
ಬಿಗ್ ಬಾಸ್ ಅಲ್ಲಿರುವಾಗ ಕಾವ್ಯಾ ಶೈವ ಹಾಗೂ ಗಿಲ್ಲಿ ನಟನ (Gilli Nata) ಮಧ್ಯೆ ಒಳ್ಳೆಯ ಬಾಂಧವ್ಯ ಇತ್ತು. ಇಬ್ಬರೂ ಒಟ್ಟಿಗೆ ಸ್ಪರ್ಧೆ ಮಾಡಿದ್ದರು. ಕಾವ್ಯಾ ಪರವಾಗಿ ಗಿಲ್ಲಿ ಸದಾ ನಿಲ್ಲುತ್ತಿದ್ದರು. ಕಾವ್ಯಾ ಸಾಕಷ್ಟು ಬಾರಿ ಅಸಮಾಧಾನ ಹೊರಹಾಕಿದರೂ ಗಿಲ್ಲಿ ಕೇಳುತ್ತಿರಲಿಲ್ಲ. ಬಿಗ್ ಬಾಸ್ನಿಂದ ಹೊರ ಬಂದ ಬಳಿಕ ಕಾವ್ಯಾ ಅವರು ಗಿಲ್ಲಿಗೆ ಮನಸಾರೆ ವಿಶ್ ಮಾಡಿದ್ದಾರೆ. ಆ ಸಂದರ್ಭದ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ.
ಸುದೀಪ್ ಅವರು ಗಿಲ್ಲಿ ಕೈ ಎತ್ತಿದ ಫೋಟೋ ಹಾಗೂ ಗಿಲ್ಲಿ ಪಕ್ಕದಲ್ಲಿ ಕುಳಿತ ಫೋಟೋಗಳನ್ನು ಕಾವ್ಯಾ ಹಂಚಿಕೊಂಡಿದ್ದಾರೆ. ‘ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯ’ ಎಂಬ ಕ್ಯಾಪ್ಶನ್ ಮೂಲಕ ಪೋಸ್ಟ್ ಆರಂಭಿಸಿದ್ದಾರೆ. ‘ಹೇ, ಗಿಲ್ಲಿ ಕಂಗ್ರಾಜ್ಯುಲೇಷನ್ ಕಣೋ. ನೀನು ಇದಕ್ಕೆ ಅರ್ಹ’ ಎಂದು ಕಾವ್ಯಾ ಬರೆದಿದ್ದಾರೆ.
‘ಜೀರೋದಿಂದ ಹೀರೋ ಆದೆ. ಇನ್ನೂ ದೂರ ಸಾಗಬೇಕಿದೆ. ಆದಷ್ಟು ಬೇಗ ಆ್ಯಕ್ಷನ್- ಕಟ್ ಹೇಳೊ ಹಾಗಾಗ್ಲಿ. ತುಂಬಾ ತುಂಬಾ ಒಳ್ಳೇದಾಗ್ಲಿ’ ಎಂದು ಕಾವ್ಯಾ ಅವರು ಗಿಲ್ಲಿಗೆ ಮನಸಾರೆ ಹಾರೈಸಿದ್ದಾರೆ.
ಬಿಗ್ ಬಾಸ್ ಮನೆಯ ಒಳಗೆ ಹೋಗುವಾಗ ಕಾವ್ಯಾ ಹಾಗೂ ಗಿಲ್ಲಿ ಜಂಟಿಯಾಗಿ ತೆರಳಿದ್ದರು. ಅಲ್ಲಿಂದ ಅವರ ಪ್ರಯಾಣ ಶುರುವಾಯಿತು. ಜಂಟಿ ಆಟ ಮುಗಿದ ಬಳಿಕವೂ ಕಾವ್ಯಾ ಹಾಗೂ ಗಿಲ್ಲಿ ಒಟ್ಟಿಗೇ ಇರುತ್ತಿದ್ದರು. ನಮ್ಮ ಮಧ್ಯೆ ಇರೋದು ಶುದ್ಧ ಗೆಳೆತನ ಎಂದು ಅವರು ಆಗಾಗ ಸ್ಪಷ್ಟನೆ ಕೊಡುತ್ತಲೇ ಇದ್ದರು.
ಇದನ್ನೂ ಓದಿ: ಬಿಗ್ ಬಾಸ್ ವಿನ್ನರ್ ಗಿಲ್ಲಿಗೆ ಹೆಚ್ಚುವರಿಯಾಗಿ ಸಿಕ್ತು 20 ಲಕ್ಷ ರೂಪಾಯಿ?
ಇನ್ನು, ಇಬ್ಬರ ಆಪ್ತತೆಯ ಕಾರಣಕ್ಕೆ ಇವರ ಮದುವೆ ವಿಷಯ ಕೂಡ ಚರ್ಚೆ ಆಗುತ್ತಿದೆ. ಇದಕ್ಕೆ ಉತ್ತರಿಸಿದ್ದ ಗಿಲ್ಲಿ ತಂದೆ-ತಾಯಿ, ‘ಗಿಲ್ಲಿಗೆ ಯಾರು ಇಷ್ಟವೋ ಅವರ ಜೊತೆ ಮದುವೆ ಮಾಡಿ ಕೊಡ್ತೀವಿ’ ಎಂದು ಹೇಳಿದ್ದಾರೆ. ಈ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.