‘ರಷ್ಯನ್ಸ್ ಜೊತೆ..’; ಮಂಜು ಡ್ರೀಮ್ ಏನು ಎಂಬುದನ್ನು ರಿವೀಲ್ ಮಾಡಿದ ಸುದೀಪ್

|

Updated on: Dec 30, 2024 | 11:50 AM

ಬಿಗ್ ಬಾಸ್ ಕನ್ನಡದಲ್ಲಿ ಮಂಜು ಅವರ ಆಟ ಮತ್ತು ಸುದೀಪ್ ಅವರೊಂದಿಗಿನ ಸಂಬಂಧವನ್ನು ಚರ್ಚಿಸಲಾಗಿದೆ. ಐಶ್ವರ್ಯಾ ರಷ್ಯನ್ ಡ್ಯಾನ್ಸರ್‌ಗಳೊಂದಿಗೆ ಪಾರ್ಟಿ ಮಾಡುವ ಬಗ್ಗೆ ಮಾತನಾಡಿದರು. ಆಗ ಮಂಜು ಅವರ ಏನು ಎಂಬುದನ್ನು ಸುದೀಪ್ ಬಹಿರಂಗಪಡಿಸಿದರು. ವೀಕೆಂಡ್​ನಲ್ಲಿ ಈ ವಿಚಾರ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ.

‘ರಷ್ಯನ್ಸ್ ಜೊತೆ..’; ಮಂಜು ಡ್ರೀಮ್ ಏನು ಎಂಬುದನ್ನು ರಿವೀಲ್ ಮಾಡಿದ ಸುದೀಪ್
ಮಂಜು-ಸುದೀಪ್
Follow us on

ಬಿಗ್ ಬಾಸ್ ಮನೆಯಲ್ಲಿ ಉಗ್ರಂ ಮಂಜು ಅವರು ಉತ್ತಮವಾಗಿ ಆಟ ಆಡುತ್ತಿದ್ದಾರೆ. ಇತ್ತೀಚೆಗೆ ಅವರು ಡಲ್ ಹೊಡೆದ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಸುದೀಪ್ ಅವರು ನೇರ ಮಾತುಗಳಲ್ಲಿ ಅವರ ವಿರುದ್ಧ ಸಿಡಿದೆದ್ದಿದ್ದರು. ಆ ಬಳಿಕ ಮಂಜು ಅವರು ತಮ್ಮ ತಪ್ಪನ್ನು ತಿದ್ದಿಕೊಳ್ಳುವ ಪ್ರಯತ್ನದಲ್ಲಿ ಇದ್ದರು. ಈಗ ಸುದೀಪ್ ಅವರು ಮಂಜು ಅವರ ಕನಸು ಏನು ಎಂಬುದನ್ನು ರಿವೀಲ್ ಮಾಡಿದ್ದಾರೆ. ಈ ವಿಚಾರ ಕೇಳಿ ಮನೆ ಮಂದಿ ಶಾಕ್ ಆಗಿದ್ದಾರೆ.

ಹೊಸ ವರ್ಷ ಬಂದಿದೆ. ಸದ್ಯ ದೊಡ್ಮನೆಯಲ್ಲಿ 9 ಜನರು ಇದ್ದಾರೆ. ಈಗಿರುವ ಎಲ್ಲಾ ಸ್ಪರ್ಧಿಗಳಿಗೆ ಹೊಸ ವರ್ಷ ಬಿಗ್ ಬಾಸ್ ಮನೆಯಲ್ಲೇ ನಡೆಯಲಿದೆ. ಅವರು ದೊಡ್ಮನೆಯಿಂದ ಹೊರ ಬಂದ ಬಳಿಕವೇ ಪಾರ್ಟಿ ಮಾಡಬೇಕು. ಅದಕ್ಕೂ ಮೊದಲು ಸುದೀಪ್ ಅವರು ‘ಕಳೆದ ವರ್ಷ ಏನು ಮಾಡಿದ್ರಿ, ನಿಮ್ಮ ಪಾರ್ಟಿ ಹೇಗಿರುತ್ತದೆ’ ಎಂದು ಸ್ಪರ್ಧಿಗಳಿಗೆ ಕೇಳುತ್ತಾ ಬಂದರು.

