ಕಪಿಲ್ ಶರ್ಮಾ ಸಾರಥ್ಯದ ‘ದಿ ಕಪಿಲ್ ಶರ್ಮಾ ಶೋ’ (The Kapil Sharma Show) ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡಿದೆ. ಆದರೆ, ಇದನ್ನು ಬೈಕಾಟ್ ಮಾಡಬೇಕು ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಆಗ್ರಹಿಸಿದ್ದರು. ಇದಕ್ಕೆ ಕಾರಣವಾಗಿದ್ದು, ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಮಾಡಿದ ಒಂದು ಟ್ವೀಟ್. ಕಮರ್ಷಿಯಲ್ ಸಿನಿಮಾ ಅಲ್ಲ ಎನ್ನುವ ಕಾರಣಕ್ಕೆ ಈ ಚಿತ್ರಕ್ಕೆ ಕಪಿಲ್ ಶರ್ಮಾ ಶೋಗೆ ಆಮಂತ್ರಿಸೋಕೆ ನಿರಾಕರಿಸಲಾಗಿದೆ ಎಂದು ವಿವೇಕ್ ಆರೋಪಿಸಿದ್ದರು. ಇದರಿಂದ ಕೋಪಗೊಂಡ ಕೆಲವರು, ಕಪಿಲ್ ಶರ್ಮಾ ಶೋ ಬೈಕಾಟ್ ಮಾಡಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಆಗ್ರಹಿಸುತ್ತಿದ್ದಾರೆ. ಈ ಎಲ್ಲಾ ವಿಚಾರಗಳ ಬಗ್ಗೆ ಕಪಿಲ್ ಶರ್ಮಾ (Kapil Sharma) ಉತ್ತರ ನೀಡಿದ್ದಾರೆ. ಇದು ನಿಜವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
1990ರಲ್ಲಿ ಕಾಶ್ಮೀರದಲ್ಲಿ ಕಾಶ್ಮೀರಿ ಹಿಂದುಗಳನ್ನು ಹತ್ಯೆ ಮಾಡಿದ ಕಥೆ ಆಧರಿಸಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಸಿದ್ಧಗೊಂಡಿದೆ. ಈ ಸಿನಿಮಾ ತಂಡವನ್ನು ಕಪಿಲ್ ಶರ್ಮಾ ಶೋಗೆ ಕರೆಯದೇ ಇರೋದಕ್ಕೆ ಕೆಲವರು ಅಸಮಾಧಾನಗೊಂಡಿದ್ದಾರೆ. ಈ ಬಗ್ಗೆ ಕಪಿಲ್ ಶರ್ಮಾ ಅವರನ್ನು ಪ್ರಶ್ನೆ ಮಾಡಿದ್ದಾರೆ. ‘ದಿ ಕಾಶ್ಮೀರ್ ಫೈಲ್ಸ್ ಪ್ರಚಾರ ಮಾಡಲು ನೀವು ಏಕೆ ಹೆದರುತ್ತೀರಿ? ವಿವೇಕ್ ಅಗ್ನಿಹೋತ್ರಿ ಮತ್ತು ಅವರ ತಂಡ ನಿಮ್ಮ ಶೋಗೆ ಬರಲು ನೀವು ಏಕೆ ಅನುಮತಿ ನೀಡಿಲ್ಲ?’ ಎಂದು ಅಭಿಮಾನಿಯೋರ್ವ ಪ್ರಶ್ನೆ ಮಾಡಿದ್ದರು. ಇದಕ್ಕೆ ಕಪಿಲ್ ಶರ್ಮಾ ತುಂಬಾನೇ ಶಾಂತ ರೀತಿಯಲ್ಲಿ ಉತ್ತರಿಸಿದ್ದಾರೆ.
