‘ಈ ರೀತಿ ಮಾಡಿದ್ರೆ ಜನ ನಿಮ್ಮನ್ನು ನಂಬಲ್ಲ’; ಕಾಕ್ರೋಚ್ ಸುಧಿಗೆ ಸುದೀಪ್ ಎಚ್ಚರಿಕೆ

ಬಿಗ್ ಬಾಸ್ ಕನ್ನಡದಲ್ಲಿ ಕಾಕ್ರೋಚ್ ಸುಧಿ ಅವರ 'ಸೇಫ್ ಗೇಮ್' ತಂತ್ರಕ್ಕೆ ಕಿಚ್ಚ ಸುದೀಪ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಧನುಷ್ ಅವರನ್ನು ನಾಮಿನೇಟ್ ಮಾಡಿ ನಂತರ ಅವರನ್ನು ಉಳಿಸುವಂತೆ ಹೇಳಿದ ಸುಧಿ ನಡೆಯನ್ನು ಸುದೀಪ್ ಗಿಲ್ಲಿ ದಾಂಡು ಆಟಕ್ಕೆ ಹೋಲಿಸಿ ಟೀಕಿಸಿದರು. ಇಂತಹ ದ್ವಂದ್ವ ವರ್ತನೆಗೆ ಸ್ಪರ್ಧಿಗಳು ಜನರ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ ಎಂದು ಎಚ್ಚರಿಕೆ ನೀಡಿದರು.

‘ಈ ರೀತಿ ಮಾಡಿದ್ರೆ ಜನ ನಿಮ್ಮನ್ನು ನಂಬಲ್ಲ’; ಕಾಕ್ರೋಚ್ ಸುಧಿಗೆ ಸುದೀಪ್ ಎಚ್ಚರಿಕೆ
ಸುಧಿ- ಸುದೀಪ್

Updated on: Oct 06, 2025 | 1:53 PM

ಕಾಕ್ರೋಚ್ ಸುಧಿ ಅವರು ಚಿತ್ರರಂಗದಲ್ಲಿ ವಿಲನ್ ಪಾತ್ರಗಳ ಮೂಲಕ ಗಮನ ಸೆಳೆದಿದ್ದಾರೆ. ಅವರು ಹೇಳುವ ಪ್ರಸಾದ ಡೈಲಾಗ್​ಗಳು ಇಷ್ಟ ಆಗುತ್ತವೆ. ಈಗ ಅವರು ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿ ಆಗಿದ್ದಾರೆ. ಅವರಿಂದ ಸಾಕಷ್ಟು ನಿರೀಕ್ಷೆ ಇತ್ತು. ಆದರೆ, ಈ ನಿರೀಕ್ಷೆಯನ್ನು ತಲುಪಲು ಅವರಿಂದ ಸಾಧ್ಯವಾಗುತ್ತಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಹೀಗಿರುವಾಗಲೇ ಸುಧಿ ಅವರಿಗೆ ಸುದೀಪ್ ಅವರು ಪಾಠ ಮಾಡಿದ್ದಾರೆ.

ಸುದೀಪ್ ಅವರು ಬಿಗ್ ಬಾಸ್​ನ ಪ್ರತಿ ವಿಚಾರಗಳನ್ನು ಗಮನಿಸುತ್ತಾ ಇರುತ್ತಾರೆ. ಈ ವಾರ ಕಾಕ್ರೋಚ್ ಸುಧಿ ಅವರೇ ಧನುಷನ್​ನ ನಾಮಿನೇಟ್ ಮಾಡಿದ್ದರು. ಅವರು ಮನೆಯಿಂದ ಹೊರ ಬೇಕು ಎಂದು ಇಚ್ಛಿಸಿ ಅವರ ಹೆಸರನ್ನು ತೆಗೆದುಕೊಂಡಿದ್ದರು. ಆದರೆ, ಅವರೇ ಸೇವ್ ಆಗಬೇಕು ಎಂದು ಸುಧಿ ಅಭಿಪ್ರಾಯ ಪಟ್ಟರು. ಇದು ಸುದೀಪ್​ಗೆ ಕೋಪ ತರಿಸಿದೆ.