ಇದಕ್ಕೆ ಉತ್ತರಿಸಿದ ಐಶ್ವರ್ಯಾ ಅವರು, ‘ಬೆಂಗಳೂರಲ್ಲಿ ಪಾರ್ಟಿ ಮಾಡುತ್ತೇವೆ. ರಷ್ಯನ್ ಡ್ಯಾನ್ಸರ್ ಇರ್ತಾರೆ’ ಎಂದರು ಐಶ್ವರ್ಯಾ. ಈ ಮಾತನ್ನು ಕೇಳಿ ಸುದೀಪ್​ಗೆ ಶಾಕ್ ಆಯಿತು. ‘ಆ ಪಾರ್ಟಿಯಲ್ಲಿ ಮಂಜು ಇರಲಿಲ್ಲವಾ? ಅದು ಅವರ ಕನಸು. ಪಾರ್ಟಿ ಮಾಡಬೇಕು ಅಲ್ಲಿ ರಷ್ಯನ್ ಡ್ಯಾನ್ಸರ್ ಇರಬೇಕು. ಇದು ಅವರ ದೊಡ್ಡ ಡ್ರೀಮ್. ಮುಂದಿನ ವರ್ಷ ಮಂಜು ಆ ಪಾರ್ಟಿ ಸೇರಿಕೊಳ್ಳಿ’ ಎಂದರು ಸುದೀಪ್. ಈ ಮಾತನ್ನು ಕೇಳಿ ಎಲ್ಲರಿಗೂ ಅಚ್ಚರಿ ಆಯಿತು.

ಸುದೀಪ್ ಹಾಗೂ ಮಂಜು ಮಧ್ಯೆ ಒಳ್ಳೆಯ ಬಾಂಧವ್ಯ ಇದೆ. ಇಬ್ಬರೂ ‘ಮ್ಯಾಕ್ಸ್’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಅಲ್ಲದೆ, ಇವರು ಸಾಕಷ್ಟು ಪಾರ್ಟಿಗಳನ್ನು ಒಟ್ಟಾಗಿ ಮಾಡಿದ್ದಾರೆ. ಹೀಗಾಗಿ, ಸುದೀಪ್ ಅವರು ಮಂಜು ಬಗ್ಗೆ ವಿಶೇಷ ಕಾಳಜಿ ತೋರಿಸುತ್ತಾರೆ. ಅವರು ದಾರಿ ತಪ್ಪಿದಾಗ ಹೆಚ್ಚು ಕಿವಿಮಾತು ಹೇಳಿದ್ದು ಇದೇ ಸುದೀಪ್.

ಇದನ್ನೂ ಓದಿ: ತ್ರಿವಿಕ್ರಂನೇ ಭವ್ಯಾಗೆ ಗಿಫ್ಟ್ ಆಗಿ ಕೊಟ್ಟ ಸುದೀಪ್; ಜೊತೆಗೆ ಸಿಕ್ತು ಒಂದು ಎಚ್ಚರಿಕೆ

ಮಂಜು ಅವರು ‘ಮ್ಯಾಕ್ಸ್’ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಅವರು ದೊಡ್ಮನೆ ಒಳಗೆ ಇರುವಾಗಲೇ ಈ ಸಿನಿಮಾ ರಿಲೀಸ್ ಆಗಿ ಯಶಸ್ಸು ಕಂಡಿದೆ. ಈ ಬಗ್ಗೆ ಅವರಿಗೆ ಖುಷಿಯೂ ಇದೆ, ಬೇಸರವೂ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:49 am, Mon, 30 December 24