ಕೌನ್ ಬನೇಗಾ ಕರೋಡ್​ ಪತಿ ಸೀಸನ್​ 15 -ಅಮಿತಾಬ್ ಬಚ್ಚನ್ ಸಾರಥ್ಯದಲ್ಲಿ ಸರಣಿ ಮುಂದುವರಿಕೆ, ಯಾವಾಗಿನಿಂದ ನೋಂದಣಿ ಶುರು, ವೀಡಿಯೊ ವೀಕ್ಷಿಸಿ

Amitabh Bachchan: ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಜೊತೆಗಿನ ಜನಪ್ರಿಯ ಶೋ ಕೌನ್ ಬನೇಗಾ ಕರೋಡ್​ ಪತಿ ತನ್ನ 15ನೇ ಸೀಸನ್‌ನೊಂದಿಗೆ ಮರಳಲು ಸಿದ್ಧವಾಗಿದೆ. ಕಾರ್ಯಕ್ರಮದ ನೋಂದಣಿ ಏಪ್ರಿಲ್ 29 ರಿಂದ ಪ್ರಾರಂಭ

ಕೌನ್ ಬನೇಗಾ ಕರೋಡ್​ ಪತಿ ಸೀಸನ್​ 15 -ಅಮಿತಾಬ್ ಬಚ್ಚನ್ ಸಾರಥ್ಯದಲ್ಲಿ ಸರಣಿ ಮುಂದುವರಿಕೆ, ಯಾವಾಗಿನಿಂದ ನೋಂದಣಿ ಶುರು, ವೀಡಿಯೊ ವೀಕ್ಷಿಸಿ
ಅಮಿತಾಬ್ ಸಾರಥ್ಯದಲ್ಲಿ ಕರೋಡ್​ ಪತಿ ಸರಣಿ ಮುಂದುವರಿಕೆ, ಯಾವಾಗನಿಂದ?
Follow us
ಸಾಧು ಶ್ರೀನಾಥ್​
|

Updated on:Apr 18, 2023 | 12:12 PM

ದೇಶ ಸ್ವಾತಂತ್ರ್ಯಗೊಂಡ 75 ವರ್ಷಗಳ ಆಚರಣೆಯನ್ನು ಗುರುತಿಸುವಂತೆ ಹಿಂದಿನ 14ನೇ ಸೀಸನ್ ಆಗಸ್ಟ್ 7, 2022 ರಂದು ಪ್ರಾರಂಭವಾಗಿತ್ತು. ಅದರಲ್ಲಿ ಅಮೀರ್ ಖಾನ್, ಮೇರಿ ಕೋಮ್ ಮತ್ತು ಸುನಿಲ್ ಛೆಟ್ರಿ ಸೇರಿದಂತೆ ಇನ್ನೂ ಕೆಲ ಕ್ರೀಡಾ ಹೆಗ್ಗುರುತುಗಳು ಜೊತೆಗೆ ಮಿಥಾಲಿ ಮಧುಮಿತಾ, ಶೌರ್ಯ ಪ್ರಶಸ್ತಿಯನ್ನು ಗೆದ್ದ ಮೊದಲ ಮಹಿಳಾ ಅಧಿಕಾರಿ ಮತ್ತು ಭಾರತದ ಮೊದಲ ಬ್ಲೇಡ್ ರನ್ನರ್ ಮೇಜರ್ ಡಿಪಿ ಸಿಂಗ್ ಅವರುಗಳೂ ಭಾಗವಹಿಸಿದ್ದರು.

ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ( Amitabh Bachchan) ಜೊತೆಗಿನ ಜನಪ್ರಿಯ ಶೋ ಕೌನ್ ಬನೇಗಾ ಕರೋಡ್​ ಪತಿ ತನ್ನ 15ನೇ ಸೀಸನ್‌ನೊಂದಿಗೆ (Kaun Banega Crorepati Season 15) ಮರಳಲು ಇದೀಗ ಸಿದ್ಧವಾಗಿದೆ. ಕಾರ್ಯಕ್ರಮದ ನೋಂದಣಿ ಏಪ್ರಿಲ್ 29 ರಿಂದ ಪ್ರಾರಂಭವಾಗಲಿದೆ ಎಂಬ ಘೋಷಣೆಯನ್ನು ಮಾಡುವ ಮೂಲಕ ತಯಾರಕರು ಪ್ರೋಮೋವನ್ನು ಬಿಟ್ಟಿದ್ದಾರೆ. ಪ್ರೋಮೋದಲ್ಲಿ ಬಿಗ್ ಬಿ ಅಮಿತಾಬ್ ಆತಿಥೇಯರ ಸೀಟಿನ ಮೇಲೆ ಕುಳಿತಿರುವುದನ್ನು ಕಾಣಬಹುದು. ಮಹಿಳೆಯೊಬ್ಬರು ಹಾಟ್‌ಸೀಟ್ ತಲುಪುವ ಮಾರ್ಗವನ್ನು ಕಂಡುಕೊಳ್ಳಲು ನಕ್ಷೆಯನ್ನು ಸಿದ್ಧಪಡಿಸಿಕೊಳ್ಲುವುದನ್ನು ಕಾಣಬಹುದು.

ಅಂತಿಮವಾಗಿ, ಆ ಯುವತಿ ನೆಲವನ್ನು ಅಗೆಯುವ ಮೂಲಕ ಹಾಟ್‌ಸೀಟ್‌ಗೆ ತಲುಪುತ್ತಾಳೆ. ಆದರೆ “ಹಾಟ್‌ಸೀಟ್ ಪರ್ ಪಹುಂಚ್ನೆ ಕೆ ಲಿಯೆ ಉಲೂಲ್-ಜುಲೂಲ್ ಹಾತ್‌ಕಂಡೆ ಮತ್ ಅಪ್ನಾಯಿಯೇ” ಎಂದು ಕಿಚಾಯಿಸುತ್ತಾರೆ. ಬಾಲಕಿಯ ಪ್ರಯುತ್ನಕ್ಕೆ ಸ್ಪಂದಿಸುತ್ತಾ ಪ್ರತಿಕ್ರಿಯಿಸುವ ಅಮಿತಾಬ್​, ಕರೋಡ್​ ಪತಿ ಆಟವನ್ನು ಆಡಲು ಕೇಳುತ್ತಾರೆ. 9 ಗಂಟೆಯಿಂದ ನೋಂದಣಿ ಪ್ರಾರಂಭವಾಗುವುದರಿಂದ ಫೋನ್ ತೆಗೆದುಕೊಳ್ಳಿ ಎಂದು ಅವರು ಹೇಳುತ್ತಾರೆ. ಏಪ್ರಿಲ್ 29 ರಂದು. “ನನ್ನ ಪ್ರಶ್ನೆಗೆ ಉತ್ತರಿಸಿ. ಅದರ ಮೂಲಕ ನಿಮ್ಮ ನೋಂದಣಿ ಪ್ರಾರಂಭವಾಗುತ್ತದೆ” ಎಂದು ಹೋಸ್ಟ್ ಅಮಿತಾಬ್ ಹೇಳುತ್ತಾರೆ.

ಕೌನ್ ಬನೇಗಾ ಕರೋಡ್​ ಪತಿ ಸೀಸನ್​ 14 ಈ ಸಲ ಡಿಸೆಂಬರ್ 30, 2022 ರಂದು ಮುಕ್ತಾಯವಾಯಿತು. ಅಕ್ಷಯ್ ಕುಮಾರ್ ಮತ್ತು ಪದ್ಮಶ್ರೀ ಡಿಜಿ ಪ್ರಕಾಶ್ ಸಿಂಗ್ ಅವರಿಂದ, ವಿಕ್ಕಿ ಕೌಶಲ್, ಕಿಯಾರಾ ಅಡ್ವಾಣಿ, ಮತ್ತು ಸುಮಧುರ ಶಿಲ್ಪಾ ರಾವ್ ಸೇರಿದಂತೆ ಅನೇಕರು ಕಾರ್ಯಕ್ರಮವನ್ನು ಅಲಂಕರಿಸಿದರು. ಸೋನಿ ಎಂಟರ್‌ಟೈನ್‌ಮೆಂಟ್ ಟೆಲಿವಿಷನ್‌ನಲ್ಲಿ ಈ ಕಾರ್ಯಕ್ರಮ ಪ್ರಸಾರವಾಗುತ್ತದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:09 pm, Tue, 18 April 23

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