ಈ ವಾರ ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಸ್ಕೂಲ್ ಟಾಸ್ಕ್ ನೀಡಲಾಯಿತು. ಈ ಟಾಸ್ಕ್ನಲ್ಲಿ ಎಲ್ಲರೂ ಭಾಗಿ ಆಗಿರಲಿಲ್ಲ. ತುಕಾಲಿ ಸಂತೋಷ್ (Thukali Santhosh) ಅವರು ಮಾತ್ರ ಸಖತ್ ಆ್ಯಕ್ಟೀವ್ ಆಗಿ ನಡೆದುಕೊಂಡರು. ಉಳಿದ ಒಂದೆರಡು ಸ್ಪರ್ಧಿಗಳು ಆಸಕ್ತಿ ತೋರಿಸಿದರು. ಉಳಿದಂತೆ ಎಲ್ಲಾ ಸ್ಪರ್ಧಿಗಳು ಅಷ್ಟಾಗಿ ಆ್ಯಕ್ಟೀವ್ ಆಗಿ ಭಾಗಿ ಆಗಲೇ ಇಲ್ಲ. ಈ ವಿಚಾರವನ್ನು ಸುದೀಪ್ (Kichcha Sudeep) ಅವರು ವಿಕೆಂಡ್ನಲ್ಲಿ ಚರ್ಚೆ ಮಾಡಿದ್ದಾರೆ. ಕಳೆದು ಹೋದ ಈ ಸಮಯ ಮತ್ತೆ ಸಿಗಲ್ಲ ಎಂದು ಕಿವಿಮಾತು ಹೇಳಿದ್ದಾರೆ. ಮನೆ ಮಂದಿಗೂ ಇದು ಹೌದು ಎನಿಸಿದೆ.
‘ರಾಕ್ಷಸರು ಹಾಗೂ ಗಂಧರ್ವರು ಟಾಸ್ಕ್ನ ಗಂಭೀರವಾಗಿ ಸ್ವೀಕರಿಸಿದ್ರಿ. ಆದರೆ, ಶಾಲೆ ಟಾಸ್ಕ್ ಬಂದಾಗ ಬಹುತೇಕರು ಫೇಲ್ ಆದ್ರಿ. ಎಷ್ಟು ಅದ್ಭುತವಾಗಿ ಮಾಡಬಹುದಿತ್ತು. ಕಿರುಚಿದ್ರೆ ಮಾತ್ರ ಎಲ್ಲವನ್ನೂ ಹೊರಹಾಕಿದಂತಾ? ನಕ್ಕರೆ ಎಲ್ಲವನ್ನೂ ಹೊರಹಾಕಿದಂತೆ ಆಗುವುದಿಲ್ಲವೇ? ಕೆಲವರು ಎಷ್ಟೋ ಸೀಸನ್ ನೋಡಿ ಇಲ್ಲಿಗೆ ಬಂದಿದ್ದೀರಿ. ಸ್ಕೂಲ್ ಟಾಸ್ಕ್ ಅಂತ ಬಂದಾಗ ಹೇಗಿರುತ್ತದೆ ಅನ್ನೋದು ನಿಮಗೆ ಗೊತ್ತಿತ್ತು. ಮೊದಲ ಸೀಸನ್ ಸ್ಪರ್ಧಿಗಳಿಗೆ ಬಿಗ್ ಬಾಸ್ ಅನ್ನೋದು ಏನು ಎಂದೇ ಗೊತ್ತಿರಲಿಲ್ಲ. ಈ ಟಾಸ್ಕ್ನ ಅವರು ಒಳ್ಳೆಯ ರೀತಿಯಲ್ಲಿ ನಿರ್ವಹಿಸಿದ್ದರು’ ಎಂದರು ಸುದೀಪ್.