‘ಇದು ನಿಜವಲ್ಲ. ನೀವು ಈ ಬಗ್ಗೆ ನನ್ನ ಬಳಿ ಕೇಳಿದ್ದರಿಂದ ನಾನು ಉತ್ತರಿಸಿದ್ದೇನೆ. ಆದರೆ ಈಗಾಗಲೇ ಇದನ್ನು ನಿಜವೆಂದು ಒಪ್ಪಿಕೊಂಡವರಿಗೆ ವಿವರಣೆಯನ್ನು ನೀಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಸೋಶಿಯಲ್ ಮೀಡಿಯಾ ಬಳಕೆದಾರರಿಗೆ ಒಂದು ಸಲಹೆ. ಇಂದಿನ ಸೋಶಿಯಲ್ ಮೀಡಿಯಾ ಜಗತ್ತಿನಲ್ಲಿ ಎಂದಿಗೂ ಒನ್ ಸೈಡ್ ಸ್ಟೋರಿಯನ್ನು ನಂಬಬೇಡಿ. ಧನ್ಯವಾದ’ ಎಂದು ಕಪಿಲ್ ಶರ್ಮಾ ಬರೆದುಕೊಂಡಿದ್ದಾರೆ. ವಿವೇಕ್ ಅವರದ್ದು ಪ್ರಚಾರದ ತಂತ್ರ ಎಂದು ಕೆಲವರು ಟೀಕೆ ಮಾಡಿದ್ದಾರೆ.
यह सच नहीं है rathore साहब ? आपने पूछा इसलिए बता दिया, बाक़ी जिन्होंने सच मान ही लिया उनको explanation देने का क्या फ़ायदा. Just a suggestion as a experienced social media user:- never believe in one sided story in today’s social media world ? dhanyawaad ? https://t.co/pJxmf0JlN5
— Kapil Sharma (@KapilSharmaK9) March 10, 2022
ಇತ್ತೀಚೆಗೆ ಕಪಿಲ್ ಶರ್ಮಾ ಶೋ ಬಗ್ಗೆ ವಿವೇಕ್ ಗಂಭೀರ ಆರೋಪ ಮಾಡಿದ್ದರು. ‘ನಮ್ಮ ಚಿತ್ರದಲ್ಲಿ ದೊಡ್ಡ ತಾರಾ ಬಳಗ ಇಲ್ಲ ಎಂಬ ಕಾರಣಕ್ಕೆ ನಮ್ಮನ್ನು ಕಾರ್ಯಕ್ರಮಕ್ಕೆ ಕರೆಯಲು ಕಪಿಲ್ ಶರ್ಮಾ ನಿರಾಕರಿಸಿದರು’ ಎಂದು ವಿವೇಕ್ ಹೇಳಿದ್ದರು. ಇದಲ್ಲದೆ ಮತ್ತೊಂದು ಟ್ವೀಟ್ ಮಾಡಿದ್ದ ಅವರು, ‘ಕಪಿಲ್ ಶರ್ಮಾ ಶೋಗೆ ಯಾರನ್ನು ಆಹ್ವಾನಿಸಬೇಕು ಎಂಬುದನ್ನು ನಾನು ನಿರ್ಧಾರ ಮಾಡೋಕೆ ಸಾಧ್ಯವಿಲ್ಲ. ಇದು ಅವರು ಮತ್ತು ಅವರ ನಿರ್ಮಾಣ ತಂಡದ ಆಯ್ಕೆ. ಅಮಿತಾಭ್ ಬಚ್ಚನ್ ಅವರು ಒಮ್ಮೆ ಗಾಂಧೀಜಿ ಅವರು ಹೇಳಿದ್ದ ವಾಕ್ಯವನ್ನು ಹೇಳಿದ್ದರು. ಅವರು ರಾಜರು, ನಾವು ಬಡವರು’ ಎಂದು ಬರೆದಿದ್ದರು ವಿವೇಕ್. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.
ಇದನ್ನೂ ಓದಿ: ಕಪಿಲ್ ಶರ್ಮಾ ಕುರಿತು ಬಯೋಪಿಕ್; ಅಧಿಕೃತ ಘೋಷಣೆ ಮಾಡಿದ ಚಿತ್ರತಂಡ
ಅಕ್ಕಿಗೆ ಕಪಿಲ್ ಶರ್ಮಾ ನಂಬಿಕೆ ದ್ರೋಹ; ‘ದಿ ಕಪಿಲ್ ಶರ್ಮಾ ಶೋ’ ಬೈಕಾಟ್ ಮಾಡಿದ ಅಕ್ಷಯ್ ಕುಮಾರ್