ಚಪ್ಪಡಿ ಕಲ್ಲು ಎಳೆದರೂ ನಗುತ್ತಲೇ ಇದ್ದಾನೆ ಕರ್ಣ; ರಮೇಶ್ ಶಾಕ್

ಕರ್ಣ ಧಾರಾವಾಹಿಯು ನಿತ್ಯಾ-ಕರ್ಣ ವಿವಾಹದೊಂದಿಗೆ ಮಹತ್ವದ ತಿರುವು ಪಡೆದಿದೆ. ರಮೇಶ್ ಕುತಂತ್ರದಿಂದಾಗಿ ನಿಧಿ ಬದಲಿಗೆ ನಿತ್ಯಾಳನ್ನು ಕರ್ಣ ಮದುವೆಯಾಗಿದ್ದಾನೆ. ಕರ್ಣ ದುಃಖಿತನಾಗುವನೆಂದು ರಮೇಶ್ ನಿರೀಕ್ಷಿಸಿದ್ದರೂ, ಕರ್ಣನ ದಿಟ್ಟ ನಡೆ ರಮೇಶ್‌ಗೆ ಆಘಾತ ಮೂಡಿಸಿದೆ. ಪ್ರೀತಿಸಿದವಳು ಎದುರಿಗಿದ್ದರೂ ಕರ್ಣ ಸಪ್ಪೆ ಮೋರೆ ಹಾಕದೆ ನಗುತ್ತಿರುವುದು ಕಥೆಗೆ ಹೊಸ ಆಯಾಮ ನೀಡಿದೆ.

ಚಪ್ಪಡಿ ಕಲ್ಲು ಎಳೆದರೂ ನಗುತ್ತಲೇ ಇದ್ದಾನೆ ಕರ್ಣ; ರಮೇಶ್ ಶಾಕ್
ಕರ್ಣ ಧಾರಾವಾಹಿ
Edited By:

Updated on: Oct 23, 2025 | 8:04 AM

‘ಕರ್ಣ’ ಧಾರಾವಾಹಿಯು ಸಾಕಷ್ಟು ತಿರುವುಗಳನ್ನು ಪಡೆದು ಮುಂದಕ್ಕೆ ಸಾಗುತ್ತಿದೆ. ಈ ಧಾರಾವಾಹಿಯಲ್ಲಿ ಕರ್ಣ ಹಾಗೂ ನಿತ್ಯಾ ವಿವಾಹ ನೆರವೇರಿದೆ. ಈ ಘಟನೆ ಬಳಿಕ ಕರ್ಣ ಸೊರಗಿ ಹೋಗುತ್ತಾನೆ, ಆತನ ಕಥೆ ಮುಗಿದೇ ಹೋಯಿತು ಎಂಬುದು ಆತನ ಸಾಕು ತಂದೆ ರಮೇಶ್ ಆಲೋಚನೆ ಆಗಿತ್ತು. ಆದರೆ, ಅಲ್ಲಾಗಿದ್ದೇ ಬೇರೆ. ತಲೆಮೇಲೆ ಚಪ್ಪಡಿ ಕಲ್ಲು ಎಳೆದರೂ ಆತ ನಗುತ್ತಿದ್ದಾನೆ. ಇದರಿಂದ ಆತ ಶಾಕ್​ಗೆ ಒಳಗಾಗಿದ್ದಾನೆ.

ನಿಧಿ ಹಾಗೂ ಕರ್ಣ ಮದುವೆ ಆಗುತ್ತಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು. ಇಬ್ಬರ ಮಧ್ಯೆ ಪ್ರೀತಿ ಮೂಡಿತ್ತು. ಈ ಪ್ರೀತಿ ದಿನ ಕಳೆದಂತೆ ಆಳವಾಗುತ್ತಾ ಹೋಯಿತು. ಆದರೆ, ನಂತರ ಆಗಿದ್ದೇ ಬೇರೆ. ಆರಂಭದಲ್ಲಿ ವಿಲನ್ ಆಗಿದ್ದ ರಮೇಶ್, ಕರ್ಣನಿಗೆ ಪಾಠ ಕಲಿಸಬೇಕು ಎಂದು ಒಳ್ಳೆಯವನ ರೀತಿ ನಟಿಸಿದ. ಕರ್ಣ ಹಾಗೂ ನಿಧಿ ಮದುವೆಯನ್ನು ನಾನೇ ಮಾಡುತ್ತೇನೆ ಎಂದು ನಿಧಿ ಹಾಗೂ ಕರ್ಣ ಇಬ್ಬರಿಗೂ ಭಾಷೆ ಕೊಟ್ಟ.