‘ಗಿಲ್ಲಿ ದಾಂಡು ಆಡಿದ್ದೀರಾ? ನಿಮ್ಮ ಗಿಲ್ಲಿ ದಾಂಡಿನ ಆಟ ಹೇಗೆ ಗೊತ್ತಾ? ನೀವು ಗಿಲ್ಲಿ ಹೊಡೆಯೋದಂತೆ, ನೀವೆ ಮತ್ತೊಂದು ಕಡೆ ಹೋಗಿ ಹಿಡಿಯೋದಂತೆ. ನಾಮಿನೇಟ್ ಮಾಡೋದು ನೀವೇ, ಮೊದಲು ಯಾರು ಸೇವ್ ಆಗಬೇಕು ಎಂದಾಗ ಧನುಷ್ ಹೆಸರು ಹೇಳೋದು ನೀವೇ. ಇದನ್ನು ಜನರು ನೋಡುತ್ತಾ ಇರುತ್ತಾರೆ. ಮುಂದೆ ನೀವು ತೆಗೆದುಕೊಳ್ಳುವ ನಾಮಿನೇಷನ್​​ನ ಜನರು ನಂಬಲ್ಲ’ ಎಂದಿದ್ದಾರೆ ಸುದೀಪ್.

ಇದನ್ನೂ ಓದಿ
‘ಅಮೃತಧಾರೆ’ ಧಾರಾವಾಹಿಯಲ್ಲಿ ರೋಚಕ ತಿರುವು; ಮಗಳು ಗೌತಮ್​ಗೆ ಸಿಕ್ಕೇ ಬಿಟ್ಳು
ಪುನೀತ್​ಗೆ ರಚಿತಾ ಅವಮಾನ ? ನಾಲಿಗೆ ಮೇಲೆ ಹಿಡಿತ ಇರಲಿ ಎಂದ ಫ್ಯಾನ್ಸ್
‘ಕಾಂತಾರ: ಚಾಪ್ಟರ್ 1’ ಚಿತ್ರದ ಭಾನುವಾರದ ಕಲೆಕ್ಷನ್ ಇಷ್ಟೊಂದಾ?
‘ನೀವು ತೋರಿದ ದ್ವೇಷ ನೋಡಿ ಬೇಸರವಾಯಿತು’; ನೋವು ಹೊರ ಹಾಕಿದ ನಮ್ರತಾ ಗೌಡ

ಇದನ್ನೂ ಓದಿ: ಏರು ಧ್ವನಿಯಲ್ಲಿ ಮಾತಾಡುತ್ತಿದ್ದ ಕಾಕ್ರೋಚ್ ಸುಧಿ: ಖಡಕ್ ತಿರುಗೇಟು ಕೊಟ್ಟ ಸುದೀಪ್

ಈ ಮೊದಲು ಕೂಡ ಅನೇಕ ಸ್ಪರ್ಧಿಗಳು ಈ ರೀತಿಯ ಸೇಫ್ ಗೇಮ್ ಆಡಿದ ಉದಾಹರಣೆ ಇದೆ. ಮೊದಲು ಅವರೇ ನಾಮಿನೇಟ್ ಮಾಡುತ್ತಾರೆ. ಆ ಬಳಿಕ ಬೆಣ್ಣೆ ಹಚ್ಚೋಕೆ ಪ್ರಯತ್ನ ಮಾಡುತ್ತಾರೆ. ಇದನ್ನು ಸುದೀಪ್ ಅವರು ಖಂಡಿಸುತ್ತಲೇ ಬರುತ್ತಿದ್ದಾರೆ. ಈಗ ಸುಧಿ ಕೂಡ ಹಾಗೆಯೇ ಮಾಡಿದ್ದಾರೆ. ಇದನ್ನು ಅವರು ಒಪ್ಪಿಕೊಂಡಿಲ್ಲ. ಮುಂದಿನ ದಿನಗಳಲ್ಲಿ ಈ ರೀತಿ ಮಾಡದಂತೆ ಅವರು ಎಚ್ಚರಿಕೆ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.