‘ದಮ್ಮಯ್ಯ ಬಿಟ್ಟುಬಿಡಿ’; ಸುದೀಪ್ ಎದುರು ಬೇಡಿಕೊಂಡ ರಜತ್

ಸುದೀಪ್ ಅವರು ವೀಕೆಂಡ್​ನಲ್ಲಿ ಈ ವಾರದ ಎಲ್ಲಾ ವಿಷಯಗಳನ್ನು ಚರ್ಚೆ ಮಾಡಿದರು. ಮೊದಲು ಗಿಲ್ಲಿಗೆ ಕ್ಲಾಸ್ ತೆಗೆದುಕೊಂಡರು. ಆ ಬಳಿಕ ರಜತ್ ಬಳಿ ತೆರೆಳಿದರು ಸುದೀಪ್. ‘ರಜತ್ ಯಾರು ಅನ್ನೋದು ಗೊತ್ತಾ ಗಿಲ್ಲಿ? ಅವರ ಬಗ್ಗೆ ಹೇಳಬೇಕಾ ಗಿಲ್ಲಿ’ ಎಂದು ಸುದೀಪ್ ಕೇಳಿದರು. ಇದಕ್ಕೆ ರಜತ್ ಅವರು ‘ನಿಮ್ಮ ದಮ್ಮಯ್ಯ ಅಂತೀನಿ ಬೇಡ ಸರ್, ಹೇಳಬೇಡಿ ಸರ್’ ಎಂದು ಹೇಳಿದರು.

‘ದಮ್ಮಯ್ಯ ಬಿಟ್ಟುಬಿಡಿ’; ಸುದೀಪ್ ಎದುರು ಬೇಡಿಕೊಂಡ ರಜತ್
Rajat
Updated By: ಮಂಜುನಾಥ ಸಿ.

Updated on: Nov 29, 2025 | 10:50 PM

ರಜತ್ ಅವರು ಕಳೆದ ಸೀಸನ್​ನಲ್ಲಿ ಸ್ಪರ್ಧಿಯಾಗಿ ತೆರಳಿದ್ದರು. ಅವರು ಕೊನೆಯವರೆಗೆ ಇದ್ದರು. ವೈಲ್ಡ್ ಕಾರ್ಡ್ ಆಗಿ ಬಂದಿದ್ದ ರಜತ್ ಅವರು ನಂತರ ಫಿನಾಲೆ ತಲುಪಿ ದಾಖಲೆ ಬರೆದರು. ಈ ಬಾರಿ ಅವರು ದೊಡ್ಮನೆಗೆ ಅತಿಥಿಯಾಗಿ ಬಂದಿದ್ದರು. ಅವರ ಬಗ್ಗೆ ವೀಕೆಂಡ್​ನಲ್ಲಿ ಚರ್ಚೆ ಆಗಿದೆ. ಸುದೀಪ್ ಅವರು ಕೊಟ್ಟ ಕೌಂಟರ್​ಗೆ ರಜತ್ ಕಂಗಾಲಾಗಿದ್ದು, ‘ದಮ್ಮಯ್ಯ ಹೇಳ್ತೀನಿ ಬಿಟ್ಟುಬಿಡಿ’ ಎಂದು ಕೋರಿಕೊಂಡಿದ್ದಾರೆ. ಹಾಗಾದರೆ ಅಲ್ಲಾಗಿದ್ದು ಏನು? ಆ ಬಗ್ಗೆ ಇಲ್ಲಿದೆ ವಿವರ.

ಸುದೀಪ್ ಅವರು ವೀಕೆಂಡ್​ನಲ್ಲಿ ಈ ವಾರದ ಎಲ್ಲಾ ವಿಷಯಗಳನ್ನು ಚರ್ಚೆ ಮಾಡಿದರು. ಮೊದಲು ಗಿಲ್ಲಿಗೆ ಕ್ಲಾಸ್ ತೆಗೆದುಕೊಂಡರು. ಆ ಬಳಿಕ ರಜತ್ ಬಳಿ ತೆರೆಳಿದರು ಸುದೀಪ್. ‘ರಜತ್ ಯಾರು ಅನ್ನೋದು ಗೊತ್ತಾ ಗಿಲ್ಲಿ? ಅವರ ಬಗ್ಗೆ ಹೇಳಬೇಕಾ ಗಿಲ್ಲಿ’ ಎಂದು ಸುದೀಪ್ ಕೇಳಿದರು. ಇದಕ್ಕೆ ರಜತ್ ಅವರು ‘ನಿಮ್ಮ ದಮ್ಮಯ್ಯ ಅಂತೀನಿ ಬೇಡ ಸರ್, ಹೇಳಬೇಡಿ ಸರ್’ ಎಂದು ಹೇಳಿದರು.

ಆ ಬಳಿಕ ಸುದೀಪ್ ಮುಂದುವರಿಸಿದರು. ‘ರಜತ್ ಅವರು ಕಾರಲ್ಲಿ ಹೋಗ್ತಾ ಇದ್ರೆ ಸುತ್ತಲೂ ನಾಲ್ಕು ಜನ ಇರ್ತಾರೆ’ ಎಂದು ಹೇಳಿದರು. ಆಗ ರಜತ್ ಮುಖಭಾವ ಸಂಪೂರ್ಣವಾಗಿ ಬದಲಾಯಿತು. ನಂತರ ಸುದೀಪ್ ಅವರು ‘ಎಲ್ಲರಿಗೂ ಮರೆತು ಹೋಗಿದೆ, ‘ವಿಟಿ ಹಾಕಲಾ’ ಎಂದು ಕೇಳಿದರು. ‘ಬೇಡ ಸರ್, ಬಿಡಿಸಿದ್ದೇ ನೀವು’ ಎಂದು ಹೇಳಿದರು ರಜತ್.

ಇದನ್ನೂ ಓದಿ: ನಾಲಿಗೆಯಿಂದಲೇ ನೀವು ಹಾಳಾಗಬಹುದು; ಗಿಲ್ಲಿಗೆ ಎಚ್ಚರಿಸಿದ ಸುದೀಪ್

ರಜತ್ ಹಾಗೂ ವಿನಯ್ ಅವರು ಮಚ್ಚನ್ನು ಬಳಸಿ ರೀಲ್ಸ್ ಮಾಡಿದ್ದರು. ಇದು ಕೇಸ್ ಆಗಿತ್ತು. ರಜತ್ ಹಾಗೂ ವಿನಯ್ ಜೈಲುವಾಸ ಮಾಡಿ ಬಂದರು. ಈ ವಿಷಯವಾಗಿ ಸುದೀಪ್ ಅವರು ಕಾಲೆಳೆದಿರಬಹುದು ಎನ್ನಲಾಗುತ್ತಿದೆ. ರಜತ್ ಮಾತು ಕೇಳಿದರೆ ಸುದೀಪ್ ಅವರು ಆಗ ಸಹಾಯ ಮಾಡಿದ್ದರು ಎಂಬುದು ಸ್ಪಷ್ವವಾಗುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.