ರಿಯಾಲಿಟಿ ಶೋ ಸಂಭಾವನೆಯಲ್ಲಿ ಸಲ್ಮಾನ್ ಖಾನ್ ಹಿಂದಿಕ್ಕಿದ ಅಮಿತಾಭ್ ಬಚ್ಚನ್

ಕೌನ್ ಬನೇಗಾ ಕರೋಡ್ಪತಿ (ಕೆಬಿಸಿ)ಯ 17ನೇ ಸೀಸನ್ ಆಗಸ್ಟ್ 11 ರಿಂದ ಆರಂಭವಾಗುತ್ತಿದೆ. ಅಮಿತಾಭ್ ಬಚ್ಚನ್ ಅವರು ಈ ಸೀಸನ್‌ನಲ್ಲೂ ನಿರೂಪಣೆ ಮಾಡಲಿದ್ದಾರೆ. ಪ್ರತಿ ಸಂಚಿಕೆಗೆ ಅವರು 5 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಇದು ಅವರನ್ನು ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ಟಿವಿ ನಿರೂಪಕರನ್ನಾಗಿ ಮಾಡಿದೆ.

ರಿಯಾಲಿಟಿ ಶೋ ಸಂಭಾವನೆಯಲ್ಲಿ ಸಲ್ಮಾನ್ ಖಾನ್ ಹಿಂದಿಕ್ಕಿದ ಅಮಿತಾಭ್ ಬಚ್ಚನ್
ಸಲ್ಮಾನ್-ಅಮಿತಾಭ್
Updated By: ರಾಜೇಶ್ ದುಗ್ಗುಮನೆ

Updated on: Jul 19, 2025 | 7:58 AM

ಜ್ಞಾನದ ಸಹಾಯದಿಂದ ಹಣ ಗೆಲ್ಲುವ ಅವಕಾಶವನ್ನು ನೀಡುವ ‘ಕೌನ್ ಬನೇಗಾ ಕರೋಡ್ ಪತಿ’ ಕಾರ್ಯಕ್ರಮವು ಹೊಸ ಸೀಸನ್‌ನೊಂದಿಗೆ ಪ್ರೇಕ್ಷಕರ ಎದುರು ಬರಲು ಸಜ್ಜಾಗಿದೆ. ‘ಕೌನ್ ಬನೇಗಾ ಕರೋಡ್ ಪತಿ’ಯ 17 ನೇ ಸೀಸನ್ ಆಗಸ್ಟ್ 11 ರಿಂದ ಪ್ರಾರಂಭವಾಗುತ್ತಿದೆ. ಈ ಕಾರ್ಯಕ್ರಮದ ಹೊಸ ಪ್ರೋಮೋ ಇತ್ತೀಚೆಗೆ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದಕ್ಕಾಗಿ ಅಮಿತಾಭ್ (Amitabh Bachchan) ಪಡೆಯುವ ಸಂಭಾವನೆ ಚರ್ಚೆ ಆಗುತ್ತಿದೆ.

ಈ ವರ್ಷವೂ ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಭ್​ ಬಚ್ಚನ್ ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಮೂರನೇ ಸೀಸನ್ ಹೊರತುಪಡಿಸಿ, ಕಾರ್ಯಕ್ರಮದ ಉಳಿದ ಎಲ್ಲಾ ಸೀಸನ್‌ಗಳನ್ನು ಅವರು ನಡೆಸಿಕೊಟ್ಟಿದ್ದಾರೆ. ಬಂದಿರುವ ಮಾಹಿತಿಯ ಪ್ರಕಾರ, ಬಿಗ್ ಬಿ ಈ ಸೀಸನ್‌ಗೆ ಅತಿ ಹೆಚ್ಚು ಶುಲ್ಕ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

‘ಕೆಬಿಸಿ 17′ ಕಾರ್ಯಕ್ರಮದ ಪ್ರತಿ ಸಂಚಿಕೆಗೆ ಅಮಿತಾಭ್ ಬಚ್ಚನ್ 5 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಈ ಕಾರ್ಯಕ್ರಮ ವಾರದಲ್ಲಿ ಐದು ದಿನ ಪ್ರಸಾರವಾಗುವುದರಿಂದ, ಅವರು ವಾರಕ್ಕೆ 25 ಕೋಟಿ ರೂಪಾಯಿ ಗಳಿಸುತ್ತಾರೆ. ಇದು ಅವರನ್ನು ಭಾರತೀಯ ದೂರದರ್ಶನದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಿರೂಪಕನನ್ನಾಗಿ ಮಾಡಿದೆ.

