
ಬಿಗ್ ಬಾಸ್ ಸ್ಪರ್ಧಿಗಳನ್ನು ಕಿಚ್ಚ ಸುದೀಪ್ (Kichcha Sudeep) ಅವರು ಮನೆಯವರಂತೆ ಪರಿಗಣಿಸುತ್ತಾರೆ. ಪ್ರತಿ ಹಂತದಲ್ಲೂ ಅವರ ಬಗ್ಗೆ ಕೇರ್ ಮಾಡುತ್ತಾರೆ. ಬಿಗ್ ಬಾಸ್ನ ಪ್ರತಿ ಸೀಸನ್ನಲ್ಲಿ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳಿಗೆ ಅಡುಗೆ ಮಾಡಿ ಕಳುಹಿಸುತ್ತಾರೆ. ಈ ಬಾರಿಯೂ ಅದು ಮುಂದುವರಿದಿದೆ. ಸುದೀಪ್ ಮಾಡಿದ ಅಡುಗೆ ಬಿಗ್ ಬಾಸ್ ಮನೆ ಸೇರಿದೆ ಎಂದು ವರದಿ ಆಗಿದೆ. ಇಂದಿನ (ಡಿಸೆಂಬರ್ 15) ಎಪಿಸೋಡ್ನಲ್ಲಿ ಇದು ಪ್ರಸಾರ ಆಗುವ ಸಾಧ್ಯತೆ ಇದೆ.
ಬಿಗ್ ಬಾಸ್ನಲ್ಲಿ ಇಂದು ಪ್ರೋಮೋ ಒಂದನ್ನು ಬಿಡುಗಡೆ ಮಾಡಲಾಗಿದೆ. ಪ್ರತಾಪ್ ಅವರು ಮಧ್ಯಾಹ್ನಕ್ಕೆ ಮುದ್ದೆ ಮಾಡಿದ್ದರು. ಆದರೆ ರಾತ್ರಿಗೆ ಗ್ಯಾಸ್ ಬರಲೇ ಇಲ್ಲ. ಇದು ಪ್ರತಾಪ್ ಅವರದ್ದೇ ತಪ್ಪು ಎಂದು ಎಲ್ಲರೂ ಕೂಗಾಡಿದ್ದಾರೆ. ಆದರೆ, ಅಲ್ಲಿ ಅಸಲಿ ಕಥೆ ಬೇರೆಯದೇ ಇದೆ ಎನ್ನಲಾಗುತ್ತಿದೆ. ಸುದೀಪ್ ಮಾಡಿರೋ ಅಡುಗೆ ಬರುವುದರಲ್ಲಿದೆ. ಹೀಗಾಗಿ, ಗ್ಯಾಸ್ ಹಚ್ಚೋಕೆ ಬಿಗ್ ಬಾಸ್ ಅವಕಾಶ ನೀಡಿಲ್ಲ.
ಸುದೀಪ್ ಅವರು ನಟನೆಯ ಜೊತೆಗೆ ಕ್ರಿಕೆಟ್ ಹಾಗೂ ಅಡುಗೆಯ ಬಗ್ಗೆ ಆಸಕ್ತಿ ಹೊಂದಿದ್ದಾರೆ. ತಮ್ಮ ಮನೆಯ ಟೆರೇಸ್ನಲ್ಲಿ ವಿಶೇಷ ಕಿಚನ್ನ ಅವರು ಹೊಂದಿದ್ದಾರೆ. ಮನೆಗೆ ಬರುವ ಗೆಳೆಯರಿಗೆ, ಆಪ್ತರಿಗೆ ಅವರು ಅಡುಗೆ ಮಾಡಿ ಬಡಿಸುತ್ತಾರೆ. ಈಗ ಅವರು ಬಿಗ್ ಬಾಸ್ ಸ್ಪರ್ಧಿಗಳಿಗೂ ತಮ್ಮ ಕೈರುಚಿ ತೋರಿಸಿದ್ದಾರೆ. ಈ ಮೊದಲು ಹಲವು ಸೀಸನ್ಗಳಲ್ಲಿ ಅವರು ಸ್ಪರ್ಧಿಗಳಿಗೆ ಅಡುಗೆ ಮಾಡಿ ಕೊಟ್ಟಿದ್ದರು.
ಇದನ್ನೂ ಓದಿ: ಬಿಗ್ ಬಾಸ್ನಲ್ಲಿ ನಡೆಯುತ್ತಿದೆ ಬ್ರೋ ಕೋಡ್; ವಿನಯ್ನ ಸೇವ್ ಮಾಡೋದೇ ಉದ್ದೇಶ?
ಕನ್ನಡ ಬಿಗ್ ಬಾಸ್ ಟಿವಿ ಸೀಸನ್, ಒಟಿಟಿ ಸೀಸನ್ ಹಾಗೂ ಒಂದು ಮಿನಿ ಸೀಸನ್ನ ಸುದೀಪ್ ನಡೆಸಿಕೊಟ್ಟಿದ್ದಾರೆ. ಸದ್ಯ 10ನೇ ಸೀಸನ್ ಅವರ ನಿರೂಪಣೆಯಲ್ಲೇ ಮೂಡಿಬರುತ್ತಿದೆ.. ಪ್ರತಿ ಪರಿಸ್ಥಿತಿಯನ್ನು ಅವರು ಸಮರ್ಥವಾಗಿ ನಿರ್ವಹಿಸುತ್ತಾರೆ. ಈ ಕಾರಣಕ್ಕೆ ಸುದೀಪ್ ಅನೇಕರಿಗೆ ಇಷ್ಟ ಆಗುತ್ತಾರೆ. ಈ ಬಾರಿಯ ಬಿಗ್ ಬಾಸ್ ಜಿಯೋ ಸಿನಿಮಾ ಹಾಗೂ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿದೆ. 24 ಗಂಟೆ ಜಿಯೋ ಸಿನಿಮಾದಲ್ಲಿ ಉಚಿತವಾಗಿ ಲೈವ್ ನೋಡಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