆಕ್ಷನ್ ಆಗಿತ್ತು. ಈಗ ಈ ದಾಖಲೆಯನ್ನು ‘ಕಾಂತಾರ’ ಮುರಿಯಲಿದೆ ಅನ್ನೋದು ವಿಶೇಷ.

ಇದನ್ನೂ ಓದಿ
Fact Check: ‘ಕೆಜಿಎಫ್​ 3’ ಟ್ರೇಲರ್​ ಬಿಡುಗಡೆ ಆಗಿದ್ಯಾ? ವೈರಲ್ ಆಗಿರುವ ವಿಡಿಯೋದ ಅಸಲಿಯತ್ತು ಇಲ್ಲಿದೆ
KGF 3: ‘ಇನ್ನೂ ಭರ್ಜರಿಯಾದ ದೃಶ್ಯಗಳಿವೆ’: ‘ಕೆಜಿಎಫ್​ 3’ ಬಗ್ಗೆ ಮಾಹಿತಿ ಬಹಿರಂಗ ಮಾಡಿದ ಯಶ್​​
‘ಕೆಜಿಎಫ್​ 2’ ಚಿತ್ರದ ಮುಂದುವರಿದ ಭಾಗವೇ ‘ಸಲಾರ್​’? ‘ಕೆಜಿಎಫ್​ 3’ ಪ್ರಶ್ನೆಗೆ ಉತ್ತರ ಹುಡುಕಿದ ಫ್ಯಾನ್ಸ್​
‘ಕೆಜಿಎಫ್​ 3ನೇ ಪಾರ್ಟ್​ ಬರಲಿದೆ’: ಭವಿಷ್ಯ ನುಡಿದ ಪ್ರೇಕ್ಷಕರು; ಯಶ್​ ಫ್ಯಾನ್ಸ್​ ಹೀಗೆ ಹೇಳ್ತಿರೋದು ಏಕೆ?

ಎಲ್ಲಾ ಭಾಷೆಗಳಿಂದ ಸೇರಿ ‘ಕಾಂತಾರ’ ಚಿತ್ರದ ಕಲೆಕ್ಷನ್ ನೂರು ಕೋಟಿ ರೂಪಾಯಿ ದಾಟಿದೆ. 15-20 ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧವಾದ ಈ ಸಿನಿಮಾ ಇಷ್ಟು ದೊಡ್ಡ ಮೊತ್ತದ ಕಲೆಕ್ಷನ್ ಮಾಡಿದ್ದರಿಂದ ‘ಹೊಂಬಾಳೆ ಫಿಲ್ಮ್ಸ್​​’ಗೆ ಒಳ್ಳೆಯ ಲಾಭ ಆಗಿದೆ.

ಇದನ್ನೂ ಓದಿ: Kantara: ‘ಭೂತಕೋಲ ಹಿಂದೂ ಸಂಸ್ಕೃತಿಗೆ ಸೇರುತ್ತೆ ಅಂತ ರಿಷಬ್ ಶೆಟ್ಟಿ ಹೇಳಿದ್ದು ನಿಜವಲ್ಲ’: ನಟ ಚೇತನ್​ ತಕರಾರು

ಈ ವರ್ಷ ಕನ್ನಡದ ಅನೇಕ ಚಿತ್ರಗಳು ಫರಭಾಷೆಯಲ್ಲಿ ಸದ್ದು ಮಾಡಿವೆ. ‘ಜೇಮ್ಸ್​’, ‘ವಿಕ್ರಾಂತ್ ರೋಣ’, ‘ಕೆಜಿಎಫ್ 2’, ‘777 ಚಾರ್ಲಿ’ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಈ ಸಾಲಿಗೆ ಈಗ ‘ಕಾಂತಾರ’ ಕೂಡ ಸೇರ್ಪಡೆ ಆಗಿದೆ. ಶೀಘ್ರವೇ ಈ ಚಿತ್ರ 200 ಕೋಟಿ ರೂಪಾಯಿ ಕ್ಲಬ್ ಸೇರಿದರೂ ಅಚ್ಚರಿ ಏನಿಲ್ಲ.