
‘ಕರ್ಣ’ ಧಾರಾವಾಹಿಯಲ್ಲಿ (Karna Serial) ಯಾರೂ ಊಹಿಸದ ಘಟನೆ ಒಂದು ನಡೆದಿತ್ತು. ಕರ್ಣ ಪ್ರೀತಿ ಮಾಡಿದ್ದು ನಿಧಿಯನ್ನು. ಆದರೆ, ಆತ ಮದುವೆ ಆಗಿದ್ದು ನಿತ್ಯಾಳನ್ನು. ಇದಕ್ಕೆ ಕರ್ಣನ ತಂದೆ ರಮೇಶ್ ಕಾರಣ. ನಿತ್ಯಾ ಹಾಗೂ ಕರ್ಣನ ಮದುವೆ ನಂತರದಲ್ಲಿ ನಿಧಿ ಸಾಕಷ್ಟು ಬೇಸರ ಮಾಡಿಕೊಂಡಿದ್ದಳು. ಆದರೆ, ಈಗ ನಿಧಿಗೆ ಸತ್ಯ ಗೊತ್ತಾಗುವ ಸಮಯ. ನಿಧಿಗೆ ಕರ್ಣನು ಸತ್ಯ ಹೇಳಿ ಬಿಟ್ಟಿದ್ದಾನೆ. ಈ ಪ್ರೋಮೋನ ಜೀ ಕನ್ನಡ ವಾಹಿನಿಯು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ನಿಧಿ ಅಭಿಮಾನಿಗಳಿಗೆ ನಿಜಕ್ಕೂ ಖುಷಿ ಆಗಿದೆ ಎಂದರೂ ತಪ್ಪಾಗಲಿಕ್ಕಿಲ್ಲ.
ನಿಧಿಯು ಗಂಭಿರವಾಗಿ ಕರ್ಣನ ಪ್ರೀತಿ ಮಾಡಿದ್ದಳು. ಪ್ರೀತಿ ಹೊಸ ತಿರುವು ಪಡೆದುಕೊಳ್ಳುತ್ತಿದೆ ಎನ್ನುವಾಗಲೇ ನಿರ್ದೇಶಕರು ಯಾರೂ ಊಹಿಸದ ಟ್ವಿಸ್ಟ್ ಕೊಟ್ಟರು. ನಿತ್ಯಾ ಪ್ರೀತಿ ಮಾಡುತ್ತಿದ್ದ ತೇಜಸ್ ಮದುವೆಯಿಂದ ಓಡಿ ಹೋಗಿದ್ದ. ಈ ಕಾರಣದಿಂದ ನಿತ್ಯಾಳು ಕರ್ಣನ ಮದುವೆ ಆಗಬೇಕಾಯಿತು. ಇದು ನಿಧಿಗೆ ಹಾಗೂ ಅವರ ಅಭಿಮಾನಿಗಳಿಗೆ ಸಾಕಷ್ಟು ಬೇಸರ ಮೂಡಿಸಿತ್ತು. ಈಗ ಕರ್ಣನ ನಿಜ ಹೇಳುವ ಸಮಯ ಬಂದಿದೆ.
ನಿತ್ಯಾಳ ಹೊಟ್ಟೆಯಲ್ಲಿ ಮಗು ಇದೆ. ಇದಕ್ಕೆ ತಂದೆ ತೇಜಸ್. ಅಕ್ಕ ಪ್ರೆಗ್ನೆಂಟ್ ಎಂಬ ವಿಷಯ ನಿಧಿಗೆ ಗೊತ್ತಾಗಿದ್ದು, ಆಕೆ ಶಾಕ್ಗೆ ಒಳಗಾಗಿದ್ದಾಳೆ. ಆಕೆ ಸಾಕಷ್ಟು ಬೇಸರ ಮಾಡಿಕೊಳ್ಳುತ್ತಾ ಇದ್ದಾಳೆ. ಇದರ ಬಳಿಕವೂ ಕರ್ಣನಿಗೆ ಸತ್ಯ ಮುಚ್ಚಿಡಲು ಸಾಧ್ಯವಾಗಲೇ ಇಲ್ಲ. ಹೀಗಾಗಿ, ಆತ ನಿಜ ಹೇಳುವ ಕೆಲಸ ಮಾಡಿದ್ದಾನೆ. ನಿತ್ಯಾಳ ಬಳಿ ಒಪ್ಪಿಗೆ ಪಡೆದೇ ಈ ಕೆಲಸ ಮಾಡಿದ್ದಾನೆ.
‘ನಾನು ನಿತ್ಯಾಗೆ ತಾಳಿ ಕಟ್ಟಲೇ ಇಲ್ಲ. ಆಕೆಯ ಹೊಟ್ಟೆಯಲ್ಲಿರೋದು ನನ್ನ ಮಗು ಅಲ್ಲ. ಅದಕ್ಕೆ ತಂದೆ ತೇಜಸ್ ಕಾರಣ’ ಎಂದು ಕರ್ಣನು ನಿಧಿಗೆ ಹೇಳುತ್ತಾನೆ. ಈ ವಿಷಯ ಕೇಳಿ ನಿಧಿಗೆ ಸಂಭ್ರಮ ತಾರಕಕ್ಕೇರಿದೆ. ಸದ್ಯದಲ್ಲೇ ಈ ವಿಷಯವನ್ನು ಧಾರಾವಾಹಿಯಲ್ಲಿ ತೋರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ‘ಅಣ್ಣಯ್ಯ’-‘ಕರ್ಣ’ ‘ಮಹಾಸಂಗಮ’ದಲ್ಲಿ ಮಹಾ ತಿರುವು; ನಿತ್ಯಾ ಪ್ರೆಗ್ನೆನ್ಸಿ ವಿಷಯ ಎಲ್ಲರಿಗೂ ತಿಳಿದೋಯ್ತು
ಇಷ್ಟು ದಿನ ನಿಧಿ ಅಭಿಮಾನಿಗಳು ಬೇಸರದಲ್ಲಿ ಇದ್ದರು. ಕರ್ಣ ಹಾಗೂ ನಿಧಿ ಮದುವೆ ಆಗಬೇಕು ಎಂದು ಎಲ್ಲರೂ ಬಯಸಿದ್ದರು. ಆ ಘಟನೆ ಶೀಘ್ರವೇ ನಡೆಯುವ ಸಾಧ್ಯತೆ ಇದೆಯಂತೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.