ಇದನ್ನೂ ಓದಿ: ಬಕೆಟ್ ಹಿಡಿತೀಯ ಎಂದಿದ್ದ ಸಂಗೀತಾಗೆ ಕಾರ್ತಿಕ್ ಸುತ್ತಿಗೆ ಏಟು; ಬಿಗ್ ಬಾಸ್ ಸದಸ್ಯರಿಗೆ ದೊಡ್ಡ ಶಾಕ್
‘ಬಿಗ್ ಬಾಸ್ ಇತಿಹಾಸದಲ್ಲಿ ಹೆಚ್ಚು ಸಕ್ಸಸ್ಫುಲ್ ಟಾಸ್ಕ್ ಅನ್ನೋದು ಇದ್ದರೆ ಅದು ಸ್ಕೂಲ್ ಟಾಸ್ಕ್. ನಿಮ್ಮ ಮುಗ್ದತೆ ಬೇಕಿತ್ತು. ಈಗ ಮುಗಿದು ಹೋಯ್ತು. ಬೇಕು ಅಂದರೂ ಶಾಲೆ ಸಮವಸ್ತ್ರ ಸಿಗಲ್ಲ. ಬೇಕೂ ಅಂದರೂ ನೀವು ಮಕ್ಕಳು ಆಗೋಕೆ ಆಗಲ್ಲ. ಸ್ಟುಡೆಂಟ್ ಹೀರೋಗಳಾದ ಉದಾಹರಣೆ ಇದೆ. ಎಲ್ಲರೂ ಸ್ಟಾರ್ಸ್ ಬಗ್ಗೆ ಗಮನ ಹರಿಸುತ್ತಿದ್ದರು. ಸಂಗೀತಾ ಅವರೇ ನೀವು ಒಳ್ಳೆಯ ಆರ್ಟಿಸ್ಟ್ ಅಲ್ವಾ? ವಿನಯ್ ನಿಮಗೆ ನಟನೆ ಬರಲ್ವ’ ಎಂದು ಸುದೀಪ್ ಪ್ರಶ್ನೆ ಮಾಡಿದರು. ಈ ವೇಳೆ ಇಡೀ ಮನೆ ಸೈಲೆಂಟ್ ಆಗಿತ್ತು.
ಇದನ್ನೂ ಓದಿ: ‘ಅಂತ್ಯ ಸಂಸ್ಕಾರಗೊಂಡ ಸ್ಥಳದಲ್ಲೇ ಪುಣ್ಯಭೂಮಿ ಆಗ್ಬೇಕು’: ವಿಷ್ಣು ಸ್ಮಾರಕದ ಬಗ್ಗೆ ಸುದೀಪ್ ಪ್ರತಿಕ್ರಿಯೆ
‘ಈ ವಾರ ಮುಗಿದು ಹೋಯ್ತು. ಇನ್ನು ಮುಂದಿನ ವಾರಗಳಲ್ಲಿ ಮತ್ತೆ ಅಗ್ರೆಸ್ಸಿವ್ ಟಾಸ್ಕ್ ಬರುತ್ತದೆ. ಕಿತ್ತಾಟ ನಡೆಯುತ್ತದೆ. ಏಳು-ಬೀಳು ಇರುತ್ತದೆ. ಆಗ ನೀವು ಈ ವಾರನ ಮುಂದೆ ತುಂಬಾನೇ ಮಿಸ್ ಮಾಡಿಕೊಳ್ತೀರಿ. ಅನೇಕರಿಗೆ ಶಾಲೆಯ ಟಾಸ್ಕ್ ಅರ್ಥ ಆಗಲೇ ಇಲ್ಲ’ ಎಂದರು ಸುದೀಪ್. ಬಿಗ್ ಬಾಸ್ನಲ್ಲಿ ಕಳೆದ ವಾರ ಸಾಕಷ್ಟು ಕಿತ್ತಾಟಗಳು ನಡೆದಿದ್ದವು. ಪ್ರತಾಪ್ ಹಾಗೂ ಸಂಗೀತಾ ಕಣ್ಣಿಗೆ ಹಾನಿ ಆಗುವಷ್ಟು ಎಲ್ಲರೂ ಅಗ್ರೆಸಿವ್ ಆಗಿದ್ದರು. ಆದರೆ, ಈ ಬಾರಿ ಆ ಅಗ್ರೆಷನ್ ಕಡಿಮೆ ಆಗಿತ್ತು. ಸ್ಕೂಲ್ ಟಾಸ್ಕ್ ಆಗಿದ್ದರಿಂದ ಎಲ್ಲರೂ ಕೂಲ್ ಆಗಿದ್ದರು. ಆದರೆ, ಅಂದುಕೊಂಡ ರೀತಿಯಲ್ಲಿ ಟಾಸ್ಕ್ ವೀಕ್ಷಕರಿಗೆ ಖುಷಿ ನೀಡಿಲ್ಲ ಎಂದು ಅನೇಕರು ಅಭಿಪ್ರಾಯ ಹೊರಹಾಕಿದ್ದಾರೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡಲು ಅವಕಾಶ ಇದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:04 pm, Sun, 17 December 23