ಇದನ್ನೂ ಓದಿ
ಕಿರೀಟಿ ನಟನೆಯ ‘ಜೂನಿಯರ್’ ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟು?
‘ಎಕ್ಕ’ ಸಿನಿಮಾ ಗಳಿಕೆ; ಬಾಕ್ಸ್ ಆಫೀಸ್​ನಲ್ಲಿ ಧೂಳೆಬ್ಬಿಸಿದ ಯುವ
ಬರ್ತ್​ಡೇ ಗರ್ಲ್ ಪ್ರಿಯಾಂಕಾ ಚೋಪ್ರಾ ಎಷ್ಟು ಶ್ರೀಮಂತೆ ಗೊತ್ತಾ?
ಸಿನಿಮಾ ರಿಲೀಸ್ ಸಂದರ್ಭದಲ್ಲೇ ಆಸ್ಪತ್ರೆಗೆ ದಾಖಲಾದ ವಿಜಯ್ ದೇವರಕೊಂಡ

ಈ ವಿಷಯದಲ್ಲಿ ಅವರು ನಟ ಸಲ್ಮಾನ್ ಖಾನ್ ರನ್ನು ಹಿಂದಿಕ್ಕಿದ್ದಾರೆ. ‘ಬಿಗ್ ಬಾಸ್ ’ ನಿರೂಪಣೆ ಮಾಡಲು ಪ್ರತಿ ಸಂಚಿಕೆಗೆ ಸಲ್ಮಾನ್ ಅವರು 12 ಕೋಟಿ ರೂ. ಪಡೆಯುತ್ತಿದ್ದರು. ವಾರಕ್ಕೆ ಎರಡು ಸಂಚಿಕೆಗಳನ್ನು ಮಾತ್ರ ಮಾಡುವುದರಿಂದ ಅವರ ಗಳಿಕೆ 24 ಕೋಟಿ ರೂಪಾಯಿ.

ಸೋನಿ ಟಿವಿ ಏಪ್ರಿಲ್ 4 ರಂದು ಪ್ರೋಮೋ ವಿಡಿಯೋ ಮೂಲಕ ‘ಕೌನ್ ಬನೇಗಾ ಕರೋಡ್‌ಪತಿ 17’ ಅನ್ನು ಘೋಷಿಸಿತು. ‘ಕೆಬಿಸಿ 17’ ಗಾಗಿ ನೋಂದಣಿ ಪ್ರಾರಂಭವಾಗಿದೆ ಮತ್ತು ಸ್ಪರ್ಧಿಗಳು ಸೋನಿ ಲಿವ್ ಅಪ್ಲಿಕೇಶನ್, ಎಸ್‌ಎಂಎಸ್ ಅಥವಾ ಐವಿಆರ್ ಕರೆ ಮೂಲಕ ನೋಂದಾಯಿಸಿಕೊಳ್ಳಬಹುದು ಎಂದು ಅದು ತಿಳಿಸಿದೆ.

ಇದನ್ನೂ ಓದಿ: ಸಲ್ಮಾನ್ ಖಾನ್​ಗೆ ನಿಜಕ್ಕೂ ಇದ್ದ ಗೆಳತಿಯರೆಷ್ಟು? ಲೆಕ್ಕ ಕೊಟ್ಟ ಸಲ್ಲು

ಸಲ್ಮಾನ್ ಖಾನ್ ಅವರು ಶೀಘ್ರವೇ ಬಿಗ್ ಬಾಸ್ ಶೋ ನಿರೂಪಣೆ ಆರಂಭಿಸಲಿದ್ದಾರೆ. ಇದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ. ಅದ ಜೊತೆ ಕೌನ್ ಬನೇಗಾ ಕರೋಡ್ಪತಿ ಕೂಡ ಪ್ರಸಾರ ಕಾಣಲಿದೆ ಅನ್ನೋದು ವಿಶೇಷ. ಹೀಗಾಗಿ, ಎರಡೆರಡು ರಿಯಾಲಿಟಿ ಶೋಗಳನ್ನು ಹಿಂದಿ ಪ್ರೇಕ್ಷಕರು ನೋಡಬಹುದಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.