ಮತ್ತೆ ಒಂದಾದ ಕಾರ್ತಿಕ್-ಸಂಗೀತಾ; ಇವರ ನಾಟಕದಿಂದ ನಾವು ಬಕ್ರಾ ಆಗ್ತಿದೀವಿ ಎಂದ ತುಕಾಲಿ

|

Updated on: Nov 28, 2023 | 7:59 AM

ಸಂಗೀತಾ ಅವರು ಕಳೆದ ವಾರ ವಿನಯ್ ಗ್ಯಾಂಗ್​ನಲ್ಲಿ ಕಾಣಿಸಿದ್ದರು. ಈ ವಾರ ಅವರು ಮತ್ತೆ ಪಾರ್ಟಿ ಬದಲಿಸಿದ್ದಾರೆ. ಕಾರ್ತಿಕ್ ಜೊತೆ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ತುಕಾಲಿ ಅಪಸ್ವರ ಎತ್ತಿದ್ದಾರೆ.

ಮತ್ತೆ ಒಂದಾದ ಕಾರ್ತಿಕ್-ಸಂಗೀತಾ; ಇವರ ನಾಟಕದಿಂದ ನಾವು ಬಕ್ರಾ ಆಗ್ತಿದೀವಿ ಎಂದ ತುಕಾಲಿ
ಸಂತೋಷ್-ಸಂಗೀತಾ, ಕಾರ್ತಿಕ್
Follow us on

ಕಾರ್ತಿಕ್ ಮಹೇಶ್ (Karthik Mahesh) ಹಾಗೂ ಸಂಗೀತಾ ಶೃಂಗೇರಿ ಮಧ್ಯೆ ಒಳ್ಳೆಯ ಗೆಳೆತನ ಇತ್ತು. ಇಬ್ಬರೂ ಬೇರೆ ಆದರು. ಆ ಬಳಿಕ ಇಬ್ಬರೂ ಬೇರೆ ಆದರು. ಈಗ ಇಬ್ಬರು ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾರ್ತಿಕ್ ಮಹೇಶ್ ಅವರು ಒಂದು ವಾರಗಳ ಕಾಲ ಯಾವುದೇ ಕಟ್ಟುಪಾಡಿಗೆ ಸಿಲುಕದೇ ಆಟ ಆಡುತ್ತಿದ್ದವರು ಈಗ ಮತ್ತೆ ಸಂಗೀತಾ ಕೈಗೊಂಬೆ ಆಗಬಹುದು ಎಂದು ವೀಕ್ಷಕರು ಊಹಿಸುತ್ತಿದ್ದಾರೆ. ಈ ಮಧ್ಯೆ ತುಕಾಲಿ ಸಂತೋಷ್ ಅವರು ಅಸಮಾಧಾನ ಹೊರಹಾಕಿದ್ದಾರೆ.

ಕಳೆದ ವಾರ ಸಂಗೀತಾ ಅವರು ವಿನಯ್ ಗುಂಪಿನ ಜೊತೆ ಹೆಚ್ಚು ಸಮಯ ಕಳೆದಿದ್ದಾರೆ. ಅವರಿಗೆ ಆ ಗುಂಪು ಹೆಚ್ಚು ಇಷ್ಟ ಆಗಿದೆಯಂತೆ. ಈ ಕಾರಣದಿಂದಲೇ ಅವರು ಅಲ್ಲಿಯೇ ಇದ್ದರು. ಈ ವಾರ ಈಗ ಮತ್ತೆ ಕಾರ್ತಿಕ್ ಜೊತೆ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಕಾರ್ತಿಕ್ ಬಗ್ಗೆ ಕೆಲವರು ಅಪಸ್ವರ ತೆಗೆದಿದ್ದಾರೆ. ಈ ರೀತಿ ಆಗುತ್ತದೆ ಎಂದು ವಿನಯ್ ಕಳೆದವಾರವೇ ಭವಿಷ್ಯ ನುಡಿದಿದ್ದರು.

‘ನಾನು ಕಳೆದವಾರವೇ ಹೇಳಿಲ್ಲವೇ? ಅವಳು ಕಾರ್ತಿಕ್​ನ ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದಳು. ಇದು ಬೇಗ ಕೊನೆ ಆಗುತ್ತದೆ ಎಂದು ಹೇಳಿದ್ದೆ’ ಎಂದರು ವಿನಯ್. ಅಲ್ಲಿಯೇ ಇದ್ದ ತುಕಾಲಿ ಸಂತೋಷ್ ಅವರು ಈ ಬಗ್ಗೆ ಮಾತನಾಡಿದ್ದಾರೆ. ‘ಇಲ್ಲಿ ಆಡುವ ನಾಟಕಗಳಿಗೆ ಸಾಥ್ ಕೊಟ್ಟರೆ ಬಕ್ರಾ ಆಗೋದು ನಾವೇ. ಪ್ರತಿ ದಿನವೂ ಮನೆಯಲ್ಲಿ ಬಕ್ರಾ ಕಾರ್ಯಕ್ರಮ ನಡೆಯುತ್ತದೆ. ಗೊತ್ತಿದ್ದೋ, ಗೊತ್ತಿಲ್ಲವೋ ಆಗುತ್ತದೆ. ಮಧ್ಯದಲ್ಲಿ ಇದ್ದವರು ಬಕ್ರಾ ಆಗುತ್ತಾರೆ’ ಎಂದರು ಅವರು.

ಇದನ್ನೂ ಓದಿ: ‘ಬೇರೆಯವರನ್ನು ಕೀಳಾಗಿ ತೋರಿಸಿದ ಪ್ರತಾಪ್​ ಇಲ್ಲಿಯವರೆಗೂ ಬಂದಿದ್ದಾರೆ’: ವಿನಯ್​ ಗೌಡ

ವಿನಯ್ ಅವರ ತಂತ್ರಗಾರಿಕೆ ಇಲ್ಲಿ ಬೇರೆಯದೇ ಇದೆ. ಈ ರೀತಿಯ ನಾಟಕಗಳು ನಡೆಯುವಾಗ ಪಾಪ್​ಕಾರ್ನ್ ಹಿಡಿದು ಅದನ್ನು ಎಂಜಾಯ್ ಮಾಡಬೇಕು ಎಂಬುದು ವಿನಯ್ ಥಿಯರಿ. ಸಂಗೀತಾ ಈಗಾಗಲೇ 18 ಸಾವಿರ ಹಿಂಬಾಲಕರನ್ನು ಕಳೆದುಕೊಂಡಿದ್ದಾರೆ. ಮರಳಿ ಅವರೆಲ್ಲ ಸೇರ್ಪಡೆ ಆಗುತ್ತಾ ಎಂಬುದನ್ನು ಕಾದು ನೋಡಬೇಕಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ಕೂಡ ವಿಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:42 am, Tue, 28 November 23