ಬಿಗ್ ಬಾಸ್ ವಿನ್ನರ್ ಗಿಲ್ಲಿಗೆ ಹೆಚ್ಚುವರಿಯಾಗಿ ಸಿಕ್ತು 20 ಲಕ್ಷ ರೂಪಾಯಿ?
ಬಿಗ್ ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಗಿಲ್ಲಿಗೆ ಭಾರಿ ಬಹುಮಾನ ಸಿಕ್ಕಿದೆ. 50 ಲಕ್ಷ ರೂ. ಜೊತೆ ಮಾರುತಿ ಸುಜುಕಿ ಕಾರು, ಸುದೀಪ್ ಅವರಿಂದ 10 ಲಕ್ಷ ರೂ. ಪಡೆದಿದ್ದಾರೆ. ಇದರ ಜೊತೆಗೆ ಹೆಚ್ಚುವರಿಯಾಗಿ 20 ಲಕ್ಷ ರೂಪಾಯಿ ಸಿಕ್ಕಿದೆ ಎನ್ನಲಾಗುತ್ತಿದೆ. ಗಿಲ್ಲಿಗೆ ಒಟ್ಟು ಎಷ್ಟು ಬಹುಮಾನ ಸಿಕ್ಕಿದೆ ಎಂಬ ಮಾಹಿತಿ ಇಲ್ಲಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ರ (BBK 12) ವಿನ್ನರ್ ಗಿಲ್ಲಿಗೆ ಬಂಪರ್ ಲಾಟರಿ ಹೊಡೆದಿದೆ. ಬಿಗ್ ಬಾಸ್ ಕಡೆಯಿಂದ 50 ಲಕ್ಷ ರೂಪಾಯಿ (ತೆರಿಗೆ ಕಟ್ ಆಗಿ ಸಿಗೋದು 35 ಲಕ್ಷ ರೂಪಾಯಿ), ಮಾರುತು ಸುಜುಕಿ ವಿಕ್ಟೋರಿಸ್ ಕಾರು ಹಾಗೂ ಸುದೀಪ್ ಕಡೆಯಿಂದ 10 ಲಕ್ಷ ರೂಪಾಯಿ ಸಿಕ್ಕಿದೆ. ಈಗ ಅವರಿಗೆ ಹೆಚ್ಚುವರಿಯಾಗಿ 20 ಲಕ್ಷ ರೂಪಾಯಿ ಸಿಕ್ಕಿದೆ ಎಂಬ ಮಾತುಗಳು ಕೇಳಿ ಬಂದಿವೆ. ಆ ಬಗ್ಗೆ ಇಲ್ಲಿದೆ ವಿವರ.
ಬಿಗ್ ಬಾಸ್ ಗೆದ್ದವರಿಗೆ ಪ್ರತಿ ಬಾರಿಯೂ 50 ಲಕ್ಷ ರೂಪಾಯಿ ಸಿಗುತ್ತದೆ. ಇದರ ಜೊತೆಗೆ ಹೆಚ್ಚುವರಿಯಾಗಿ ಕೆಲವೊಮ್ಮ ಬಹುಮಾನವಾಗಿ ವಸ್ತುಗಳು ಸಿಗುತ್ತವೆ. ಈ ಬಾರಿ ಗಿಲ್ಲಿ ನಟ ಅವರಿಗೆ ಅದೃಷ್ಟ ಒಲಿದಿದೆ. ಅವರಿಗೆ ಈಗಾಗಲೇ 80 ಲಕ್ಷ ರೂಪಾಯಿ ಅಷ್ಟು(ಟ್ಯಾಕ್ಸ್ ಹೊರತುಪಡಿಸಿ) ಮೌಲ್ಯದ ವಸ್ತು/ಹಣ ಬಿಗ್ ಬಾಸ್ನಿಂದ ಸಿಕ್ಕಿದೆ. ಇದರ ಜೊತೆಗೆ ಹೆಚ್ಚುವರಿಯಾಗಿ 20 ಲಕ್ಷ ರೂಪಾಯಿ ಸಿಕ್ಕಿತೇ ಎಂಬ ಪ್ರಶ್ನೆ ಮೂಡಿದೆ.
ಬಿಗ್ ಬಾಸ್ ರನ್ನರ್ ಅಪ್ ರಕ್ಷಿತಾ ಶೆಟ್ಟಿಗೆ 20 ಲಕ್ಷ ರೂಪಾಯಿ ವೋಚರ್ ಶರವಣ ಅವರ ‘ಸಾಯಿ ಗೋಲ್ಡ್ ಪ್ಯಾಲೇಸ್’ ಕಡೆಯಿಂದ ಸಿಕ್ಕಿತ್ತು. ಅವರೇ ಗಿಲ್ಲಿಗೆ 20 ಲಕ್ಷ ರೂಪಾಯಿ ಕೊಡೋದಾಗಿ ಘೋಷಣೆ ಮಾಡಿದ್ದರು. ‘ನಾನು ಬಿಗ್ ಬಾಸ್ಗೆ ತೆರಳುತ್ತಿದ್ದೇನೆ. ಗಿಲ್ಲಿನೇ ಗೆಲ್ಲೋದು ಅನ್ನೋದು ನನ್ನ ಅಭಿಪ್ರಾಯ. ಅವರು ಸಾಕಷ್ಟು ಮನರಂಜನೆ ನೀಡಿದ್ದಾರೆ. ಗಿಲ್ಲಿ ಗೆದ್ದರೆ ಅವರಿಗೆ 20 ಲಕ್ಷ ರೂಪಾಯಿ ಕೊಡುತ್ತೇನೆ. ಚೆಕ್ ರೆಡಿ ಇದೆ’ ಎಂದು ಶರವಣ ಅವರು ಫಿನಾಲೆಗೆ ತೆರಳುವಾಗ ಹೇಳಿದ್ದರು.
ಇದನ್ನೂ ಓದಿ: ‘ಅವರು ಹಾಗೆ ಹೇಳೋಕೆ ಸಾಧ್ಯವಿಲ್ಲ’; ಅಶ್ವಿನಿ ಗೌಡ ಬಗ್ಗೆ ಗಿಲ್ಲಿಗೆ ಎಷ್ಟು ಗೌರವ ನೋಡಿ ವೇದಿಕೆ ಮೇಲೆ ಗಿಲ್ಲಿ ನಟ ಅವರಿಗೆ ಶರವಣ 20 ಲಕ್ಷ ರೂಪಾಯಿನ ನೀಡಿಲ್ಲ. ಗಿಲ್ಲಿಯೇ ಗೆದ್ದಿರುವುದರಿಂದ ಪ್ರತ್ಯೇಕವಾಗಿ ಈ ಮೊತ್ತವನ್ನು ಅವರು ಗಿಲ್ಲಿಗೆ ಕೊಟ್ಟಿರಬಹುದು ಎಂದು ಹೇಳಲಾಗುತ್ತಾ ಇದೆ. ಗಿಲ್ಲಿ ನಟ ಅವರು ಗೆದ್ದ ಬಳಿಕ ಹುಟ್ಟೂರಿಗೆ ತೆರಳಿದ್ದಾರೆ. ಅಲ್ಲಿ ಅದ್ದೂರಿಯಾಗಿ ಅವರಿಗೆ ಸ್ವಾಗತ ಸಿಕ್ಕಿದೆ. ಸಿಕ್ಕ ಜನಪ್ರಿಯತೆ ನೋಡಿ ಅವರಿಗೇ ಅಚ್ಚರಿ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