ಅತ್ತ ತೇಜಸ್ ಹಾಗೂ ನಿಧಿ ಅಕ್ಕ ನಿತ್ಯಾ ವಿವಾಹ ನೆರವೇರಬೇಕಿತ್ತು. ಕೊನೆಯ ಕ್ಷಣದಲ್ಲಿ ತೇಜಸ್​ನ ಕಿಡ್ನ್ಯಾಪ್ ಮಾಡಿಸುವ ಕೆಲಸವನ್ನು ರಮೇಶ್ ಮಾಡಿಸಿದ್ದಾನೆ. ಇದರಿಂದ ನಿತ್ಯಾ ಹಾಗೂ ತೇಜಸ್ ಮದುವೆ ಮುರಿದು ಬಿದ್ದಿದೆ. ಇದೇ ಟೈಮ್​ನ ಬಳಸಿಕೊಂಡ ರಮೇಶ್, ನಿತ್ಯಾ ಹಾಗೂ ಕರ್ಣನ ಮದುವೆ ಮಾಡಿಸಿದ್ದಾನೆ. ಇದರಿಂದ ಕರ್ಣ ಒದ್ದಾಡಿದ್ದಾನೆ. ನಿತ್ಯಾ ಹಾಗೂ ನಿಧಿ ಇಬ್ಬರೂ ಕಣ್ಣೀರಲ್ಲಿ ಕೈ ತೊಳೆದಿದ್ದಾರೆ.

ಇದನ್ನೂ ಓದಿ
ಕಾಮಿಡಿ ಮಾಡುತ್ತಾ ಆಟದ ಗಂಭೀರತೆ ಮರೆತ ಗಿಲ್ಲಿ; ತಾಳ್ಮೆ ಕಳೆದುಕೊಂಡ ಕಾವ್ಯಾ
‘ಕಾಂತಾರ: ಚಾಪ್ಟರ್ 1’ ಅಬ್ಬರ; ಸಾವಿರದ ಕ್ಲಬ್ ಸೇರಲು ಇನ್ನೆಷ್ಟು ಕೋಟಿ ಬೇಕು
ದೀಪಾವಳಿಗೆ ಬಂಪರ್ ಲಾಟರಿ; ಡಬಲ್ ಡಿಜಿಟ್ ಕಲೆಕ್ಷನ್ ಮಾಡಿದ ‘ಕಾಂತಾರ’
ಆಲಿಯಾ ಹೊಸ ಮನೆಯಲ್ಲಿ ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿದ ಗಣಪತಿ ಮೂರ್ತಿ

ನಿಧಿ ಕೂಡ ತಮ್ಮದೇ ಮನೆಗೆ ಬಂದು ಉಳಿದುಕೊಳ್ಳಬೇಕು ಎಂಬ ಕಾರಣಕ್ಕೆ ಅವರ ಮನೆಗೆ ಬೆಂಕಿ ಹಚ್ಚಿಸಿದ್ದಾನೆ. ಪ್ರಿತಿಸಿದಾಕೆ ಎದುರೇ ಕಾಣುತ್ತಿದ್ದರೆ ಕರ್ಣ ಬೇಸರದಲ್ಲಿ ಇರುತ್ತಾನೆ ಎಂಬುದು ರಮೇಶ್ ಆಲೋಚನೆ ಆಗಿತ್ತು. ಆದರೆ, ಅಲ್ಲಾಗಿದ್ದೇ ಬೇರೆ. ಮದುವೆ ಮರುದಿನ ಕರ್ಣ ನಗು ನಗುತ್ತಾ ಕಾಫಿ ತಂದು ಕೊಟ್ಟಿದ್ದಾನೆ. ಇದನ್ನು ನೋಡಿ ರಮೇಶ್ ಶಾಕ್​ಗೆ ಒಳಗಾಗಿದ್ದಾನೆ. ಆತನಿಗೆ ಏನು ಮಾಡಬೇಕು ಎಂಬುದೇ ತೋಚಿಲ್ಲ.

ದನ್ನೂ ಓದಿ: ನಿತ್ಯಾ ಹಾಗೂ ಕರ್ಣ ವಿವಾಹಕ್ಕೆ ದೊಡ್ಡ ಟ್ವಿಸ್ಟ್; ನಿಧಿ ಫ್ಯಾನ್ಸ್ ಫುಲ್ ಖುಷ್

ಕರ್ಣನ ಮೇಲೆ ಚಪ್ಪಡಿ ಕಲ್ಲು ಎಳೆದಿದ್ದಾನೆ ರಮೇಶ್. ಇದರಿಂದ ಕರ್ಣ ಅಳುತ್ತಾ, ಸಪ್ಪೆ ಮೋರೆ ಹಾಕಿಕೊಂಡು ಕೂತಿರುತ್ತಾನೆ ಎಂಬುದು ರಮೇಶ್ ಆಲೋಚನೆ ಆಗಿತ್ತು. ಆದರೆ, ಕರ್ಣ ಇದಕ್ಕೆ ಟ್ವಿಸ್ಟ್ ಕೊಟ್ಟಿದ್ದಾನೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.